
ನಂದನ್ ಕೆ.ಹೆಚ್. ಬರೆದಿರುವ ಎರಡು ಕಥೆಗಳು
Wednesday, April 27, 2022
Edit
ನಂದನ್ ಕೆ.ಹೆಚ್.
ಏಳನೇ ತರಗತಿ
ದ.ಕ.ಜಿ.ಪಂ.ಸ.ಉ.ಹಿ.ಪ್ರಾ ಶಾಲೆ ಕುದ್ಮಾರು
ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಇವರು ಬರೆದಿರುವ ಎರಡು ಕಥೆಗಳು ಇಲ್ಲಿ ಪ್ರಕಟವಾಗಿದೆ..........
ಅತಿಯಾದ ಆತ್ಮವಿಶ್ವಾಸದ ದುಷ್ಪರಿಣಾಮ (ಕಥೆ)
ಒಂದು ಊರು ಊರಿನಲ್ಲಿ ಒಬ್ಬ ಹುಡುಗನಿದ್ದ. ಓದು ಹಾಗೂ ಇನ್ನಿತರ ಎಲ್ಲಾ ಚಟುವಟಿಕೆಗಳಲ್ಲಿಯೂ ಮುಂದಿದ್ದು ಜಾಣನಾಗಿದ್ದ. ಯಾವುದೇ ಕೆಲಸವನ್ನಾದರೂ ಅತಿಯಾದ ಆತ್ಮವಿಶ್ವಾಸದಿಂದ ಮಾಡುತ್ತಿದ್ದ. ಪೋಷಕರು ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ ಎಂದು ಹೇಳಿದರೂ ಲೆಕ್ಕಕ್ಕಿಲ್ಲದೆ ಎಲ್ಲವೂ ನನ್ನಿಂದ ಸಾಧ್ಯ ಎಂಬ ಆಲೋಚನೆಯನ್ನು ಹೊಂದಿದ್ದ. ಹೀಗಿರುವಾಗ ಒಂದು ದಿನ ಆ ಹುಡುಗನಿಗೆ ಪರೀಕ್ಷೆ ಇತ್ತು ಜಂಭದಿಂದ ಒಮ್ಮೆ ಓದಿ ನನಗೆಲ್ಲವೂ ಬರುತ್ತದೆ ಎಂದು ನೇರವಾಗಿ ಪರೀಕ್ಷೆಗೆ ಹೋದ. ಆದರೆ ಪರೀಕ್ಷೆಯನ್ನು ಬರೆಯುವಾಗ ಯಾವ ಉತ್ತರಗಳು ಸಹ ಸರಿಯಾಗಿ ನೆನಪಾಗದೆ ಪರೀಕ್ಷೆಯಲ್ಲಿ ಕಡಿಮೆ ಅಂಕವನ್ನು ಗಳಿಸಿಕೊಂಡ. ಆದರೂ ತನ್ನ ಅತಿಯಾದ ಆತ್ಮವಿಶ್ವಾಸ ಇದಕ್ಕೆ ಕಾರಣ ಎಂಬುದು ಇವನಿಗೆ ಗೊತ್ತಾಗಲಿಲ್ಲ. ಇನ್ನೊಂದು ದಿನ ಕ್ರಿಕೆಟ್ ಪಂದ್ಯಾಟವಿತ್ತು ಇದಕ್ಕೂ ಸಹ ಸರಿಯಾಗಿ ಅಭ್ಯಾಸ ಮಾಡದೆ ನೇರವಾಗಿ ಆಟವಾಡಿ ಪಂದ್ಯಾಟದಲ್ಲಿ ಸೋತನು. ಸೈಕಲ್ ರೇಸ್ ನಲ್ಲಿಯೂ ಕೂಡ ಸೋಲನ್ನು ಅನುಭವಿಸಿದ. ಈಗ ಇವನಿಗೆ ಅರ್ಥವಾಯಿತು ಯಾವುದನ್ನು ಅತಿಯಾದ ವಿಶ್ವಾಸದಿಂದ ಜಯಿಸಲು ಸಾಧ್ಯವಿಲ್ಲ. ಪ್ರಯತ್ನ ,ಸತತ ಅಭ್ಯಾಸದಿಂದ ಮಾತ್ರ ನಾನು ಎಲ್ಲದರಲ್ಲಿಯೂ ಜಯಿಸಲು ಸಾಧ್ಯ ಎಂದು ಅರ್ಥಮಾಡಿಕೊಂಡ.
