-->
ಮಕ್ಕಳ ಜಗಲಿಯ ಸಾಧಕರು : ಸಂಚಿಕೆ - 2

ಮಕ್ಕಳ ಜಗಲಿಯ ಸಾಧಕರು : ಸಂಚಿಕೆ - 2

ಮಕ್ಕಳ ಜಗಲಿಯ ಸಾಧಕರು : ಸಂಚಿಕೆ - 2

     ಮಕ್ಕಳ ಜಗಲಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಶಾಲಾ ಪಠ್ಯ ವಿಷಯದಲ್ಲಿ ಅತ್ಯಧಿಕ ಅಂಕ ಗಳಿಸಿರುವ ಜಗಲಿಯ ಸಾಧಕರ ಪರಿಚಯ ಇಲ್ಲಿದೆ. 


               ನನ್ನ ಹೆಸರು ರಂಜಿತಾ ಮಾಲತೇಶ ಶೇತಸನದಿ ನಾನು ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು ಮತ್ತು ಹತ್ತನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ 602 ಅಂಕವನ್ನು ಪಡೆದಿದ್ದೆನೆ. ಆದ್ದರಿಂದ ನಾನು ನನ್ನ ಖುಷಿಯನ್ನು ವ್ಯಕ್ತಪಡಿಸುತ್ತಿದ್ದೇನೆ. ನನ್ನ ಶಾಲೆಯ ಹೆಸರು ಶಿಕ್ಷಣ ಸಮಿತಿ ಮಹಾತ್ಮಾ ಗಾಂಧೀ ಪ್ರೌಢ ಶಾಲೆ ದೇವಗಿರಿ ತಾ /ಜಿ /ಹಾವೇರಿ. ನನ್ನ ತಂದೆ ಹೆಸರು ಮಾಲತೇಶ, ತಾಯಿಯ ಹೆಸರು ಮಂಜುಳಾ ಇವರ ಪ್ರಥಮ ಪುತ್ರಿ ನಾನು. ಇನ್ನೂ ನನ್ನ ವಿದ್ಯಾಭ್ಯಾಸದ ಬಗ್ಗೆ ಹೇಳಬೇಕಾದರೆ ನಾನು ಪಠ್ಯ ಪುಸ್ತಕವನ್ನು ಚೆನ್ನಾಗಿ ಓದುತ್ತಿದ್ದೆ. ಅವತ್ತು ಶಾಲೆಯಲ್ಲಿ ಮಾಡಿರುವ ಭೋದನೆಯನ್ನು ಅವತ್ತೇ ನಾನು ಓದಿ ಮುಗಿಸುತ್ತಿದ್ದೆ. ಓದುವುದರಲ್ಲಿ ಯಾವುದೇ ಸಮಸ್ಯೆಗಳು ಬಂದರೂ ನಾ ನನ್ನ ಶಿಕ್ಷಕರಿಗೆ ಹೇಳಿ ಬಗೆಹರಿಸಿಕೊಳ್ಳುತ್ತಿದ್ದೆ. ಇದಕ್ಕೆ ಪ್ರತಿಯಾಗಿ ನನಗೆ ನನ್ನ ಶಿಕ್ಷಕರು ತುಂಬಾ ಸಹಕಾರ ಕೊಟ್ಟಿದ್ದಾರೆ. ಆದ್ದರಿಂದ ನಾನು 96.32%ಅಂಕ ಪಡೆಯಲು ಸಹಾಯವಾಯಿತು. ನನ್ನ ಮನೆಯಲ್ಲಿ ನನ್ನ ತಂದೆ, ತಾಯಿ ಓದಲು ನನಗೆ ಸಹಕಾರ ನೀಡಿದರು
ಸಾಹಿತ್ಯರಚನೆ ನನ್ನ ಇಷ್ಟದ ವಿಷಯ... ನಾನು ಮಕ್ಕಳ ಜಗಲಿಯಲ್ಲಿ ಕವನಗಳನ್ನು ಬರೆಯುತ್ತಿದ್ದೆ. ಈ ಅವಕಾಶ ನೀಡಿದ ಮಕ್ಕಳ ಜಗಲಿಗೂ ನನ್ನ ಕೃತಜ್ಞತೆಯನ್ನು ಹೇಳುವೆ                           
................................... ರಂಜಿತಾ ಶೇತಸನದಿ.
ಶಿಕ್ಷಣ ಸಮಿತಿ ಮಹಾತ್ಮಾ ಗಾಂಧೀ 
ಪ್ರೌಢ ಶಾಲೆ ದೇವಗಿರಿ
ತಾ/ಜಿ /ಹಾವೇರಿ. ದೇವಗಿರಿ ಗ್ರಾಮ
********************************************


