-->
ಅಪ್ಪ ಅಮ್ಮನ ಪ್ರೀತಿಯ ಮಗ ಆದಿತ್ಯ - (ಕತೆ)

ಅಪ್ಪ ಅಮ್ಮನ ಪ್ರೀತಿಯ ಮಗ ಆದಿತ್ಯ - (ಕತೆ)

ಸಾನಿಧ್ಯ 
8ನೇ ತರಗತಿ
ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ 
ಪ್ರೌಢ ಶಾಲೆ ರಾಮಕುಂಜ  
ಕಡಬ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ

ಸಾನಿಧ್ಯ ಬರೆದ 2 ಮಕ್ಕಳ ಕಥೆಗಳು

      ಅಪ್ಪ ಅಮ್ಮನ ಪ್ರೀತಿಯ ಮಗ ಆದಿತ್ಯ - (ಕತೆ)
         ಒಂದು ಊರಿನಲ್ಲಿ ರಾಘು ತನ್ನ ಮಗ ಆದಿತ್ಯನ ಜೊತೆ ವಾಸವಾಗಿದ್ದನು. ಅದೇ ಊರಿನಲ್ಲಿ ರಾಮ ತನ್ನ ಮಗ ರಾಜು ಜೊತೆ ವಾಸವಾಗಿದ್ದನು. ರಾಘು ಬಡವನಾಗಿದ್ದು , ರಾಮ ಶ್ರೀಮಂತನಾಗಿದ್ದನು. ಆದಿತ್ಯ ಮತ್ತು ರಾಜು ಊರಿನಲ್ಲಿರುವ ಒಂದು ಶಾಲೆಗೆ ಹೋಗುತ್ತಿದ್ದರು. ಆದಿತ್ಯ ಬಡವನಾದ ಕಾರಣ ಶಾಲೆಗೆ ನಡೆದುಕೊಂಡು ಹೋಗುತ್ತಿದ್ದನು. ರಾಜು ತನ್ನ ಸೈಕಲ್ ನಲ್ಲಿ ಶಾಲೆಗೆ ಪ್ರತಿನಿತ್ಯ ಹೋಗುತ್ತಿದ್ದನು. ರಾಜುವಿನ ಗೆಳೆಯರು ಆದಿತ್ಯನಿಗೆ ತಮಾಷೆ ಮಾಡಿದರು. ಏ.... ತಮ್ಮ ನಿನ್ನಂತ ಬಡವರು ಈ ಶಾಲೆಗೆ ಬರಬಾರದು ಎಂಬುದಾಗಿ ತಮಾಷೆ ಮಾಡಿದರು. ಆದಿತ್ಯ ತಲೆತಗ್ಗಿಸಿ ತರಗತಿ ಕೊಠಡಿಗೆ ಹೋದನು. ತನ್ನ ಶಿಕ್ಷಣದ ಕಡೆಗೆ ಗಮನ ಕೊಟ್ಟನು. ಸಂಜೆ ಆದಿತ್ಯ ತನ್ನ ಮನೆಗೆ ಹೋಗಿ ತಂದೆಯ ಬಳಿ ಹೇಳಿದ "ನನಗೆ ಶಾಲೆಯಲ್ಲಿ ಗೆಳೆಯರು ತಮಾಷೆ ಮಾಡುತ್ತಾರೆ. ನನಗೆ ಸೈಕಲ್ ಬೇಕು" ಎಂದು ಹಠ ಹಿಡಿದ. ಆಗ ಅವನ ಅಮ್ಮ ಅಲ್ಲಿಗೆ ಬಂದು , "ಮಗನೇ ಅವರು ಶ್ರೀಮಂತರು ನಾವು ಬಡವರು ನಮ್ಮಲ್ಲಿ ಅಷ್ಟು ಹಣವಿಲ್ಲ" ಎಂದಳು. ಆದಿತ್ಯ ಅಪ್ಪ ಅಮ್ಮನ ಮಾತು ಕೇಳಲಿಲ್ಲ. ನನಗೆ ಸೈಕಲ್ ತೆಗೆದುಕೊಟ್ಟರೆ ಮಾತ್ರ ನಾಳೆಯಿಂದ ಶಾಲೆಗೆ ಹೋಗುತ್ತೇನೆ ಎಂದು ಹೇಳಿ ಹೊರಟು ಬಿಟ್ಟನು. ಅಪ್ಪ-ಅಮ್ಮ ಒಂದು ತೀರ್ಮಾನಕ್ಕೆ ಬಂದರು. ಇರುವುದು ಒಬ್ಬನೇ ಮಗ. ಅವನು ಕೇಳಿದ್ದನ್ನು ತೆಗೆದುಕೊಡದಿದ್ದರೆ ನಾವು ಏಕೆ ಬದುಕಬೇಕು ಎಂದರು ಅಪ್ಪ. ನಮ್ಮಲ್ಲಿ ಅಷ್ಟು ಹಣ ಇಲ್ಲ ಮಗನಿಗೋಸ್ಕರ ನನ್ನ ಬಳಿ ಇರುವ ಎರಡು ಬಳೆಯನ್ನು ಕೊಡುತ್ತೇನೆ. ಅದನ್ನು ಮಾರಿ ಬಂದ ಹಣದಿಂದ ಮಗನಿಗೆ ಸೈಕಲ್ ತೆಗೆದು ಕೊಡಿ ಎಂದು ಇಬ್ಬರೂ ಮಾತನಾಡುತ್ತಿದ್ದರು. 
        ಇದನ್ನು ಕೇಳಿಸಿದ ಆದಿತ್ಯ ಕಣ್ಣೀರು ಸುರಿಸುತ್ತಾ ಅಪ್ಪ ಅಮ್ಮನ ಕಾಲಿಗೆ ಬಿದ್ದು ಕ್ಷಮೆ ಕೇಳಿದ. "ಅಪ್ಪಾ ನಾವು ಇಷ್ಟು ಬಡವರು ಎಂದು ನನಗೆ ಗೊತ್ತಿರಲಿಲ್ಲಿ. ಇನ್ನು ಮುಂದೆ ನಿಮ್ಮ ಕೈಯಿಂದ ತೆಗೆದುಕೊಳ್ಳಲು ಅಸಾಧ್ಯವೆನಿಸಿದನ್ನು ಎಂದಿಗೂ ಕೇಳಲಾರೆ" ಎಂದನು. ಅಪ್ಪನಿಗೆ ತುಂಬಾ ಖುಷಿಯಾಯಿತು . "ಮಗನೇ , ನಿನ್ನ ವಿದ್ಯಾಭ್ಯಾಸಕ್ಕೆ ಅಗತ್ಯವಾದುದನ್ನು ಕೇಳು.... ತಪ್ಪದೇ ತೆಗೆದುಕೊಡುವೆ. ನೀನು ವಿದ್ಯಾಭ್ಯಾಸದ ಕಡೆ ಗಮನ ಕೊಡು. ನಿನ್ನ ಕಾಲ ಮೇಲೆ ನೀನು ನಿಂತು ಕೊಳ್ಳಬೇಕು. ನಮ್ಮನು ಚೆನ್ನಾಗಿ ನೋಡಿಕೊಳ್ಳಬೇಕು." ಎಂದನು ರಾಘು. "ಆಯ್ತು ಅಪ್ಪ ನೀವು ಹಾಕಿದ ಗೆರೆಯನ್ನು ಎಂದಿಗೂ ದಾಟಲಾರೆ" ಎಂದನು ಆದಿತ್ಯ. ಅಂದಿನಿಂದ ಚೆನ್ನಾಗಿ ಕಲಿತನು. 
       ಆದಿತ್ಯನಿಗೆ ದೊಡ್ಡ ಕೆಲಸ ಸಿಕ್ಕಿತು. ತಾನು ದುಡಿದು ಸಂಪಾದಿಸಿದ ಹಣದಿಂದ ಮೊದಲು ಒಂದು ಮನೆ ಕಟ್ಟಿಸಿದನು. ಅಪ್ಪ ಅಮ್ಮನನ್ನು ಚೆನ್ನಾಗಿ ನೋಡಿಕೊಂಡನು. ಮದುವೆಯಾಗಿ ತನ್ನ ಅಪ್ಪ ಅಮ್ಮನ ಜೊತೆ ಖುಷಿಖುಷಿಯಾಗಿ ಜೀವನ ನಡೆಸಿದನು...
................................................. ಸಾನಿಧ್ಯ 
8ನೇ ತರಗತಿ
ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ 
ಪ್ರೌಢ ಶಾಲೆ ರಾಮಕುಂಜ  
ಕಡಬ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*****************************************   

