ಮಕ್ಕಳ ಕವನಗಳು : ಗ್ರೀಷ್ಮಾ 8ನೇ ತರಗತಿ
Thursday, December 23, 2021
Edit
ಗ್ರೀಷ್ಮಾ
8ನೇ ತರಗತಿ
ಸ. ಪ್ರೌ. ಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ತಂದೆ-ತಾಯಿಯ ಕಾಳಜಿ
------------------------------------
ತಂದೆ-ತಾಯಿಯರು ದೇವರಿಗೆ ಸಮಾನ
ತೋರುವರು ಕಾಳಜಿಯ ಪ್ರತೀ ದಿನ
ತಾಯಿಯ ಪ್ರೀತಿಯೂ ತಂದೆಯ ಒಲವೂ
ಎಂದೆಂದೂ ಮಕ್ಕಳ ಜೊತೆಯೇ ಇರುವುದು
ಮಕ್ಕಳಿಗೋಸ್ಕರ ಕಷ್ಟಪಟ್ಟು ದುಡಿಯುವರು
ಮಕ್ಕಳು ತಪ್ಪು ಮಾಡಿದರೆ ತಿಳಿ ಹೇಳುವರು
ಮಕ್ಕಳ ಇಚ್ಛೆಗಳನ್ನು ಪೂರ್ತಿ ಮಾಡುವರು
ತಮ್ಮ ಕಷ್ಟಗಳನ್ನು ಅಡಗಿಸುವರು...!!
ಮಕ್ಕಳ ತುಂಟತನವನ್ನು ನೋಡುತ್ತಾ
ತಮ್ಮ ನೋವುಗಳನ್ನು ಮರೆಯುತ್ತಾ
ಮಕ್ಕಳ ಬೆಳವಣಿಗೆಯನ್ನು ನೋಡುತ್ತಾ
ದುಃಖವನ್ನು ಮರೆತು ಖುಷಿಪಡುವರು...!!
.................................................. ಗ್ರೀಷ್ಮಾ
8ನೇ ತರಗತಿ
ಸ.ಪ್ರೌ. ಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
****************************************
ಸ್ವತಂತ್ರ ಭಾರತ
------------------------------
ಬ್ರಿಟಿಷರ ಸಂಕೋಲೆಯನ್ನು ಬಿಡಿಸಲು
ಬಿಳಿಯರ ಪಂಜರದಿಂದ ಹೊರಬರಲು
ಆಂಗ್ಲರ ಸೇನೆಯನ್ನು ಹಿಮ್ಮೆಟ್ಟಿಸಲು
ಪ್ರಯತ್ನಿಸಿದವರು ಭಾರತಾಂಬೆಯ ಮಕ್ಕಳು
ದೇಶಭಕ್ತಿಯನು ಪಸರಿಸುತಲಿ
ಅಹಿಂಸಾ ತತ್ವವನು ಹಬ್ಬಿಸುತಲಿ
ಚಾಟಿಯ ಏಟನು ಸಹಿಸುತಲಿ
ಗುಂಡಿನ ದಾಳಿಯನು ಎದುರಿಸುತಲಿ
ಸ್ವತಂತ್ರಕ್ಕಾಗಿ ಬಲಿದಾನ ಮಾಡಿ
ದೇಶಸೇವೆಯಲಿ ಹುತಾತ್ಮರಾಗಿ
ಫಲವಾಗಿ ಸಿಕ್ಕಿದ ಸ್ವಾತಂತ್ರ್ಯ
ಎಂದೆಂದಿಗೂ ಶಾಶ್ವತ
ಎಲ್ಲಾ ಕ್ಷೇತ್ರದಲ್ಲೂ ಪ್ರಗತಿ ಕಾಣುತ
ವಿಶ್ವದಲ್ಲಿ ಮುಂದುವರೆದ ಭಾರತ
ಅಭಿವೃದ್ಧಿಗಳನ್ನು ಸಾಧನೆಗಳನ್ನು ಮಾಡುತ
ಮುನ್ನಡೆಯುತಲಿ ಭಾರತ
ಬಿಳಿಯರಿಂದ ಮುಕ್ತಿಪಡೆದ ದೇಶ
ಸ್ವತಂತ್ರದಿಂದ ಬದುಕಬಹುದಾದ ದೇಶ
ಅಮೃತ ಮಹೋತ್ಸವದ ಸಂಭ್ರಮದಲ್ಲಿ
ನಮ್ಮ ಪ್ರೀತಿಯ ದೇಶ..!!
