-->
2022 ರಲ್ಲಿ ನನ್ನ ಯೋಚನೆ-ಯೋಜನೆ : ಸಂಚಿಕೆ - 3

2022 ರಲ್ಲಿ ನನ್ನ ಯೋಚನೆ-ಯೋಜನೆ : ಸಂಚಿಕೆ - 3

      ಮಕ್ಕಳ ಜಗಲಿಯ ಎಲ್ಲರಿಗೂ 2022 ರ ಶುಭಾಶಯಗಳು. ನಮಗೆಲ್ಲ ಪ್ರತಿದಿನ ಹೊಸದೇ..... ಮಕ್ಕಳ ಜಗಲಿಯ ಮೂಲಕ "2022- ನನ್ನ ಯೋಚನೆ-ಯೋಜನೆ" ಮಕ್ಕಳಿಗಾಗಿ ಆಯೋಜಿಸಲಾದ ಈ ಚಟುವಟಿಕೆಯಲ್ಲಿ ಜಗಲಿಯ ಅನೇಕ ಮಕ್ಕಳು ಭಾಗವಹಿಸಿದ್ದಾರೆ. ಮಕ್ಕಳ ಮನದಾಳದ ಜಾಗೃತಿಯ ಮಾತುಗಳನ್ನು ಇಲ್ಲಿ ಪ್ರಕಟಿಸಿದ್ದೇವೆ...... 


                2022 ರಲ್ಲಿ 
       ನನ್ನ ಯೋಚನೆ-ಯೋಜನೆ
                ಸಂಚಿಕೆ : 3


     ನನ್ನ ಹೆಸರು ಪೂರ್ಣಿಮ ಕೋಟ್ಯಾನ್. ಹೊಸ ವರುಷ ಎಂದಾಗ ಎಲ್ಲರಲ್ಲಿಯೂ ಹೊಸ ಹುಮ್ಮಸ್ಸು, ಚೈತನ್ಯ, ಹೊಸತನ ಮೂಡುತ್ತದೆ. ಹೊಸ ವರುಷ ಎಂದಾಗ ನಮ್ಮ ಯೋಚನೆ ಆಲೋಚನೆಗಳು ಹೊಸದಾಗಿರಾಬೇಕು. ನಮ್ಮ ಸಾಧನೆಯೂ ವಿಶಿಷ್ಟ ರೀತಿಯದ್ದಾಗಿರಬೇಕು. ಕನಸುಗಳನ್ನು ಕಾಣುವುದು ಮಾತ್ರವಲ್ಲದೇ ಅವುಗಳನ್ನು ನನಸು ಮಾಡಬೇಕು. ನನ್ನ ಸಾಧನೆಯ ಯೋಚನೆ ಏನೆಂದರೆ ಬರಹ ಕ್ಷೇತ್ರ. ನನಗೆ ಬರಹ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿ ಇರುವುದರಿಂದ ಇದರಲಿಯೇ ಮುಂದುವರಿದು ಬರಹ ಕ್ಷೇತ್ರದಲ್ಲಿಯೇ ಸಾಧನೆಗೈಯಬೇಕೆಂಬುದು ನನ್ನ ಇಚ್ಛೆಯಾಗಿದೆ.
     ................... ವಂದನೆಗಳು ...................
...............................ಪೂರ್ಣಿಮ ಕೋಟ್ಯಾನ್
10 ನೇ ತರಗತಿ
ಹೋಲಿ ರೋಸರಿ ಪ್ರೌಢಶಾಲೆ, ಮೂಡುಬಿದಿರೆ
ಮಂಗಳೂರು ತಾಲ್ಲೂಕು
ದಕ್ಷಿಣಕನ್ನಡ ಜಿಲ್ಲೆ
*********************************************



