-->
ಅಕ್ಕನ ಪತ್ರ -14ಕ್ಕೆ ಮಕ್ಕಳ ಉತ್ತರ

ಅಕ್ಕನ ಪತ್ರ -14ಕ್ಕೆ ಮಕ್ಕಳ ಉತ್ತರ

ಅಕ್ಕನ ಪತ್ರ -14ಕ್ಕೆ 
ಮಕ್ಕಳ ಉತ್ತರ : ಸಂಚಿಕೆ - 1

    ಮಕ್ಕಳ ಜಗಲಿಯಲ್ಲಿ ಶಿಕ್ಷಕಿ ತೇಜಸ್ವಿ ಅಂಬೆಕಲ್ಲು ಬರೆದಿರುವ ಅಕ್ಕನ ಪತ್ರ: ಸಂಚಿಕೆ -14ನ್ನು ಓದಿ ಜಗಲಿಯ ಮಕ್ಕಳು ಉತ್ತರವನ್ನು ಬರೆದಿದ್ದಾರೆ. ಮಕ್ಕಳು ಸ್ವತ: ಯೋಚನೆ ಮಾಡಬೇಕು , ಸ್ವಂತ ನಾಲ್ಕು ಮಾತುಗಳನ್ನು ಬರೆಯಬೇಕೆನ್ನುವುದು ಅಕ್ಕನ ಪತ್ರದ ಹಿಂದಿರುವ ನಮ್ಮ ಕಲ್ಪನೆ..... ಜಗಲಿಯ ಮಕ್ಕಳೆಲ್ಲ ಬಹಳ ಉತ್ಸಾಹದಿಂದ   ಸ್ಪಂದಿಸುತ್ತಿದ್ದು ..... ಬರೆಯುವ ನಿಟ್ಟಿನಲ್ಲಿ ಬಹಳಷ್ಟು ವಿದ್ಯಾರ್ಥಿಗಳು  ಪ್ರಯತ್ನಿಸುತ್ತಿದ್ದಾರೆ ....  ಇಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಮಕ್ಕಳ ಜಗಲಿಯ ಪರವಾಗಿ ತುಂಬು ಹೃದಯದ ಅಭಿನಂದನೆಗಳು....... ಅಕ್ಕನ ಪತ್ರಕ್ಕೆ ಬರೆದು ಕಳುಹಿಸಿದ ಮಕ್ಕಳ ಉತ್ತರಗಳನ್ನು ಇಲ್ಲಿ ಪ್ರಕಟಿಸಿದ್ದೇವೆ .......


