-->
2022 - ನನ್ನ ಯೋಚನೆ-ಯೋಜನೆ

2022 - ನನ್ನ ಯೋಚನೆ-ಯೋಜನೆ

      ಮಕ್ಕಳ ಜಗಲಿಯ ಎಲ್ಲರಿಗೂ 2022 ರ ಶುಭಾಶಯಗಳು. ನಮಗೆಲ್ಲ ಪ್ರತಿದಿನ ಹೊಸದೇ..... ಮಕ್ಕಳ ಜಗಲಿಯ ಮೂಲಕ  " 2022- ನನ್ನ ಯೋಚನೆ-ಯೋಜನೆ" ಮಕ್ಕಳಿಗಾಗಿ ಆಯೋಜಿಸಲಾದ ಈ ಚಟುವಟಿಕೆಯಲ್ಲಿ ಜಗಲಿಯ ಅನೇಕ ಮಕ್ಕಳು ಭಾಗವಹಿಸಿದ್ದಾರೆ. ಮಕ್ಕಳ ಮನದಾಳದ ಜಾಗೃತಿಯ ಮಾತುಗಳನ್ನು ಇಲ್ಲಿ ಪ್ರಕಟಿಸಿದ್ದೇವೆ...... 

               2022.... ನನ್ನ ಯೋಚನೆ-ಯೋಜನೆ
              -------------------------------------

       ನನ್ನ ಹೆಸರು ಸಪ್ತಮಿ ಅಶೋಕ್ ದೇವಾಡಿಗ , 
ನನ್ನ ಕನಸೆಂದರೆ ನಾನು ದೊಡ್ಡ ವಿಜ್ಞಾನಿಯಾಗಿ ಹೊಸ ಆವಿಷ್ಕಾರಗಳನ್ನು ಮಾಡಬೇಕು. ಅಷ್ಟೇ ಅಲ್ಲದೆ ದೊಡ್ಡ ದೊಡ್ಡ ಸಂಸ್ಥೆಗಳನ್ನು ಕಟ್ಟಬೇಕು. ಹಾಗೂ ಬಡ ಮಕ್ಕಳಿಗೆ ಮತ್ತು ಅನಾಥ ಮಕ್ಕಳಿಗೆ ಉಚಿತ ಸೌಲಭ್ಯಗಳನ್ನು ದೊರಕಿಸಿಕೊಡಬೇಕು. ಎನ್ನುವುದು ಒಂದು ನನ್ನ ಚಿಕ್ಕ ಕನಸು.
      ನನಗೆ 2022 ನೇ ವರ್ಷದಲ್ಲಿ ಕೊರೋನ ಮುಕ್ತವಾಗಬೇಕು ಎಂದು ಇಚ್ಚಿಸುತ್ತೇನೆ. ಎಲ್ಲಾ ವಿದ್ಯಾರ್ಥಿಗಳಿಗೆ ಮಾಸ್ಕ್ ಹಾಕಿಕೊಂಡು ಪಾಠ ಕೇಳುವುದು ತುಂಬಾ ಕಷ್ಟವಾಗುತ್ತದೆ. ಈ ರೀತಿ ಮುಂದಿನ ದಿನಗಳಲ್ಲಿ ಇರಬಾರದು ಅದಕ್ಕಾಗಿ ನಾನು ದೇವರಲ್ಲಿ ಬೇಡಿಕೊಳ್ಳುತ್ತೇನೆ ಕೊರೋನಾ ಬೇಗ ದೂರವಾಗಲಿ.
        ನನಗೆ ಶಿಕ್ಷಣ ಜೊತೆಯಲ್ಲಿ ಮೌಲ್ಯಭರಿತ ಶಿಕ್ಷಣ ಬೇಕು ಅನಿಸುತ್ತಿದೆ. ಏಕೆಂದರೆ ನಾನು ಓದುವ ಓದು ಕೇವಲ ಸರ್ಟಿಫಿಕೇಟ್ ಗೋಸ್ಕರ ಇರಬಾರದು. ನನ್ನ ಪ್ರಕಾರ ಶಿಕ್ಷಣ ಎಂದರೇ ಅದರಲ್ಲಿ ಪ್ರೀತಿ, ವಿಶ್ವಾಸ, ನಂಬಿಕೆ, ನ್ಯಾಯ, ಧರ್ಮ, ಶಿಸ್ತು ಇವುಗಳನ್ನು ಹೊಂದಿಕೊಂಡಿರುವ ಅರ್ಥಪೂರ್ಣವಾದ ಶಿಕ್ಷಣ ಬೇಕು ಅನಿಸುತ್ತಿದೆ. ಸಂಸ್ಕಾರ ಭರಿತವಾದ ಬದುಕು, ಗುರುಹಿರಿಯರಿಗೆ ಕೊಡುವ ಗೌರವ, ನೆಲ ಮತ್ತು ಜಲದ ಬಗ್ಗೆ ಪ್ರೀತಿ ಮತ್ತು ಮಮತೆ , ನನ್ನೊಳಗೆ ನಾನು ಹೆಚ್ಚಾಗಿ ಬೆಳೆಸಿಕೊಳ್ಳಬೇಕು ಅನಿಸುತ್ತಿದೆ. ನಾನು ಕೆಲವೊಂದು ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂಬುದು ನನ್ನ ಆಸೆಯಾಗಿದೆ. ಬದುಕಿನಲ್ಲಿ ಏರುವುದು ಮತ್ತು ಇಳಿಯುವುದು ತಿಳಿದಾಗ ಬದುಕಿನ ದಾರಿ ಸುಗಮ........
........................ಸಪ್ತಮಿ ಅಶೋಕ್ ದೇವಾಡಿಗ
7ನೇ ತರಗತಿ 
ಶುಭದ ಆಂಗ್ಲ ಮಾಧ್ಯಮ ಶಾಲೆ ಕಿರಿಮಂಜೇಶ್ವರ ಬೈಂದೂರು ತಾಲೂಕು , ಉಡುಪಿ ಜಿಲ್ಲೆ
********************************************




