-->
ಸಾತ್ವಿ  ಬರೆದ 2 ಕಥೆಗಳು

ಸಾತ್ವಿ ಬರೆದ 2 ಕಥೆಗಳು

ಮಕ್ಕಳ ಜಗಲಿಯಲ್ಲಿ 
ಸಾತ್ವಿ ಡಿ 
ಬರೆದ 2 ಕಥೆಗಳು                       ದೀಪಾಳ ಜಾಣತನ - ಕಥೆ
        ಒಂದು ಹಳ್ಳಿಯಲ್ಲಿ ಅಕ್ಕ ಮತ್ತು ತಂಗಿ ಇದ್ದರು. ತಂಗಿ ದೀಪಾ ಮತ್ತು ಅಕ್ಕನ ಹೆಸರು ಶೀಲಾ. ಶೀಲಾ ಯಾವಾಗಲೂ ದೀಪಾಳನ್ನು ದ್ವೇಷಿಸುತ್ತಿದ್ದಳು. ಅವರಿಬ್ಬರೂ ಶಾಲೆಗೆ ಹೋಗುತ್ತಿದ್ದರು. ದೀಪಾ ಕಲಿಯುವುದರಲ್ಲಿ ಮುಂದೆ ಇದ್ದಳು.
       ಒಂದು ದಿನ ದೀಪಾ ಶಾಲೆಯಿಂದ ಬಂದು ಓದುತ್ತಿದ್ದಾಗ ಶೀಲಾ ಬಂದು ಟಿವಿಯನ್ನು ಜೋರಾಗಿ ಇಟ್ಟಳು. ದೀಪಾಳಿಗೆ ಕೋಪ ಬಂತು. ಆದರೂ ದೀಪಾ ಸುಮ್ಮನಿದ್ದಳು. ಅವಳ ಅಮ್ಮ ಬಂದು ಶೀಲಾ ನಿಗೆ ತುಂಬಾ ಬೈಯುತ್ತಾರೆ. ಆಗ ಶೀಲಾ ಕೋಪದಿಂದ ಹೊರಗೆ ಹೋದಳು. ದೀಪಾ ಅವಳು ಎಲ್ಲಿಗೆ ಹೋದಳು ಎಂದು ಹುಡುಕುತ್ತಿರುತ್ತಾಳೆ. ಆಗ ಶೀಲಾ ಕೂಗುವ ಸದ್ದು ಕೇಳಿಸಿತು. ದೀಪಾ ಹೋಗಿ ನೋಡುತ್ತಾಳೆ. ನೋಡುವಾಗ ಶೀಲಾ ಒಂದು ದೊಡ್ಡ ಗುಂಡಿಯಲ್ಲಿ ಬಿದ್ದಿರುತ್ತಾಳೆ. ದೀಪಾ ಒಂದು ಹಗ್ಗವನ್ನು ಹಾಕುತ್ತಾಳೆ. ಇದನ್ನು ಗಟ್ಟಿಯಾಗಿ ಹಿಡಿದು ಮೆಲ್ಲನೆ ಬಾ ಎಂದು ಹೇಳುತ್ತಾಳೆ. ಶೀಲಾ ಬಚಾವಾಗಿ ಬಂದಳು. ಶೀಲಾಳಿಗೆ ಈಗ ಅರ್ಥವಾಯಿತು. ತನ್ನ ತಂಗಿ ದೀಪಾಳ ಬಗ್ಗೆ ಪ್ರೀತಿ ಹುಟ್ಟಿತು. ನಂತರ ಅವರಿಬ್ಬರೂ ಅನ್ಯೋನ್ಯವಾಗಿದ್ದರು.
............................................... ಸಾತ್ವಿ ಡಿ 
5ನೇ ತರಗತಿ
ದ.ಕ.ಜಿ.ಪಂ.ಉ.ಹಿ.ಪ್ರಾ.ಶಾಲೆ , ದರ್ಬೆತ್ತಡ್ಕ
ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*****************************************


                         ಅಜ್ಜಿಯ ಕೆಲಸ
         ಒಂದು ಊರಿನಲ್ಲಿ ಅಜ್ಜಿ ಇದ್ದಳು. ಅವಳು ಬೇರೆ ಮನೆಯವರ ತೋಟದಲ್ಲಿ ಕೆಲಸ ಮಾಡುತ್ತಿದ್ದಳು. ಅವಳಿಗೆ ಅಲ್ಪಸ್ವಲ್ಪ ಸಂಬಳ ಸಿಗುತಿತ್ತು. ಒಂದು ದಿನ ಅವಳ ಮನೆಯಲ್ಲಿ ತುಂಬಾ ಕೆಲಸಗಳು ಇತ್ತು. ಹಾಗಾಗಿ ಅವಳಿಗೆ ಕೆಲಸಕ್ಕೆ ಹೋಗಲು ತಡವಾಯಿತು. ಆಗ ಕೆಲಸದ ಮನೆಯವರು ಅವಳ ಹತ್ತಿರ "ಇವತ್ತು ಏನು ಇಷ್ಟು ತಡವಾಯಿತು " ಎಂದು ಕೇಳುತ್ತಾರೆ. ಅವಳು "ಮನೆಯಲ್ಲಿ ತುಂಬಾ ಕೆಲಸಗಳು ಇತ್ತು" ಎಂದು ಹೇಳುತ್ತಾಳೆ. ಇನ್ನೊಂದು ದಿನ ಬರುವಾಗ ಅದಕ್ಕಿಂತಲೂ ತುಂಬಾ ತಡವಾಗಿ ಬಂದಳು. ಆಗ ಅವರು ಅವಳನ್ನು ಕೆಲಸದಿಂದ ತೆಗೆದು ಹಾಕಿದರು. ಅವಳಿಗೆ ತುಂಬಾ ಬೇಸರವಾಯಿತು. ಆ ಅಜ್ಜಿ ಮನೆಗೆ ಹೊರಟಳು.
       ಒಂದು ದಿನ ಮನೆಯ ಪಕ್ಕದಲ್ಲಿರುವ ಮರದ ಅಡಿಯಲ್ಲಿ ಕುಳಿತುಕೊಂಡು ಅಜ್ಜಿ ಅಳುತಿದ್ದಳು. ಆಗ ಒಬ್ಬಳು ಚಿಕ್ಕ ಹುಡುಗಿ ಬಂದಳು. ಅವಳು ಅಜ್ಜಿಯ ಬಳಿ "ಯಾಕೆ ಅಳುತ್ತಿದ್ದಿಯಾ.....?" ಎಂದು ಕೇಳಿದಳು. ಆಗ ಅಜ್ಜಿ ಎಲ್ಲಾ ವಿಷಯ ಹೇಳಿದಳು. ಆ ಹುಡುಗಿ ಅವಳು    ಮನೆಯಲ್ಲಿಯೇ ಅಪ್ಪನಲ್ಲಿ ಹೇಳಿ ಕೆಲಸ ಕೊಡಿಸಿದಳು. ಆ ಅಜ್ಜಿ ಖುಷಿಯಾಗಿದ್ದಳು.
.............................................. ಸಾತ್ವಿ ಡಿ 
5ನೇ ತರಗತಿ
ದ.ಕ.ಜಿ.ಪಂ.ಉ.ಹಿ.ಪ್ರಾ.ಶಾಲೆ , ದರ್ಬೆತ್ತಡ್ಕ
ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*****************************************

Ads on article

Advertise in articles 1

advertising articles 2

Advertise under the article