ಅಂದಿನಿಂದ ಅವನು ಯಾವುದರಲ್ಲಿಯೂ ಸಹ ಅತಿಯಾದ ಆತ್ಮವಿಶ್ವಾಸ ತೋರದೆ ಚೆನ್ನಾಗಿ ಅಭ್ಯಾಸ ಮಾಡಿ ಎಲ್ಲಾ ಚಟುವಟಿಕೆಗಳಲ್ಲಿಯೂ ಮೇಲುಗೈ ಸಾಧಿಸಿದ.
ಏಳನೇ ತರಗತಿ
ದ.ಕ.ಜಿ.ಪಂ.ಸ.ಉ.ಹಿ.ಪ್ರಾ ಶಾಲೆ ಕುದ್ಮಾರು
ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************
ಒಂದು ದಟ್ಟವಾದ ಕಾಡು. ಕಾಡಿನಲ್ಲಿ ಒಂದು ಪಕ್ಷಿ ವಾಸವಾಗಿತ್ತು. ಒಂದು ಮರದಲ್ಲಿ ತನ್ನ ಗೂಡನ್ನು ಕಟ್ಟಿ ಮೊಟ್ಟೆಯನಿಟ್ಟಿತ್ತು. ಸ್ವಲ್ಪ ಹೊತ್ತು ಕಾವು ಕೊಟ್ಟು ಆಹಾರಕ್ಕಾಗಿ ಹೊರಗಡೆ ಹೋಯಿತು. ಬಂದು ನೋಡುವಾಗ ಗೂಡಿನಲ್ಲಿ ಮೊಟ್ಟೆ ಇರಲಿಲ್ಲ. ಇದೇ ರೀತಿ ಎರಡು ಮೂರು ಸಲ ಘಟನೆಯಾಯಿತು. ಹಕ್ಕಿಗೆ ಬಹಳ ಬೇಸರವಾಯಿತು ಹೀಗಾದರೆ ನನ್ನ ಸಂತತಿ ಮುಂದುವರೆಯುವುದು ಹೇಗೆ.....? ಮೊಟ್ಟೆ ಏನಾಗುತ್ತಿದೆ...? ಎಂಬುದನ್ನು ಕಂಡುಹಿಡಿಯಲು ಪಣತೊಟ್ಟು, ಈ ಬಾರಿ ಮೊಟ್ಟೆಯನಿಟ್ಟು ಸ್ವಲ್ಪ ದೂರ ಹೋಗಿ ಮೊಟ್ಟೆಯ ಕಡೆಗೆ ಗಮನ ಕೊಟ್ಟಿತು. ಅದೇ ಸಮಯಕ್ಕೆ ಹಾವು ಬಂದು ಹಕ್ಕಿಯ ಮೊಟ್ಟೆಯನ್ನು ತಿನ್ನುವುದನ್ನು ನೋಡಿತು. ಇಷ್ಟರವರೆಗೆ ಇಟ್ಟ ಮೊಟ್ಟೆಗಳೆಲ್ಲಾ ಈ ಹಾವಿನ ಪಾಲಾಯಿತು ಎಂದು , ಹೀಗೆ ಮುಂದುವರಿಯಬಾರದು ಎಂದು ಹದ್ದಿನ ಮೊರೆ ಹೋದ ಹಕ್ಕಿ ಪರಿಹಾರ ಕೇಳಿತು. ಈ ಬಾರಿ ಮೊಟ್ಟೆಯಿಟ್ಟು ಹಕ್ಕಿ ಕಾವಲು ಮಾಡಿತು. ಹಾವನ್ನು ಬರುವುದನ್ನು ಗಮನಿಸಿದ ಹದ್ದು ಹಾವನ್ನು ಹಿಡಿಯಿತು. ಇದರಿಂದ ಪಕ್ಷಿಯು ನಿರಾಳಗೊಂಡು ಹದ್ದಿಗೆ ಧನ್ಯವಾದ ಸಲ್ಲಿಸಿತು.. ಮುಂದೆ ಮೊಟ್ಟೆಯಿಟ್ಟು ತನ್ನ ಸಂತತಿಯನ್ನು ಬೆಳೆಸಿತು.
ಏಳನೇ ತರಗತಿ
ದ.ಕ.ಜಿ.ಪಂ.ಸ.ಉ.ಹಿ.ಪ್ರಾ ಶಾಲೆ , ಕುದ್ಮಾರು
ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************