-->
ಮೌಲ್ಯ ಬರೆದಿರುವ ಮೂರು ಕಥೆಗಳು

ಮೌಲ್ಯ ಬರೆದಿರುವ ಮೂರು ಕಥೆಗಳು

           ಮೌಲ್ಯ ಬರೆದಿರುವ ಮೂರು ಕಥೆಗಳು

                  ರಾಮ - ಚಂದ್ರ (ಕಥೆ)
             ----------------------------
       ಒಂದು ಚಿಕ್ಕ ಹಳ್ಳಿಯಲ್ಲಿ ಸೋಮಯ್ಯ ಎಂಬ ರೈತ ಇದ್ದ. ಅವನ ಮಕ್ಕಳು ರಾಮ ಹಾಗೂ ಚಂದ್ರ. ರಾಮ ತಮ್ಮ, ಚಂದ್ರ ಅಣ್ಣನಾಗಿದ್ದನು. ಸ್ವಲ್ಪ ಸಮಯದಲ್ಲಿ ಸೋಮಯ್ಯ ನಿಧನನಾದನು. ನಂತರ ಹೊಲವನ್ನು ರಾಮ ಮತ್ತು ಚಂದ್ರ ನೋಡಿಕೊಂಡರು. ರಾಮ ಒಳ್ಳೆಯ ವ್ಯಕ್ತಿ ಯಾಗಿದ್ದನು. ಚಂದ್ರ ಜಿಪುಣ , ಆಸೆ ಹೊಂದಿದವನಾಗಿದ್ದನು. ರಾಮ ಚಂದ್ರರಿಗೆ ಮದುವೆ ಯಾಗಿರಲಿಲ್ಲ. ಅವರ ತಂದೆಯ ತಮ್ಮ ಚಿಕಪ್ಪನಾದ ಶಿವರಾಮ ತನ್ನ ಅಣ್ಣನ ಮಕ್ಕಳೆಂದು ಮದುವೆ ಮಾಡಿಸಿದನು. ರಾಮ ಚಂದ್ರರು ಮದುವೆಯಾದರು. ಚಂದ್ರನ ಹೆಂಡತಿ ಅಹಂಕಾರಿಯಾಗಿದ್ದಳು. ಅವಳ ಕಾರಣದಿಂದ ರಾಮ ಮತ್ತು ಆತನ ಹೆಂಡತಿಯನ್ನು ಮನೆ ಬಿಟ್ಟು ಓಡಿಸಿದರು. ರಾಮ ಒಂದು ಗುಡಿಸಲು ಮಾಡಿ ಅಲ್ಲೇ ವಾಸವಿದ್ದರು. ಆದರೆ ರಾಮ ತುಂಬಾ ಬಡತನದಿಂದ ಇದ್ದನು. ಏಕೆಂದರೆ ಅವರ ಹೊಲವನ್ನು ಅಣ್ಣನಾದ ಚಂದ್ರ ಮೋಸದಿಂದ ವಶಪಡಿಸಿಕೊಂಡನು. ರಾಮ ಕೂಲಿ ಕೆಲಸವನ್ನು ಮಾಡುತಿದ್ದನು. 
       ರಾಮನ ಹೆಂಡತಿ ನಾಟಿ ವೈದ್ಯಳಾಗಿದ್ದಳು.