             ನಮಸ್ತೆ. ನನ್ನ ಹೆಸರು ಧೃತಿ. ಒಂದು ವರ್ಷ ಹೇಗೆ ಕಳೆದು ಹೋಯಿತು ಎಂಬುದೇ ತಿಳಿಯಲಿಲ್ಲ. 2021 ಕಳೆದು ಹೋಯಿತು ಕಳೆದು ಹೋದ ದಿನಗಳ ಇನ್ನು ನೆನಪು ಮಾತ್ರ ಉಳಿದುಬಿಟ್ಟಿದೆ. ಹೊಸ ವರುಷವನ್ನು ಬಹಳ ಹರುಷದಿಂದ ಸ್ವಾಗತಿಸೋಣ. ನಾವು ಕನಸನ್ನು ಕಾಣಬೇಕು ಹೌದು ಆದರೆ ಅದು ಕನಸಾಗಿಯೇ ಉಳಿಯಬಾರದು. ಅದನ್ನು ನನಸು ಮಾಡುವ ಯೋಚನೆ ಮಾಡಬೇಕು. ಅನಂತರ ಅದನ್ನು ಯೋಜನೆಯ ರೂಪಕ್ಕೆ ತರಬೇಕು. ಸಮಯ ಬಹಳ ಅಮೂಲ್ಯವಾದುದು. ಓಡುವ ಸಮಯದ ಹಿಂದೆ ನಾವು ಸಹ ಹೊಸ ಹೊಸ ಯೋಜನೆಯನ್ನು ರೂಪಿಸೋಣ. ಕಳೆದು ಹೋದ ಸಮಯ ತಿರುಗಿ ಬಾರದು. ನಾನು ಕಲಿಕೆಯ ಜೊತೆಗೆ ಚಿಕ್ಕಪುಟ್ಟ ಹವ್ಯಾಸವನ್ನು ಪ್ರಾರಂಭಿಸುವ ಇಚ್ಛೆ ಇದೆ. ಬಿಡುವಿದ್ದಾಗ ಕವನಗಳನ್ನು ಬರೆಯುವುದು ಪುಸ್ತಕಗಳನ್ನು ಓದುವುದು ಹೀಗೆ ಹಲವು ಹವ್ಯಾಸವನ್ನು ಬೆಳೆಸಬೇಕು ಎಂದುಕೊಂಡಿದ್ದೇನೆ. ನಾನು ಕಲಿಕೆಯಲ್ಲಿ ಒಳ್ಳೆಯ ಅಂಕಗಳನ್ನು ಗಳಿಸಿ ಶಾಲೆಗೆ ಒಬ್ಬ ಒಳ್ಳೆಯ ವಿದ್ಯಾರ್ಥಿನಿ ಆಗಬೇಕು ಎಂಬುದು ನನ್ನ ಪುಟ್ಟ ಆಸೆ. ನಾನು ಏನಾದರೂ ಸಾಧಿಸಿ ತಂದೆ-ತಾಯಿ ಹಾಗೂ ಕಲಿಸಿದ ಗುರುಗಳು ಹೆಮ್ಮೆಪಡುವಂತಹ ವಿಷಯವನ್ನು ಸಾಧಿಸಿ ತೋರಿಸಬೇಕು ಎಂಬ ಛಲ ನನ್ನಲ್ಲಿದೆ. 2022 ನೇ ಎಲ್ಲರಿಗೂ ಶುಭವನ್ನು ಜೊತೆಗೆ ಆರೋಗ್ಯವನ್ನು ತರಲಿ, ಹೊಸ ವರುಷದ ಹಾರ್ದಿಕ ಶುಭಾಶಯಗಳೊಂದಿಗೆ, 
.....................ಧನ್ಯವಾದಗಳು .....................
 ................................................. ಧೃತಿ 
9ನೇ ತರಗತಿ 
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*********************************************