        ನಮಸ್ತೆ ....... ನಾನು ಧನ್ವಿ ರೈ ಕೋಟೆ, ಪಾಣಾಜೆ
 2021ನೇ ವರ್ಷವು ನಮಗೆ ವಿದ್ಯಾಭ್ಯಾಸದಲ್ಲಿ ಕೋವಿಡ್ ನ ಕಾರಣಕ್ಕೆ ಕಷ್ಟವಾಯಿತು. ಆದರೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಅನುಕೂಲವಾಯಿತು. ಉದಾಹರಣೆಗೆ "ಮಕ್ಕಳ ಜಗಲಿ"ಯಲ್ಲಿ ಚಿತ್ರಕಲೆ ಯ ಮೂಲಕ ನಮ್ಮಲ್ಲಿರುವ ಕಲೆಗಳನ್ನು ಹೊರ ತೆಗೆಯಲು ಈ ಒಂದು ವೇದಿಕೆ ಬಹಳ ಸಹಾಯಕವಾಗಿದೆ. ಮನೆಯಲ್ಲಿ ಸುಮ್ಮನೆ ಕುಳಿತು ಕೊಳ್ಳುವ ಬದಲಾಗಿ ಇಂತಹ ಅನೇಕ ವೇದಿಕೆಗಳು ಮಕ್ಕಳಾದ ನಮಗೆ ಪ್ರಯೋಜನವಾಯಿತು. ಈ ಮೂಲಕ ಮಕ್ಕಳ ಜಗಲಿ ಗೆ ಮತ್ತು ಇದರ ರೂವಾರಿಗಳಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. 2022ನೇ ಇಸವಿ ಯಲ್ಲಿ ಮೊದಲು ನಮಗೆ ಶಾಲಾ ಅವಧಿಯ ಎಲ್ಲಾ ತರಗತಿಗಳು, ಮಕ್ಕಳಾದ ನಮಗೆ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಅನಂತರ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಎಲ್ಲ ಅವಕಾಶಗಳು ಸಿಗಲಿ. ಕೋವಿಡ್ ಮುಕ್ತ ದೇಶವಾಗಲಿ. ಹಾಗಾದಾಗ ಮಾತ್ರ ನಾವು ಎಣಿಸಿದ ಕ್ರಮದಲ್ಲಿ ನಮ್ಮ ಕನಸಿನ ಬೆನ್ನೇರಿ ಹೋಗಬಹುದು. ದೈವ ದೇವರಲ್ಲಿ ಎಲ್ಲರೂ ಪ್ರಾರ್ಥನೆ ಸಲ್ಲಿಸೋಣ. 2022ನೇ ಇಸವಿಯು ಎಲ್ಲರಿಗೂ ಶುಭವನ್ನು ತರಲಿ, ಹೊಸ ವರ್ಷದ ಶುಭಾಶಯಗಳೊಂದಿಗೆ ವಂದನೆಗಳು 
........................................ ಧನ್ವಿ ರೈ ಕೋಟೆ
6 ನೇ ತರಗತಿ
ವಿವೇಕ ಹಿರಿಯ ಪ್ರಾಥಮಿಕ ಶಾಲೆ ಪಾಣಾಜೆ ಪುತ್ತೂರು , ಪುತ್ತೂರು ತಾಲೂಕು 
ದಕ್ಷಿಣ ಕನ್ನಡ ಜಿಲ್ಲೆ
********************************************


