-->
ಅಕ್ಕನ ಪತ್ರ - 16ಕ್ಕೆ ಮಕ್ಕಳ ಉತ್ತರ : ಸಂಚಿಕೆ - 2

ಅಕ್ಕನ ಪತ್ರ - 16ಕ್ಕೆ ಮಕ್ಕಳ ಉತ್ತರ : ಸಂಚಿಕೆ - 2

ಅಕ್ಕನ ಪತ್ರ - 16ಕ್ಕೆ
ಮಕ್ಕಳ ಉತ್ತರ : ಸಂಚಿಕೆ - 2


      ಮಕ್ಕಳ ಜಗಲಿಯಲ್ಲಿ......... ಮಕ್ಕಳಿಗೆ ಬಹಳ ಆಪ್ತವಾದ....... ತೇಜಸ್ವಿ ಅಂಬೆಕಲ್ಲು ಇವರು ಬರೆಯುತ್ತಿರುವ...... ಅಕ್ಕನ ಪತ್ರ ವಿದ್ಯಾರ್ಥಿಗಳಲ್ಲಿ ಕಾಳಜಿಯನ್ನು ಮೂಡಿಸುವ ಪ್ರಯತ್ನವಾಗಿದೆ. ಓದುವ ಅಭಿರುಚಿ ಹಾಗೂ ಬರೆಯುವ ಕೌಶಲ್ಯ ಬೆಳೆಯಬೇಕೆನ್ನುವುದು ಮಕ್ಕಳ ಜಗಲಿಯ ಉದ್ದೇಶ...... ಜಗಲಿಯಲ್ಲಿ ಅನೇಕ ಮಕ್ಕಳು ನಿರಂತರವಾಗಿ ಬರೆಯುತ್ತಿದ್ದು ಬರೆಯುವ ಇನ್ನಷ್ಟು ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದ್ದಾರೆ. ವಿದ್ಯಾರ್ಥಿಗಳ ಸ್ವ- ಅನಿಸಿಕೆಯನ್ನು ಭಾವನಾತ್ಮಕವಾಗಿ ಬರೆದು ಕಳುಹಿಸಿದ ಮಕ್ಕಳ ಪತ್ರಗಳನ್ನು ಇಲ್ಲಿ ಪ್ರಕಟಿಸಲಾಗಿದೆ ........

            ನಮಸ್ತೆ ಅಕ್ಕ. ನಾನು ಶ್ರಾವ್ಯ...   ನಿಮ್ಮ ಮಾತು ನಿಜ. ಈ ಜಗಲಿಯ ಮೂಲಕ ಪ್ರಕೃತಿಯ ಬಗೆಗಿನ ಅರಿವು ಮೂಡಿಸುವ ಕಾರ್ಯ ತುಂಬಾ ಹಿಂದಿನಿಂದ ನಡೆಯುತ್ತಿದೆ. ವಿಶ್ವ ಪರಿಸರ ದಿನದ ಸಂದರ್ಭದಲ್ಲೂ ಅನೇಕ ಗಿಡ ಮರಗಳನ್ನು ಬೆಳೆಸುವ ಪ್ರಕೃತಿಯನ್ನು ಸಂರಕ್ಷಿಸುವ ಗಿಡ ನೆಟ್ಟು ಬೆಳೆಸುವ ಅಭಿಯಾನವೇ ನಡೆದಿತ್ತು.  ನೀವು ಹೇಳಿರುವ ಮಾತು ನೂರಕ್ಕೆ ನೂರು ನಿಜ‌. ಹುಟ್ಟುಹಬ್ಬ , ಬೇರೆ ಹಬ್ಬ-ಹರಿದಿನಗಳ ಸಂಭ್ರಮದ ಆಚರಣೆಯನ್ನು ಕೇವಲ ಸಂಭ್ರಮಾಚರಣೆಯೊಂದಿಗೆ  ಕೊನೆಗೊಳಿಸುವುದಲ್ಲದೆ, ಗಿಡಗಳನ್ನು ನೆಟ್ಟು ಸಂಭ್ರಮಿಸುವ ಹೊಸ ಆಚರಣೆಯನ್ನು ನಾವು ಆಚರಣೆ ಮಾಡೋಣ. ನಿಮ್ಮ ಪ್ರಕೃತಿಯ ಬಗೆಗಿನ ಕಾಳಜಿ ನಮ್ಮಲ್ಲೂ ಹೊಸ ಯೋಚನೆ  ಮೂಡಿಸಿದೆ. ನಾನು ನನ್ನ ಹುಟ್ಟುಹಬ್ಬದಂದು  ಗಿಡವನ್ನು ನೆಡುತ್ತೇನೆ.  ಮುಂದಿನ ಪೀಳಿಗೆಗಾಗಿ ಪ್ರಕೃತಿಯನ್ನು ಬೆಳೆಸಿ ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮದಾಗಿದೆ. ಈ ಬಾರಿಯ ಅಕ್ಕನ ಪತ್ರದ ಪ್ರೇರಣೆಯಿಂದ ಇನ್ನು ಹಲವಾರು ಗಿಡ ಮರಗಳು ಬೆಳೆವಂತಾಗಲಿ.  ಧನ್ಯವಾದ ಅಕ್ಕ ಈ ಬಾರಿಯ ಪ್ರಕೃತಿಯ ಮಾಹಿತಿಗೆ. ಇನ್ನೂ ನಿಮ್ಮ ಪ್ರೇರಣೆಯ ಮಾತು ಸದಾ ನಮ್ಮ ಜೊತೆಗಿರಲಿ.
..................................................... ಶ್ರಾವ್ಯ
ಪ್ರಥಮ ಪಿ.ಯು.ಸಿ
ಶ್ರೀ ರಾಮ ವಿದ್ಯಾಕೇಂದ್ರ ಕಲ್ಲಡ್ಕ
ಬಂಟ್ವಾಳ ತಾಲೂಕು ,  ದಕ್ಷಿಣ ಕನ್ನಡ ಜಿಲ್ಲೆ 
*******************************************


