-->
ಯುಗಾದಿ ಹಬ್ಬದ ವಿಶೇಷ : ಮಕ್ಕಳ ಕವನಗಳು -ಸಂಚಿಕೆ : 5

ಯುಗಾದಿ ಹಬ್ಬದ ವಿಶೇಷ : ಮಕ್ಕಳ ಕವನಗಳು -ಸಂಚಿಕೆ : 5

ಮಕ್ಕಳ ಕವನಗಳು : ಸಂಚಿಕೆ -5
ಮಕ್ಕಳ ಜಗಲಿಯಲ್ಲಿ 
ಯುಗಾದಿ ಹಬ್ಬದ 
ವಿಶೇಷ - 2022

ಜಗಲಿಯ ವಿದ್ಯಾರ್ಥಿಗಳು .....
ಯುಗಾದಿಯ ಕುರಿತಾಗಿ ಬರೆದಿರುವ ಕವನಗಳನ್ನು ಇಲ್ಲಿ ಪ್ರಕಟಿಸಲಾಗಿದೆ
ಓದುಗರ ಪ್ರೋತ್ಸಾಹದ ನುಡಿಗಳು
ಇಲ್ಲಿ ಅಮೂಲ್ಯ......



                   ನಮ್ಮ ಯುಗಾದಿ
                   ---------------------
ಮುಂಜಾನೆ ಬೇಗನೆದ್ದು,
ಅಭ್ಯಂಜನ ಸ್ನಾನ ಮಾಡಿ....
ದೇವರನ್ನು ನೆನೆದು,
ದೀಪದ ಆರತಿ ಬೆಳಗಿ......
ಬೇವು ಬೆಲ್ಲ ತಿಂದು,
ಒಳ್ಳೆ ಮಾತು ಆಡಿ.....
ಹೊಸ ವರುಷವನ್ನು,
ಹರುಷದಿ ಸ್ವಾಗತ ಮಾಡಿ....
ಮನೆಮಂದಿಯೆಲ್ಲಾ ಹಳೆ
ನೋವ ಮರೆತು......
ಹೊಸ ಹಾಡು ಹಾಡಿ....
ಉತ್ಸಾಹದಿಂದ ಆಚರಿಸಲು ನೋಡಿ,
ಬಂದೇಬಿಡ್ತು ನಮ್ಮ,
ಸಂಭ್ರಮದ ಯುಗಾದಿ.....
................................................ ಲಹರಿ ಜಿ.ಕೆ.
7ನೇ ತರಗತಿ,
ತುಂಬೆ ಸೆಂಟ್ರಲ್ ಸ್ಕೂಲ್ , ತುಂಬೆ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ 
*********************************************


                                 ಯುಗಾದಿ
ಯುಗಾದಿ ಮತ್ತೆ ಬಂದಿದೆ
ಬೇವಿನ ಕಹಿಯ ಒಟ್ಟಿಗೆ 
ಬೆಲ್ಲದ ಸಿಹಿ ಹಂಚಿ 
ಮಾವಿನ ಎಲೆಯ ತೋರಣ ಕಟ್ಟಿ
ವರುಷವೆಲ್ಲ ಖುಷಿಯಾಗಿ ಬಾಳೋಣ
     ಯುಗಾದಿಗೆ ಮರಗಿಡಗಳೆಲ್ಲಾ 
     ಮದುವಣಗಿತ್ತಿಯಂತೆ 
     ಹಸಿರು ಸೆರಗನ್ನುಟ್ಟು
     ನಮ್ಮನ್ನೆಲ್ಲಾ ಹತ್ತಿರ ಕರೆಯುತ್ತಿದೆ.
ಪ್ರಕೃತಿಯ ಮೊದಲ ದಿನ 
ಗಿಡಮರಗಳು ಚಿಗುರುವ ದಿನ
ನಮ್ಮ ವರ್ಷದಾರಂಬದ ದಿನ
ಇದೆ ನಮ್ಮ ಯುಗಾದಿ ಹಬ್ಬದ ದಿನ
.............................................. ಸ್ರಾನ್ವಿ ಶೆಟ್ಟಿ 
8 ನೇ ತರಗತಿ 
ಓಂ ಜನ ಹಿತಾಯ ಇಂಗ್ಲೀಷ್ 
ಮೀಡಿಯಂ ಶಾಲೆ, ಗುಡ್ಡೆಯಂಗಡಿ 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*********************************************



           ಯುಗಾದಿ
       ---------------------
ಇವತ್ತಿನ ನಮ್ಮ ಈ ಯುಗಾದಿ
ಹೊಸ ವರ್ಷಕ್ಕೆ ಬುನಾದಿ
ಎಳ್ಳು ಬೆಲ್ಲ ತಿಂದು ಮಾತಾಡಿ ಮನದಿ
ಯುಗಾದಿಗೆ ಸ್ವಾಗತ ಸಂತಸದಿ
        ಸ್ನೇಹವ ಬೆಸೆಯುವುದು ಎಳ್ಳು ಬೆಲ್ಲ
        ತಾಯಿಯ ಪ್ರೀತಿ ನಮಗೆಲ್ಲಾ
        ತಾಯಿಗಿಂತ ಯಾರು ಮಿಗಿಲಲ್ಲ
        ಪ್ರೀತಿಯ ಹಂಚುವ ದಿನವೆಲ್ಲಾ ...
ಚೈತ್ರ ಮಾಸದ ಮೊದಲ ದಿನ
ಮನೆಯವರ ಪ್ರೀತಿ ತುಂಬಿತು ಮನ
ಆಯಿತು ಬಂದು ಬಳಗ
ಕುಟುಂಬಗಳ ಮಿಲನ
ಎಲ್ಲರೂ ಕುಳಿತು ಉಂಡಿತು ಭೋಜನ
------------------------------------------- ಮೌಲ್ಯ 
7 ನೇ ತರಗತಿ 
ಸ,ಹಿ, ಪ್ರಾ,ಶಾಲೆ ಕಲಂಬಾಡಿ ಪದವ್
ಕಾರ್ಕಳ ತಾಲೂಕು , ಉಡುಪಿ ಜಿಲ್ಲೆ
*********************************************