        ನಮಸ್ತೆ,..... ಪ್ರೀತಿಯ ಅಕ್ಕನಿಗೆ ಸಾತ್ವಿಕ್ ಗಣೇಶ್ ಮಾಡುವ ನಮಸ್ಕಾರಗಳು......... ನಿಮ್ಮ ಪತ್ರವನ್ನು ಓದಿದೆನು. ವಿಕ್ರಮಾದಿತ್ಯನ ಆಸ್ಥಾನಕ್ಕೆ ಬಂದ ಬೊಂಬೆ ತಯಾರಕ ತಂದಂತಹ ಮೂರೂ ಬೊಂಬೆಯೂ ನವರತ್ನಗಳದ್ದೇ ಆದರೂ ಕೂಡ ಅದರಲ್ಲಿ ಎಷ್ಟು ವ್ಯತ್ಯಾಸಗಳಿವೆ .
       ಇದರಲ್ಲಿ ನನಗೆ ಮೂರನೆಯ ಬೊಂಬೆಯು ಇಷ್ಟವಾಯ್ತು. ಅದು ತಾನು ಕೇಳಿದ ಒಳ್ಳೆಯ ಮಾತನ್ನು ಕಿವಿಯ ಮತ್ತು ಬಾಯಿಯ ಮೂಲಕ ಹೊರಬಿಡುವುದಿಲ್ಲ. ವಿಷಯ ತಲೆಯಲ್ಲಿ ಇಟ್ಟುಕೊಳ್ಳುತ್ತದೆ.
    ಹಾಗೆಯೇ ನಮ್ಮ ಸುತ್ತಮುತ್ತಲಿನ ಜನರಲ್ಲಿಯೂ ಒಳ್ಳೆಯವರೂ, ಕೆಟ್ಟವರೂ ಇರುತ್ತಾರೆ. "ಬಲ್ಲವನ ಒಡನಾಟ ಬೆಲ್ಲದ ಸಿಹಿಯನ್ನು ಸವಿದಂತೆ, ಅಜ್ಞಾನಿಯ ಒಡನಾಟ ಕಲ್ಲನ್ನು ಎಡವಿ ಬಿದ್ದಂತೆ" ಎಂಬ ಸರ್ವಜ್ಞರ ಮಾತಿನಂತೆ ನಾವು ಯಾವಾಗಲೂ ಒಳ್ಳೆಯವರ ಸಹವಾಸ ಮಾಡಬೇಕು ಮತ್ತು ನಾವು ಒಳ್ಳೆಯ ವಿಷಯವನ್ನು ತಿಳಿದು ಕೊಳ್ಳಬೇಕು. ನಾವು ಜೀವನದಲ್ಲಿ ಒಳ್ಳೆಯ ವಿಚಾರಗಳನ್ನು ಮಾತ್ರ ಸ್ವೀಕರಿಸಿ ಅದರಂತೆ ನಡೆದುಕೊಳ್ಳಬೇಕು. ಆಗ ಮಾತ್ರ ಜೀವನ ಸಾರ್ಥಕ ಹಾದಿಯಲ್ಲಿ ಸಾಗುತ್ತದೆ.
 ................ ಧನ್ಯವಾದಗಳು ಅಕ್ಕಾ,................ 
...................................... ಸಾತ್ವಿಕ್ ಗಣೇಶ್
7ನೇ ತರಗತಿ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ , ಬಜಿರೆ ಬೆಳ್ತಂಗಡಿ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
**********************************************


ನಮಸ್ತೇ ಅಕ್ಕ...... ನಾನು ನಿಮ್ಮ ಮಮತೆಯ ತಂಗಿ ದೀಕ್ಷಾ ಕುಲಾಲ್. ನೀವು ಬರೆದ ಕಥೆ ತುಂಬಾ ಚೆನ್ನಾಗಿತ್ತು. ನನಗೆ ಓದಿ ತುಂಬಾ ಸಂತೋಷವಾಯಿತು. ಈ ಕಥೆಯಲ್ಲಿ ನನಗೆ ಮೂರನೇಯ ಗೊಂಬೆ ಇಷ್ಟವಾಯಿತು ಅಕ್ಕ. 
ಯಾಕೆಂದರೆ: ಮೂರನೆಯ ಗೊಂಬೆಯು ಎರಡನೆಯ ಹಾಗೂ ಮೊದಲನೆಯ ಗೊಂಬೆಯ ಹಾಗೆ ಹೇಳಿದ ಬುದ್ಧಿ ಮಾತನ್ನು ಕೇಳಿ ಬಾಯಿಂದ ಅಥವಾ ಕಿವಿಯಿಂದ ಹೊರಬಿಡುತ್ತಿರಲಿಲ್ಲ , ಬದಲಾಗಿ ತಲೆಯಲ್ಲಿ ಇಟ್ಟುಕೊಂಡು ನಡೆಯುತ್ತಿತ್ತು. ಈಗಿನ ಜನರು ಹಿರಿಯರು ಹೇಳಿದ ಒಳ್ಳೆಯ ಬುದ್ಧಿ ಮಾತನ್ನು ಒಂದು ಕಿವಿಯಲ್ಲಿ ಕೇಳಿ ಇನ್ನೊಂದು ಕಿವಿಯಿಂದ ಹೊರಬಿಡುತ್ತಾರೆ. ನಿಮ್ಮ ಮುಂದಿನ ಕಥೆಗೆ ಕಾಯುತ್ತಿರುತ್ತೇನೆ. ಧನ್ಯವಾದಗಳು ಅಕ್ಕ .
...................................... ದೀಕ್ಷಾ ಕುಲಾಲ್ 
5ನೇ ತರಗತಿ 
ದ. ಕ. ಜಿ ಪಂ. ಹಿರಿಯ 
ಪ್ರಾಥಮಿಕ ಶಾಲೆ , ಕಲ್ಲಡ್ಕ 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
**********************************************