         ನಮಸ್ತೆ ಅಕ್ಕ, ನಾನು ಶ್ರೇಯ. ನೀವು ಬರೆದ ಪತ್ರದಿಂದ ನಮಗೆ ಕಲಿಯಬೇಕಾಗಿರುವುದು ತುಂಬಾ ಇದೆ. ನಾವು ನಮ್ಮ ಹುಟ್ಟು ಹಬ್ಬದ ದಿನವನ್ನು ಕೇಕ್ ಕತ್ತರಿಸಿ ಮತ್ತು ಬಗೆ ಬಗೆಯ ತಿಂಡಿ ತಿನಿಸುಗಳನ್ನು ತಯಾರಿಸಿ ಹೊಸ ಉಡುಪುಗಳನ್ನು ಧರಿಸಿಕೊಂಡು ಹುಟ್ಟು ಹಬ್ಬವನ್ನು ತುಂಬಾ ಅದ್ದೂರಿಯಿಂದ ಆಚರಿಸುತ್ತೇವೆ. ಮರುದಿನ ನಾವು ಹುಟ್ಟು ಹಬ್ಬವನ್ನು ಆಚರಿಸಿದ್ದೇವೆ ಎಂಬುದು ನಮಗೆ ನೆನಪಿರುವುದಿಲ್ಲ. ಹೀಗೆ ಅದ್ದೂರಿಯಿಂದ ಆಚರಿಸುವ ಬದಲು ನಮ್ಮ ಹುಟ್ಟು ಹಬ್ಬದ ದಿನ ವನ್ನು ಒಂದು ಗಿಡ ನೆಡುವ ಮೂಲಕ ಆಚರಿಸಬಹುದು. ಆ ಗಿಡ ಬೆಳೆದು ಮರವಾಗಿ ನಮಗೆ ಆದ್ದರಿಂದ ತುಂಬಾ ಉಪಯೋಗವಾಗುತ್ತದೆ. ನಮಗೆ ಮಾತ್ರವಲ್ಲ ಪ್ರಾಣಿ ಪಕ್ಷಿಗಳಿಗೆ ಬದುಕಲು ಆಸರೆಯಾಗುತ್ತದೆ. ಪ್ರತಿಯೊಬ್ಬರು ತಮ್ಮ ಹುಟ್ಟು ಹಬ್ಬದ ದಿನದಂದು ಒಂದು ಗಿಡ ನೆಟ್ಟರೆ ಪರಿಸರ ಸದಾ ಹಸಿರಿನಿಂದ ಕಂಗೊಳಿಸುತ್ತದೆ....... ಧನ್ಯವಾದಗಳು
....................................................ಶ್ರೇಯ 
9ನೇ ತರಗತಿ
ಸರ್ಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************