    ನಮಸ್ಕಾರ....... ನನ್ನ ಹೆಸರು ನಿಶಾ. ಎಮ್. ನನ್ನ ಯೋಚನೆ ಯೋಜನೆಗಳು ಬಹಳಷ್ಟು ಇದೆ. ಅದರಲ್ಲಿ ಅನೇಕ ಚಿತ್ರಗಳನ್ನು ಬಿಡಿಸಬೇಕೆಂದು, ಸ್ವಂತವಾಗಿ ರಚಿಸಬೇಕು ಎಂದು ಮತ್ತು ಅದರಿಂದ ಅನೇಕ ಬಹುಮಾನಗಳನು ಪಡೆಯಬೇಕು ಎಂದು ಇಚಿಸುತ್ತೆನೆ. ಮತ್ತು ನಾನು ಬಹಳ ಚೆನ್ನಾಗಿ ಓದಬೇಕು ಮತ್ತು ಉತ್ತಮ ಅಂಕಗಳನ್ನು ತೆಗೆಯಬೇಕು. ಧನ್ಯವಾದಗಳು.
........................................ನಿಶಾ ಎಂ 
8ನೇ ತರಗತಿ 
ವೆಲೆಂಟೈನ್ ಮಾಡೆಲ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಮಾರುತಿನಗರ , 
ಇಟ್ಟುಮಡು , ಬೆಂಗಳೂರು
*********************************************



ಎಲ್ಲರಿಗೂ ನಮಸ್ಕಾರ, ನಾನು ತನ್ಮಯಿ
          ಹೊಸ ವರ್ಷವೆಂದರೆ ಎಲ್ಲರೂ ಸಂತೋಷ ಪಡುವ ದಿನ. ಹಳೆಯದನ್ನು ಮರೆತು ಹೊಸ ಕನಸುಗಳನ್ನು ಕಟ್ಟಿ ಎಲ್ಲರೊಂದಿಗೆ ಬೆರೆತು ನಗುನಗುತ್ತಾ ಖುಷಿಯಾಗಿರುವುದು. ಸನಾತನ ಕ್ಯಾಲೆಂಡರ್ ನ ಪ್ರಕಾರ ಹೊಸ ವರ್ಷ ಯುಗಾದಿಯಂದು. ಆದರೆ ಜಗತ್ತು ಜನವರಿ 1ರಂದು ಹೊಸ ವರ್ಷವನ್ನು ಸಂಭ್ರಮದಿಂದ ವರ್ಷವೂ ಆಚರಿಸಲಾಗುತ್ತದೆ. ಹಳೆಯ ನೋವುಗಳನ್ನು ಮರೆತು ಹೊಸ ನೆನಪುಗಳನ್ನು ಹೊತ್ತು ಜೀವನವನ್ನು ಸಂತೋಷದೊಂದಿಗೆ ಹೊಸ ವರ್ಷವನ್ನು ಸ್ವಾಗತಿಸುವುದು.  ಈ ವರ್ಷ ನನಗೆ ಹಲವಾರು ಕನಸುಗಳಿವೆ. ಓದಿನಲ್ಲಿ ಹೆಚ್ಚು ಅಂಕ ಪಡೆಯುವುದು , ಹಾಗೂ ಭರತನಾಟ್ಯ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದು ಉತ್ತೀರ್ಣಳಾಗುವುದು,  ಎಲ್ಲರಿಗೂ ಸಂತೋಷ ಪಡಿಸಿ ಯಾರಿಗೂ ಬೇಸರ ಕೊಡದೆ ಖುಷಿ ಕೊಡುವುದು.
........................ಧನ್ಯವಾದಗಳು.................

................................................... ತನ್ಮಯಿ
ಎಂಟನೇ ತರಗತಿ
ಸರಕಾರಿ ಪ್ರೌಢಶಾಲೆ ಬಡಗ ಎಕ್ಕಾರು.
ಮಂಗಳೂರು  , ದಕ್ಷಿಣ ಕನ್ನಡ ಜಿಲ್ಲೆ
**********************************************