ನಮಸ್ತೆ ಅಕ್ಕ.... ನಿಮ್ಮ ಎಲ್ಲ ಪತ್ರಗಳು ನಮಗೆ ಇಷ್ಟವಾದವು.. ಅಕ್ಕ ಇತ್ತೀಚಿಗೆ... ನಮ್ಮಂತವ ಮಕ್ಕಳಿಗೆ... ಪ್ರೀತಿ ತೋರಿಸಿ.. ಅಪ್ಪ, ಅಮ್ಮ ಕಷ್ಟ ಸುಖದ ಬಗ್ಗೆ... ಅರಿವೇ ಇರೋದಿಲ್ಲ. ಯಾವದೇ ವಸ್ತುಗಳನ್ನ ಬೇಕು ಎನ್ನುವ ಮೊದಲೇ... ಅಪ್ಪ ಅಮ್ಮ ಕೊಡಿಸಿರುತ್ತಾರೆ... ಇದರಿಂದ ನಮಗೆ ಯಾವದರ ಬೆಲೆಯೂ ಗೊತ್ತಾಗುವುದಿಲ್ಲ... ಜೊತೆಗೆ... ಸ್ವಂತವಾಗಿ ಯೋಚನೆ ಮಾಡೋಕೆ ಅವಕಾಶಗಳೆ ಇರೋಲ್ಲ... ನಿಮ್ ಈ ಪತ್ರದಲ್ಲಿ... 3 ಬೊಂಬೆಗಳ ರೀತಿ ಯೋಚಿಸುತ್ತೇವೆ.... ಕೆಲವು ಸಂದರ್ಭದಲ್ಲಿ ಅಪ್ಪ, ಅಮ್ಮನ ಮಾತು ಮೀರಿದರು... ಗುರುಗಳ ಮಾತು ಮೀರದಿಲ್ಲ... ಮೂರನೇ ಬೊಂಬೆ ನಮಗೆ... ತುಂಬಾ ಇಷ್ಟವಾಯಿತು... ನಮಗೆ ಸಾಧ್ಯವಾದಷ್ಟು... ಗುರು ಹಿರಿಯರ ಮಾತು ಕೇಳಿ.. ಅದರಂತೆ ಜೀವನದಲ್ಲಿ ನಡಿಯಲು ಪ್ರಯತ್ನಿಸುತ್ತೇನೆ... ಧನ್ಯವಾದಗಳು ಅಕ್ಕ...............
...............................ದೀಕ್ಷಾ M , ದೀಪ್ತಿ. M 
2ನೇ ತರಗತಿ 
ಕೇಂದ್ರೀಯ ವಿದ್ಯಾಲಯ ಮಾದಾಪುರ.. 
ಚಾಮರಾಜ ನಗರ ಜಿಲ್ಲೆ... 
**********************************************



