-->
ಯುಗಾದಿ ವಿಶೇಷ - ಮಕ್ಕಳ ಕವನಗಳು : ಸಂಚಿಕೆ - 4

ಯುಗಾದಿ ವಿಶೇಷ - ಮಕ್ಕಳ ಕವನಗಳು : ಸಂಚಿಕೆ - 4

ಮಕ್ಕಳ ಕವನಗಳು : ಸಂಚಿಕೆ -4
ಮಕ್ಕಳ ಜಗಲಿಯಲ್ಲಿ 
ಯುಗಾದಿ ಹಬ್ಬದ 
ವಿಶೇಷ - 2022

ಜಗಲಿಯ ವಿದ್ಯಾರ್ಥಿಗಳು .....
ಯುಗಾದಿಯ ಕುರಿತಾಗಿ ಬರೆದಿರುವ ಕವನಗಳನ್ನು ಇಲ್ಲಿ ಪ್ರಕಟಿಸಲಾಗಿದೆ
ಓದುಗರ ಪ್ರೋತ್ಸಾಹದ ನುಡಿಗಳು
ಇಲ್ಲಿ ಅಮೂಲ್ಯ......



                        ಯುಗಾದಿ ಹಬ್ಬ 
ಹೊಸ ಯುಗಾದಿ ನಿನಗೆ ಸ್ವಾಗತ
ಹೊಸ ವರುಷಕೆ ನಿನಗೆ ಸುಸ್ವಾಗತ
ಬಾ ಹೊಸ ರವಿಕಿರಣ ಬೀರುತ
ಕವಿದಿರುವ ಅಂಧಕಾರವ ಓಡಿಸುತ
      ಬಿತ್ತು ಎಲ್ಲರ ಮನದಲಿ ಆಶಯ ಬೀಜವ
      ಬೆಳಗು ನೀ ಎಲ್ಲರ ಬಾಳಲಿ ಸಂತೋಷವ
      ಎಲ್ಲರಿಗೂ ತಿಳಿಸು ನಿಜ ಜೀವನದ ಸತ್ಯವ
      ದಯಪಾಲಿಸು ನೀ ಕಷ್ಟ ಸಹಿಸುವ ಶಕ್ತಿಯ
ಕ್ರೂರ ರೋಗಗಳು ಮರೆಯಾಗಲಿ
ಹೊಸ ಬಾಂಧವ್ಯ ಜೊತೆಗೂಡಲಿ
ಭಯ ಆತಂಕ ದೂರವಾಗಲಿ
ಎಲ್ಲರ ಮೊಗದಲಿ ಮಂದಹಾಸ ಬೆಳಗಲಿ
     ಬಡವರ ದುಃಖದ ಕಣ್ಣೀರ ಒರೆಸು 
     ಸಿರಿವಂತರ ಅಹಂಕಾರ ತೊಲಗಿಸು
     ದುಷ್ಟಬುದ್ಧಿಯ ಸಂಹರಿಸು
     ಬಾ ಯುಗಾದಿ ಹೊಸ ಆಶೆಗಳ ಬೆಳಗಿಸು
..................................................... ಧೃತಿ 
9ನೇ ತರಗತಿ 
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
***************************************



                     ಯುಗಾದಿ ಹಬ್ಬ
       ಯುಗಾದಿ ಹಬ್ಬವು ಬಂದಿದೆ
       ನಮಗೆ ಸಂತೋಷವು ತಂದಿದೆ
       ಮನೆಯನ್ನೆಲ್ಲ ಸಿಂಗಾರ ಮಾಡಿ
       ಖುಷಿಯನೆಲ್ಲಾ ಮುಂದೆ ಮಾಡಿ /ಪ/
             ಬಂದರೆ ಯುಗಾದಿ ಹಬ್ಬ
             ತರುವುದು ಉಡುಗೊರೆ ಕಬ್ಬ
             ಖುಷಿಯಾಯಿತು , ಮಳೆಯಾಯಿತು
             ಹಬ್ಬದ ಶುಭಾಶಯ ನಡೆಯಿತು /ಪ/
       ಹೊಸ ಬಟ್ಟೆ ಧರಿಸುವರು
       ಬೇವು ಬೆಲ್ಲ ತಿನ್ನುವರು
       ಎಣ್ಣೆ ಸ್ನಾನ ಮಾಡುವರು
       ತರತರಹದ ಅಡುಗೆ ಮಾಡುವರು/ಪ/
             ದು:ಖ ಸರಿಸಿ ಸುಖವನು ತರಿಸಿ
             ದ್ವೇಷ ಮರಿಸಿ ಪ್ರೀತಿ ತರಿಸುವ
            ಎಲ್ಲರ ಮೊಗದಲಿ ನಗುವನು ಹರಿಸುತ
            ಬಂದಿದೆ ಯುಗಾದಿ ಹಬ್ಬ /ಪ/
 .............................. ರಿಧಾ.ಎಂ.ಡೋರಳ್ಳಿ.
3ನೇ ತರಗತಿ
ಸೇಂಟ್ ಅಂಥೋನಿ ಪಬ್ಲಿಕ್ ಶಾಲೆ. ಹುಬ್ಬಳ್ಳಿ  
ಧಾರವಾಡ ಜಿಲ್ಲೆ               
**************************************          