       
       ಪ್ರತಿಯೊಂದು ಹಳೆ ವರ್ಷ ಮುಗಿದು ಹೊಸ ವರ್ಷ ಬರಬೇಕಾದರೆ ನಮಗೆ ನಾವೇ ಒಂದು ಚೂರು ಪ್ರಶ್ನೆ ಕೇಳಿಕೊಳ್ಳಬೇಕು. ಈ ಒಂದು ವರ್ಷದಲ್ಲಿ ನಾನು ಏನೇನು ಮಾಡಿದೆ ಜನಕ್ಕೆ ಎಷ್ಟು ಒಳ್ಳೇದು ಮಾಡ್ದೆ ನಮಗೆ ಎಷ್ಟು ಜನ ಒಳ್ಳೇದು ಮಾಡಿದ್ರು ಅದನ್ನ ಮರಿಬಾರದು. ಪ್ರತಿವರ್ಷ ಮುಕ್ತಾಯ ವೆಂದರೆ ಮುಕ್ತಾಯವಲ್ಲ ಹೊಸದೊಂದು ಹೊಸತನದ ಆರಂಭ ಅದೇ ರೀತಿ ಹಳೆಯ ಕಹಿ ಕ್ಷಣಗಳೆಲ್ಲ ಅಳಿಯಲಿ ಜಾರಿದ ಸಿಹಿ ಕ್ಷಣಗಳೆಲ್ಲ ಮರಳಿ ಕೈ ಸೇರಲಿ ಇಂತಹ ಖುಷಿಗಳ ನಡುವೆ ನಮ್ಮ ಗುರಿಗಳು ನಮ್ಮೊಂದಿಗೆ ಈ ಇಡೀ ವರ್ಷ ಮುಂದೆ ಸಾಗಲಿ ಎಂಬ ಗುರಿಯಿಂದ ನಾವು ಎಲ್ಲರೂ ಸಾಗೋಣ. ಅದೇ ರೀತಿ ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳೊಂದಿಗೆ ಹೊಸ ಗುರಿಗಳನ್ನು ತೊಡಗಿಸಿಕೊಳ್ಳೋಣ 
 ................ಧನ್ಯವಾದಗಳು..................... 
.....................................ಫಾತಿಮತ್ತುಲ್ ಇಸಾನ 
9ನೇ ತರಗತಿ
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ 
ಸರಕಾರಿ ಪ್ರೌಢಶಾಲೆ ಅದ್ಯಪಾಡಿ 
ಮಂಗಳೂರು , ದಕ್ಷಿಣ ಕನ್ನಡ ಜಿಲ್ಲೆ
**********************************************



ನಾನು ಹೊಸ ವರ್ಷಕ್ಕೆ ಒಂದು ಪದ್ಯ ಬರೆಯುತ್ತೇನೆ ಎಂದು ಯೋಚಿಸಿದ್ದೇನೆ. ನಾನು ಇನ್ನು ಮೊದಲ ಹಾಗೆ ಇರಲ್ಲ. ಇನ್ನು ಪರೀಕ್ಷೆಗೆ ತುಂಬಾ ಓದುತ್ತೇನೆ. ಕೋರೋನದಿಂದ ನಮ್ಮ ಶಾಲೆ ಮುಚ್ಚಿತ್ತು ನಾನು ಹೋಗುತ್ತೇನೆ. ಈ ವರ್ಷ ನಾನು ಶಾಲೆಗೆ ಹೋಗುವೆ. ಜಾತ್ರೆಗೆ ನಾನು ಹೋಗುತ್ತೇನೆ. ಹೊಸ ತಿಂಡಿಗಳನ್ನು ನಾನು ಈ ವರ್ಷಕ್ಕೆ ತಿಂದು ಖುಷಿ ಪಡುತ್ತೇನೆ. 
........................................ ಭವಿಕ್ ಎಸ್.ಪಿ. 
3 ನೇ ತರಗತಿ 
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಕಾವು 
ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*********************************************