       ಪ್ರೀತಿಯ ಅಕ್ಕನಿಗೆ ಹಿತಾಶ್ರೀ ಮಾಡುವ 
ನಮಸ್ತೆ ....... ಅಕ್ಕ ನೀವು ಕಳುಹಿಸಿದ ಪತ್ರವನ್ನು ಓದಿದ್ದೇನೆ. ಅದರಲ್ಲಿ ಜನ್ಮದಿನದ ಬಗ್ಗೆ ಬರೆದಿದ್ದೀರಿ. ಜನ್ಮದಿನದಂದು ನಾವು ಕೇಕ್ ಕಟ್ ಮಾಡಿದಾಗ ಅದರ ಸಂತೋಷ ಆ ಕ್ಷಣಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಆದರೆ ಒಂದು ಗಿಡ ನೆಟ್ಟರೆ ಪ್ರತಿವರ್ಷವು ನೋಡಲು ಸಾಧ್ಯ .. ಅದರ ಬೆಳವಣಿಗೆಯನ್ನು ನೋಡುವಾಗ ನನ್ನ ಹುಟ್ಟುಹಬ್ಬದ ದಿನ ನೆಟ್ಟ ಗಿಡ ಎಂದು ತುಂಬಾ ಸಂತೋಷವಾಗುತ್ತದೆ. ನಾವು ಗಿಡವನ್ನು ನೆಟ್ಟು ಬೆಳಸಿದರೆ ಕಾಡು ನಾಶವಾಗುವುದಿಲ್ಲ. ಕಾಲ ಕಾಲಕ್ಕೆ ಸರಿಯಾಗಿ ಮಳೆ ಬಂದು ಬೆಳೆ ಬೆಳೆಯಲು ಸಾಧ್ಯವಾಗುತ್ತದೆ. ಎನ್ನುವುದು ನನ್ನ ಅಭಿಪ್ರಾಯ.
 .............................................. ಹಿತಶ್ರೀ ಪಿ
ಆರನೇ ತರಗತಿ
ಶ್ರೀ ವೇಣುಗಪಾಲ ಅ. ಹಿ . ಪ್ರಾ . ಶಾಲೆ 
ಪಕಳಕುಂಜ , ಮಾಣಿಲ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************



     ನಮಸ್ತೆ ಅಕ್ಕ ನಾನು ಆಯಿಶಾ ಹಮ್ನ ..... ನಾನು ಚೆನ್ನಾಗಿದ್ದೇನೆ ನೀವು ಚೆನ್ನಾಗಿದ್ದೀರಿ ಎಂದು ಭಾವಿಸುತ್ತೇನೆ. ನೀವು ಕಳಿಸಿದ ಪತ್ರ ನನಗೆ ಓದಿ ತುಂಬಾ ಖುಷಿಯಾಯಿತು. ನಾನು ಬಾಲ್ಯದಲ್ಲಿ ಆಚರಿಸಿದ ಹುಟ್ಟುಹಬ್ಬ ನನಗೆ ನೆನಪಾಯಿತು. ಅದರಲ್ಲೂ ಎರಡು ವರ್ಷಕ್ಕಿಂತ ಮುಂಚೆ ಆಚರಿಸಿದ ದಿನಗಳು ನೆನಪಾಯಿತು ಅವತ್ತು ನಾವು ಕೇಕ್ ಕಟ್ ಮಾಡುವ ಬದಲು ಬಡವರಿಗೆ ನಮ್ಮ ಮನೆಯಲ್ಲಿ ತಯಾರಿಸಿದ ಅನ್ನವನ್ನು ಕೊಟ್ಟೆವು, ಅದರಿಂದ ಅವರ ಮುಖದಲ್ಲಿರುವ ಖುಷಿಯನ್ನು ನೋಡಿ ನನಗೆ ತುಂಬಾ ಖುಷಿಯಾಯಿತು. ಹಾಗೂ ಇನ್ನು ಮುಂದೆ ಬರುವ ಹುಟ್ಟು ಹಬ್ಬಕ್ಕೆ ಹೀಗೆ ಅನ್ನವನ್ನು ಕೊಟ್ಟು ಹಾಗೂ ಗಿಡವನ್ನು ನೆಡಲು ನಾನು ಪ್ರಯತ್ನಿಸುತ್ತೇನೆ..... ಇದೇ ತರ ನಮ್ಮ ದೇಶದಲ್ಲಿ ಇರುವ ಜನರು ಗಿಡವನ್ನು ನೆಡಲು ಪ್ರಯತ್ನಿಸಿದರೆ ನಮ್ಮ ದೇಶದಲ್ಲಿ ಇರುವ ಕಾಡುಗಳು ನಾಶವಾಗುವುದನ್ನು ತಡೆಯಬಹುದು........
       ಧನ್ಯವಾದಗಳು
.............................................ಆಯಿಶಾ ಹಮ್ನ
9ನೇ ತರಗತಿ
ಸರ್ಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************