            ನವ ಚೈತ್ರ
     ----------------------
ವರ್ಷ ವರ್ಷ ಹೊಸ ಹರುಷ
ಬಂದಿದೆ ನಮಗೆ ಹೊಸ ವರ್ಷ
ಇಂದು ನಮಗೆ ಹರ್ಷದ ಯುಗಾದಿ
ಅಪ್ಪ ತಂದ ಹೊಸಬಟ್ಟೆ ಧರಿಸಿದ
ಅಮ್ಮನೊಂದಿಗೆ ಎಣ್ಣೆ ಸ್ನಾನ ಮಾಡಿ
ಕಟ್ಟಿದೆ ಬಾಗಿಲಿಗೆ ತಳಿರು ತೋರಣ
ಸೇವಿಸಿದೆ ಬೇವು-ಬೆಲ್ಲ ಆಹಾ! ಎಂಥ ರುಚಿ
        ಸಿಹಿ ಮತ್ತು ಕಹಿ ವರ್ಷವಿಡಿ
        ಅನುಭವಿಸಿ ಸಿಹಿ-ಕಹಿ ನೆನಪುಗಳು
        ಅಪ್ಪ ಕೊಟ್ಟ ಬೇವು-ಬೆಲ್ಲ
        ಅಮ್ಮ ಮಾಡಿದ ಹೋಳಿಯ ಸಿಹಿ
        ದೇವಲೋಕದ ಪ್ರಸಾದದಂತಿತ್ತು
 ಎಲ್ಲೆಲ್ಲೂ ಕಾಣದ ಆನಂದ
  ನನ್ನ ಮನೆಯಲ್ಲಿ ನಾ ಕಂಡಂತೆ
  ಹೊಸ ಯುಗಾದಿಯ ಅನುಭವ
  ಬರಲಿ ವರುಷ ವರುಷ
  ತರಲಿ ನಮಗೆ ಹರುಷ ಹರುಷ
  ಯುಗಾದಿ ಯುಗಾದಿ ಯುಗಾದಿ
....................................ಸಮನ್ವಿತ್  ಹೆಚ್ಎಂ 
ಎಂಟನೇ ತರಗತಿ 
ಬೆಥನಿ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್ , 
ಪುತ್ತೂರು ,  ದ.ಕ. ಜಿಲ್ಲೆ.
*******************************************
                               

  
                                     
         ಯುಗಾದಿ 
       ..................
ಚೈತ್ರ ಮಾಸದಲ್ಲಿ ಬರುವ 
ಹಬ್ಬ ಯುಗಾದಿ. 
ಸಿಹಿ-ಕಹಿ ಸೇರಿದ 
ಹಬ್ಬ ಯುಗಾದಿ 
ಯುಗಾದಿ ಮರಳಿ ಬಂತು
ಕೋಗಿಲೆಯ ಕೂಗು 
ಇಂಪು ತಂದಿತು. 
ಬಾಗಿಲಿಗೆ ಮಾವಿನಎಲೆ 
ಹಸಿರಿನ ಬಣ್ಣ 
ಅಂಗಳದಿ ರಂಗು ರಂಗಿನ 
ರಂಗೋಲಿಯ ಬಣ್ಣ
ದೇವರ ಕೋಣೆಗೆ  
ಹೂವಿನ ಅಲಂಕಾರ 
ನೋಡಲು ಕಣ್ಣಿಗೆ 
ಬಹಳ ಸುಂದರ.
ಬೇವು ಬೆಲ್ಲ ತಿನ್ನೋಣ 
ಸಂತಸದಿಂದ ಇರೋಣ. 
........................................ ದೀಕ್ಷಾ ಕುಲಾಲ್ 
5ನೇ ತರಗತಿ 
ದ. ಕ. ಜಿ. ಪಂ ಹಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.
**************************************   