     ಎಲ್ಲರಿಗೂ ನಮಸ್ಕಾರ ನನ್ನ ಹೆಸರು ರಕ್ಷಾ . ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಹಳೆ ವರ್ಷದ ಕಷ್ಟ ನೋವುಗಳನ್ನು ಮರೆತು , ಹೊಸ ವರ್ಷದಲ್ಲಿ ಹೊಸ ಕನಸು ಕಾಣೋಣ. ನನ್ನ ಯೋಚನೆ ನಾನು ಒಳ್ಳೆಯ ಚಿತ್ರ ಗಾರ್ತಿಯಾಗಬೇಕು ಎಂಬುದು ನನ್ನ ‌ಕನಸು . ನಾನು ಬಿಡುವಿನ ಸಮಯದಲ್ಲಿ ಕವನ ಬರೆಯುತ್ತೇನೆ , ಚಿತ್ರ ಮಾಡುತ್ತೇನೆ, ಒಳ್ಳೆ ಒಳ್ಳೆಯ ಕಥೆ ಪುಸ್ತಕವನ್ನು ಓದುತ್ತೇನೆ ಮತ್ತು ಕ್ರಾಫ್ಟ್ ಗಳನ್ನು ಮಾಡುತ್ತೇನೆ. ಹಾಗೆ ಹೊಸತನ ಹೊಸ ಬೆಳಕು ಹೊಸ ಕನಸನ್ನು ಕಾಣುವ ಆರಂಭ ವರ್ಷ ಪೂರ್ತಿ ಖುಷಿ ಖುಷಿಯಿಂದ ಇರೋಣ .
ಧನ್ಯವಾದಗಳು..
....................................................... ರಕ್ಷಾ 
9ನೇ ತರಗತಿ.
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು 
ಬಂಟ್ವಾಳ ತಾಲೂಕು. ದಕ್ಷಿಣ ಕನ್ನಡ ಜಿಲ್ಲೆ
**********************************************



      ಎಲ್ಲರಿಗೂ ಹೊಸ ವರ್ಷದ ಹಾರ್ಧಿಕ ಶುಭಾಶಯಗಳು.. ನಾನು ಚರಿತ.
ಕೊರೋನ ಮಹಾಮಾರಿಯಿಂದ ತತ್ತರಿಸಿರುವ ನಾವು ಹೊಸ ವರ್ಷದ ಆರಂಭಕ್ಕೆ ಕಾಯುತ್ತಿದ್ದೇವೆ. ಹೊಸ ವರ್ಷ 2022 ಪ್ರಾರಂಭವಾದ ದಿನದಂದು ನಾವು ಹೊಸ ಭರವಸೆಗಳನ್ನು , ಹೊಸ ನಿರ್ಣಯಗಳನ್ನು ಮನಸ್ಸಿನಲ್ಲಿ ಹೊತ್ತುಕೊಂಡು ಹೊಸ ಆರಂಭಗಳಿಗಾಗಿ ಕಾಯುತ್ತಿದ್ದೇವೆ. ಜೀವನದಲ್ಲಿ ಕೆಲವು ಬದಲಾವಣೆಗಳನ್ನು ತಂದುಕೊಂಡರೆ ಸಂತೋಷವನ್ನು ಪಡೆಯಬಹುದು ಇದರೊಂದಿಗೆ ಪ್ರಗತಿಯ ಹೊಸ ಎತ್ತರಗಳನ್ನು ಸಾಧಿಸಬಹುದು . ಹೊಸ ವರ್ಷ ಒಂದು ಖಾಲಿ ಇರುವ ಪುಸ್ತಕದಂತೆ, ಅದನ್ನು ಉಪಯೋಗಿಸಿದ ಹಾಗೆ ಬಳಕೆಯಾಗುತ್ತದೆ. ಹಾಗೆಯೇ 2022 ರಲ್ಲಿ ನಾವು ಕಂಡಂತಹ ಎಲ್ಲಾ ಕನಸುಗಳನ್ನು ಹಠ ತೊಟ್ಟು ಸಾಧಿಸಬೇಕಾಗಿದೆ....
................................................... ಚರಿತ
9ನೆಯ ತರಗತಿ
ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಯ್ಯೂರು, ಪುತ್ತೂರು , ದಕ್ಷಿಣ ಕನ್ನಡ ಜಿಲ್ಲೆ
*********************************************



