-->
ವಿಶ್ವ ತಾಯಂದಿರ ದಿನ - ಜಗಲಿಯ ಮಕ್ಕಳ ಮಾತುಗಳು : ಸಂಚಿಕೆ - 4

ವಿಶ್ವ ತಾಯಂದಿರ ದಿನ - ಜಗಲಿಯ ಮಕ್ಕಳ ಮಾತುಗಳು : ಸಂಚಿಕೆ - 4

 ವಿಶ್ವ ತಾಯಂದಿರ ದಿನ - ಜಗಲಿಯ ಮಕ್ಕಳ ಮಾತುಗಳು : ಸಂಚಿಕೆ - 4

ಮೇ -08 ರಂದು * ವಿಶ್ವ ತಾಯಂದಿರ ದಿನ * 
ಜಗಲಿಯ ಮಕ್ಕಳು - ತಮ್ಮ ಅಮ್ಮನನ್ನು ಖುಷಿ ಪಡಿಸಿದ ವಿಶೇಷ ಸಂದರ್ಭಗಳನ್ನು ತಮ್ಮ ಮಾತುಗಳಲ್ಲಿ ವ್ಯಕ್ತಪಡಿಸಿದ್ದಾರೆ.... ತಮ್ಮ ಮುದ್ದಿನ ಅಮ್ಮನ ಪ್ರೀತಿಯ ಬಗ್ಗೆ ಮುದ್ದುಮುದ್ದಾದ ಮಾತುಗಳಲ್ಲಿ ಪ್ರಕಟವಾಗಿದೆ......

      

        ಎಲ್ಲರಿಗೂ ತಾಯಂದಿರ ದಿನದ ಶುಭಾಶಯಗಳು....... ನಾನು ಸಾತ್ವಿಕ್ ಗಣೇಶ್...... ನನಗೆ ಅಮ್ಮನೆಂದರೆ ತುಂಬಾ ಪ್ರೀತಿ. ನನ್ನೊಂದಿಗೆ ಅಮ್ಮನು ಓದಿ ಬರೆದು ಮಾಡುವಾಗ ನನಗೆ ಗೊತ್ತಿಲ್ಲದಿರುವುದನ್ನು ಹೇಳಿಕೊಡುತ್ತಾರೆ. ಹಾಗೆಯೇ ಆಟವಾಡಲು ನನ್ನೊಂದಿಗೆ ಸಂಜೆಯ ವೇಳೆ ಬಿಡುವುಮಾಡಿಕೊಂಡು ಬರುತ್ತಾರೆ. ನನಗೆ ಚಿತ್ರ ಮಾಡಲು ಆಸಕ್ತಿ ಬಂದಿರುವುದೇ ಸಮಯ ಹಾಳುಮಾಡಬಾರದು ಎಂಬ ಅಮ್ಮನ ಮಾತು. ಕಲಿಕೆ, ಚಿತ್ರ ಮತ್ತು ಪ್ರತಿಯೊಂದು ಒಳ್ಳೆಯ ವಿಷಯಕ್ಕೆ ಅಮ್ಮನು ನನಗೆ ತುಂಬಾ ಪ್ರೋತ್ಸಾಹವನ್ನು ಕೊಡುತ್ತಾರೆ. ನಾನು ಮೊದಲಿಗೆ ಮಾಡಿದ ಗಣಪತಿ ಯ ಚಿತ್ರ ನೋಡಿದಾಗ ಅಮ್ಮ ತುಂಬಾ ಸಂತೋಷಪಟ್ಟರು.
..........................................ಸಾತ್ವಿಕ್ ಗಣೇಶ್   
7ನೇ ತರಗತಿ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಜಿರೆ 
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
********************************************

 