             ಯುಗಾದಿ ಹಬ್ಬ 
            ---------------------
        ಬಂತು ಬಂತು ಯುಗಾದಿ ಹಬ್ಬ
        ಹೊಸ ಹರುಷವ ತಂತು 
        ಹೊಸ ವರುಷದ ಹಬ್ಬ
        ಸಂತಸ ತರುವ ಯುಗಾದಿ ಹಬ್ಬ
        ಮನೆ - ಮನಗಳನು 
        ಬೆಳಗುವ ಹಬ್ಬ
        ಬೇವು - ಬೆಲ್ಲವ ಸವಿಯುವ ಹಬ್ಬ
        ಬಂತು ಬಂತು ಯುಗಾದಿ ಹಬ್ಬ
......................................... ಸಾತ್ವಿಕ್ ಗಣೇಶ್ 
7ನೇ ತರಗತಿ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಜಿರೆ 
ಬೆಳ್ತಂಗಡಿ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*********************************************



                   ಹೊಸ ಯುಗ
            --------------------
ಹೊಸ ವರ್ಷ ಅಡಿ ಇಡುವ ಈ ದಿನ..                      ತುಂಬುತಿದೆ ನವೋಲ್ಲಾಸ ನವ ಚೇತನ.                        ಬೆಲ್ಲ ಸವಿಯ ತೋರುವ ಮನ.     
ಬೇವನ್ನೂ ಬೆಲ್ಲವಾಗಿ ಸ್ವೀಕರಿಸುವ ಜೀವನ.        ಹುಡುಕಿದಷ್ಟು ಸಿಗುವ ಸಿಹಿ ನೆನಪುಗಳು.              ಕೆದಕಿದಷ್ಟು ಕಾಣುವ ಕಹಿ ಘಟನೆಗಳು. 
ಎಲ್ಲೊ ಬೊಗಸೆಯಷ್ಟು ಸಂತೋಷ.
ಇನ್ನೆಲ್ಲೋ ಒಂದಿಷ್ಟು ದುಃಖ. 
ಹಳೆ ಯುಗ ಕಳೆದು ಹೊಸ 
ಯುಗದೆಡೆಗೆ ನಮ್ಮ ಈ ಪಯಣ.                        
ಹೊಸ ಸಿಹಿ ಸುದ್ದಿಗೆ ನಮ್ಮ ಹೊಸತನ. 
ಆಗಿದೆ ಹೊಸ ವರ್ಷದ ಆಗಮನ.
ಪ್ರತಿಯೊಬ್ಬರು ಬರಮಾಡಿಕೊಳ್ಳಿ 
ಯುಗಾದಿ ಎಂಬ ಪ್ರಥಮ ಹಬ್ಬವನ್ನ. 
ಜೀವನದ ಪಯಣದಲ್ಲಿ ಹೊಸವರ್ಷ
ಯುಗಾದಿ ಹರುಷ ತರಲಿ.                    
ನವ ಬಾಳು ಬೆಳಗಲಿ.          
ನವ ಚೈತನ್ಯ ಚಿಮ್ಮಲಿ.         
ಕಹಿ ನೋವುಗಳು ತೊಲಗಲಿ.
 ಸಿಹಿ-ನಲಿವುಗಳ ಬರಲಿ. 
ಪ್ರತಿಯೊಬ್ಬರೂ ಶಾಂತಿ, ಸಮೃದ್ಧಿ, 
ನೆಮ್ಮದಿಯಿಂದ ಬಾಳಲಿ. 
ಸಮಸ್ತ ಕರುನಾಡ ಜನತೆಗೆ 
ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು...
 ........................................ ಧೀರಜ್ ಕೆ ಆರ್ 
9ನೇ ತರಗತಿ 
ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ 
ಪ್ರೌಢ ಶಾಲೆ ರಾಮಕುಂಜ  
ಕಡಬ ತಾಲ್ಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************




             ಯುಗಾದಿ ಹಬ್ಬ
             ---------------------
ಯುಗಾದಿ ಹಬ್ಬ ಬಂದಿತು
ಬೇವು-ಬೆಲ್ಲವ ತಂದಿತು
ಇಂದು ಕಹಿಯನ್ನು ಮರೆತು,
ನಮಗೆಲ್ಲಾ ಸಿಹಿಯನ್ನು ತಂದಿತು
ಹಬ್ಬವ ಹರುಷದಿಂದ ಆಚರಿಸೋಣ
ಹಬ್ಬದ ಖುಷಿಯನ್ನು ಹಂಚೋಣ.
........................................ ವೈಷ್ಣವಿ ಕಾಮತ್ 
5ನೇ ತರಗತಿ 
ಶ್ರೀ ರಾಮ ವಿದ್ಯಾ ಕೇಂದ್ರ ಕಲ್ಲಡ್ಕ 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*********************************************

Ads on article

Advertise in articles 1

advertising articles 2

Advertise under the article