       ಯುಗಾದಿ ಹಬ್ಬ
        ..................
ಹಬ್ಬ ಬಂತು ಹಬ್ಬ
ಯುಗಾದಿ ಹಬ್ಬ
ಚೈತ್ರ ಮಾಸದ ಮೊದಲ ಹಬ್ಬ
ಮನೆಗೆ ತೋರಣ ಕಟ್ವುವ 
ರಂಗೋಲಿ ಹಾಕುವ ಹಬ್ಬ
ಮಕ್ಕಳಿಗೆ ಬಹಳ 
ಸಂತೋಷದ ಹಬ್ಬ
ಹೊಸ ವರ್ಷವನ್ನು 
ಕರೆಯುವ ಹಬ್ಬ
ಬೇವು ಬೆಲ್ಲ ಹಂಚುವ ಹಬ್ಬ
ಕಷ್ಟ ನೋವು ಮರೆಸುವ ಹಬ್ಬ
ಗಿಡ ಮರಗಳು ಚಿಗುರುವ ಕಾಲ 
ಈ ಯುಗಾದಿ ಹಬ್ಬ
ಹಬ್ಬ ಬಂತು ಹಬ್ಬ 
ಯುಗಾದಿ ಹಬ್ಬ....
............................... ತನ್ವಿ ಶೆಟ್ಟಿ ಸೂರಂಬೈಲು
7ನೇ ತರಗತಿ
ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆ ಬೆಟ್ಟಂಪಾಡಿ
ಪುತ್ತೂರು ತಲೂಕು , ದ.ಕ ಜಿಲ್ಲೆ
**************************************   



          ಯುಗಾದಿ
        ...................
ಬಂತು ಬಂತು ಯುಗಾದಿ
ತಂತು ತಂತು ಸಮೃದ್ಧಿ
ತುಳುನಾಡಿನ ಹೊಸ ವರುಷ ಇದಾಗಿದೆ
ಮರಗಳು ಚಿಗುರೊಡೆದು ಸೊಂಪಾಗಿದೆ
ಮುಂದೆ ಬರುವುದು ಹೊಸದಾದ ದಿನ
ಎಲ್ಲರೂ ಸೇರಿ ಅನುಭವಿಸೋಣ
ಬನ್ನಿರಿ ಗೆಳೆಯರೇ ಒಂದಾಗೋಣ
ಬೇವು-ಬೆಲ್ಲವ ಸವಿಯೋಣ 
 .......................ಚೈತನ್ಯ ಬಿ ಎನ್. ಉರುವಾಲು
ಆರನೇ ತರಗತಿ
ಇಂದ್ರಪ್ರಸ್ಥ ವಿದ್ಯಾಲಯ ಉಪ್ಪಿನಂಗಡಿ
ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
************************************** 


             ಯುಗಾದಿ
          ...................
ಚೈತ್ರ ಮಾಸದ ಆದಿ
ಹಬ್ಬವಿದು ಯುಗಾದಿ
ಹಿಂದೂ ಧರ್ಮಕಿದುವೇ
ಹೊಸ ವರುಷದ ಬುನಾದಿ 
ಕಷ್ಟ ಸುಖವ ಸಮಾವಾಗಿ ಪರಿಗಣಿಸು
ಬೇವು ಬೆಲ್ಲವ ಎಲ್ಲರಿಗೂ ತಿನಿಸು
ಸಂದೇಶವ ಹೇಳುತಿದೆ
ಕಷ್ಟ ಬಂದರೆ ಕುಗ್ಗದಿರು
ಸುಖ ಬಂದರೆ ಹಿಗ್ಗದಿರು
ಸರಿ ಸಮಾವಾಗಿ ಸ್ವೀಕರಿಸು ಸುಖವನ್ನು
ಸರಿ ದಾರಿಯಲ್ಲಿ ನಡೆಸು ಜಿವನವನ್ನು
ಸಂತೋಷವಾ ಹಂಚುತ
ನಗು ನಗುತಾ ಸಾಗುತ
ವರುಷ ವರುಷವು ಮರಳಿ 
ಯುಗಾದಿ ಬರುತಲಿದೆ ಯುಗಾದಿ
......................................... ಸಿಂಚನ್ ಶೆಟ್ಟಿ
ನಾಲ್ಕನೇ ತರಗತಿ
ಶಾರದಾ ಗಣಪತಿ ವಿದ್ಯಾಕೇಂದ್ರ 
ಪುಣ್ಯಕೋಟಿ ನಗರ , ಕೈರಂಗಳ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
************************************** 



Ads on article

Advertise in articles 1

advertising articles 2

Advertise under the article