
ಸಾರ್ಥಕ ಬದುಕಿನ ಸಾಧಕಿ (ಕಥೆ )
Tuesday, April 5, 2022
Edit
9ನೇ ತರಗತಿ
ಸರ್ಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಸಾರ್ಥಕ ಬದುಕಿನ ಸಾಧಕಿ (ಕಥೆ)
ಒಂದು ಸುಂದರವಾದ ಹಳ್ಳಿ. ಆ ಹಳ್ಳಿಯಲ್ಲಿ
ತುಂಬಾ ಕುಟುಂಬಗಳು ವಾಸಿಸುತ್ತಿದ್ದವು. ಅದೇ ಹಳ್ಳಿಯಲ್ಲಿ ಒಂದು ಪುಟ್ಟ ಮನೆಯಲ್ಲಿ ಅಜ್ಜಿ ತನ್ನ ಮೊಮ್ಮಗಳೊಂದಿಗೆ ವಾಸಿಸುತ್ತಿದ್ದಳು. ಅವರಿಗೆ ತುಂಬಾ ಬಡತನವಿತ್ತು. ಆದರೂ ಅಜ್ಜಿ ಶ್ರೀಮಂತರ ಮನೆಗೆ ಹೋಗಿ ದುಡಿದು ತನ್ನ ಮೊಮ್ಮಗಳನ್ನು ಓದಿಸುತ್ತಿದ್ದಳು. ಇದು ಮೊಮ್ಮಗಳಿಗೆ ತುಂಬಾ ಬೇಸರದ ಸಂಗತಿಯಾಗಿತ್ತು. ಏಕೆಂದರೆ ತನ್ನ ಅಜ್ಜಿ ತನಗೆ ಕೂಡದಿದ್ದರುಾ ಬೇರೆಯವರ ಮನೆಗೆ ಹೋಗಿ ದುಡಿಯುತ್ತಿದ್ದಾಳೆ , ಅದಕ್ಕೆ ನಾನು ಚೆನ್ನಾಗಿ ಓದಿ ಅಜ್ಜಿಯನ್ನು ಸಾಕಬೇಕು ಅಂದುಕೊಂಡಳು. ಅದಕ್ಕೆ ಅವಳು ತುಂಬಾ ಕಷ್ಟ ಪಟ್ಟು ಓದಲು ಪ್ರಾರಂಭಿಸಿದಳು. ರಾತ್ರಿ ಹಗಲು ದಿನನಿತ್ಯ ಓದುತ್ತಿದ್ದಳು. ಅದರ ಫಲಿತಾಂಶ ಪರೀಕ್ಷೆ ವೇಳೆ ಅತ್ಯುತ್ತಮ ಅಂಕವನ್ನು ಪಡೆದ ಕಾರಣ ಸರ್ಕಾರವೇ ಅವಳ ಮುಂದಿನ ಓದಿಗೆ ಬೆಂಬಲ ನೀಡಿತು. ಅವಳು ಅಜ್ಜಿಗೆ ಹೀಗೆ ಎನ್ನುವಳು "ಅಜ್ಜಿ ನನ್ನ ಓದಿನ ಖರ್ಚನ್ನು ಸರ್ಕಾರ ನೋಡುತ್ತದೆ". ಅದ್ದರಿಂದ ನೀನು ಇನ್ನು ಕೆಲಸಕ್ಕೆ ಹೋಗುವುದು ಬೇಡ. ಆಗ ಅಜ್ಜಿ ಹೀಗೆ ಕೇಳುತ್ತಾಳೆ "ಮಗಳೇ ನಾನು ಕೆಲಸಕ್ಕೆ ಹೋಗದಿದ್ದರೆ ನಮ್ಮ ದಿನನಿತ್ಯ ಖರ್ಚಿಗೆ ಏನು ಮಾಡುವುದು" ಎಂದಳು. ಆಗ ಮೊಮ್ಮಗಳು "ನಮ್ಮ ದಿನನಿತ್ಯ ಖರ್ಚಿಗೆ ನಾನು ಹೂಗಳನ್ನು ಕಟ್ಟಿ ಮಾರುಕಟ್ಟೆಗೆ ಮಾರುತ್ತೇನೆ" ಇನ್ನು ನೀನು ದುಡಿದದ್ದು ಸಾಕು ಎಂದಳು. ಅಜ್ಜಿ ಇದಕ್ಕೆ ಕೇಳಲಿಲ್ಲ. ಅವಳು ಅಜ್ಜಿಯನ್ನು ಹೇಗಾದರೂ ಮಾಡಿ ಒಪ್ಪಿಸಿದಳು. ಮೊಮ್ಮಗಳು ಅತ್ತ ಓದಿನ ಕಡೆಗೂ ಇತ್ತ ಹೂವನ್ನು ಕಟ್ಟಿ ಜೀವನ ನಡೆಸುತ್ತಿದ್ದಳು. ಕೊನೆಗೆ ಅವಳ ಓದು ಪೂರ್ಣಕೊಂಡು ಒಳ್ಳೆಯ ಸರ್ಕಾರಿ ಉದ್ಯೋಗ ಸಿಕ್ಕಿತು. ಈ ವಿಷಯವನ್ನು ಅಜ್ಜಿಗೆ ಬಂದು ತಿಳಿಸಿದಳು. ಈ ವಿಷಯ ತಿಳಿದ ಅಜ್ಜಿ , ಕಣ್ಣಿನಲ್ಲಿ ಆನಂದಬಾಷ್ಪ ಸುರಿಸುತ್ತಾ "ಮಗಳೇ ನೀನು ಕಷ್ಟ ಬಂದದ್ದಕ್ಕೆ ಸಾರ್ಥಕವಾಯಿತು" ಎಂದಳು. ಕೊನೆಗೆ ಅವರಿಬ್ಬರೂ ಸಂತೋಷದಿಂದ ಜೀವನ ನಡೆಸಿದರು.
9ನೇ ತರಗತಿ
ಸರ್ಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*****************************************