
ಮಕ್ಕಳ ಕವನಗಳು : ಧೃತಿ 9 ನೇ ತರಗತಿ
Thursday, December 23, 2021
Edit
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮಳೆ
-----------
ಆಕಾಶದಿಂದ ಬೀಳೋ ಮಳೆ
ಮಳೆಯಿಂದ ಬೆಳೆಯುವುದು ಬೆಳೆ
ತಂಪಾಗುವುದು ಇಳೆ
ಮಳೆ ಬರಲಿ ಮಳೆ
.........................................ಧೃತಿ
ಚಿಟ್ಟೆ
-------------
ಸುಂದರವಾದ ಚಿಟ್ಟೆ
ರಂಗು-ರಂಗಿನ ಚಿಟ್ಟೆ
ಮೈಮೇಲೆ ಬಣ್ಣದ ಬಟ್ಟೆ
ಕೈಗೆ ಸಿಗದ ಚಿಟ್ಟೆ
.........................................ಧೃತಿ
ಶಾಲೆ
-------------
ನಮ್ಮ ಶಾಲೆ ಸುಂದರ
ಅದುವೇ ದೇವ ಮಂದಿರ
ವಿದ್ಯೆ ಬುದ್ಧಿ ನೀಡುವ
ಸುಜ್ಞಾನ ಮಂದಿರ
.........................................ಧೃತಿ
ಆಕೃತಿ
-----------
ಕಲ್ಲನ್ನು ಕೆತ್ತಿದರೆ ಆಕೃತಿ
ನಮ್ಮ ಭಾಷೆ ಸಂಸ್ಕೃತಿ
ನಮ್ಮ ಸುತ್ತಲಿರುವ ಪ್ರಕೃತಿ
.........................................ಧೃತಿ
9 ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
****************************************
ನೆನಪು
-----------------
ಕಳೆದು ಹೋಯಿತು ಬಾಲ್ಯದ ದಿನಗಳು
ನೆನಪಾಗಿಯೇ ಉಳಿದು ಬಿಟ್ಟಿತು
ಆ ಸಿಹಿಯಾದ ಕ್ಷಣಗಳು..!!
ಗೆಳತಿಯರೊಂದಿಗೆ ಆಡಿದ ಆಟಗಳು
ಬಾಯಿಯು ಚಪ್ಪರಿಸಿ ತಿಂದ ಹುಳಿಗಳು..!!
ಅಡಗಿ ಕುಳಿತು ಆಡಿದ ಕಣ್ಣಾಮುಚ್ಚಾಲೆ ಆಟವು
ಮರದಡಿಯಲಿ ಇದ್ದ ನೊಣಗಳ ಕಾಟವು..!!
ಬೆಟ್ಟ ಗುಡ್ಡದಲಿ ಓಡಿ
ಕಾಯಿ ಹಣ್ಣುಗಳನ್ನು ತಿಂದು
ಓಡಿ ಓಡಿ ಮನೆಗೆ ಬಂದಾಗ
ಅಮ್ಮನ ಬೈಗುಳ ,ಅಪ್ಪನ ಪ್ರೀತಿ...
ಆ ನೆನಪೆಲ್ಲವು ಬಲು ಹಿತ
ಮರೆಯಲಾಗದು ಕಳೆದ ಬಾಲ್ಯದ ನೆನಪು....!!
.........................................ಧೃತಿ
9 ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
****************************************
ದೀಪಾವಳಿ
-----------------------
ಬೆಳಕಿನ ಹಬ್ಬ ದೀಪಾವಳಿ
ನಗುವಿರಲಿ ಎಲ್ಲರ ಮೊಗದಲಿ
ಬಣ್ಣ ಬಣ್ಣದ ಬೆಳಕಿನಲಿ
ಹೊಸ ಹೊಸ ಉಡುಗೆ ತೊಡುಗೆಯಲಿ
ಅರಿವನು ಮೂಡಿಸುವ ಹಣತೆಯ ಸಾಲು
ತೋರುವುದು ಬದುಕ ಗೆಲುವಿನ ಮೈಲು
ಅಜ್ಞಾನದ ಅಂಧಕಾರವ ನಿವಾರಿಸಲು
ಹಚ್ಚೋಣ ದೀಪಗಳ ಸಾಲು
ಮೂಡಲಿ ಖುಷಿಯ ಚಿತ್ತಾರ
ದೂರವಾಗಲಿ ಬದುಕಿನ ಅಂಧಕಾರ
ಬೆಳಗಲಿ ಜ್ಞಾನದ ಮಂದಾರ
ತುಂಬಲಿ ಮನೆ-ಮನಗಳಲ್ಲಿ ಸಡಗರ....!!
...................................................ಧೃತಿ
9 ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
****************************************