     ನನ್ನ ಹೆಸರು ಸ್ರಾನ್ವಿ . ನಾನು ಅಮ್ಮನನ್ನು ಖುಷಿ ಪಡಿಸಿದ ಸಂದರ್ಭದ ಬಗ್ಗೆ ಬರೆಯಲು ಇಚ್ಚಿಸುತ್ತೇನೆ....... ನಾನು ನನ್ನ ಅಮ್ಮನನ್ನು ಖುಷಿ ಪಡಿಸಿದ್ದು ಅವಳ ಹುಟ್ಟುಹಬ್ಬದ ದಿನ ನಾನೇ ನನ್ನ ಕೈಯ್ಯಾರೆ ಬರೆದು ಮಾಡಿದ ಗ್ರೀಟಿಂಗ್ ಕೊಟ್ಟದ್ದು, ಅಮ್ಮನಿಗೆ ಹುಷಾರಿಲ್ಲದೆ ಇದ್ದಾಗ ಮನೆಯ ಕೆಲಸ ಮಾಡಿದ್ದು , ಅಮ್ಮ ಬ್ಯುಸಿ ಇದ್ದಾಗ ಅವಳಿಗೆ ತೊಂದರೆ ಕೊಡದೆ ನಾನೆ ಶಾಲೆಗೆ ಹೋಗಲು ರೆಡಿಯಾಗುವುದು, ನಾನು ಪ್ರಾಣಿ ಪಕ್ಷಿಗಳನ್ನು ಹಿರಿಯರನ್ನು ಪ್ರೀತಿಸುವುದು.
............................................... ಸ್ರಾನ್ವಿ ಶೆಟ್ಟಿ 
8ನೇ ತರಗತಿ 
ಓಂ ಜನ ಹಿತಾಯ ಇಂಗ್ಲೀಷ್ 
ಮೀಡಿಯಂ ಶಾಲೆ, ಗುಡ್ಡೆಯಂಗಡಿ 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
**********************************************

 
         ನಾನು ರಿಧಾ ಎಂ ಡೋರಳ್ಳಿ..... ನಾನು ನನ್ನ ಅಮ್ಮ ಹೇಳುವ ಮಾತನ್ನು ಕೇಳಿದರೆ ಅವಳು ತುಂಬಾ ಖುಷಿ ಪಡುತ್ತಾಳೆ. ಒಮ್ಮೆ ನಾನು ನನ್ನ ಅಮ್ಮನ ಮೊಬೈಲಲ್ಲಿ ಒಂದು ಹಾಡನ್ನು ಕೇಳಿದ್ದೆ. ಆ ಹಾಡಿನ ದಾಟಿಗೆ ನಾನೇ ಸ್ವ ರಚಿತ ಕವನ ಬರೆದು ಅಮ್ಮನಿಗೆ ತೋರಿಸಿದೆ. ಅವಳಿಗೆ ನನ್ನ ಹಾಡು ತುಂಬಾ ಇಷ್ಟವಾಯಿತು. ನನಗೆ ಎರಡು ಬಿಸ್ಕೆಟ್ ಪಾಕೇಟ್ ಕೊಟ್ಟು ನನ್ನ ಹಾಡನ್ನು YouTube channel ಗೆ ಅಪ್ಲೋಡ್ ಮಾಡಿದಳು. ಹಾಗೆಯೇ ನಾನು ಅವತ್ತಿಂದ ಹಾಡು ಬರೆಯಲು ಪ್ರಾರಂಭಿಸಿ ಇವತ್ತು ನಾನೊಂದು ಪುಟ್ಟ ಕವಯಿತ್ರಿಯಾದೆ. ಹೀಗೆ ನಾನು ಯಾವುದಾದರೂ ಹಾಡು ಬರೆದರೆ ಅವಳು ತುಂಬಾ ಖುಷಿ ಪಡುತ್ತಾಳೆ. ನಾನೇನಾದರೂ ಅವಳನ್ನು ನಿರ್ಲಕ್ಷಿಸಿದರೆ ಅವಳಿಗೆ ಬಹಳ ಕೋಪ ಬರುತ್ತದೆ. ಆದ್ದರಿಂದ ನಾನು ನನ್ನ ಅಮ್ಮನನ್ನು ಕೋಪಿಸದೆ ಸದಾ ಅವಳ ಜೊತೆ ಖುಷಿಯಾಗಿರುತ್ತೇನೆ. ಎಲ್ಲ ಅಮ್ಮಂದಿರಗೂ ವಿಶ್ವ ತಾಯಂದಿರ ದಿನದ ಶುಭಾಶಯಗಳು.
................................. ರಿಧಾ ಎಂ ಡೋರಳ್ಳಿ.
3ನೇ ತರಗತಿ.
ಸೇಂಟ್ ಅಂಥೋನಿ ಪಬ್ಲಿಕ್ ಶಾಲೆ 
ಹುಬ್ಬಳ್ಳಿ , ಧಾರವಾಡ ಜಿಲ್ಲೆ. 
**********************************************