   ನಾನು ಉಮಾವತಿ........ ಅಕ್ಕನ ಪತ್ರವನ್ನು ಓದಿದೆ, ತುಂಬಾ ಚೆನ್ನಾಗಿ ಕಥೆಯನ್ನು ಬರೆದಿದ್ದೀರಿ. ನನಗೆ ಈ ಕಥೆಯಲ್ಲಿ ಮೂರನೆಯ ಬೊಂಬೆ ತುಂಬಾ ಇಷ್ಟವಾಯಿತು. ಏಕೆಂದರೆ ಈ ಬೊಂಬೆಯ ಗುಣವು ಹಿರಿಯರು ಹೇಳಿದ ಮಾತನ್ನು ಕೇಳಿ ತಲೆಯಲ್ಲಿಟ್ಟುಕೊಂಡು ಅ ರ್ಥೈಸಿಕೊಳ್ಳುತ್ತದೆ. ಈ ಜಗತ್ತಿನಲ್ಲಿ ಮೂರು ತರದ ಬೊಂಬೆಗಳು ಇದೆ. ಹಿರಿಯರು ಹೇಳಿದ ಮಾತನ್ನು ಒಂದು ಕಿವಿಯಲ್ಲಿ ತೆಕ್ಕೊಂಡು ಇನ್ನೊಂದು ಕಿವಿಯಲ್ಲಿ ಬಿಡುವಂತವರು, ಮತ್ತೊಂದು ಹಿರಿಯರು ಹೇಳಿದ ಮಾತನ್ನು ಕೇಳಿಸಿಕೊಂಡು ಇನ್ನೊಬ್ಬರಿಗೆ ಹೇಳುವಂತವರು, ಇನ್ನೊಂದು ಹಿರಿಯರು ಹೇಳಿದ ಮಾತನ್ನು ಕೇಳಿಸಿಕೊಂಡು ತಲೆಯಲ್ಲಿ ಇಟ್ಟುಕೊಂಡಿರುತ್ತಾರೆ. ಹೀಗೆ ಜಗತ್ತಿನಲ್ಲಿ ಮೂರು ತರದ ಜನರಿದ್ದಾರೆ. ನಾನು ಮೂರನೆಯ ಗೊಂಬೆಯ ಹಾಗೆ ವರ್ತಿಸಲು ಪ್ರಯತ್ನಿಸುತ್ತೇನೆ.
.......................................... ಉಮಾವತಿ 
9 ನೇ ತರಗತಿ  
ಸರ್ಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
**********************************************


ಪ್ರೀತಿಯ ಅಕ್ಕನಿಗೆ ವೈಷ್ಣವಿ ಮಾಡುವ ನಮಸ್ಕಾರಗಳು...... ನಿಮ್ಮ ಪತ್ರವನ್ನು ಓದಿ ನನಗೆ ಸಂತೋಷವಾಯಿತು. ನೀವು ಕ್ಷೇಮವಾಗಿರುವಿರಿ ಎಂದು ಭಾವಿಸುತ್ತೇನೆ. ನಿಮ್ಮ ಕ್ಷೇಮದ ಬಗ್ಗೆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಕಥೆಯಲ್ಲಿರುವ ಮೂರು ಗೊಂಬೆಗಳಲ್ಲಿ ಮೂರನೇ ಗೊಂಬೆಯೇ ಬಹಳ ಉತ್ತಮ. ಆ ಗೊಂಬೆಯು ಜನರ ಒಳ್ಳೆಯತನವನ್ನು ತಿಳಿಸುತ್ತದೆ. ಜನರು ತಮಗೆ ಸಿಕ್ಕಿದ ಒಳ್ಳೆಯ ಜ್ಞಾನವನ್ನು ತಮ್ಮಲ್ಲೇ ಇಟ್ಟುಕೊಂಡು ಅದರಂತೆ ನಡೆಯುವುದು ಉತ್ತಮ ಜೀವನದ ಲಕ್ಷಣವಾಗಿದೆ. ನಾವೆಲ್ಲರೂ ಒಂದು ಮತ್ತು ಎರಡನೇ ಗೊಂಬೆಯ ರೀತಿಯಂತೆ ನಡೆಯದೆ, ಮೂರನೇ ಗೊಂಬೆಯ ರೀತಿಯಂತೆ ನಡೆದರೆ ನಮ್ಮ ಜೀವನವು ಪರಿಪೂರ್ಣವಾಗುವುದು. ನಿಮ್ಮ ಮುಂದಿನ ಪತ್ರಕ್ಕಾಗಿ ಕಾಯುತ್ತಿರುತ್ತೇನೆ.
................ ಧನ್ಯವಾದಗಳೊಂದಿಗೆ ................
......................................ವೈಷ್ಣವಿ ಕಾಮತ್ 
5ನೇ ತರಗತಿ. 
ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ , ಕಲ್ಲಡ್ಕ 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ.
**********************************************



