
ಕಳೆದು ಕಳೆದು ಉಳಿದದ್ದು ಜಾಗೃತರಾಗಲು ಸಾಲದೇ..? -2022
Friday, December 31, 2021
Edit
ಕಳೆದು ಕಳೆದು ಉಳಿದದ್ದು
ಜಾಗೃತರಾಗಲು ಸಾಲದೇ..? -2022
----------------------------------------------
ಹೆಚ್ಚು ಕೆಲಸ ಹೆಚ್ಚು ಕಲಿಕೆಗೆ ಮುಂದಿನ 2022 ರ ದಿನ ಕ್ಷಣ ಸುಂದರವಾಗಿದೆ.....!
ದೇಹ - ದೇಶ ನಿರೀಕ್ಷೆಗೆ ಮೀರಿ ಸಾಮರ್ಥ್ಯ- ಸಾಧನೆ ಕಾಣಲಿದೆ.....!
ಗ್ರಹಬಲದಲ್ಲಿ ದೌರ್ಬಲ್ಯದ ಶನಿ transfer ಆಗಿ ಅಲ್ಲಿಗೆ ಗುರು ಬಲ ಬಂದಿದೆ. ಕಲಿವ - ಬೆಳೆವ ಗುಣದ ಸಾಧನೆ ತೋರಿಸುವ ಗುರುವಾತ....!!!
ಇಂಗ್ಲಿಷ್ ಕ್ಯಾಲೆಂಡರಿನ ಹೊಸ ವರುಷ ಬಂದಿದೆ. ಬದುಕು ಒಂದು ಸುಂದರ ಲೆಕ್ಕ. ಲೆಕ್ಕವೇ ಬದುಕು. ಹೊಸ ವರುಷದ ಮೊದಲ ದಿನ ಹೀಗೊಂದು ಲೆಕ್ಕಾಚಾರ ಮಾಡಿ ನೋಡೋಣ.ಈ ಭೂಮಿಗೆ ನಾನು ಕಾಲಿಟ್ಟು ಇಂದಿಗೆ ಎಷ್ಟು ವರ್ಷ್, ಎಷ್ಟು ತಿಂಗಳು, ಎಷ್ಟು ವಾರ, ಎಷ್ಟು ದಿನ, ಎಷ್ಟು ಗಂಟೆ - ನಿಮಿಷ ಲೆಕ್ಕ ಮಾಡೋಣ. ಭರ್ತಿ ಐದು ಸಾವಿರ ದಿನ ಹತ್ತು ಸಾವಿರ ದಿನ ಅಥವಾ ಲಕ್ಷ ಘಂಟೆ ಆಗಿರಲೂಬಹುದು.
ಗಮ್ಮತ್ತಿದೆ.....
ಕಳೆದ ಕ್ಷಣ ನೆನೆದು ಭಯ ಆಗಲೂಬಹುದು. ಜಾಗೃತಿ ಮೂಡಲೂ ಸಾಧ್ಯವಿದೆ. ಇದೆಲ್ಲವೂ ಅವರವರ ಬುದ್ದಿ ಅವರವರು ಕೈಗೆ ತೆಗೆದುಕೊಂಡ
ಹಾಗಿದೆ. ನಾನು 20.6.1958 (ಶಾಲೆಗೆ ಸೇರಿಸಿದ ದಿನ ಬರೆದ ದಾಖಲೆ )
ವರ್ಷ - ತಿಂಗಳು - ದಿನ
2022. 12. 31 -
1958. 06. 20
----------------------------
63. 06. 11.
------------------------------
63 ವರ್ಷ, 6 ತಿಂಗಳು,11 ದಿನ.
ಇದೀಗ ತಿoಗಳು ಎಷ್ಟು ಲೆಕ್ಕ ಹಾಕೋಣ.
63 x12=756
-----------
756+6 ತಿಂಗಳು,
----------
762ಒಟ್ಟುತಿಂಗಳು.
=======
ಒಟ್ಟು 762 ತಿಂಗಳು 11 ದಿನ.
ಒಟ್ಟು ದಿನ 762x30= 22091+
368
-----------------
22,359.
----------------
30 ದಿನದಿಂದ ಗುಣಿಸಿದರೆ ಸಾಲದು. ಯಾಕೆಂದರೆ ಕೆಲವು ತಿಂಗಳು 31 ದಿನ ಇದೆ. ಅದಕ್ಕಾಗಿ 762 ರ ಅರ್ಧ 368 ಸೇರಿಸೋಣ. ಹಾಗೇ ಪ್ರತೀ ಫೆಬ್ರವರಿ 2 ದಿನ ಕಳೆದರೆ ಅಂದರೆ 63 +63=126.