     
        ಎಲ್ಲರಿಗೂ ನಮಸ್ಕಾರ....... ನಾನು ದೃತಿ.... ನಾನು ಶಾಲೆಗೆ ಹೋಗುತ್ತಿರುವ ಸಂದರ್ಭದಲ್ಲಿ ನನ್ನಮ್ಮ ನನ್ನನ್ನು ಪ್ರತಿದಿನ ಶಾಲೆ ತನಕ ಬಿಟ್ಟು ಬರುತ್ತಿದ್ದರು. ಒಂದು ದಿನ ಶಾಲಾ ವಾರ್ಷಿಕೋತ್ಸವ ಇದ್ದಿತು. ಅದರ ಮುಂಚಿನ ದಿನ ಮಕ್ಕಳಿಗಾಗಿ ಹಲವು ಸ್ಪರ್ಧೆಗಳನ್ನು ಏರ್ಪಡಿಸಿದ್ದರು. ಎಲ್ಲಾ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದೆ. ಮರುದಿನ ಶಾಲಾ ವಾರ್ಷಿಕೋತ್ಸವದ ದಿನ. ನನಗೆ ಡ್ಯಾನ್ಸ್ ಮಾಡಲು ಇದ್ದಿತು. ನಾನು ಮೊದಲ ಬಾರಿಗೆ ವೇದಿಕೆ ಮೇಲೆ ಹೋಗಿ ಡ್ಯಾನ್ಸ್ ಮಾಡಿದ್ದೆ. ಡ್ಯಾನ್ಸ್ ಮಾಡಿ ಕೆಳಗೆ ಬಂದ ಕೂಡಲೇ ಅಮ್ಮನ ಬಳಿಗೆ ಬಂದಾಗ ಮುದ್ದು ಮಾಡಿದರು. ಅವರ ಕಣ್ಣಂಚಿನಲ್ಲಿ ಆನಂದಬಾಷ್ಪ ಉಕ್ಕಿಬಂತು. ನಂತರ ಬಹುಮಾನ ಕಾರ್ಯಕ್ರಮ ನಡೆಯಿತು. ಆ ಬಹುಮಾನದ ಪಟ್ಟಿಯಲ್ಲಿ ಮೊದಲ ಹೆಸರು ಇದ್ದದ್ದು ನನ್ನದೇ.. ನನಗೆ ಆಗ ಆದ ಸಂತೋಷ , ಆನಂದ ನಾನೆಂದೂ ಮರೆಯಲಾರೆ. ಆ ಬಹುಮಾನವನ್ನು ನಾನು ಮೊದಲು ತೋರಿಸಿದ್ದೆ ಓಡಿಹೋಗಿ ನನ್ನ ಅಮ್ಮನ ಹತ್ತಿರ. ಆ ಬಹುಮಾನವನ್ನು ತೆಗೆದುಕೊಂಡು ಹೋಗಿ ಅಮ್ಮ ಅದನ್ನು ಮನೆಗೆ ಬಂದ ತಕ್ಷಣ ಇಟ್ಟದ್ದು ದೇವರ ಕೋಣೆಯಲ್ಲಿ. ನಂತರ ನಮಸ್ಕರಿಸಿ ಅನಂತರ ನನಗೆ ಗಿಫ್ಟ್ ನ ಒಳಗೇನಿದೆಯೆಂದು ನೋಡಲು ಕೊಟ್ಟರು. ಇದು ನನ್ನ ಜೀವನದ ಮೊಟ್ಟ ಮೊದಲ ನನ್ನ ಹಾಗೂ ನನ್ನ ಅಮ್ಮನ ನಡುವಿನ ಬಹಳ ಸಂತೋಷದ ದಿನವಾಗಿತ್ತು.
.................................................... ಧೃತಿ 
10ನೇ ತರಗತಿ 
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
********************************************