        ನಮಸ್ತೆ ನನ್ನ ಹೆಸರು ಶ್ರಾವ್ಯ....... 7 ದಿನಗಳು ಸೇರಿ 1 ವಾರ , 4 ವಾರ ಸೇರಿ 1 ಮಾಸ ಹಾಗೇ 12 ಮಾಸ ಸೇರಿ 1 ವರುಷ, 365 ದಿನ ಕೂಡಿದ 1 ವರುಷ, ಕಣ್ಣು ಮುಚ್ಚಿ ತೆರೆಯುವುದರಲ್ಲಿ ಉರುಳಿಯೇ ಬಿಟ್ಟಿದೆ. ಕಳೆದು ಹೋದ ದಿನಗಳು ಇನ್ನು ಸಿಹಿ-ಕಹಿ ನೆನಪು ಮಾತ್ರ. ಪ್ರತೀ ದಿನವೂ ಹೊಸತೇ ಪ್ರತೀ ಕ್ಷಣವೂ ಪಾಠವೇ ಎಂದು ತಿಳಿದು ಬರುವ ಹೊಸ ವರುಷವನ್ನು ಹರುಷದಿಂದ ಸ್ವಾಗತಿಸೋಣ. ಸಮಯ ಅಮೂಲ್ಯ ಎಂಬ ಪಾಠವನ್ನು ಅರಿತಿರುವ ನಾವು ಇನ್ನು ಹೆಚ್ಚು ಸಮಯದ ಹಿಂದೆಯೇ ಓಡುವ ಹೊಸ ವರುಷದಲ್ಲಿ ಹೊಸ ಹೊಸ ಯೋಚನೆ- ಯೋಜನೆಯ ಬೆನ್ನಟ್ಟಿ ಹೋಗುವ ಕಲಿಯುವ ಹಾದಿಯಲ್ಲಿರುವ ನಾನು ಕಲಿಕೆಯ ಜೊತೆ ಜೊತೆ ಚಿಕ್ಕಪುಟ್ಟ ಹವ್ಯಾಸವನ್ನು ಪ್ರಾರಂಭಿಸುವ ಇಚ್ಚೆ ಹೊಂದಿರುವೆ. ದಿನಕ್ಕೊಂದರಂತೆ ನಾಣ್ಯ ಕೂಡಿಡುವುದು , ಬಿಡುವಾದಾಗ ಚಿತ್ರ ಬಿಡಿಸುವುದು, ಪುಸ್ತಕ ಓದುವುದು ಹೀಗೆ ಸಣ್ಣ ಪುಟ್ಟ ಹವ್ಯಾಸ ಬೆಳೆಸಿಕೊಳ್ಳುವ ಯೋಚನೆ ಮಾಡಿರುವೆ. ಯೋಚನೆ ಅಥವಾ ಯೋಜನೆ ಸಣ್ಣದಿರಲಿ, ದೊಡ್ಡದಿರಲಿ ಅದರ ಹಿಂದಿರುವ ಪರಿಶ್ರಮ ಬಹುಮುಖ್ಯ. ಈ ಹೊಸ ವರುಷವನ್ನು ಹರುಷದಿಂದ ಸ್ವಾಗತಿಸೋಣ ನಮ್ಮಲ್ಲಿರುವ ದುರಾಲೋಚನೆ, ದುರಭ್ಯಾಸ, ಹೀಗೇ ನಮ್ಮಲ್ಲಿರು ಪಿಡುಗುಗಳನ್ನು ಇಲ್ಲೇ ಬಿಟ್ಟು ಒಳ್ಳೆಯ ಅಭ್ಯಾಸ, ಒಳ್ಳೆಯ ಆಲೋಚನೆಯ ಕಡೆಗೆ ಹೆಜ್ಜೆ ಬೆಳೆಸೋಣ. ಬದಲಾವಣೆ ಜಗದ ನಿಯಮ, ಬದಲಾವಣೆಗೆ ನಾವೂ ಒಗ್ಗಿಕೊಳ್ಳೋಣ, ನಾಳೆ ಎಂಬ ಅಸ್ಥಿರತೆಯ ಬಗೆಗೆ ಹೆಚ್ಚು ಗೊಡವೆ ಕೊಡದೆ ಪ್ರತಿ ದಿನ ಪ್ರತಿಕ್ಷಣದ ಅನುಭವವನ್ನು ಸವಿಯೋಣ. ಹೊಸ ವರುಷ ಎಲ್ಲರ ಬದುಕಲ್ಲಿಯೂ ಹೊಸ ಭರವಸೆ, ಹೊಸ ಅವಕಾಶ, ಗೆಲುವು ತರಲಿ, ಎಲ್ಲರಿಗೂ ಒಳಿತು ತರಲಿ. ಎಲ್ಲರಿಗೂ ಹೊಸ ವರುಷದ ಶುಭಾಶಯಗಳು... ಧನ್ಯವಾದ...   
..................................................ಶ್ರಾವ್ಯ
ಪ್ರಥಮ ಪಿಯುಸಿ
ಶ್ರೀರಾಮ ಪದವಿ ಪೂರ್ವ ಕಾಲೇಜು ಕಲ್ಲಡ್ಕ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ 
********************************************
 