     ಎಲ್ಲರಿಗೂ ನಮಸ್ಕಾರ ನನ್ನ ಹೆಸರು ಮಹೇಶ್ವರಿ...... 2019ರಲ್ಲಿ ವಿಶ್ವದಾದ್ಯಂತ ತಲ್ಲಣ ಸೃಷ್ಟಿಸಿದ ಕರೋನ 2020ರಲ್ಲಿ ಭಾರತಕ್ಕೆ ಕಾಲಿಟ್ಟಿತು. ನಮ್ಮ ಬದುಕು 2021 ರಲ್ಲೂ ಕೊರೋನದೊಂದಿಗೆ ಸಾಗಿ ಬಂತು. ಕ್ಯಾಲೆಂಡರ್ ವರ್ಷ 2022ರಲ್ಲಿ ಎಲ್ಲವೂ ಒಳ್ಳೆಯದಾಗಲಿ ಎಂದು ಆಶಿಸುತ್ತೇನೆ. ಈ ವರ್ಷ ನನ್ನ ಬಾಳಿಗೆ ತುಂಬಾ ಮುಖ್ಯ ಕಾರಣ ನಾನು ಈ ವರ್ಷ 10ನೆ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದೇನೆ. ನಾನು ಪರೀಕ್ಷೆಯಲ್ಲಿ ಮೊದಲನೇ ಸ್ಥಾನದಲ್ಲಿ ಉತೀರ್ಣಳಾಗಲು ಪ್ರಯತ್ನ ಪಡುತ್ತೇನೆ. ನಾನು ನನ್ನ ಎಲ್ಲ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸುತ್ತಿದ್ದೆ. ಆದರೆ ಈ ವರ್ಷದಿಂದ ಖಂಡಿತಾ ನನ್ನ ಹುಟ್ಟುಹಬ್ಬವನ್ನು ಗಿಡ ನೆಡುವ ಮೂಲಕ ಆಚರಿಸುತ್ತೇನೆ. ಕಡೆಯದಾಗಿ ಈ ವರ್ಷ ನನ್ನ ಸಮಯವನ್ನು ಟಿವಿ ಮತ್ತು ಮೊಬೈಲ್ ನೊಂದಿಗೆ ವ್ಯರ್ಥ ಮಾಡದೆ ನನ್ನ ಸಮಯನ್ನು ಒಳ್ಳೆಯ ವಿಚಾರಗಳನ್ನು ತಿಳಿಯಲು ಬಳಸುತ್ತೇನೆ. ಧನ್ಯವಾದಗಳು......
.........................................ಮಹೇಶ್ವರಿ ಎಸ್ 
ಹತ್ತನೇ ತರಗತಿ 
ಜೆ ಎಸ್ ಎಸ್ ಸ್ಕೂಲ್ ತಾಳವಾಡಿ 
ಈರೋಡ್ , ತಮಿಳುನಾಡು
**********************************************



      ನಾನು ಆನಂದವಾಗಿ ಇರಬೇಕು. ಮರ , ಗಿಡ ನೆಡಬೇಕು. ಪ್ಲಾಸ್ಟಿಕ್ ಎಲ್ಲಿಯೂ ಬಿಸಾಡುವುದಿಲ್ಲ. ಕಸದ ಬುಟ್ಟಿಗೆ ಹಾಕುತ್ತೇನೆ. ನಾನು ಇನ್ನು ತುಂಬಾ ಕಲಿಯಬೇಕು. ಡಾನ್ಸ್ , ಚಿತ್ರ , ಪದ್ಯ ಎಲ್ಲಾ ಕಲಿಯಬೇಕು. ನಾನು ತುಂಬಾ ವಿದ್ಯಾಭ್ಯಾಸ ಮಾಡಿ ನಮ್ಮ ಶಾಲೆಗೆ ಹೆಸರು ತರಬೇಕು. 
................................................ಸಿಂಚನ ಶೆಟ್ಟಿ 
4ನೇ ತರಗತಿ 
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಸೇಡಿಗುಳಿ 
ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*********************************************