ಮಕ್ಕಳ ಜಗಲಿ..... ಅಕ್ಕನ ಪತ್ರ..14
      ಪ್ರೀತಿಯ ಅಕ್ಕ....ನಾನು ಲಹರಿ ಜಿ.ಕೆ.... ಅಕ್ಕಾ ಇಂದಿನ ನಿಮ್ಮ ಗೊಂಬೆಯ ಕತೆ ತುಂಬಾ ಚೆನ್ನಾಗಿದೆ.... ತುಂಬಾ ಇಷ್ಟವಾಯಿತು. ಆ ಮೂರನೆಯ ಗೊಂಬೆ ನನಗೆ ಇಷ್ಟವಾಯಿತು. ಏಕೆಂದರೆ ಅದು ಒಳ್ಳೆಯ ವಿಷಯಗಳನ್ನು ತನ್ನಲ್ಲಿಯೇ ಅಳವಡಿಸಿಕೊಂಡು ಅದರಂತೆ ನಡೆದುಕೊಳ್ಳುತ್ತದೆ. ನಾವೂ ಅದರಂತೆ ಇರಬೇಕು. ಒಳ್ಳೆಯ ನಡವಳಿಕೆ ನಮ್ಮ ಚಾರಿತ್ರ್ಯವನ್ನು ಬೆಳಗುತ್ತದೆ.... ಅಲ್ವಾ ಅಕ್ಕಾ.... ಒಳ್ಳೆಯ ನೀತಿ ಕತೆ.... ಧನ್ಯವಾದಗಳು ಅಕ್ಕಾ.... ನಿಮ್ಮ ಮುಂದಿನ ಪತ್ರಕ್ಕೆ ಕಾಯುವೆನು....
.............................................ಲಹರಿ ಜಿ.ಕೆ.
7ನೇ ತರಗತಿ
ತುಂಬೆ ಸೆಂಟ್ರಲ್ ಸ್ಕೂಲ್ ತುಂಬೆ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
**********************************************


ಪ್ರೀತಿಯ ಅಕ್ಕನಿಗೆ ಸ್ರಾನ್ವಿ ಮಾಡುವ ನಮಸ್ಕಾರ.......... ಅಕ್ಕ ನಿಮ್ಮ ಪತ್ರ ಓದಿದೆ.
ಕತೆ ಬಹಳ ಇಷ್ಟವಾಯಿತು. ನಾನು ಬರೆಯುವುದು ಸರಿಯಾಗಲಿಕ್ಕಿಲ್ಲ ಹೇಗೆ ಬರೆಯಬೇಕೆಂದು ಕೂಡ ಗೊತ್ತಿಲ್ಲ. ನನಗೆ ಕತೆಯಲ್ಲಿರುವ ಮೂರನೆಯ ಬೊಂಬೆ ಇಷ್ಟವಾಯಿತು. ನಾವು ಕೂಡ ಗುರು ಹಿರಿಯರು ಹೇಳಿದ ಒಳ್ಳೆಯ ವಿಷಯಗಳನ್ನು ಮನಸ್ಸಲ್ಲಿ ಇರಿಸಿಕೊಂಡು , ಅದರಂತೆಯೇ ನಡೆಯಬೇಕು, ಒಳ್ಳೆಯ ಜನಗಳ ಸಹವಾಸ ಮಾಡಬೇಕು. ಈ ಕತೆ ಕೇಳುವಾಗ ಇನ್ನೊಂದು ವಿಷಯ ನೆನಪಿಗೆ ಬರುತ್ತದೆ. ಕೆಲವರು ನಮಗೆ ಯಾರಾದರೂ ಏನಾದರೂ ಒಳ್ಳೆಯ ಮಾತು ಹೇಳಿದರೆ ನಾವು ಅದನ್ನು ನಮ್ಮ ಮನಸ್ಸಲ್ಲೇ ಇಟ್ಟು ಅನುಸರಿಸಬೇಕು. ಆದ್ದರಿಂದ ಮೂರನೇ ಬೊಂಬೆಗೆ ಬೆಲೆ ಜಾಸ್ತಿ. ಧನ್ಯವಾದಗಳು ಅಕ್ಕ. 
............................................ಸ್ರಾನ್ವಿ ಶೆಟ್ಟಿ    
8ನೇ ತರಗತಿ 
ಓಂ ಜನಹಿತಾಯ ಇಂಗ್ಲಿಷ್ ಮೀಡಿಯಂ 
ಸ್ಕೂಲ್ ಗುಡ್ಡೆಯಂಗಡಿ 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
**********************************************


