-->
ಸ್ಪೂರ್ತಿಯ ಮಾತುಗಳು

ಸ್ಪೂರ್ತಿಯ ಮಾತುಗಳು

ಮಕ್ಕಳ ಜಗಲಿಯಲ್ಲಿ
ಸ್ಫೂರ್ತಿಯ ಮಾತುಗಳು : ವಿ ಶ್ರೀ ರಾಮಮೂರ್ತಿ

            ಮಕ್ಕಳೇ ಹೇಗಿದ್ದೀರಿ.....? ಚೆನ್ನಾಗಿದ್ದೀರಿ ತಾನೆ...? ಒಂದು ಸನ್ನಿವೇಶ ಹೀಗಿರುತ್ತದೆ...... ಒಬ್ಬ ಅಪರಾಧಿಗೆ ಗಲ್ಲು ಶಿಕ್ಷೆ ಆಗುತ್ತದೆ. ಈ ಸಂದರ್ಭದಲ್ಲಿ ಡಾಕ್ಟರ್ ಅವನ ಬಳಿಗೆ ಬಂದು, ಅಯ್ಯಾ! ನಿನಗೆ ಹೇಗಿದ್ದರೂ ಗಲ್ಲು ಶಿಕ್ಷೆ ಖಾಯಂ ಆಗಿದೆ. ಗಲ್ಲು ಶಿಕ್ಷೆಯಾಗುವಾಗ ನೀನು 3 ನಿಮಿಷ ಬಹಳ ಸಂಕಟಪಟ್ಟು ನರಳಿ ಸಾಯಬೇಕಾಗುತ್ತದೆ. ಆದರ ಬದಲಿಗೆ ಒಂದು ಹಾವಿನ ವಿಷವಿದೆ. ಅದರಿಂದ ಕಚ್ಚಿಸಿದರೆ ನೀನು 3 ಸೆಕೆಂಡ್ ಗಳಲ್ಲಿ ಸಾಯುತ್ತೀಯಾ. ಇದರಲ್ಲಿ ನೀನು ಯಾವುದನ್ನು ಆಯ್ಕೆ ಮಾಡ್ಕೊಳುತ್ತೀಯ ಎಂದು ಕೇಳುತ್ತಾರೆ. ಅಪರಾಧಿ ನರಳಿ ಸಾಯುವುದಕ್ಕಿಂತ ನರಳದೇ ಸಾಯುವುದು ಲೇಸು ಎಂದು 2ನೇಯದನ್ನು ಆಯ್ಕೆ ಮಾಡುತ್ತಾನೆ.
      ಗಲ್ಲುಶಿಕ್ಷೆಯ ದಿನ ಬರುತ್ತದೆ. ಆತನಿಗೆ ಒಂದು ದೊಡ್ಡ ವಿಷಪೂರಿತ ಹಾವನ್ನು ತೋರಿಸುತ್ತಾರೆ. ನಂತರ ಮುಖವನ್ನು ಮುಚ್ಚಿ ಆತನಿಗೆ 3 ಸೂಜಿಗಳಿಂದ ಚುಚ್ಚುತ್ತಾರೆ. ಆದರೆ ಆ ಸೂಜಿಗಳಲ್ಲಿ ಯಾವುದೇ ವಿಷವಿರುವುದಿಲ್ಲ. ಸೂಜಿ ಚುಚ್ಚಿದ 3 ಸೆಕೆಂಡಲ್ಲಿ ಅಪರಾಧಿ ಸಾಯುತ್ತಾನೆ.
       ಯಾವುದೇ ವಿಷ ಪದಾರ್ಥವಿರದಿದ್ದರೂ ವ್ಯಕ್ತಿ ಮರಣ ಹೊಂದಲು ಕಾರಣ ತಿಳಿಯಲು ಆತನ ದೇಹವನ್ನು ಪೋಸ್ಟ್ ಮಾರ್ಟಂ ಮಾಡಿದಾಗ ಆತನ ದೇಹದಲ್ಲಿ ವಿಷ ಪೂರಿತ ಪದಾರ್ಥ ಉತ್ಪತ್ತಿಯಾಗಿರುವುದು ತಿಳಿದು ಬರುತ್ತದೆ.