          ಪ್ರೀತಿಯ ಅಕ್ಕನಿಗೆ ಪ್ರಸ್ತುತಿ ಮಾಡುವ ನಮಸ್ಕಾರಗಳು........ ಇದೀಗ ತಾನೇ ಅಕ್ಕನ ಪತ್ರ ಓದಿದೆ. ನನ್ನ ಮತ್ತು ತಮ್ಮನ ಹುಟ್ಟುಹಬ್ಬಕ್ಕೆ ಬಂದವರೆಲ್ಲರಿಗೂ ಪುಟ್ಟ ಗುಲಾಬಿಯ ಗಿಡ ಕೊಟ್ಟಿದ್ದೆ. ಬಣ್ಣದ ಹೂವುಗಳು ಅರಳಿದಾಗ ಅವರು ಖುಷಿಯಿಂದ ಅದರ ಚಿತ್ರಗಳನ್ನು ನನ್ನೊಂದಿಗೆ ಹಂಚಿಕೊಂಡಿದ್ದರು. ನನಗೆ ತುಂಬಾ ಖುಷಿಯಾಗಿತ್ತು.
........................................ ಪ್ರಸ್ತುತಿ ಎನ್ 
4ನೇ ತರಗತಿ...
SFS academy....ಹೆಬ್ಬಗೋಡಿ.. ಬೆಂಗಳೂರು.
*******************************************



           ನಮಸ್ತೆ ಅಕ್ಕ, ನಾನು ಅಮೃತ....... ನಾನು ನಿಮ್ಮ ಪತ್ರ ಓದಿದೆ. ಈ ಪತ್ರದಿಂದ ನನಗೆ ಏನು ಅರಿವಾಯಿತು ಎಂದರೆ ನಾವು ನಮ್ಮ ಜನ್ಮ ದಿನದಂದು ಕೇಕ್ ಕತ್ತರಿಸಿ ಅಚರಿಸುವದರಿಂದ ಏನು ಪ್ರಯೋಜನವಿಲ್ಲ. ಅದರ ಬದಲಿಗೆ ನಾವು ನಮ್ಮ ಜನ್ಮ ದಿನದಂದು ಒಂದು ಗಿಡವನ್ನು ನೆಡಬಹುದು. ಹೀಗೆ ನಾವು ನಮ್ಮ ಪ್ರತೀ ಜನ್ಮದಿನದಂದು ಒಂದೊಂದು ಗಿಡ ನೆಟ್ಟರೆ ನಾವು ನಮ್ಮ ಜನ್ಮ ದಿನದಂದು ಒಂದು ಪುಣ್ಯದ ಕೆಲಸ ಮಾಡಿದಂತೆ ಹಾಗೂ ನಾವು ಯಾವಾಗಲೆಲ್ಲ ಆ ಗಿಡ ಅಥವಾ ಮರವನ್ನು ನೋಡಿದಾಗ ನಮಗೆ ತುಂಬಾ ಖುಷಿಯಾಗುತ್ತದೆ.
.......................................................ಅಮೃತ.
9ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************


       ನಮಸ್ತೆ ಅಕ್ಕಾ... ನನ್ನ ಪ್ರೀತಿಯ ಅಕ್ಕನಿಗೆ ಸಾತ್ವಿಕ್ ಗಣೇಶನು ಮಾಡುವ ನಮಸ್ಕಾರಗಳು... ಹೌದು ಅಕ್ಕಾ ನಮ್ಮ ಜನ್ಮದಿನವೆಂದರೆ ನಮಗೆ ಬಹಳ ಸಡಗರದ ದಿನ. ಎಲ್ಲರೂ ಹುಟ್ಟುಹಬ್ಬದ ಶುಭಾಶಯ ಮತ್ತುಗುರು ಹಿರಿಯರು ಆಶೀರ್ವಾದ ಮಾಡಿದಾಗ ತುಂಬಾ ಸಂತೋಷವಾಗುತ್ತದೆ.
    "ನಾನು ಚಿಕ್ಕದಿಂದಲೂ ಹುಟ್ಟುಹಬ್ಬದಂದು ಮನೆಯಲ್ಲಿ ದೇವರಲ್ಲಿ ಪ್ರಾರ್ಥನೆ ಮಾಡಿ ಅಜ್ಜ ಅಜ್ಜಿ ಅಮ್ಮ ಅಪ್ಪ ಇವರಲ್ಲಿ ಆಶೀರ್ವಾದ ಪಡೆದು ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಮಾಡಿ ಬರುತ್ತಿದ್ದೆ. ಅಮ್ಮ ಮಾಡಿದ ಪಾಯಸವನ್ನು ತಿನ್ನುತ್ತಿದ್ದೆ. ಇದರ ಜೊತೆಗೆ ಇನ್ನು ನೀವು ಹೇಳಿದಂತೆ ನಾನೂ ಕೂಡ ನಮ್ಮ ಮನೆಯಲ್ಲಿ ಒಂದು ಗಿಡವನ್ನು ನೆಡುತ್ತೇನೆ ಅಕ್ಕಾ. ಹೀಗೆ ಕೇಕ್ ಕತ್ತರಿಸುವ ಬದಲು ಪ್ರತಿ ಮನೆಯಲ್ಲಿಯೂ ಒಂದು ಗಿಡವನ್ನು ನೆಟ್ಟು ಹಲವಾರು ಪ್ರಾಣಿ,ಪಕ್ಷಿಗಳಿಗೆ ನಾವು ಆಸರೆಯನ್ನು ಮಾಡಿ ಕೊಡೋಣ. ನಮ್ಮ ಸುತ್ತ ಮುತ್ತಲು ಗಿಡಮರಗಳಿದ್ದರೆ ನಮಗೆ ಶುದ್ಧ ಗಾಳಿಯು ಸಿಗುತ್ತದೆ. ಒಳ್ಳೆಯ ಆರೋಗ್ಯವು ದೊರೆಯುವುದು. ಧನ್ಯವಾದಗಳು ಅಕ್ಕಾ
...................................... ಸಾತ್ವಿಕ್ ಗಣೇಶ್
7ನೇ ತರಗತಿ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಜಿರೆ 
ಬೆಳ್ತಂಗಡಿ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************


         ನಮಸ್ತೆ ಅಕ್ಕ. ನಾನು ಕೃತಿಕಾ.... ಪುನಃ ಈ ಪತ್ರದಲ್ಲಿ ನಮ್ಮಿಬ್ಬರ ಭೇಟಿ. ಅಕ್ಕ ಈ ವಾರದಲ್ಲಿ ನಿಮ್ಮ ಅಕ್ಕನ ಪತ್ರದಲ್ಲಿರುವ ವಿಚಾರ ನನಗೆ ತುಂಬಾ ಇಷ್ಟವಾಯಿತು. ನಮ್ಮ ಹುಟ್ಟು ಹಬ್ಬದಂದು ಒಂದು ಪ್ರಕೃತಿ ಜೀವಕ್ಕೆ ಜೀವ ನೀಡುವುದೆಂದರೆ ಒಂದು ಪುಣ್ಯದ ಕೆಲಸವೇ ಸರಿ. ನಮ್ಮ ಹುಟ್ಟುಹಬ್ಬದಂದು ಒಂದು ಗಿಡ ನೆಟ್ಟೆವು ಎಂಬ ತೃಪ್ತಿ ನಮಗಿರುತ್ತದೆ. ಅರಣ್ಯನಾಶದಿಂದಾಗಿ ಆಮ್ಲಜನಕದ ಪ್ರಮಾಣ ಕಡಿಮೆ ಯಾಗುತ್ತಿರುವುದರಿಂದ ವಾಯು ಮಾಲಿನ್ಯದ ಪ್ರಮಾಣ ಹೆಚ್ಚುತ್ತಿದೆ. ಅರಣ್ಯನಾಶ ಕಡಿಮೆಯಾದರೆ ವಾಯು ಸ್ವಚ್ಛವಾಗುತ್ತದೆ. ಉಸಿರಾಡಲು ಒಳ್ಳೆಯ ಗಾಳಿ ಸಿಗುತ್ತದೆ. ಒಂದು ಮರವನ್ನು ಕಡಿದರೆ ಅದರ ಬದಲಾಗಿ ಹತ್ತು ಗಿಡವನ್ನು ನೆಡುವ ಕಾರ್ಯ ನಮ್ಮ ಜನ್ಮದಿನದಂದೇ ನಡೆಯಲಿ. ಹೀಗಾಗಿ ಪ್ರತಿಯೊಬ್ಬರೂ ತಮ್ಮ ವಿಶೇಷ ದಿನದಂದು ಗಿಡ ನೆಟ್ಟು ಸಾರ್ಥಕ ಮೆರೆಯಬೇಕಾಗಿದೆ. ನಾನು ನನ್ನ ಹುಟ್ಟುಹಬ್ಬದಂದು ಒಂದು ಗಿಡವನ್ನು ಮರೆಯದೆ ನೆಡುತ್ತೇನೆ ಎಂದು ಪ್ರತಿಜ್ಞೆ ಮಾಡುತ್ತಾ ಇನ್ನು ನಮ್ಮಿಬ್ಬರ ಭೇಟಿ ಮುಂದಿನ ಪತ್ರದಲ್ಲಿ. ಧನ್ಯವಾದಗಳು.
.............................................. ಕೃತಿಕಾ. ಕೆ
9ನೇ ತರಗತಿ
ಸರಕಾರಿ. ಪ್ರೌಢಶಾಲೆ. ಮಂಚಿ ಕೊಳ್ನಾಡು, 
ಬಂಟ್ವಾಳ ತಾಲೂಕು , ದ. ಕ. ಜಿಲ್ಲೆ
*******************************************