.................................................. ಗ್ರೀಷ್ಮಾ
8ನೇ ತರಗತಿ
ಸ.ಪ್ರೌ. ಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
****************************************
ಸ್ನೇಹ
---------------
ಕಷ್ಟ ಸುಖದಲಿ ಒಟ್ಟಿಗೆ ಸೇರಿ
ನೋವು ನಲಿವಿನಲಿ ಜೊತೆಗೂಡಿ
ಮೇಲು ಕೀಳುಗಳೆಂಬ ಭೇದವಿಲ್ಲದೆ
ಸಿರಿತನ ಬಡತನಗಳೆಂಬ ಭಾವವಿಲ್ಲದೆ
ಗೆಳೆಯರ ನಡುವೆ ದ್ವೇಷವಿಲ್ಲದೆ
ಗೆಳೆತನದ ಬಗ್ಗೆ ಅಹಂಕಾರವಿರದೆ
ಗೆಳೆತನದಲ್ಲಿ ದುರ್ಗುಣಗಳಿಲ್ಲ
ಗೆಳೆತನದಲ್ಲಿ ಸಂಕೋಚಗಳಿಲ್ಲ
ಗೆಳೆತನವು ಅದ್ಭುತವಾದುದು
ಸ್ನೇಹವು ಅಮರವಾದುದು...!!!
.................................................. ಗ್ರೀಷ್ಮಾ
8ನೇ ತರಗತಿ
ಸ.ಪ್ರೌ. ಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
****************************************
ಪೋಲಿಸ್
--------------------
ಆರೋಪಿಗಳನ್ನು ಬಂಧಿಸುತ್ತಾ
ಸಾರ್ವಜನಿಕರನ್ನು ರಕ್ಷಿಸುತ್ತಾ
ಭಯೋತ್ಪಾದಕರನ್ನು ಪತ್ತೆ ಹಚ್ಚುತ್ತಾ
ಸಮಾಜದಲ್ಲಿ ಶಾಂತಿಯನ್ನು ಕಾಪಾಡುತ್ತಾ
ತಮ್ಮ ಕರ್ತವ್ಯಗಳನ್ನು ಪಾಲಿಸಿಕೊಂಡು
ಜವಾಬ್ದಾರಿಗಳನ್ನು ವಹಿಸಿಕೊಂಡು
ನ್ಯಾಯವನ್ನು ಎತ್ತಿ ಹಿಡಿದುಕೊಂಡು
ಅನ್ಯಾಯವನ್ನು ತಡೆದುಕೊಂಡು
ರಾಷ್ಟ್ರ ರಕ್ಷಣೆಗೆ ಸದಾ ಸಿದ್ಧವಾಗಿ
ಮಾಡುವರು ಕೆಲಸವ ನಿಯತ್ತಾಗಿ
ಅಪರಾಧಿಗಳಿಗೆ ಶಿಕ್ಷೆಯ ನೀಡಿ
ನಾಗರಿಕರಿಗೆ ಗೌರವ ನೀಡಿ
ಕಳ್ಳತನವನ್ನು ತಡೆದು
ಒಳ್ಳೆತನವನ್ನು ಮೆರೆದು
ಸತ್ಯದ ಬಾಗಿಲ ತೆರೆದು
ರಕ್ಷಣೆಗಿರುವರು ಪೊಲೀಸರು..!!