                                                   

ನಾನು ಅಭಿನವ್ ರಾಜ್ ಎನ್...... 2022 ರಲ್ಲಿ ನನ್ನ ಯೋಜನೆಗಳು
1 ಸಂಗೀತ ಕಲಿಯಬೇಕು
2 ಯಕ್ಷಗಾನ ಕಲಿಯುತ್ತಿದ್ದು ಅದನ್ನು
ಮುಂದ್ದುವರಿಸಬೇಕು.
3 ಪ್ರತಿ ಭಾನುವಾರ ಒಂದು ಚಿತ್ರ ಬಿಡಿಸಬೇಕು
4. ಶಾಲೆಯ ಪಾಠಗಳನ್ನು ಚೆನ್ನಾಗಿ ಕಲಿಯಬೇಕು
5 ಭಗವದ್ಗೀತೆ ಕಲಿಯಬೇಕು.
6 ತಂದೆ ತಾಯಿ ಗುರುಹಿರಿಯರಿಗೆ ವಿಧೇಯನಾಗಿ ನಗುನಗುತ್ತಾ ಬಾಳಬೇಕು.
7 ಚೆನ್ನಾಗಿ ಭಾಷಣ ಮಾಡಲು ಅಭ್ಯಾಸ   
 ಮಾಡಬೇಕು   
..................................ಅಭಿನವ್ ರಾಜ್ ಎನ್ 
4 ನೇ ತರಗತಿ 
ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆ ಬೆಟ್ಟಂಪಾಡಿ 
ಪುತ್ತೂರು ತಾಲೂಕು ದ.ಕ ಜಿಲ್ಲೆ
********************************************