        
       ಎಲ್ಲರಿಗೂ ನಮಸ್ಕಾರ ನಾನು ಸಿದ್ವಿಕ್ ಪೂಜಾರಿ. ನನ್ನ ಅಮ್ಮನ ಹೆಸರು ಶಶಿಕಲಾ. ಎಲ್ಲಾ ತಾಯಿಂದಿರಂತೆ ಮಕ್ಕಳ ಖುಷಿಯಲ್ಲಿ ಜಗತ್ತನ್ನು ಕಾಣುವಳು ನನ್ನಮ್ಮ. ಸೃಷ್ಟಿಯಲ್ಲಿ ಪ್ರತಿಯೊಂದು ಜೀವಿಗೂ ಅಮ್ಮ ಮೂಲಕಾರಣ. ಅಮ್ಮನ ಪ್ರೀತಿ ಗಿಂತ ದೊಡ್ಡ ಪ್ರೀತಿ ಇಲ್ಲ. ಅಮ್ಮನಿಗಿಂತ ಹೆಚ್ಚಿನ ಭದ್ರತೆ ಇಲ್ಲ. "ಅಮ್ಮನು ಕೊಟ್ಟ ಪ್ರೀತಿ ಈ ಪ್ರಪಂಚದಲ್ಲಿ ಯಾರೂ ಕೊಡಲಾರರು". ಅಮ್ಮ ಕೈ ತುತ್ತು ನೀಡಿ ನನ್ನ ಮತ್ತು ನನ್ನ ತಮ್ಮನನ್ನು ಪ್ರೀತಿಯಿಂದ ಸಾಕಿ ಸಲಹುತ್ತಾಳೆ. ನನ್ನಮ್ಮ ಮುಂಜಾನೆ ಬೇಗನೆ ಎದ್ದು ಮನೆಕೆಲಸದ ಎಲ್ಲಾ ಜವಾಬ್ದಾರಿಯನ್ನು ನಿಭಾಯಿಸಿ ನಮಗೆ ಹೋಮ್ ವರ್ಕ್ ಮಾಡಲು ಸಹಕರಿಸುವಳು. ನನಗೆ ಸ್ಪರ್ಧೆಯಲ್ಲಿ ಬಹುಮಾನ ಸಿಕ್ಕಿದಾಗಲೆಲ್ಲ ನನ್ನಮ್ಮ ದೃಷ್ಟಿ ತೆಗೆದು ತುಂಬಾ ಖುಷಿ ಪಡುವಳು. ಅವಳ ಕಣ್ಣಲ್ಲಿ ಬರುವ ಆನಂದಬಾಷ್ಪ ನೋಡಿ ನನಗೆ ತುಂಬಾ ಸಂತೋಷವಾಗುವುದು. ಏಕೆಂದರೆ ಆ ಗೆಲುವಿಗೆ ಅವಳೇ ಕಾರಣವೆಂದು. ಅಮ್ಮ ನಮಗೆಲ್ಲರಿಗೂ "ಮೊದಲ ಗುರು" ಅಮ್ಮನ ಋಣವನ್ನು ಎಷ್ಟು ಬಾರಿ ಜನಿಸಿದರೂ ತೀರಿಸಲಾಗದು. ನಮ್ಮ ಜೀವನದಲ್ಲಿ ಅಮೂಲ್ಯವಾದ ಪಾಠವನ್ನು ಕಲಿಸುವವಳು ಅಮ್ಮ. ಇಂದಿನ ಸಮಾಜದಲ್ಲಿ ವಯಸ್ಸಾದ ಪೋಷಕರನ್ನು ತಮ್ಮ ಮಕ್ಕಳು ದೂರ ಮಾಡುತ್ತಿದ್ದಾರೆ. ಇದು ದೊಡ್ಡ ಪಾಪ. ಅವರನ್ನು ರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿ. I love you Amma "ನೀನೆ ನನ್ನ ಪುಟ್ಟ ಪ್ರಪಂಚ"
........................................ ಸಿದ್ವಿಕ್ ಪೂಜಾರಿ  
ಐದನೇ ತರಗತಿ  
ಶ್ರೀ ವೆಂಕಟರಮಣ ಇಂಗ್ಲಿಷ್ ಮೀಡಿಯಂ 
ಸ್ಕೂಲ್  ಕುಂದಾಪುರ , ಉಡುಪಿ ಜಿಲ್ಲೆ    
**********************************************