ನಾನು ಲಿಜಿತ....... ಪ್ರೀತಿಯ ಅಕ್ಕನಿಗೆ ನಮಸ್ಕಾರಗಳು....... ಕಥೆ ತುಂಬಾ ಇಷ್ಟ ಆಯಿತು. ನನಗೆ ಕಥೆಯಲ್ಲಿ ಮೂರನೇ ಗೊಂಬೆ ಇಷ್ಟ ಆಯಿತು. ಯಾಕೆಂದರೆ ಅದು ಕಿವಿಯಲ್ಲಿ ಕೇಳಿದ್ದನ್ನು ಇನೊಂದು ಕಿವಿಯಲ್ಲಿ ಬಿಡದೆ ಬಾಯಿ ಯಲ್ಲಿಯು ಹೇಳದೆ ತಲೆಯಲ್ಲಿಯೆ ಉಳಿಸುತ್ತದೆ.
ನಾವು ಹೆಚ್ಚಾಗಿ ಮೊದಲನೇ ಮತ್ತು ಎರಡನೇ ಗೊಂಬೆಯ ತರ ಮಾಡುತ್ತೇವೆ. ಅದು ತಪ್ಪು.. ನಾನು ಮೂರನೇ ಗೊಂಬೆ ತರ ಪ್ರಾಮಾಣಿಕವಾಗಿರಲು ಇಷ್ಟಪಡುತ್ತೇನೆ.
............................................ ಲಿಜಿತಾ 
9ನೇ ತರಗತಿ 
ಸರಕಾರಿ ಪ್ರೌಢಶಾಲೆ ಮಾಣಿಲ 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
**********************************************



ಅಕ್ಕನ ಪತ್ರ - 14 : ನಮಸ್ತೇ ಅಕ್ಕ,.... ನಾನು ಪ್ರಣವ್ .......... ನೀವು ಹೇಳಿದ ಬೊಂಬೆಯ ಕಥೆ ಚೆನ್ನಾಗಿತ್ತು. ನಾನು ಮೂರನೆಯ ಬೊಂಬೆಯಾಗಲು ಇಷ್ಟಪಡುತ್ತೇನೆ, ಏಕೆಂದರೆ "ನಾನು ಓದಿ ಕಲಿತು, ಚಿತ್ರ ಬರೆದು ಜ್ಞಾನವಂತನಾಗಿ ನನ್ನ ಅಮ್ಮನಿಗೂ, ದೇಶಕ್ಕೂ ಕೀರ್ತಿ ತರಬೇಕು" ಎಲ್ಲರ ಆಶೀರ್ವಾದ ಇರಲಿ.
................... ವಂದನೆಗಳು,.....................
......................................ಪ್ರಣವ್ ದೇವ್ .
ತರಗತಿ - ೧
ಲೇಡಿ ಹಿಲ್ ಇಂಗ್ಲೀಷ್ ಹೈಯರ್ ಪ್ರೈಮರಿ ಸ್ಕೂಲ್ - ಮಂಗಳೂರು - ದ.ಕ ಜಿಲ್ಲೆ
**********************************************