             ಎಲ್ಲರಿಗೂ ನನ್ನ ನಮಸ್ಕಾರಗಳು ನನ್ನ ಹೆಸರು ದೀಕ್ಷಾ ಜಿ. ನಾನು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ ಪುತ್ತೂರಿನಲ್ಲಿ ನನ್ನ ೧೦ನೇ ತರಗತಿಯನ್ನು ಮುಗಿಸಿದ್ದೇನೆ. ಈ ಬಾರಿಯ SSLC ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುವ ಎಲ್ಲಾ ನನ್ನ "ಮಕ್ಕಳ ಜಗಲಿ" ಯಲ್ಲಿರುವ ಸ್ನೇಹಿತರಿಗೆ ಶುಭಾಶಯಗಳನ್ನು ಕೋರುತ್ತಾ, ನಿಮ್ಮ ಮುಂದಿನ ಭವಿಷ್ಯ ಸಿಹಿಯಾಗಿರಲಿ ಎಂದು ಹೇಳಲು ಇಚ್ಚಿಸುತ್ತೇನೆ. ಈ ಬಾರಿಯ SSLCಯಲ್ಲಿ ನನಗೆ 559 ಅಂಕಗಳು ದೊರೆತಿವೆ. ಇದರ ಬಗ್ಗೆ ನನಗೆ ಖುಷಿಯಿದೆ. ನನ್ನ ಈ ಕಲಿಕೆಗೆ ನನ್ನ ತಂದೆ ತಾಯಿಯ ಪ್ರೋತ್ಸಾಹದ ಜೊತೆಗೆ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಾಗಿರುವ ನನ್ನ ಚಿಕ್ಕಪ್ಪ(ಗೋಪಾಲಕೃಷ್ಣ ಎನ್) ಮತ್ತು ಚಿಕ್ಕಮ್ಮ(ಸ್ವಪ್ನ) ಇವರ ಪಾತ್ರ ಕೂಡ ಮಹತ್ವದ್ದಾಗಿದೆ. ಅಷ್ಟೇ ಅಲ್ಲದೆ ನನ್ನ ಶಾಲೆ ಹಾಗೂ ಶಾಲೆಯ ನನ್ನೆಲ್ಲಾ ನೆಚ್ಚಿನ ಶಿಕ್ಷಕ ವೃಂದದವರ ಪ್ರೀತಿ, ಸಹಕಾರ ಕೂಡ ಇದಕ್ಕೆ ಕಾರಣವಾಗಿದೆ. ನಾನು ಕಲಿಕೆ ಮಾತ್ರವಲ್ಲದೆ ಸಂಗೀತ, ಮುಂತಾದ ಆಟೋಟ ಸ್ಪರ್ಧೆಗಳಲ್ಲೂ ಭಾಗವಹಿಸುತ್ತೇನೆ. ನಾನು ಜಿಲ್ಲಾ ಮಟ್ಟದ ಓಟಗಾರ್ತಿಯಾಗಿದ್ದು ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ನಡೆದ ಜಿಲ್ಲಾ ಮಟ್ಟದ ಕಥೆ ಹೇಳುವ ಸ್ಪರ್ಧೆಯಲ್ಲೂ ಭಾಗವಹಿಸಿದ್ದೇನೆ. ಭರತನಾಟ್ಯ ಇದು ನನ್ನ ನೆಚ್ಚಿನ ಕಲೆಯಾಗಿದೆ. ಇನ್ನು"ಮಕ್ಕಳ ಜಗಲಿ"ಯ ಬಗ್ಗೆ ಹೇಳುವುದಾದರೆ ಇದು ಬರಹಗಾರರಿಗೆ ಹಾಗೂ ಇನ್ನಿತರ ಕಲೆಗಾರರಿಗೆ ಒಂದು ಉತ್ತಮ ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ಇದರಲ್ಲಿ ಬರುವ ಕೆಲವು ಬರಹಗಳು ನನಗೆ ಖುಷಿ ಎನಿಸಿದರೆ ಇನ್ನೂ ಕೆಲವು ಬರಹಗಳು ನನಗೆ ಸ್ಫೂರ್ತಿಯಾಗಿವೆ ಎಂದು ಹೇಳುತ್ತಾ ನನ್ನ ಅನಿಸಿಕೆಯನ್ನು ಹೇಳಲು ಅವಕಾಶ ಮಾಡಿ ಕೊಟ್ಟ "ಮಕ್ಕಳ ಜಗಲಿ"ಗೆ ನನ್ನ ಧನ್ಯವಾದಗಳನ್ನು ತಿಳಿಸಲು ಇಚ್ಚಿಸುತ್ತೇನೆ.
............................................... ದೀಕ್ಷಾ ಜಿ.
ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ , ತೆಂಕಿಲ ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
