
ಹೊರಸಂಚಾರ ನನ್ನ ಅನುಭವಗಳು : ನಿನಾದ್ ಕೈರಂಗಳ
Tuesday, February 15, 2022
Edit
ನಿನಾದ್ ಕೈರಂಗಳ್
4ನೇ ಶಿವಾಜಿ ತರಗತಿ
ಶ್ರೀರಾಮ ವಿದ್ಯಾ ಕೇಂದ್ರ
ಹನುಮಾನ್ ನಗರ ಕಲ್ಲಡ್ಕ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಪ್ರವಾಸ ಹೋಗುವುದೆಂದರೆ ಎಲ್ಲರಿಗೂ ತುಂಬಾ ಖುಷಿ. ಕೊರೋನ ಹಾವಳಿಯಾದ ಮೇಲೆ ನಾನು ಪ್ರವಾಸ ಹೋಗದೆ 2 ವರ್ಷಗಳಾಯಿತು. ಮೊನ್ನೆ ಮಾತಾಜಿಯವರು ಹೊರ ಸಂಚಾರಕ್ಕೆ ಹೋಗಲಿಕ್ಕಿದೆ ಎಂದಾಗ ನನಗೆ ತುಂಬಾ ಸಂತೋಷವಾಯಿತು. ಪ್ರವಾಸದ ದಿನ ಹತ್ತಿರ ಬಂದಾಗ ನನಗೆ ನಿದ್ದೆಯೂ ಬರಲಿಲ್ಲ.
ನಮ್ಮ ಶಾಲೆಯಿಂದ ನನ್ನ ಸ್ನೇಹಿತರು ಮತ್ತು ಮಾತಾಜಿಯವರೊಂದಿಗೆ 3 ಬಸ್ಸುಗಳಲ್ಲಿ ಹೊರ
ಸಂಚಾರಕ್ಕೆ ಹೋದೆವು. ಮೊದಲು ಬಂಟ್ಟಾಳ ತಾಲೂಕಿನ ಕಾರಿಂಜ ಬೆಟ್ಟಕ್ಕೆ ಹೋದೆವು. ಅಲ್ಲಿ 100 ಕ್ಕಿಂತಲೂ ಹೆಚ್ಚು ಮೆಟ್ಟಿಲಿತ್ತು. ಮೆಟ್ಟಿಲು ಹತ್ತಿ ಹೋದಾಗ ಅಲ್ಲಿ ಸುತ್ತಾ ತುಂಬಾ ಕೋತಿಗಳಿದ್ದವು. ಮೇಲಕ್ಕೆ ಹತ್ತಿ ಹೋದರೆ ಅಲ್ಲಿ ಈಶ್ವರ ದೇವರ ದೇವಸ್ಥಾನ ಇತ್ತು. ಅಲ್ಲಿ ತೀರ್ಥ ಪ್ರಸಾದ ತೆಗೆದುಕೊಂಡು ಅಂಗಣದಲ್ಲಿ ಕೂತೆವು. ಬೆಟ್ಟದ ಮೇಲೆ ನಿಂತು ನೋಡಿದಾಗ ಸುತ್ತಲೂ ಹಸಿರು. ತುಂಬಾ ಚಂದ. ಅಲ್ಲಿ ನಮಗೆಲ್ಲ ಶ್ಲೋಕ ಹೇಳಿ ಕೊಟ್ಟರು. ಆಮೇಲೆ ಅಲ್ಲಿಯೇ ತಿಂಡಿ ತಿಂದೆವು.
ಬೆಟ್ಟದಿಂದ ಕೆಳಗಿಳಿದು ಅಲ್ಲಿಯೇ ಹತ್ತಿರದಲ್ಲಿರುವ ಸಾಲುಮರದ ತಿಮ್ಮಕ್ಕ ಉದ್ಯಾನವನಕ್ಕೆ ಹೋದೆವು. ಅಲ್ಲಿ ಬೇರೆ ಬೇರೆ ತುಂಬಾ ಮರಗಳಿದ್ದವು. ಸ್ವಲ್ಪ ಹೊತ್ತು ಆಟ ಆಡಿ ಬಸ್ ಹತ್ತಿ ಅಲ್ಲಿಂದ ನಂದಾವರಕ್ಕೆ ಹೋದೆವು. ಗಣಪತಿಯ ದೇವಸ್ಥಾನ. ಪಕ್ಕದಲ್ಲಿ ನೇತ್ರಾವತಿ ನದಿ. ಅಲ್ಲಿ ದೇವರಿಗೆ ಕೈಮುಗಿದು ಭಜನೆ ಮಾಡಿ ಊಟ ಮಾಡಿದೆವು. ಅಲ್ಲಿಂದ ನೇತ್ರಾವತಿ ನದಿಯನ್ನು ನೋಡಿದೆವು. ಮಾತಾಜಿಯವರು ನಮಗೆಲ್ಲ ಕಿತ್ತಳೆ ಹಣ್ಣು ಹಂಚಿದರು. ಅಲ್ಲಿಂದ ಬಸ್ ಹತ್ತಿ ವಾಪಾಸು ನಮ್ಮ ಶಾಲೆಗೆ ಬಂದೆವು.
ಈ ಹೊರಸಂಚಾರದಿಂದ ನಾನು ತುಂಬಾ ತಿಳಿದುಕೊಂಡೆನು. ನನಗೆ ಬಹಳ ಸಂತೋಷವಾಯಿತು. ಕರೆದುಕೊಂಡು ಹೋದ ಮಾತಾಜಿಯವರಾದ ಹೇಮಲತಾ, ಚೈತ್ರ, ಅನುಷ, ಶೋಭ, ವಿನುತ, ರಕ್ಷಿತಾ .... ಬಸ್ಸಿನ ಡ್ರೈವರ್ ಮಾಮನವರು ಪುರಂದರ, ರಮೇಶ್, ಹರೀಶ್ ಹಾಗೂ ಎಲ್ಲರಿಗೂ ನನ್ನ ವಂದನೆಗಳು.
4ನೇ ಶಿವಾಜಿ ತರಗತಿ
ಶ್ರೀರಾಮ ವಿದ್ಯಾ ಕೇಂದ್ರ
ಹನುಮಾನ್ ನಗರ ಕಲ್ಲಡ್ಕ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
********************************************