ಅವರ ಕುಟುಂಬದಲ್ಲಿ ಬಡತನವಿತ್ತು. ಆರ್ಥಿಕ ಪರಿಸ್ಥಿತಿ ಚೆನ್ನಾಗಿರಲಿಲ್ಲವಾದ್ದರಿಂದ ಓದು ಮುಂದುವರಿಸಲಾಗಲಿಲ್ಲ. ಈ ವಿಷಯ ರಾಮನಿಗೂ ತಿಳಿಸಿದ್ದಳು. ಆ ಸಮಯದಲ್ಲಿ ಒಂದು ಮಾರಣಾಂತಿಕ ವೈರಸ್ ಬಂತು. ಆ ವೈರಸ್ ನಿಂದ ಬಳಲಿದ್ದ ಜನರ ಆರೋಗ್ಯ ದಿನ ದಿನ ಹದಗೆಟ್ಟಿತು. ಈ ರೋಗಕ್ಕೆ ರಾಮನ ಹೆಂಡತಿ ಹಳ್ಳಿಯ ಮದ್ದನ್ನು ಕಂಡು ಹುಡುಕಿದಳು.  
ಒಂದು ದಿನ ಒಬ್ಬ ರೋಗಿಗೆ ಪ್ರಯೋಗಿಸುವಾಗ ಅ ಮದ್ದು ಫಲಕಾರಿಯಾಯಿತು. ಆ ಮದ್ದು
ತುಂಬಾ ಪ್ರಸಿದ್ಧವಾಯಿತು. ಹಾಗೆ ಅವಳು ಕೂಡ ಪ್ರಸಿದ್ದಳಾದಳು. ಒಂದು ವರ್ಷ ಈ ಔಷಧಿಗಾಗಿ ಪ್ರಯತ್ನ ಮಾಡಿದ್ದಳು. ನಂತರ ಅವಳು ವೈದ್ಯಕೀಯ ಕಾಲೇಜಿನಲ್ಲಿ ಓದು ಮುಂದುವರಿಸಿದಳು. ನಂತರ ಪ್ರಸಿದ್ಧ ಡಾಕ್ಟರ್ ಆದಳು. ಅವರಿಗೆ ಸಾಕಷ್ಟು ಹಣ ದೊರಕಿತು. ಈ ಸುದ್ದಿ ಕೇಳಿದ ಚಂದ್ರ ಮತ್ತು ಆತನ ಹೆಂಡತಿಗೆ ಆಶ್ಚರ್ಯವಾಯಿತು. ಅವರಿಗೆ ತಮ್ಮ ತಪ್ಪಿನ ಅರಿವಾಯಿತು. 
      ಅಷ್ಟರಲ್ಲಿ ಊರಿನ ಜನರೆಲ್ಲಾ , ಚಂದ್ರ ಮೋಸದಿಂದ ಅವರನ್ನು ಮನೆಯಿಂದ ಹೊರಗೆ ಹಾಕಿದ ವಿಷಯ ತಿಳಿದು , ಜನ ಕೋಪಗೊಂಡು ಅವರನ್ನು ಓಡಿಸಲು ಬಂದರು. ಅಷ್ಟರಲ್ಲೇ ಬಂದ ತಮ್ಮ ರಾಮ ಹಾಗೂ ಆತನ ಹೆಂಡತಿ ಜನರನ್ನು ತಡೆದರು. ಅಣ್ಣ ಹಾಗೂ ಆತನ ಹೆಂಡತಿ ಅವರ ಜೊತೆ ಕ್ಷಮೆ ಕೇಳಿದರು. ಇದರಿಂದ ಒಂದಾದ ಕುಟುಂಬ ಸಂತೋಷದಿಂದ ಜೀವಿಸಿದರು
................................................ ಮೌಲ್ಯ 
7ನೇ ತರಗತಿ
ಸ ಹಿ ಪ್ರಾ ಶಾಲೆ ಕಲಾಂಬಾಡಿ ಪದವು 
ಕಾರ್ಕಳ ತಾಲೂಕು , ಉಡುಪಿ ಜಿಲ್ಲೆ 
********************************************