.................................................. ಗ್ರೀಷ್ಮಾ
8ನೇ ತರಗತಿ
ಸ.ಪ್ರೌ. ಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
****************************************
ನೀರು
-------------------
ಎಲ್ಲಿಂದ ಎಲ್ಲಿಗೋ ಸಾಗಿ
ಎಲ್ಲಾ ಅಡೆತಡೆಗಳನ್ನು ಮೀರಿ
ಮೇಲಿಂದ ಕೆಳಗೆ ಧುಮುಕಿ
ಸಮುದ್ರವ ಸೇರುವ ನೀರು
ಮಾನವನ ಉಪಯೋಗಕ್ಕಾಗಿ
ಜೀವಸಂಕುಲದ ಒಳಿತಿಗಾಗಿ
ಜಲಚರಗಳ ಉಸಿರಿಗಾಗಿ
ಜೀವಿಗಳ ದಣಿವಿಗಾಗಿ
ಸೂರ್ಯನ ಶಾಖದಿಂದ ಆವಿಯಾಗಿ
ತಂಪಾದ ಗಾಳಿಯಿಂದ ಮೋಡವಾಗಿ
ಮೋಡಗಳೆರಡು ಸೇರಿ ಮಳೆಯಾಗಿ
ಮಳೆಯಿಂದಾಗಿ ಧರೆಯು ಹಸಿರಾಗಿ
ಹಸಿರು ಬೇಕು ಉಸಿರಿಗಾಗಿ
ನೀರು ಬೇಕು ಪ್ರಾಣಕ್ಕಾಗಿ
ನೀರಿನಿಂದಲೇ ಈ ಪ್ರಕೃತಿಯು
ಪ್ರಕೃತಿಯಿಂದಲೇ ನಮ್ಮ ಉಳಿವು
.................................................. ಗ್ರೀಷ್ಮಾ
8ನೇ ತರಗತಿ
ಸ.ಪ್ರೌ. ಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
****************************************
ಜೀವನ
-------------------
ಎಷ್ಟೋ ಕನಸುಗಳನ್ನು ಕಾಣುತ್ತಾ
ಅವುಗಳನ್ನು ನನಸುಗಳಾಗಿ ಬದಲಿಸುತ್ತಾ
ಸಫಲತೆಯ ಕಡೆಗೆ ಸಾಗುತ್ತಾ
ಗುರಿಯನ್ನು ಮುಟ್ಟಲು ಪ್ರಯತ್ನಪಡುತ್ತಾ
ಸಮಸ್ಯೆಗಳನ್ನೆಲ್ಲ ಎದುರಿಸುತಲಿ
ಯಾವುದಕ್ಕೂ ಅಂಜದೆ ಮುನ್ನಡೆಯುತಲಿ
ಗುರಿಯನ್ನು ಕಾಣುವ ಅವಸರದಲಿ
ಬದುಕಿನ ಅರ್ಥವ ತಿಳಿಯುತಲಿ
ಒಳ್ಳೆಯ ಕೆಲಸವೊಂದು ಸಿಗಲು
ತನ್ನ ಕನಸು ನನಸಾಗುವ ಖುಷಿಯು
ಸಂಭ್ರಮದಲಿ ನೋವುಗಳನ್ನು ಮರೆತು
ಸಂತೋಷವು ಜೀವನದಲಿ ತುಂಬಿತು
ಹೀಗೆ ಜೀವನ ಸಾಗುತಲಿರಲು
ಒಂದೊಂದು ಕ್ಷಣವು ಕಳೆಯುತಿರಲು
ಕಂಡಿತು ಒಂದೊಂದು ದಿನ ಅಂತ್ಯವು
ತಿಳಿಯುತು ನನಗೆ ಜೀವನ ಚಕ್ರವು
.................................................. ಗ್ರೀಷ್ಮಾ
8ನೇ ತರಗತಿ
ಸ.ಪ್ರೌ. ಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
****************************************
ಮಾಲಿನ್ಯ
-------------------
ಪ್ರಕೃತಿಯು ಭೂಮಿಯ ಸೌಂದರ್ಯವು
ಮಾಲಿನ್ಯವು ಭೂಮಿಯ ವಿನಾಶಕಾರಿಯು
ಮಲಿನ ನೀರಿನಿಂದ ಆರೋಗ್ಯ ಹಾಳು