                          2ನೇ ಕತೆ


                   ರಾಧಾಳ ಪರಿಶ್ರಮ - ಕತೆ
     ರಾಧಾಳು ಬಡತನದ ಮನೆಯ ಹುಡುಗಿ. ಅಮ್ಮನು ಅವಳನ್ನು ಓದಿಸಲು ಪಡುತ್ತಿದ್ದ ಕಷ್ಟವನ್ನು ಕಂಡು ಒಳಗೊಳಗೇ ಮರುಗುತ್ತಿದ್ದಳು. ಜೊತೆಗೆ ತಮ್ಮನನ್ನು ನೋಡಿಕೊಳ್ಳುವ ಜವಾಬ್ದಾರಿ. ಅಪ್ಪನ ಮುಖವನ್ನೇ ನೋಡದ ಮಕ್ಕಳು. ಅಪ್ಪ ಬದುಕಿದ್ದಾರೆ ಎನ್ನುವ ಸುದ್ದಿಯನ್ನು ಅಷ್ಟೇ ತಿಳಿಸಿದ್ದಾರೆ. ಅಮ್ಮನ ಸಂಕಷ್ಟಕ್ಕೆ ಏನಾದರೂ ಪರಿಹಾರ ಕಂಡುಹಿಡಿಯಬೇಕು ಎಂದುಕೊಳ್ಳುವಾಗಲೇ ಆ ಘಟನೆಯಿಂದ ಅವರ ಬದುಕಿನ ದಾರಿಯನ್ನು ಬದಲಾಯಿಸಿತ್ತು. 
         ಒಂದು ದಿನ ರಾಧಾಳ ಅಮ್ಮ ಮನೆಯನ್ನು ಸ್ವಚ್ಛ ಮಾಡುವಾಗ ಒಂದು ಮಡಕೆ ಕಾಣಿಸಿತು. ಆ ಮಡಕೆಯಲ್ಲಿ ಒಂದು ಪತ್ರವಿತ್ತು. ಆ ಪತ್ರವನ್ನು ನೋಡಿದಳು ಅದರಲ್ಲಿ ಬರೆದಿತ್ತು. ನಾನು ರಾಧಾಳ ತಂದೆ. ನಾನು ಸಾಯುವುದಕ್ಕಿಂತ ಮೊದಲು ನಮ್ಮ ಹೊಲದಲ್ಲಿರುವ ಮಾವಿನ ಮರದ ಕೆಳಗೆ ಒಂದು ನಿಧಿ ಇಟ್ಟಿದ್ದೇನೆ. ಆ ನಿಧಿಯಲ್ಲಿ ಚಿನ್ನಾಭರಣದಿಂದ ತುಂಬಿದೆ. ಆ ಚಿನ್ನವನ್ನು ಮಾರಿ ಮಕ್ಕಳಿಗೆ ವಿದ್ಯಾಭ್ಯಾಸ ಕಲಿಸು , ಎಂದು ಬರೆದಿತ್ತು. ರಾಧಾ ಳ ಅಮ್ಮ ಬೇಗ ಹೊಲದ ಬಳಿ ಹೋದಳು. ಮಾವಿನ ಮರದ ಕೆಳಗೆ ಹಾರೆಯಿಂದ ಅಗೆದಳು. ಏನೋ ಹೊಳೆದಂತಾಯ್ತು. 
            ಕೈಯಿಂದ ಮುಟ್ಟಿ ಮುಟ್ಟಿ ನೋಡಿದಳು. ರಾಧಾಳ ತಂದೆ ಹೇಳಿದ ಹಾಗೆ ಚಿನ್ನಾಭರಣದಿಂದ ತುಂಬಿತ್ತು. ತುಂಬಾ ಖುಷಿಯಿಂದ ಮನೆಗೆ ಹೋದಳು. ಮರುದಿನ ಚಿನ್ನವನ್ನು ಮಾರಿ ಮಕ್ಕಳಿಗೆ ಹೊಸಬಟ್ಟೆ ಸಿಹಿತಿಂಡಿ ಹಾಗೂ ಪುಸ್ತಕ ಗಳನ್ನು ತಂದಳು. ಮಕ್ಕಳಿಗೆ ಬಟ್ಟೆ ನೋಡಿ ತುಂಬಾ ಖುಷಿಯಾಯಿತು. "ಏನಮ್ಮ! ಇವತ್ತು ನಮಗೆ ಬಟ್ಟೆ ಸಿಹಿತಿಂಡಿಗಳನ್ನು ತಂದಿದ್ದೀಯಾ" ಎಂದಳು ರಾಧಾ. 