                        ಚಿನ್ನದ ಕೈ (ಕಥೆ)
                 ------------------------
     ಮಲ್ಲಿಕ್ ಪುರ್ ಎಂಬ ಊರಲ್ಲಿ ಒಬ್ಬ ಪವನ್ ಎಂಬ ಯುವಕ ಇದ್ದ. ಅವನಿಗೆ ಎಲ್ಲರೂ ಮೋಸ ಮಾಡುತ್ತಿದ್ದರು. ಅವನು ತುಂಬಾ ದುಃಖ ಪಡುತ್ತಿದ್ದ. ಕೆಲವರು ಅವನಿಗೆ ಕೆಲಸಕ್ಕೆ ಬಾರದವನೆಂದು ಹೀಯಾಳಿಸುತ್ತಿದ್ದರು. ಆವಾಗ ಅವನ ಬದಿ ಮನೆಯವನಾದ ತೇಜಸ್ , "ಏಯ್ ನೀನು ಎಷ್ಟು ಪೆದ್ದ ನಾನು ಏನು ಹೇಳಿದರೂ ನಂಬುತ್ತೀಯ.... ಮೊನ್ನೆ ನಾನು ರಾಜಪ್ಪನ ತೋಟದ ಆಚೆ ಕ್ರಿಕೆಟ್ ಆಟ ಆಡುತ್ತಿರುವಾಗ ನನ್ನ ಕೈಯಿಂದ ತಪ್ಪಿ ಬಾಲ್ ರಾಜಪ್ಪನ ತೋಟದ ಮನೆಯ ಕಿಟಿಕಿಗೆ ಬಿದ್ದು ಗಾಜು ಒಡೆದು ಹೋಯಿತು. ಅಷ್ಟರಲ್ಲಿ ನೀನು ಬಂದೆ ಆವಾಗ ನಿನಗೆ ಬೈದರು. (ಜೋರಾಗಿ ನಗುತ್ತಾ) ಎಂತಾ ಮೂರ್ಖ ನೀನು." ಹಾಗೆ ಹೇಳಿ ಅಲ್ಲಿಂದ ಹೊರಟ.        
ಆವಾಗ ಅವನು ಆಕಾಶವನ್ನು ಕಂಡು ಅಳುತ್ತಾ "ದೇವರೇ ಯಾಕೆ ಈತರ ಮಾಡುತ್ತೀಯ ನಾನು ಏನು ತಪ್ಪು ಮಾಡಿದೆ ಎಂತ ಶಿಕ್ಷೆ ಇದು." ಆವಾಗ ಒಬ್ಬಳು ಯಕ್ಷಿಣಿ ಪ್ರತ್ಯಕ್ಷವಾಗುವಳು. "ನಿನಗೆ ನಾನು ನಿನ್ನ ಕೈಯನ್ನು ಚಿನ್ನದ ಕೈಯನ್ನಾಗಿ ಮಾಡುತ್ತೇನೆ..... ನಿನ್ನ ಉಗುರುಗಳನ್ನು ತುಂಡರಿಸಿ ಮತ್ತೆ ಮಾರು " ಎನ್ನುವಳು. "ನಿನ್ನ ಕೈ ಗೆ ಈ ಎಣ್ಣೆ ಹಾಕು ಆವಾಗ ನಿನ್ನ ಕೈ ಚಿನ್ನದಾಗಿ ಬಿಡುತ್ತೆ. ಇದು ಒಂದು ದಿನ ಮಾತ್ರ ಇದರ ಫಲ ಇರುವುದು ಮರುದಿನ ನೀನು ಪುನ: ಹಚ್ಚಬೇಕು. ಆವಾಗ ನಿನ್ನ ಕೈ ಚಿನ್ನವಾಗುತ್ತದೆ." ಈ ಮಾತನ್ನು ಪವನ್ ಗೆ ಹೇಳಿದನ್ನು ತೇಜಸ್ ಕದ್ದು ಕೇಳಿಸಿಕೊಂಡ. ತೇಜಸ್ ಆ ರಾತ್ರಿ ಪವನ್ ನ ಮನೆಗೆ ಹೋಗಿ ಆ ಲೇಪನವನ್ನು ಕದ್ದ. ಇದು ಆ ಊರಿನ ಇಬ್ಬರು ಕಳ್ಳರಿಗೆ ತಿಳಿಯಿತು. ಅವರಿಗೆ ಚಿನ್ನದ ಲೇಪನದ ಬಗ್ಗೆ ಗೊತ್ತಿರಲಿಲ್ಲ ಅವರು ಚಿನ್ನ ಬೇಕೆಂದು ತೇಜಸ್ ಮನೆಗೆ ಹೋಗಿ ಅವನ ಕೈಯನ್ನು ನೋಡಿದರು. ತೇಜಸ್ ಚಿನ್ನದ ಲೇಪನ ಹಾಕಿಕೊಂಡಿದ್ದ. ಅವನು ಕೈಯನ್ನು ಅವರು ಕತ್ತರಿಸಲು ಹೋದರು. ಆವಾಗ ಕೆಟ್ಟವನಾದ ತೇಜಸ್ ಗೆ ಅವನ ತಪ್ಪಿನ ಅರಿವಾಯಿತು 
.......................................................... ಮೌಲ್ಯ 
7ನೇ ತರಗತಿ
ಸ ಹಿ ಪ್ರಾ ಶಾಲೆ ಕಲಾಂಬಾಡಿ ಪದವು 
ಕಾರ್ಕಳ ತಾಲೂಕು , ಉಡುಪಿ ಜಿಲ್ಲೆ 
********************************************