ಸುಟ್ಟ ಹೊಗೆಯಿಂದ ಪರಿಸರ ಹಾಳು
ಪ್ಲಾಸ್ಟಿಕಿನಿಂದ ಮುಕ್ತಿ ಪಡೆಯಬೇಕು ಭೂಮಿ
ನಮ್ಮೆಲ್ಲರ ಕೈಯಲ್ಲಿದೆ ಈ ಜವಾಬ್ದಾರಿ
ಹಿತ ಮಿತವಾಗಿ ಬಳಸಿದರೆ ನೀರು
ಸಮೃದ್ಧವಾಗುವುದು ನಮ್ಮೆಲ್ಲರ ಬಾಳು
ಮಾಡಬೇಡಿ ಮಾಲಿನ್ಯವ
ಉಳಿಸಿರಿ ಜೀವರಾಶಿಗಳ
.................................................. ಗ್ರೀಷ್ಮಾ
8ನೇ ತರಗತಿ
ಸ.ಪ್ರೌ. ಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
****************************************
ಪ್ರಕೃತಿಯ ಸೊಬಗು
------------------------------
ದಿನದಿನವು ಅರಳುತಿದೆ ತರತರದ
ಹೂವುಗಳು
ಕ್ಷಣಕ್ಷಣವೂ ಹುಟ್ಟುತಿದೆ ಹೊಸದೊಂದು ಜೀವಿಗಳು
ಝಳಝಳ ಎನ್ನುತಿದೆ ಬಗೆಬಗೆಯ ಜಲಪಾತಗಳು
ಫಳಫಳ ಹೊಳೆಯುತಿದೆ ಪ್ರಕೃತಿಯ
ದೃಶ್ಯಗಳು.......!!
ರುಚಿರುಚಿಯಾದ ಹಣ್ಣುಗಳು ನೂರೊಂದು
ಬಗೆಬಗೆಯಾದ ತರಕಾರಿಗಳು ಹಸಿವಿಗೆಂದು
ವಿಧವಿಧವಾದ ಮರಗಳು ಜೀವಿಗಳ
ಉಸಿರಿಗೆಂದು
ಬಣ್ಣಬಣ್ಣದ ಚಿಟ್ಟೆಗಳು ಪ್ರಕೃತಿಯ
ಸೊಬಗಿಗೆಂದು
ಪ್ರಾಣಿ-ಪಕ್ಷಿಗಳು ಪರಿಸರದ ಸಮತೋಲನಕ್ಕಾಗಿ
ಜೀವಜಂತುಗಳು ಮಾನವನ ಸಹಾಯಕ್ಕಾಗಿ
ಪರಿಸರದ ಸೊಬಗನ್ನು ಅರಿಯಲು ಜನ್ಮ ಸಾಲದು
ಪ್ರಕೃತಿಯ ಸೌಂದರ್ಯವನ್ನು ವಿವರಿಸಲು ಪದಗಳು ಸಾಲದು.....!!!
.................................................. ಗ್ರೀಷ್ಮಾ
8ನೇ ತರಗತಿ
ಸ.ಪ್ರೌ. ಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
****************************************
ಸೂರ್ಯ
----------------------
ಪೂರ್ವದಿಂದಲಿ ಉದಯಿಸಿ
ಜಗತ್ತನ್ನು ಬೆಳಗಿಸಿ
ನೀರನ್ನೆಲ್ಲ ಆವಿಯಾಗಿಸಿ
ಜಲಚಕ್ರದಿ ಮಳೆ ಭರಿಸಿ
ತನ್ನ ಬೆಳಕಿನಿಂದ ಚಂದ್ರನನ್ನು ಹೊಳೆಯಿಸಿ
ತನ್ನ ಪ್ರಕಾಶದಿಂದ ಹೂವುಗಳನ್ನು ಅರಳಿಸಿ
ಜನಜೀವನದ ವರದಾನವಾಗಿಹನು
ಭೂಮಿಯನ್ನು ಉಳಿಸಿರುವನು
ಸೂರ್ಯನಿಲ್ಲದೆ ಪ್ರಪಂಚವಿಲ್ಲ
ಸೂರ್ಯನಿಲ್ಲದೆ ಯಾವುದೂ ಇಲ್ಲ...!!
.................................................. ಗ್ರೀಷ್ಮಾ
8ನೇ ತರಗತಿ
ಸ.ಪ್ರೌ. ಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
****************************************