      ಅಕ್ಕ ನಾನು ಜಯಂತ್...... ನಾನು ‌ಚೆನ್ನಾಗಿದ್ದೇನೆ. ನೀವು ಕೂಡ ಚೆನ್ನಾಗಿದ್ದೀರಾ ಅಲ್ವಾ..... ನೀವು ಬರೆದ ಪತ್ರ ಓದಿದೆ. ತುಂಬಾ ‌ಚೆನ್ನಾಗಿತ್ತು. ನಿಜ ಅಲ್ವಾ ಅಕ್ಕ ನಮ್ಮ ಬಾಲ್ಯ ಚೆಂದ ಅದರಲ್ಲಿ ನನಗೆ ತುಂಬಾ ಸಡಗರದ ದಿನ ನನ್ನ ಜನ್ಮದಿನ. ಅಕ್ಕ ನೀವು ಹೇಳಿದಂತೆ ನಾವು ಕೇಕ್ ಕತ್ತರಿಸುವ ಬದಲು ಗಿಡ ನೆಡುವ ಮೂಲಕ ಆಚರಿಸಿದರೆ ಎಷ್ಟು ಚಂದ ಅಲ್ಲವೇ. ಗಿಡ ನೆಟ್ಟರೆ ಪರಿಸರ ಚೆನ್ನಾಗಿ ಇಡಬಹುದು ಅದಲ್ಲದೆ ಅದು ಮರವಾದಾಗ ನಮಗೆ. ನೆರಳು , ಗಾಳಿ, ಹಣ್ಣು .... ಕೊಡುತ್ತದೆ ಮತ್ತು ನೂರಾರು ಸಣ್ಣ ‌ಪುಟ್ಟ ಪಕ್ಷಿಗಳಿಗೆ ಆಶ್ರಯ ತಾಣವಾಗುತ್ತದೆ. ಹಾಗಾದರೆ ಇನ್ನು ಮುಂದೆ ನಮ್ಮ ಜನ್ಮದಿನದಂದು ಗಿಡಗಳನ್ನು ನೆಡೋಣ ಅಕ್ಕ. ಇದನ್ನು ನಮ್ಮ ಗೆಳೆಯ ಅಥವಾ ಗೆಳತಿಯರಿಗೆ ತಿಳಿಸಿ ಹಸಿರೇ ಉಸಿರು ಎಂದು ಎಲ್ಲೆಡೆ ಸಾರೋಣ..... ಧನ್ಯವಾದ ...............
  ................................................ ಜಯಂತ್
6ನೇ ತರಗತಿ
ಆದರ್ಶ ವಿದ್ಯಾಲಯ 
ಚಾಮರಾಜನಗರ ತಾಲ್ಲೂಕು ಮತ್ತು ಜಿಲ್ಲೆ
*******************************************


Ads on article

Advertise in articles 1

advertising articles 2

Advertise under the article