          ಇದು ನಿನ್ನ ತಂದೆಯ ಮೊದಲನೆಯ ಉಡುಗೊರೆ. "ಹೌದಾ ! ಅಪ್ಪ ಎಲ್ಲಿದ್ದಾರೆ" ಅಮ್ಮ. "ಮಗಳೇ ಅವರು ಇಲ್ಲ ಸ್ವರ್ಗ ವಾಸಿಯಾಗಿದ್ದಾರೆ" ರಾಧಾ ಅಳುತ್ತಾ.... ಏನು ಹೇಳುತ್ತಿರುವೆ ಅಮ್ಮ ಅಪ್ಪ ಸ್ವರ್ಗವಾಸಿಯೇ....? "ಹೂ ಮಗಳೇ , ನೀವು ಚಿಕ್ಕದಿರುವಾಗಲೇ ಅವರು ತೀರಿಹೋಗಿದ್ದಾರೆ. ಅಪ್ಪನನ್ನು ನೋಡುವ ಭಾಗ್ಯ ನಿಮಗಿಲ್ಲ. ದೇವರು ನಿಮ್ಮ ಹಣೆಯಲ್ಲಿ ಏನು ಬರೆದಿದ್ದರೋ ಏನೋ...... ಅಳಬೇಡ ಮಗಳೇ ಅಪ್ಪನ ಪ್ರೀತಿಯನ್ನು ನಾನು ತೋರಿಸುತ್ತೇನೆ. "ನಾಳೆಯಿಂದ ನೀನು ಶಾಲೆಗೆ ಹೋಗಬೇಕು." ಮರುದಿನ ಬೇಗ ಎದ್ದು ಶಾಲೆಗೆ ಹೊರಟಳು.
           ಆ ದಿನ ರಾಧಾಳ ಅಮ್ಮ ಅವಳನ್ನು ಶಾಲೆಗೆ ಕರೆದುಕೊಂಡು ಹೋದರು. ಅದೇ ರೀತಿ ಹಲವು ದಿನಗಳು ನಡೆಯಿತು. ಎಸ್.ಎಸ್. ಎಲ್. ಸಿ. ಎಲ್. ಸಿ ಪರೀಕ್ಷೆ ಹತ್ತಿರ ಬಂತು. ಅವಳು ನಿಷ್ಠೆಯಿಂದ ಓದಿದಳು. ಪರೀಕ್ಷೆ ದಿನ ಬಂದೇ ಬಿಟ್ಟಿತು. ಅವಳ ಅಮ್ಮ ಆಶೀರ್ವಾದ ಮಾಡಿ ಕಳುಹಿಸಿದಳು. ಒಂದು ತಿಂಗಳ ನಂತರ ಎಸ್.ಎಸ್. ಎಲ್. ಸಿ. ಫಲಿತಾಂಶ ದಲ್ಲಿ ರಾಧಾಳಿಗೆ ಪ್ರಥಮ ಸ್ಥಾನ. ಅವಳು ಓದನ್ನು ಮುಂದುವರಿಸಿದಳು. ಮುಂದೆ ಒಳ್ಳೆಯ ಕೆಲಸವೂ ಸಿಕ್ಕಿತು. ರಾಧಾಳಿಗೆ ಮದುವೆ ಮಾಡಿಸಬೇಕೆಂಬ ಅಮ್ಮನ ಆಸೆಯಂತೆ ಮದುವೆ ಧಾಮ್ ಧೂಮ್ ಎಂದು ಮಾಡಿದರು. ಮದುವೆಯಾದ ಒಂದು ತಿಂಗಳ ನಂತರ ಅಮ್ಮ ನನ್ನ ಕನಸು ನನಸಾಯ್ತು ಎಂದು ಹೇಳಿ ಕಣ್ಮುಚ್ಕೊಂಡು ಬಿಟ್ಟಳು.
................................................. ಸಾನಿಧ್ಯ 
8ನೇ ತರಗತಿ
ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ 
ಪ್ರೌಢ ಶಾಲೆ ರಾಮಕುಂಜ  
ಕಡಬ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*****************************************   

Ads on article

Advertise in articles 1

advertising articles 2

Advertise under the article