
ಹೊಸ ವರುಷ - 2022: ಮಕ್ಕಳ ಕವನಗಳು
Saturday, January 1, 2022
Edit
ಹೊಸ ಕ್ಯಾಲೆಂಡರ್ ವರುಷ - 2022
ಹೊಸವರುಷದ ಕುರಿತಾಗಿ
ಜಗಲಿಯ ಮಕ್ಕಳು ಬರೆದ
ಮಕ್ಕಳ ಕವನಗಳನ್ನು
ಇಲ್ಲಿ ಪ್ರಕಟಿಸಲಾಗಿದೆ
ಹೊಸ ವರುಷ - ಕವನ
---------------------------
ಹೊಸ ವರುಷ ಹೊಸ ಹರುಷ
ಹೊಸ ಭರವಸೆಯ ಅನಾವರಣ
ಹೊಸ ಹೆಜ್ಜೆಗೆ ಹೊಸ ಹುರುಪು
ಹೊಸ ಯೋಚನೆ ಆಲೋಚನೆ
ಕಳೆದಾಗಿದೆ ಹಿಂದಿನ ವರುಷ
ಅಣಿಯಾಗಿದೆ ಮುಂದಿನ ಹೊಸ ವರುಷ
ಹೊಸಗನಸು ದೇಶದ ಬಗೆಗೆ
ಸ್ವಚ್ಛ ಸುಂದರ ಪ್ರಕೃತಿ ಬಗೆಗೆ
ಹೊಸ ವರುಷದಲಿ ಹೊಸ ಅಭಿರುಚಿ ಬೆಳೆಸುವ
ಹೊಸ ಯೋಜನೆಗೆ ನಾವೇ ಮುನ್ನುಡಿ ಬರೆಯುವ
ಹೊಸ ವರುಷ ಹೊಸ ಹರುಷ........
ಪ್ರಥಮ ಪಿಯುಸಿ
ಶ್ರೀರಾಮ ಪದವಿ ಪೂರ್ವ ಕಾಲೇಜು
ಕಲ್ಲಡ್ಕ , ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
**********************************************
ಹೊಸ ವರುಷ - ಕವನ
--------------------------------
ಮತ್ತೆ ಬಂದಿಹೆ ಹೊಸ ವರುಷ
ಎಲ್ಲರ ಮುಖದಲ್ಲಿ ಇರಲಿ ಹರುಷ
ಬಾಳಿಗೆ ತರಲಿ ಸಿಹಿ - ಸಂತಸ
ತುಂಬಿ ತುಳುಕುತ್ತಿರಲಿ ರಸನಿಮಿಷ
ಹಳೆತನದ ಕಷ್ಟ ಕಳಚಿ
ಹೊಸತನದ ಉಡುಗೆ ತೊಡಿಸಿ
ತಿಂದ ಕಹಿಯ ಮರೆಸಿ
ಉಂಡ ಸಿಹಿಯ ನೆನಪಿಸಿ
ಹೊಸ ವರುಷ ಮೂಡುತಿದೆ
ಸವಿ ಕನಸ ತೋರುತಿದೆ
ಮನ ಕುಣಿದು ನಲಿಯುತಿದೆ
ತನು ಒಲಿದು ಮಿಡಿಯುತಿದೆ
ವರುಷ ಹೊಸತಾಗಲಿ
ಹರುಷ ತುಂಬಿ ತುಳುಕಲಿ
ಹಸಿರಿನ ಸಿರಿ ಚಿಮ್ಮಲಿ
ನೆಮ್ಮದಿ ಬಾಳಿನಲಿ ಹೊಂದಲಿ
9ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
**********************************************
ಹೊಸ ವರುಷದ ಆಗಮನ- ಕವನ
------------------------------------------------
ಬಂದಿದೆ 2022ನೇ ವರುಷದ ಆಗಮನ,
ಆಗಿದೆ 2021ನೇ ವರ್ಷದ ನಿರ್ಗಮನ,
ನೆನಪುಗಳ ಸುಧೆಯನ್ನು ಹರಿಸಿ ಸಾಗಿ,
ಎಚ್ಚರಿಕೆಯ ಕರೆಗಂಟೆಯ ಭರದಿ ನೀಡಿ.
ಮನುಜನೆ ತಿದ್ದಿಕೋ ನಿನ್ನ ನೀನು ,
ಆರೋಗ್ಯವೇ ಭಾಗ್ಯ ವೆಂಬುದ ಕಲಿ ನೀನು,
ಸಾವಯವ ತರಕಾರಿ ಮಾಡಿ ಬೆಳೆಸು,
ತುಳಸಿ ಅರಿಶಿನವ ನೆಟ್ಟು ಪೋಷಿಸು.
ಚಿಕ್ಕ ಕೈತೋಟ ವ ಚೊಕ್ಕದಿ ಸೃಜಿಸು,
ಅನ್ಯರ ನಿಂದನೆ ಮಾಡಿ ಕೆಡಬೇಡ ,
ತನ್ನ ವರ್ಣಿಸಿ ಎಂದೂ ಬೀಗಬೇಡ,
ಉಪಕಾರ ಮಾಡುವ ಕ್ರಮವ ಬೆಳೆಸು.
