
ರಮ್ಯ ಪ್ರಕೃತಿ - ಕವನ : ಋತ್ವಿಕ್ ಮೊಳೆಯಾರ್
Thursday, December 23, 2021
Edit
ರಮ್ಯ ಪ್ರಕೃತಿ - ಕವನ
----------------------
ಸುಂದರ ಜಗದಲಿ
ಸುಂದರ ರೀತಿಲಿ!
ಕಾಣುವ ಚೆಲುವಿನ ತಾಣ
ಅದುವೇ ನಮ್ಮ ಉಸಿರಿನ ತ್ರಾಣ!!
ದೇವರು ಕೊಟ್ಟಿಹ ಸುಂದರ ಕಲೆ
ಅದುವೇ ಶಾಶ್ವತ ಸೌಂದರ್ಯದ ನೆಲೆ!
ದಿನವೂ ಬರುವ ಸೂರ್ಯನ ಕಿರಣ
ಪ್ರಾಣಿ-ಪಕ್ಷಿಗಳ ನಿತ್ಯ ಪಯಣ!!
ಗುಡ್ಡಬೆಟ್ಟ ಗಿರಿಧಾಮ
ಹಚ್ಚಹಸುರಿನ ನೆಲೆ ಧಾಮ!
ತೆರೆ, ತೊರೆ, ನದಿಗಳ ಹರಿವು
ಆಹಾ! ಇದುವೇ ರಮ್ಯ ಪ್ರಕೃತಿಯ ಸೆಳೆವು!!
..............................ಋತ್ವಿಕ್ ಮೊಳೆಯಾರ್.
ನಾಲ್ಕನೇ ತರಗತಿ,
ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆ, ನರಿಮೊಗರು, ಪುತ್ತೂರು
ದಕ್ಷಿಣ ಕನ್ನಡ ಜಿಲ್ಲೆ
****************************************