      ಆದ್ದರಿಂದ ಮಕ್ಕಳೇ, ಯಾವತ್ತೂ ನಮ್ಮ ಮನಸ್ಸಿನಲ್ಲಿ ಕೆಟ್ಟ ಅಂಶಗಳಾಗಲೀ ಕೆಟ್ಟ ಯೋಚನೆಗಳಾಗಲೀ ಬರಬಾರದು. ಅಂತಹ ಯೋಚನೆಗಳು ಬಂದಲ್ಲಿ ಅವೇ ನಮ್ಮ ದೇಹದ ಆರೋಗ್ಯದ ಮೇಲೆ ದುಷ್ಟರಿಣಾಮಗಳನ್ನು ಬೀರುತ್ತವೆ. ದೇಹದಲ್ಲಿ ವಿಷ ಪದಾರ್ಥನನ್ನು ಉತ್ಪತ್ತಿ ಮಾಡುತ್ತವೆ. ಆದುದರಿಂದ ನಮಗೆ ದೇಹದ ಆರೋಗ್ಯ ಎಷ್ಟು ಮುಖ್ಯವೋ ಮಾನಸಿಕ ಆರೋಗ್ಯ ಅಷ್ಟೇ ಮುಖ್ಯ. ಅದಕ್ಕಾಗಿ ಯೋಗ , ಧ್ಯಾನ , ಪ್ರಾಣಾಯಾಮ ಮುಂತಾದ ಉತ್ತಮ ನಡವಳಿಕೆಗನ್ನು ರೂಡಿಸಿಕೊಳ್ಳಬೇಕು.
     ನಮ್ಮ ಮನಸ್ಸು ಯಾವಾಗಲೂ ಒಳ್ಳೆಯ ವಿಚಾರಗಳ ಕುರಿತಾಗಿ ಯೋಚಿಸುತ್ತಿರಬೇಕು. ಬೆಳಗ್ಗೆ ಎದ್ದು ಭಗವಂತನಲ್ಲಿ ಒಳ್ಳೆಯ ಮನಸ್ಸನ್ನು ಕೊಡು ದೇವರೇ ಎಂದು ಪ್ರಾರ್ಥಿಸಿ ಹೊರಡಿ. ನಿಮ್ಮ ಕಾರ್ಯ ಖಂಡಿತವಾಗಿಯೂ ಸಿದ್ಧಿಸುತ್ತದೆ. ನಮ್ಮ ಮನಸ್ಸು ಯಾವಾಗಲೂ ಸಕಾರಾತ್ಮಕ ಚಿಂತನೆಗಳಲ್ಲಿ ತೊಡಗಬೇಕು.  
       ಸರ್ವಜ್ಞ ತನ್ನ ವಚನಗಳಲ್ಲಿ... "ಸಜ್ಜನರ ಸಂಗವದು ಹೆಜ್ಜೇನು ಸವಿದಂತೆ" ಎಂದು ತಿಳಿಸಿದ್ದು ಇದಕ್ಕಾಗಿ ಅಲ್ಲವೇ? ಆದುದರಿಂದ ಒಳ್ಳೆಯವರ ಸಂಗವನ್ನು ಮಾಡೋಣ. ದುರ್ಜನರಿಂದ ದೂರವಿರೋಣ. ಹಿರಿಯರ ಉತ್ತಮ ನಡವಳಿಕೆಗಳನ್ನು, ಆದರ್ಶಗಳನ್ನು ನಮ್ಮಲ್ಲಿ ಅಳವಡಿಸೋಣ. ನಕಾರಾತ್ಮಕ ಚಿಂತನೆಗಳಿಂದ ದೂರವಿರೋಣ. ಮನಸ್ಸಿನಲ್ಲಿ ಒಳ್ಳೆಯ ವಿಚಾರಗಳನ್ನು ತುಂಬೋಣ. 
................................... ವಿ ಶ್ರೀ ರಾಮಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
"ಗೌರಿ ಕೃಪಾ" 
ವಾಟೆತ್ತಿಲ, ಅಂಚೆ: ಬಾಯಾರು 
ಮಂಜೇಶ್ವರ ತಾಲೂಕು, 
ಕಾಸರಗೋಡು ಜಿಲ್ಲೆ, ಕೇರಳ.
ಮೊಬೈಲ್ : +91 94819 74949
********************************************

Ads on article

Advertise in articles 1

advertising articles 2

Advertise under the article