2022 ರಲ್ಲಿ ನನ್ನ
ಯೋಚನೆ ಯೋಜನೆ
ಮಿಕ್ದಾದ್ ಕೆ.ಇ ----------------------------------------------------------
................ ನಾವು 2021 ರಿಂದ 2022ಕ್ಕೆ ಕಾಲಿಡುತ್ತಿದ್ದೇವೆ..... ಕಳೆದ 3 ವರ್ಷಗಳ ಕಾಲ ನಮ್ಮೆಲ್ಲಾ ಸುಖ, ಸಂತೋಷಗಳನ್ನು ಕೊರೋನಾ ಎಂಬ ಮಹಾಮಾರಿ ಕೆಡಿಸಿತ್ತು. 2022ರಿಂದ, ನನ್ನ ಯೋಚನೆ, ನಿಲುವಿನಲ್ಲಿ ಇರುವ ಶಾಲಾ, ಕಾಲೇಜುಗಳ ತೆರೆಯಲಿ ಇನ್ನು ಮುಚ್ಚದಿರಲಿ.
        ಒಂದು ಹೊತ್ತು ಒಂದು ತುತ್ತು ತಿನ್ನಲು ಆಹಾರವಿಲ್ಲದೆ ಅಲೆದಾಡುತ್ತಿರುವ ಹಲವಾರು ಯಾರೇ ಆಗಲಿ ಯಾವುದನ್ನು ನೋಡದೆ ಒಂದು ತುತ್ತು ಅನ್ನ ಕೊಡುವ ಛಲ ನನ್ನಲ್ಲಿರಬೇಕು..
......................... ಕೆ.ಇ.ಮಹಮ್ಮದ್ ಮಿಕ್ದಾದ್
8ನೇ ತರಗತಿ
ಕೆ.ಪಿ.ಎಸ್ ಕೆಯ್ಯೂರು
ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*********************************************


        ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ನನ್ನ ಹೆಸರು ಸೌಭಾಗ್ಯ. ನನಗೆ ತುಂಬಾ ಚೆನ್ನಾಗಿ ಓದಿ ಮಾರ್ಕು ಜಾಸ್ತಿ ತೆಗೆಯಬೇಕೆಂದು ಆಸೆ. ಪುಸ್ತಕಗಳನ್ನು ಓದುವುದೆಂದರೆ ಇಷ್ಟ. ಒಳ್ಳೆಯ ಪುಸ್ತಕಗಳನ್ನು ಓದಬೇಕು. ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆಯಬೇಕೆಂದು ನನ್ನ ಯೋಚನೆ. ನನಗೆ ತಂದೆ-ತಾಯಿ ತಂಗಿ ತಮ್ಮ ಅವರನ್ನೆಲ್ಲ ಚೆನ್ನಾಗಿ ನೋಡಿಕೊಳ್ಳಬೇಕು. ಇದು ನನ್ನ ಯೋಚನೆ.
...............................................ಸೌಭಾಗ್ಯ ಪಿ
6ನೇ ತರಗತಿ
ಪಾಪ್ಯುಲರ್ ಬಂಟ್ಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಮಂಗಳೂರು , ದಕ್ಷಿಣ ಕನ್ನಡ ಜಿಲ್ಲೆ.
**********************************************