********************************************                  ನಮಸ್ಕಾರ ನಾನು ಯಶ್ಮಿತಾ. ನಾನು 10ನೇ ತರಗತಿ ವ್ಯಾಸಂಗ ಮುಗಿಸಿ ಫಲಿತಾಂಶದ ಪ್ರಕಟಣೆಯು ಆಯಿತು. ನನಗೆ 500 ಕ್ಕಿಂತ ಮೇಲೆ ಅಂಕ ತೆಗೆಯಬೇಕೆಂಬ ಗುರಿ ಇತ್ತು. ನಾವು ಒಂದು ಗುರಿ ಇಟ್ಟರೆ ಅದನ್ನು ಪಡೆಯಬೇಕಾದರೆ ಚೆನ್ನಾಗಿ ಪ್ರಯತ್ನಪಡೆಯಬೇಕು. ಇಲ್ಲದಿದ್ದರೆ ನಾವು ಆ ಗುರಿಯನ್ನು ಮುಟ್ಟಲು ಸಾಧ್ಯವಾಗುವುದಿಲ್ಲ . ನನ್ನ ಶಾಲೆಯ ಎಲ್ಲಾ ಶಿಕ್ಷಕರು ಅರ್ಥವಾಗುವ ರೀತಿಯಲ್ಲಿ ಪಾಠ ಮಾಡುತ್ತಿದ್ದರು. ಇದರಿಂದ ನಾನು ಇಷ್ಟು ಅಂಕ ಪಡೆಯಲು ಸಾಧ್ಯವಾಗಿದೆ . ನನಗೆ ಕಲಿಸಿದಂತಹ ನನ್ನ ಎಲ್ಲಾ ಶಿಕ್ಷಕರಿಗೆ ಹಾಗೂ ಕಲಿಯಲು ಪೋತ್ಸಾಹ ಮಾಡಿದ ನನ್ನ ಎಲ್ಲಾ ಗೆಳತಿಯರಿಗೆ ಧನ್ಯವಾದಗಳು. ಮಕ್ಕಳ ಜಗಲಿಯಲ್ಲಿ ನಾನು ಕವನ ಬರೆಯುತ್ತಿದ್ದೆ. ಈ ಬಗ್ಗೆ ಹೇಳುವುದಾದರೆ ಮಕ್ಕಳ ಜಗಲಿ ಮಕ್ಕಳ ಪ್ರತಿಭೆಯನ್ನು ಗುರುತಿಸುತ್ತಿದೆ. ಇದರಲ್ಲಿ ದೊಡ್ಡವರು ಹೇಳುವ ಮಾತಿನಿಂದ ನಾನು ತುಂಬಾ ಜ್ಞಾನವನ್ನು ಗಳಿಸಿದ್ದೇನೆ. ಇದು ಇನ್ನೂ ಮುಂದುವರಿಯ ಬೇಕೆಂದು ಆಶಿಸುತ್ತೇನೆ.
................................................ ಯಶ್ಮಿತಾ 
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
********************************************
ಮಕ್ಕಳ ಜಗಲಿಯಲ್ಲಿ ಭಾಗಿಯಾಗಿರುವ ಆತ್ಮೀಯ ವಿದ್ಯಾರ್ಥಿಗಳೇ.... ಹತ್ತನೇ ತರಗತಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದಿರುವ ವಿದ್ಯಾರ್ಥಿಗಳಿಗೆ ಮಕ್ಕಳ ಜಗಲಿಯ ಪರವಾಗಿ ವಿಶೇಷವಾದ ಅಭಿನಂದನೆಗಳು.....
          ಇಲ್ಲಿ ನಮ್ಮ ಜೊತೆ ಹಂಚಿಕೊಳ್ಳುವ ನಿಮ್ಮ ಮಾತುಗಳು ಎಲ್ಲರಿಗೂ ಸ್ಪೂರ್ತಿಯಾಗಬಹುದು.. ನೀವು ಓದಿದ ಶಾಲೆಯ ಬಗ್ಗೆ , ಓದಿದ ರೀತಿ ಹಾಗೂ ನಿಮ್ಮ ಶಾಲೆಯಲ್ಲಿ ನಿಮಗೆ ಸಿಕ್ಕಂತಹ ಪ್ರೋತ್ಸಾಹ ಇಷ್ಟ ವಾದಂತಹ ವಿಷಯಗಳು ... ಈ ಬಗ್ಗೆ ತಮ್ಮ ಅನಿಸಿಕೆಯನ್ನು ಮಕ್ಕಳ ಜಗಲಿಯ ಜೊತೆ ಹಂಚಿಕೊಳ್ಳಿ... ಹಾಗೂ ಮಕ್ಕಳ ಜಗಲಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ನೀವು ಮಕ್ಕಳ ಜಗಲಿಯ ಕುರಿತಾಗಿ ಅನಿಸಿಕೆ.. ತಮ್ಮ ಭಾವಚಿತ್ರ ಹಾಗೂ ತಮ್ಮ ವಿವರದೊಂದಿಗೆ ಆದಷ್ಟು ಬೇಗ ಬರೆದು ವಾಟ್ಸಪ್ ಮೂಲಕ 9844820979 ಗೆ ಕಳಿಸಿ.....


Ads on article

Advertise in articles 1

advertising articles 2

Advertise under the article