        ಮಕ್ಕಳ ಜಗಲಿಯ ಮೂಲಕ ಹೊಸ ವರುಷದ ಶುಭಾಶಯಗಳು ...... ನಾನು ಶಿಫಾನ. 
ಮಾರಕ ರೋಗಳಿಂದ ಮುಕ್ತಿಗೊಂಡು ಸ್ವಚ್ಚತೆ ಆರೋಗ್ಯ ವಂತ ಭಾರತವಾಗಲಿ ಎಂಬುದು ನನ್ನ ಕನಸು. ನಾನು 9ನೇ ತರಗತಿಯಲ್ಲಿ ಕಲಿಯುತ್ತಿದ್ದು ಉತ್ತೀರ್ಣಳಾಗಿ SSLC ಗೆ ಕಾಲಿಡುವ ಬಗ್ಗೆ ಏಷ್ಟೋ ಕನಸುಗಳಿವೆ. ನನ್ನಿಂದಾಗುವಂತಹ ಸಾಧನೆಗಳಿಗೆ ನಾನು ಸಮರ್ಪಕಳಾಗಿ ಆಟ ಪಾಠ ಜೊತೆ ಕೈ ಜೋಡಿಸಿ out. of out ಮಾರ್ಕ್ ತೆಗೆಯಬೇಕೆಂಬ ಮೊದಲನೆಯ ಕನಸು. ಯಾವುದೇ ಅಡೆ ತಡೆ ಗಳಿಲ್ಲದೆ ನನ್ನ ಕನಸು ನನಸಾಗಲಿ ಎಂದು ಬಯಸುತ್ತಾ ತಂದೆ ತಾಯಿಯರ ಗುರು ಹಿರಿಯರ ಆಶೀರ್ವಾದದಿಂದ ನನ್ನ ಕನಸು ನನಸಾಗಲಿ ಎಂದು ದೇವರಲ್ಲಿ ಬೇಡುತ್ತಾ ನಾನು ಶ್ರಮ ಪಟ್ಟು ಕಲಿತು ಡಾಕ್ಟರಾಗಬೇಕೆಂದು ಏಷ್ಟೋ ಬಡ ಜನ ರೋಗಿಗಳ ಸೇವೆಯಲ್ಲಿ ಪಾಲ್ಗೊಳ್ಳಬೇಕೆಂದು ಕನಸಿದೆ. ನಾನು ಏನಾದರು ಸಾಧಿಸಿ ತಂದೆ ತಾಯಿಯರಿಗೆ ನನ್ನ ಶಿಕ್ಷಕರಿಗೆ ನನ್ನ ಸಾಧನೆಯ ಹಾದಿಯನ್ನು ಪರಿಚಯಿಸುವಂತಹ ಕನಸು ನನಸು ಮಾಡೇ ಮಾಡುತ್ತೇನೆಂಬ ಛಲವಿದೆ.
ನಾನು ಕಲಿತು ದೊಡ್ಡವಳಾಗಿ ಈ ದೇಶದ ಒಳ್ಳೆಯ ಪ್ರಜೆಯಾಗಬೇಕು. ನಾಡಿನ ಜನತೆಗೆ ನನ್ನ ಹೊಸ ವರುಷದ ಶುಭಾಶಯಗಳು 
..................................................... ಶಿಫಾನ
9ನೇ ತರಗತಿ
ಸರಕಾರಿ ಪ್ರೌಢಶಾಲೆ ನಾರ್ಶ ಮೈದಾನ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
********************************************


ನನ್ನ ಹೆಸರು ಚಿಸ್ಮಾ ........ ಹೊಸ ವರ್ಷವು ಹೆಚ್ಚು ಸಂತೋಷ ಮತ್ತು ವಿನೋದವನ್ನು ತರಲಿ. ಶಾಂತಿ, ಪ್ರೀತಿ ಮತ್ತು ಯಶಸ್ಸನ್ನು ಕಾಣಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ನನ್ನ ಜೀವನವು ಸಂತೋಷದಿಂದ ತುಂಬಿರುತ್ತದೆ ಎಂದು ನಾನು ಭಾವಿಸುತ್ತೇನೆ. ನನ್ನ ಜೀವನದಲ್ಲಿ ನಾನು ಬಯಸುವ ಕಲಿಕೆಗೆ ದೇವರು ಆಶೀರ್ವದಿಸಲಿ. ನನ್ನ ಜೀವನದಲ್ಲಿ ಹೊಸ ಗುರಿಗಳು, ಹೊಸ ಸಾಧನೆಗಳು ಮತ್ತು ಸ್ಪೂರ್ತಿ ಗಳನ್ನು ತರಲಿ ಎಂದು ನಿರೀಕ್ಷಿಸುತ್ತೇನೆ. ನನ್ನ ಕಣ್ಣುಗಳಂತೆ ಪ್ರಕಾಶಮಾನ ವಾಗಿರುವ ತಂದೆ-ತಾಯಿ ಸಂತೋಷವಾಗಿರಲು ದೇವರಲ್ಲಿ ಬಯಸುತ್ತೇನೆ.
.................................... ಚಿಸ್ಮಾ 8 ನೇ ತರಗತಿ
ದ. ಕ. ಜಿ .ಪಂ. ಹಿರಿಯ ಪ್ರಾಥಮಿಕ ಶಾಲೆ
ಬೋಳಂತೂರು ನರಿಕೊಂಬು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
********************************************







Ads on article

Advertise in articles 1

advertising articles 2

Advertise under the article