                       ಜಂಬದ ಮರ (ಕಥೆ)     
                      ----------------------
     ಜೋಗಾಪುರ್ ಎಂಬಲ್ಲಿ ಒಂದು ಸೇಬಿನ ಮರವಿತ್ತು. ಅದು ಊರಿಗೆ ತುಂಬಾ ಉಪಕಾರಿಯಾದ ಮರವಾಗಿತ್ತು. ಅದಕ್ಕೆ ವಯಸ್ಸಾದಂತೆ ಅದರ ಒಂದೊಂದು ಎಲೆ ಉದುರುತ್ತಾ ಹೋಯಿತು. ಅದರ ಪಕ್ಕದಲ್ಲಿ ಇನ್ನೊಂದು ಸೇಬಿನ ಮರ ಬೆಳೆದು ನಿಂತಿತು. ಅದು ಕೂಡ ಈ ಮರದ ಹಾಗೆ ಸೇಬು ಹಣ್ಣನ್ನು ಕೊಡುತ್ತಾ ಇತ್ತು. ಆದರೆ ಆ ಮರಕ್ಕೆ ಒಂದು ದಿನ ಜಂಬ ಬಂದಿತು. "ಊರಿಗೆ ಇಷ್ಟು ಉಪಕಾರಿ ಆಗಿರುವೆನು. ಆದರೆ ನನ್ನ ಎದುರೆ ಯಾವುದೋ ಒಣ ಮರ ಗಟ್ಟಿಯಾಗಿ ನಿಂತುಬಿಟ್ಟಿದೆ. ಈ ವಯಸ್ಸಾದ ಮರ ಅಡ್ಡಲಾಗಿ ನಿಂತಿದೆ. ನನ್ನ ಈ ಸೌಂದರ್ಯ ಮರೆಯಾಗಿದೆ." ಎಂದು ಮನದಲ್ಲಿ ಎಣಿಸಿ ಆ ಮರವನ್ನು ಕೋಪದಿಂದ ಕೇಳಿತು. "ಏಯ್ ನೀನು ಯಾಕೆ ಹೀಗೆ , ನಾನು ನೋಡು ಎಲ್ಲರಿಗೂ ಸೇಬು ಕೊಟ್ಟು ಉಪಕಾರಿ ಯಾಗಿರುವೆನು." ಆವಾಗ ವಯಸ್ಸಾದ ಮರ ಹೇಳಿತು. "ನೋಡು ನಾನು ಕೂಡ ಮೊದಲು ಎಲ್ಲರಿಗೂ ಉಪಕಾರಿ ಆಗಿದ್ದೆ. ಈಗ ವಯಸ್ಸಾಗಿದೆ ಅಷ್ಟೇ." "ಸರಿ ನೀನು ಯಾಕೆ ನನ್ನ ಮುಂದೆ ಬೆಳೆದಿದ್ದಿ."     
 ಅದಕ್ಕೆ ವಯಸ್ಸಾದ ಮರ ಹೇಳಿತು. "ನಾನು ನಿನ್ನ ಮುಂದೆ ಬೆಳೆಯಲಿಲ್ಲ. ಬದಲಾಗಿ ನೀನು ನನ್ನ ಹಿಂದೆ ಬೆಳೆದಿದ್ದಿ ಅಷ್ಟೇ." ಆವಾಗ ಹೇಳಿತು. "ನಿನಗೆ ವಯಸ್ಸಾದರೂ ಎಷ್ಟು ಕೊಬ್ಬು ." ಆವಾಗ ವಯಸ್ಸಾದ ಮರ ಏನೂ ಉತ್ತರಿಸಲಿಲ್ಲ. ಆ ಮರವು ಹೇಳಿತು. "ನೀನು ನನ್ನ ಅಡ್ಡ ನಿಂತಿದ್ದಿ ಬದಿಗೆ ಬಾ ." ಎಂದು ಕೋಪದಿಂದ ಗದರಿಸಿತು." ಆವಾಗ ಆ ವಯಸ್ಸಾದ ಮರ ಹೇಳಿತು. "ನೋಡು ನಾನು ಆಚೆ ಹೋದರೆ ನಿನ್ನನ್ನು ಯಾರಾದರೂ ನೋಡಿದರೆ ನಿನ್ನನ್ನು ಕಡಿದು ಬಿಡುತ್ತಾರೆ."ಆವಾಗ ಮರ ಹೇಳಿತು. " ನಿನಗೆ ಜನರು ಹಣ್ಣು ಕೊಳ್ಳುವಾಗ ಹೊಟ್ಟೆ ಕಿಚ್ಚು ಆಗುತ್ತದೆ ಅದಕ್ಕೆ ನೀನು ಹೀಗೆ ಹೇಳುವುದು. ಹೌದು, ನಿನ್ನನು ಯಾಕೆ ಕಡಿಯಲ್ಲ ಜನರು. "ನಾನು ವಯಸ್ಸಾದ ಮರ ಅದಕ್ಕೆ ." ಆವಾಗ ಮರ ಸುಳ್ಳು ಎಂದು ಮತ್ತೆ ವಾದ ಮಾಡಿತು." ಆದರೆ ವಯಸ್ಸಾದ ಮರಕ್ಕೆ ಬೇರೆ ದಾರಿಯೇ ಇರಲಿಲ್ಲ ಅದು ಬದಿಗೆ ಹೋಯಿತು. ಒಂದು ದಿನ ಒಬ್ಬ ಬಡಗಿ ಬಂದು ಆ ಜಂಬದ ಮರವನ್ನು ನೋಡಿ ಎಷ್ಟು ಸುಂದರವಾದ ಮರವೆಂದು ಕಡಿದು ಬಿಟ್ಟ. ಆಗ ಆ ಮರಕ್ಕೆ ಅರಿವಾಯಿತು. "ನಾನು ತಪ್ಪು ಮಾಡಿದೆ ಆ ಮರಕ್ಕೆ ಏನೇನೋ ಹೇಳಿ ಅದರ ಮನಸ್ಸು ನೋಯಿಸಿಬಿಟ್ಟೆ. ನನ್ನನು ರಕ್ಷಿಸಲು ಅದು ಇಷ್ಟು ದಿನ ನನಗೆ ರಕ್ಷಾಕವಚವಾಗಿತ್ತು. ನನಗೆ ನಾನೇ ಹಳ್ಳ ತೋಡಿಕೊಂಡ ಹಾಗೆ ಆಯಿತು." ಎಂದು ಮರುಗಿತು.    ......................................................... ಮೌಲ್ಯ 
7ನೇ ತರಗತಿ
ಸ ಹಿ ಪ್ರಾ ಶಾಲೆ ಕಲಾಂಬಾಡಿ ಪದವು 
ಕಾರ್ಕಳ ತಾಲೂಕು , ಉಡುಪಿ ಜಿಲ್ಲೆ 
********************************************

Ads on article

Advertise in articles 1

advertising articles 2

Advertise under the article