ಹಬ್ಬ-ಹರಿದಿನವ ಸುಖದಿ ಆಚರಿಸು,
ವ್ಯಕ್ತಿತ್ವ ವಿಕಸನ ಬಿಡದೆ ಮಾಡು,
ಪ್ರಾಣಿ-ಪಕ್ಷಿಗಳಲ್ಲಿ ಪ್ರೀತಿಯನ್ನುತೋರು,
ಭೂರಮೆಯ ಸೌಂದರ್ಯ ಹೆಚ್ಚುವಂತೆ
ಮಾಡು.
4ನೇ ತರಗತಿ.
ಸಾಂದೀಪನೀ ಗ್ರಾಮೀಣ ಆಂಗ್ಲ ಮಾಧ್ಯಮ ಶಾಲೆ , ನರಿಮೊಗರು ಪುತ್ತೂರು.
ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
**********************************************
ಹೊಸ ವರುಷ......
ಬಂದಿದೆ ಹೊಸ ವರುಷ....
ತರಲಿ ಹೊಸ ಹರುಷ....
2022ರ ಉದಯ
2021ನಿನಗಿದೋ ಪ್ರೀತಿಯ ವಿದಾಯ..
ಸಾಕಷ್ಟು ಪಾಠಗಳ ಕಲಿಸಿದ ವರ್ಷವಿದು.
ನೋವು- ನಲಿವುಗಳ ಉಣಿಸಿದ ವರ್ಷವಿದು
ಸಾವಿರ ಕನಸುಗಳ ಕಂಡ ಕಣ್ಣುಗಳು
ಸಫಲತೆಯಮೆಟ್ಟಿಲಾಗಲಿ ಈ ವರುಷದ ದಿನಗಳು....!!
ಕಳೆದು ಹೋದವು ನಿನ್ನೆ - ಮೊನ್ನೆಗಳು
ಇನ್ನುಳಿದಿರುವುದು ಕೇವಲ
ಇಂದು - ಉಳಿದರೆ ನಾಳೆಗಳು......!!
ಹೊಸ ಹೊಸ ಯೋಜನೆಯಿದೆ
ನಮ್ಮಲ್ಲಿ....
ಕಾರ್ಯರೂಪವು ಆದಷ್ಟು
ಶೀಘ್ರದಲ್ಲಿ!!
ನವೀನ ಪ್ರಗತಿಯು ಸಾಗಲಿ
ಸಾಗುತ್ತಾ ಜೀವನವು ಉಜ್ವಲವಾಗಲಿ
ಕೊರೊನದ ಈ ಕರಿನೆರಳು
ಮಾಯೆಯಾಗಿ ನೀಡಲಿ ಹೊಸ ತಿರುಳು...
ಈ ವರುಷದ ಕ್ಷಣ ಕ್ಷಣವು ಅಮೂಲ್ಯವು
ಸಾಧನೆಯ ಶಿಖರಕೆ ಪರಿಶ್ರಮ ಮುಖ್ಯವು......!!
ಪ್ರಥಮ ಪಿ. ಯು ಸಿ
ಎಕ್ಸೆಲ್ ಪಿಯು ಕಾಲೇಜ್ ಗುರುವಾಯನಕೆರೆ
ಬೆಳ್ತಂಗಡಿ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
**********************************************
ಹೊಸ ವರ್ಷ - ಕವನ
-------------------------------
ವರ್ಷ ವರ್ಷ ಕಳೆದ ಹಾಗೆ
ಮುಗಿಲು ಮುಟ್ಟೊ ಪ್ರತಿಭೆಗಳಿಗೆ
ಅವಕಾಶದ ಅವಶ್ಯವಿದೆ ....!
ಹೊಸ ವರ್ಷ ಬಂದ ಮೇಲೆ
ಹೊಸ ಬಟ್ಟೆಗಳ ಹಾಗೆ
ಮನಸು ಹೊಸದಾಗಲು ಅವಶ್ಯವಿದೆ
ಇರಲಿ ಖುಷಿಯು ಎಲ್ಲರಲ್ಲೂ
ಇರಲಿ ಖುಷಿಯು ನಿನ್ನಲ್ಲು
ಹೊಸ ದಾಗಲು ಮನಸುವಿದೆ
ನೋವು ನಲಿವು ಏನೇ ಬರಲಿ
ಎಲ್ಲದಕ್ಕೂ ತಾಳ್ಮೆ ಇರಲಿ
ಸಮಾನತೆಯ ಜಗವ ಮೆರೆಯಲಿ
ಏಳನೇ ತರಗತಿ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ
ಕಲಂಬಾಡಿ ಪದವು
ಕಾರ್ಕಳ ತಾಲೂಕು , ಉಡುಪಿ ಜಿಲ್ಲೆ
**********************************************