
ಬನ್ಸ್ ಫಜೀತಿ : ಹಾಸ್ಯ ಲೇಖನ
Wednesday, February 16, 2022
Edit
ಸಾನ್ವಿ ಸಿ. ಎಸ್
ನಾಲ್ಕನೇ ತರಗತಿ
ಶ್ರೀ ಗುರುದೇವ ವಿದ್ಯಾಪೀಠ ಒಡಿಯೂರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಬನ್ಸ್ ಫಜೀತಿ
ಆಗ ಮೊದಲಿನ ಲಾಕ್ಡೌನ್ ಸಮಯ. ಬೆಂಗಳೂರಿನಿಂದ ನನ್ನ ದೊಡ್ಡಪ್ಪ , ದೊಡ್ಡಮ್ಮ , ತಂಗಿ ಬಂದಿದ್ದರು. ಮನೆಯಲ್ಲಿ ನಾನು ಮತ್ತು ತಂಗಿ. ಒಟ್ಟು ಮೂರು ಮಕ್ಕಳೂ ತುಂಬಾ ಮಜಾ ಮಾಡುತ್ತಿದ್ದೆವು. ಎಲ್ಲೂ ಹೋಗಲು ಸಾಧ್ಯವಿಲ್ಲದೆ ಇರುವುದರಿಂದ ಮನೆಯಲ್ಲಿ ಅಜ್ಜಿ ಮೊಮ್ಮಕ್ಕಳಿಗೆಂದು ರುಚಿರುಚಿಯಾದ ತಿಂಡಿತಿನಿಸುಗಳನ್ನು ಮಾಡಿಕೊಡುತ್ತಿದ್ದರು. ಒಂದು ದಿನ ನಮ್ಮ ಅಜ್ಜಿ ನಮಗೆ ಬಾಳೆಹಣ್ಣು ಬನ್ಸ್ ಮಾಡಿಕೊಡಲು ತೀರ್ಮಾನಿಸಿದರು. ನನ್ನ ತಂಗಿಯಂದಿರಿಗೆ ಎಣ್ಣೆತಿಂಡಿಯೆಂದರೆ ತುಂಬಾ ಇಷ್ಟ. ಆದರೆ ನನಗೆ ಅದು ಅಷ್ಟೇನೂ ಹಿಡಿಸುತ್ತಿರಲಿಲ್ಲ. ನನ್ನ ತಂಗಿಯರು ಬನ್ಸ್ ತಿನ್ನಲು ಶುರುಮಾಡಿದರು. ನಾನು ಅವರೊಡನೆ ಕೂತು ತಿನ್ನತೊಡಗಿದೆ. ನಾನು ಅವರ ಅಕ್ಕನಲ್ಲವೇ ಎಂದು ಅವರಿಂದ ಜಾಸ್ತಿ ತಿನ್ನಲು ನಿಶ್ಚಯಿಸಿದೆ. ಎರಡು ಮೂರು ಬನ್ಸ್ ತಿಂದಾಗ ಹಿರಿಯರು ”ಸಾಕು ಸಾಕು, ಸ್ಪರ್ಧೆಯಲ್ಲಿ ತಿನ್ನಬೇಡ “ ಎಂದು ಸಾರಿ ಸಾರಿ ಹೇಳಿದರು. ಆದರೂ ನಾನು ಅತ್ತು ಅತ್ತು ರಂಪ ಮಾಡಿದೆ. ನಾನು ಅವರ ಮಾತು ಕೇಳದೆ ಆರು ಬನ್ಸ್ ತಿಂದೆ. ತಂಗಿಯರಿಬ್ಬರೂ ಎದ್ದು ಹೋಗಿದ್ದರು. ಕೊನೆಗೆ ನನಗೆ ಹೊಟ್ಟೆ ತುಂಬಿ ಏಳಲೂ ಸಾಧ್ಯವಾಗಲಿಲ್ಲ, ಕೂರಲೂ ಸಾಧ್ಯವಾಗಲಿಲ್ಲ. ನನ್ನದು ತ್ರಿಶಂಕುಸ್ಥಿತಿಯಾಯಿತು. ಮತ್ತೆ ಹೇಗೋ ಎದ್ದು ಹೋಗಿ ಕೈತೊಳೆದು ಬಂದೆ. ಅಜ್ಜಿ, ದೊಡ್ಡಪ್ಪ ”ಹೊಟ್ಟೆ ತುಂಬೀತೇ" ಎಂದು ಕೇಳಿದಾಗ, ನಾನು ”ಇಲ್ಲ” ಎಂದೆ. ಈ ಘಟನೆಯ ನಂತರ ಎಲ್ಲರೂ ಇದನ್ನು ಹೇಳಿ ಹೇಳಿ ನಗುತ್ತಿದ್ದರು. ಮುಂದೆಂದೂ ಮನೆಯಲ್ಲಿ ಬನ್ಸ್ ಮಾಡಿದಾಗ ನಾನು ಈ ರೀತಿ ತಿನ್ನಲೇ ಇಲ್ಲ. ಆದರೆ ಎಲ್ಲರೂ ಇದನ್ನು ಆಗಾಗ ಹೇಳಿ ನನ್ನನ್ನು ತಮಾಷೆ ಮಾಡುತ್ತಾರೆ. ಹೇಗಿತ್ತು ಫಜೀತಿ ?
ನಾಲ್ಕನೇ ತರಗತಿ
ಶ್ರೀ ಗುರುದೇವ ವಿದ್ಯಾಪೀಠ ಒಡಿಯೂರು
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
******************************************