 
      
       ಎಲ್ಲರಿಗೂ ನನ್ನ ನಮನಗಳು. ನಾನು ನಿನಾದ್ ಕೈರಂಗಳ.... ಎಲ್ಲರಿಗೂ ತಾಯಂದಿರ ದಿನಾಚರಣೆಯ ಶುಭಾಶಯಗಳು. ನನ್ನ ಅಮ್ಮ ಎಂದರೆ ನನಗೆ ತುಂಬಾ ಇಷ್ಟ. ನಾನು ಪ್ರತೀ ದಿವಸ ತಪ್ಪಿಲ್ಲದೆ ಪಾಠ ಓದಿದಾಗ ನನ್ನ ಅಮ್ಮನಿಗೆ ತುಂಬಾ ಖುಷಿಯಾಗುತ್ತದೆ... ನಾನು ಕಥೆ ಬರೆಯುವಾಗ ಮತ್ತು ಚಿತ್ರ ಮಾಡುವಾಗ ಅಮ್ಮನಿಗೆ ತುಂಬಾ ಖುಷಿಯಾಗುತ್ತದೆ.... ಅಮ್ಮ ಬೇರೆ ಬೇರೆ ಕೆಲಸ ಮಾಡುತ್ತಾರೆ. ಅವರ ಜೊತೆಗೆ ನಾನು ಕೆಲಸ ಮಾಡುವಾಗ ಅಮ್ಮನಿಗೆ ಖುಷಿಯಾಗುತ್ತದೆ.... ನಾನು ತಂಗಿಯನ್ನು ಚೆನ್ನಾಗಿ ನೋಡಿಕೊಂಡರೆ ಅಮ್ಮನಿಗೆ ಖುಷಿಯಾಗುತ್ತದೆ... ನಾನು ದೊಡ್ಡದಾದ ಮೇಲೆ ನಾನು ವಿಜ್ಞಾನಿ ಯಾಗಬೇಕೆಂದು ಕನಸು ಕಂಡಿದ್ದೇನೆ. ಅದು ನಿಜವಾದರೆ ಅಮ್ಮನಿಗೆ ಖುಷಿಯಾಗುತ್ತದೆ.
...................................... ನಿನಾದ್ ಕೈರಂಗಳ
5ನೇ ತರಗತಿ 
ಶ್ರೀ ರಾಮ ವಿದ್ಯಾಕೇಂದ್ರ ಹನುಮಾನ್ ನಗರ ಕಲ್ಲಡ್ಕ , ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
**********************************************       ಎಲ್ಲರಿಗೂ ಸಿಂಚನಾ ಶೆಟ್ಟಿ ಮಾಡುವ ವಂದನೆಗಳು. ಎಲ್ಲ ತಾಯಂದಿರಿಗೆ ವಿಶ್ವ ತಾಯಂದಿರ ದಿನದ ಶುಭಾಶಯಗಳು. ತಾಯಿ ನಮ್ಮ ಮೊದಲ ಗುರು, ದೇವರು. ಅವಳಿಗೆ ತುಂಬಾ ಶಕ್ತಿ ಇದೆ. ಅವಳನ್ನು ಪಡೆದಿರುವ ನಾವೆ ಪುಣ್ಯ ವಂತರು. ಅವಳನ್ನು ನಾವು ಯಾವಾಗಲೂ ಮರೆಯಬಾರದು. ನನ್ನಮ್ಮನಿಗೆ ನಾನು ಸಹಾಯ ಮಾಡಿದಾಗ ಅವರು ತುಂಬಾ ಖುಷಿ ಪಡುತ್ತಾರೆ. 
..........................................ಸಿಂಚನಾ ಶೆಟ್ಟಿ
4 ನೇತರಗತಿ 
ಸರಕಾರಿ ಹಿರಿಯ ಪ್ರಾಥಮಿಕ 
ಶಾಲೆ ಸೇಡಿಗುಳಿ
ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ 
********************************************** 

Ads on article

Advertise in articles 1

advertising articles 2

Advertise under the article