          ನಮಸ್ತೆ ಅಕ್ಕ ನನ್ನ ಹೆಸರು ಹಿತಶ್ರೀ........ ಅಕ್ಕ ನಿವು ಬರೆದ ಕಥೆಯು ನನಗೆ ತಂಬಾನೆ ಇಷ್ಟವಾಯಿತು. ನಾವು ಯಾವಾಗಲು ಸಹ 3ನೆಯ ಗೊಂಬೆಯ ಹಾಗೆ ಆಗಬೇಕು. ಏಕೆಂದರೆ ನಾವು ಶಿಕ್ಷಕರು ಹಾಗೂ ಪೋಷಕರ ಹೇಳುವ ಒಳ್ಳೆಯ ಮಾತನ್ನು ನಮ್ಮ ಜ್ಞಾನದಲ್ಲಿ ಇಟ್ಟುಕೊಂಡು ಅದರ ಹಾಗೆಯೆ ನಡೆದರೆ ನಮಗೆ 3ನೆಯ ಬೊಂಬೆಯಂತೆ ಆಗಬಹುದು....... ಬೊಂಬೆಯ ಕಥೆಯು ಚೆನ್ನಾಗಿತ್ತು ...... ದನ್ಯವಾದ..... ಮುಂದಿನ ಪತ್ರಕ್ಕಾಗಿ ಕಾಯುತ್ತಿರುವೆ  
.................................................ಹಿತಶ್ರೀ
4ನೇ ತರಗತಿ 
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ , ಬಜಿರೆ ಬೆಳ್ತಂಗಡಿ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
**********************************************


       ನಮಸ್ತೆ ಅಕ್ಕ .. ನಾನು ರಕ್ಷಾ.. ಮೂರು ಬೊಂಬೆಗಳ ಕಥೆ ತುಂಬಾ ಚೆನ್ನಾಗಿತ್ತು. ನನಗೆ ಮೂರು ಬೊಂಬೆಯಲ್ಲಿ ಮೂರನೇ ಬೊಂಬೆ ತುಂಬಾ ಇಷ್ಟವಾಯಿತು. ಯಾಕೆಂದರೆ ಮೂರನೇ ಬೊಂಬೆಯ ಕಿವಿಯಲ್ಲಿ ಹಾಕಿದ ದಾರ ಕಿವಿಯಿಂದಾಗಲಿ ಅಥವಾ ಬಾಯಿಯಿಂದಾಗಲಿ ಹೊರಬರುವುದಿಲ್ಲ ಬದಲಾಗಿ ತಲೆಯಲ್ಲಿಯೇ ಸುತ್ತಿಕೊಳ್ಳುತ್ತದೆ. ಅದೇ ರೀತಿ ನಾವು ಒಳ್ಳೆಯ ವಿಚಾರವನ್ನು ತಲೆಯಲ್ಲಿ ಇಟ್ಟುಕೊಂಡು ನಡೆದರೆ ನಮ್ಮ ಮುಂದಿನ ಭವಿಷ್ಯವು ಒಳ್ಳೆಯದಾಗುತ್ತದೆ. ನಾನು ಕಥೆಯಲ್ಲಿ ತುಂಬಾ ವಿಚಾರವನ್ನು ತಿಳಿದುಕೊಂಡೆ. ಧನ್ಯವಾದಗಳು ಅಕ್ಕ ..
......................................ರಕ್ಷಾ 
9ನೇ ತರಗತಿ 
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
**********************************************