      ನಮಸ್ತೆ ನಮ್ಮ ಹೆಸರು ಕೌಶೀಲ. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು------ ನಾನು ಬರೆಯುವದು ನನ್ನ ಯೋಜನೆಯ ಬಗ್ಗೆ. ನನ್ನ ಮೊದಲಿನ ಯೋಜನೆ : ನಾನು ಒಳ್ಳೆಯದಾಗಿ  ಕಲಿತು.... ಒಳ್ಳೆಯ ಗುಣ ನಡೆತೆಯಲ್ಲಿ ನಡೆದು... ಈ ವರ್ಷ ಇನ್ನು ನಾನು sslc ಯಲ್ಲಿ ಪಾಸಾಗಿ ನನಗೆ ಅಂಕ ಬಂದರೆ ನಾನು ಸೈನ್ಸ್ ತೆಗೆದು ಒಳ್ಳೆಯ  ಡಾಕ್ಟರ್ ಆಗಿ ಸಮಾಜ ಸೇವೆಕಿಯಾಗಿ ಸೇವೆ ಸಲ್ಲಿಸುತ್ತೇನೆ.. ಮತ್ತು ನಾಗರಿಕರನ್ನು ಸಂತೋಷ ಪಡಿಸಬೇಕು...... ಎರಡನೇ ಯೋಜನೆ.. ಮೊದಲಿಗಿಂತ ಹೆಚ್ಚಿನ ರೂಪದಲ್ಲಿ ತಾಯಿಗೆ ಮತ್ತು ತಂದೆಗೆ ಸಹಾಯ ಮಾಡಬೇಕು.  ಶಾಲೆಯಲ್ಲಿ ಗ್ರಂಥಾಲಯವನ್ನು ಅಭಿವೃದ್ಧಿ ಪಡಿಸಿ ಅದಕ್ಕೆ ಬೇಕಾಗಿರುವ ಪುಸ್ತಕವನ್ನು ತರಿಸುತ್ತೇನೆ ..... ನಂತರ ಒಂದು ತರಗತಿಯಲ್ಲಿ ಓದುವ ಕೋಣೆಯನ್ನು ಮಾಡುತ್ತೇನೆ. ಅದರಲ್ಲಿ ಎಲ್ಲ ಮಕ್ಕಳು ಬರೆದ ಲೇಖನ ಮತ್ತು ಕವನವನ್ನು ಪ್ರಕಟಿಸುತ್ತೇನೆ. 
       ನಂತರ ಕೈತೋಟ ಮಾಡಿ.... ಅದರಲ್ಲಿ ವಿವಿಧ ತರಹದ ಹೂಗಳನ್ನು ನೆಡುತ್ತೇನೆ.  ಎಲ್ಲ ತರಗತಿಯಲ್ಲಿ ಕಸದ ಬುಟ್ಟಿಯನ್ನು ಕೊಟ್ಟು ಅದರಲ್ಲಿ ಕಸವನ್ನು ಸಂಗ್ರಹಣೆ ಮಾಡಲು ಹೇಳುತ್ತೇನೆ. ಇದೆ ನನ್ನ ಈ ವರ್ಷದ ಕನಸು
.................................................... ಕೌಶೀಲ
9ನೆಯ ತರಗತಿ
ಸರಕಾರಿ ಪ್ರೌಢಶಾಲೆ ನಾರ್ಷ ಮೈದಾನ
ಬಂಟ್ವಾಳ ತಾಲೂಕು ,  ದಕ್ಷಿಣ ಕನ್ನಡ ಜಿಲ್ಲೆ
*********************************************



         ನಮಸ್ತೇ ನನ್ನ ಹೆಸರು ದೀಕ್ಷಾ ಕುಲಾಲ್ 
 2022 ಇಸವಿಯ ನನ್ನ ಕನಸು ಮತ್ತು ಯೋಚನೆ - ಹಳೆಯ ಇಸವಿ ಹೋಗಿ ಮತ್ತೆ ಬರುವ ಹೊಸ ವರ್ಷ ಎಲ್ಲರಿಗೂ ಋಷಿ ನನಗೆ ತುಂಬಾ ಖುಷಿ. ಆದರೆ ಒಂದು ನನ್ನ ಮನಸ್ಸಿನ ಮೂಲೆಯಲ್ಲಿ ಸ್ವಲ್ಪ ಗಾಬರಿ ಅದು ಏನೆಂದರೆ 2022ರಲ್ಲಿ ಯಾವುದೇ ರೀತಿಯ ರೋಗರುಜಿನ ಕಾಯಿಲೆ ಬಾರದೆ ಇರಲಿ ದೇವರೇ!.. ನನ್ನ ಯೋಚನೆ - ಶಾಲೆಯಲ್ಲಿ ನಿಂತುಹೋದ ಸಾಂಸ್ಕೃತಿಕ ಕಾರ್ಯಕ್ರಮ, ಕ್ರೀಡೆಗಳು ಈ ವಷ೯ ಇರಲಿ ಎಂದು ನನ್ನ ಯೋಚನೆ. ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.
........................................ದೀಕ್ಷಾ ಕುಲಾಲ್ 
5ನೇ ತರಗತಿ 
ದ. ಕ. ಜಿ. ಪಂಚಾಯತ್ ಶಾಲೆ ಕಲ್ಲಡ್ಕ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
**********************************************


Ads on article

Advertise in articles 1

advertising articles 2

Advertise under the article