     ಪ್ರೀತಿಯ ಅಕ್ಕನಿಗೆ ಹಿತಾಶ್ರೀ ಮಾಡುವ ನಮಸ್ತೆ.... ಅಕ್ಕ ನೀವು ಕಳಿಸಿದ ಕಥೆಯನ್ನು ಸಂಪೂರ್ಣವಾಗಿ ಓದಿದ್ದೇನೆ. ನನಗೆ ಜ್ಞಾನ ತುಂಬುವಂತಹ ಕಥೆಯಾಗಿದೆ. ನನಗೆ ಕಥೆಯಲ್ಲಿ ಮೂರನೇ ಬೊಂಬೆ ತುಂಬಾ ಇಷ್ಟವಾಯಿತು ಯಾಕೆಂದರೆ ಹಿರಿಯರು ಹೇಳಿದ ಬುದ್ಧಿ ಮಾತುಗಳನ್ನು ಕೇಳಿಸಿಕೊಂಡು ಅದರಲ್ಲಿರುವ ಉತ್ತಮ ಅಂಶಗಳನ್ನು ಅಳವಡಿಸಿಕೊಂಡರೆ ಜೀವನದಲ್ಲಿ ಮುಂದುವರೆಯಲು ಸಾಧ್ಯವಾಗುತ್ತದೆ. ನಾನು ಮೂರನೇ ಬೊಂಬೆ ಯಂತೆ ಇರಲು ಪ್ರಯತ್ನಿಸುತ್ತೇನೆ. ಇಂತಿ ನಿಮ್ಮ
.......................................... ಹಿತಾಶ್ರೀ.ಪಿ 
6ನೇ ತರಗತಿ 
ಶ್ರೀ ವೇಣುಗಪಾಲ ಅ. ಹಿ . ಪ್ರಾ . ಶಾಲೆ ಪಕಳಕುಂಜ ಮಾಣಿಲ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
**********************************************


            ನಮಸ್ತೆ ಅಕ್ಕ ನಿಮ್ಮ ಪ್ರೀತಿಯ ತಂಗಿ ಧೃತಿ.  ಈ ಮೂರು ಬೊಂಬೆಯಲ್ಲಿ ನನಗೆ ಮೂರನೇ ಬೊಂಬೆ ಬಹಳ ಇಷ್ಟವಾಯಿತು. ಏಕೆಂದರೆ ಅದು ತಾನು ಕೇಳಿದ ಒಳ್ಳೆಯ ಮಾತುಗಳನ್ನು ಕಿವಿಯಲ್ಲಿ ಹೊರ ಬಿಡುವುದಿಲ್ಲ ಬದಲಾಗಿ ಇಟ್ಟುಕೊಳ್ಳುತ್ತದೆ. ವಿದ್ಯಾರ್ಥಿಗಳಾದ ನಾವು ಸಹ ಹಿರಿಯರು ಹೇಳಿದ ಒಳ್ಳೆಯ ಮಾತುಗಳನ್ನು, ಸ್ಪೂರ್ತಿಯ ಮಾತುಗಳನ್ನು ಒಂದುಕಿವಿಯಿಂದ ಕೇಳಿ ಇನ್ನೊಂದು ಕಿವಿಯಿಂದ ಬಿಡುವುದಾಗಲಿ ಅಥವಾ ಕಿವಿಯಿಂದ ಕೇಳಿ ಬಾಯಿಂದ ಹೊರಬಿಡುವುದಾಗಲಿ ಮಾಡಬಾರದು. ನಾವು ಮೂರನೇ ಗೊಂಬೆ ತರ ಹಿರಿಯರು ಹೇಳಿದ ಮಾತನ್ನು ತಲೆಯಲ್ಲಿ ಇಟ್ಟುಕೊಂಡು  ಅದನ್ನು ಪಾಲಿಸಬೇಕು. ಒಳ್ಳೆಯವರ ಸಹವಾಸ ನಮಗೆ ಎಂದೆಂದಿಗೂ ಒಳ್ಳೆಯದನ್ನೇ ಮಾಡುತ್ತದೆ. ಧನ್ಯವಾದಗಳು ಅಕ್ಕ. ಮುಂದಿನ ಪತ್ರಕ್ಕಾಗಿ ಕಾಯುತ್ತಿರುತ್ತೇನೆ. 
..........................................ಧೃತಿ 
9 ನೇ ತರಗತಿ 
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು 
ಬಂಟ್ವಾಳ ತಾಲೂಕು ,  ದಕ್ಷಿಣ ಕನ್ನಡ ಜಿಲ್ಲೆ.
**********************************************







Ads on article

Advertise in articles 1

advertising articles 2

Advertise under the article