ಅಂದರೆ ಒಟ್ಟು ದಿನ 22,230.
(ಒಟ್ಟು 22,359ರಲ್ಲಿ 126 ಕಳೆದು ಸಿಕ್ಕಿದ್ದು.)
ಇರಲಿ ಇದು ಲೆಕ್ಕ ಪೂರ್ಣ ವಲ್ಲ. ನಾಲಕ್ಕು ವರ್ಷ ಕ್ಕೊಮ್ಮೆ ಬದಲಾದ ದಿನ ಬಿಡಿ.
ಇಲ್ಲಿ ಉದ್ದೇಶ ಇಷ್ಟೇ. ಈ ದಿನಗಳನ್ನು..
ಗಂಟೆಗಳನ್ನು ಏನು ಮಾಡಿದ್ದೇನೆ..?
ಒಂದು ಉದಾಹರಣೆ ತಗೊಂಡೆ...
1978ರಿಂದ 1983ರ ವರೆಗೆ ಕಾಲೇಜ್ ಗೆ
ಹೋಗುತ್ತಾ ನಿರಂತರ 6 ವರ್ಷ ದಿನಕ್ಕೆ
ಸರಾಸರಿ 2-3 ಗಂಟೆಯಂತೆ ಉಗುರಿಂದ ಚಿತ್ರ
ಬರೆದು ಗೆದ್ದೆ.
ನಾನು ಭೂಮಿಗೆ ಬಂದು ಘಂಟೆ ಎಷ್ಟಾಯಿತೆಂದು ನೋಡೋಣ...... 22,230 x 24 = 5,33,520.
ಐದು ಲಕ್ಷದ ಮೂವತ್ತ ಮೂರು ಸಾವಿರದ ಐನೂರ ಇಪ್ಪತ್ತು ಘಂಟೆ. ಇದರಲ್ಲಿ ದಿನದ ನಿದ್ದೆಯ 8 ಗಂಟೆ ಕಳೆದು ಅಂದರೆ ಎಚ್ಚರವಾಗಿರೋ 16 ಗಂಟೆ ಒಟ್ಟು ಎಷ್ಟೆಂದರೆ..?ವಾ..!! 22,230 x16= 3,55,680ಗಂಟೆ.
ಇದರಲ್ಲಿ ತಿನ್ನಲು ದಿನವೊಂದಕ್ಕೆ ಒಂದು ಗಂಟೆಯಂತೆ ಕನಿಷ್ಠ ತೆಗೆದುಕೊಂಡರೆ... ಸುಮಾರು 23 ಸಾವಿರ ಗಂಟೆ ತಿಂದದ್ದಾ..!!. ಹಾಗಾದ್ರೆ ನಿದ್ದೆ ಮಾಡಿದ್ದು 8 ಗಂಟೆಯಂತೆ..22230 x8= 1,77,840... ಅಬ್ಬಬ್ಬಾ ನಿದ್ದೆ ಮಾಡಿದ್ದು 1 ಲಕ್ಷದ 77 ಸಾವಿರ ಗಂಟೆಯಾ..!!!.
ಒಂದು ಹತ್ತು ವರ್ಷ tv ಅಥವಾ ಮೊಬೈಲ್ ನೋಡಿದ್ದು ದಿನಕ್ಕೆ ಸರಾಸರಿ ಮೂರು ಗಂಟೆಯದರೆ.. ಅಯ್ಯೋ 10 ಸಾವಿರ ಗಂಟೆ ಮೊಬೈಲ್.......!!
ಛೆ.ಛೇ.ಐಯ್ಯಯ್ಯೋ.
ಕಳಕೊಂಡದ್ದೆಷ್ಟು.
ಸಮಯ ಕೊಂದದ್ದೆಷ್ಟು....?.
ಕಳೆದ ನನ್ನ ಆಯುಷ್ಯದ 21 ಸಾವಿರ ದಿನದಲ್ಲಿ.
ದಿನಕ್ಕೆ ಒಂದು ಗಂಟೆ ಚಿತ್ರ ಮಾಡಿದ್ದಿದ್ರೆ..?
ಜಗತ್ತಿಗೇ ನಾನೇ ಶ್ರೇಷ್ಠ ಕಲಾವಿದ..
21 ಸಾವಿರ ಗಂಟೆ ಹಾಡಿದ್ರೆ, ನೃತ್ಯ ಮಾಡಿದ್ರೆ,
ಕತೆ , ಕವನ , ಲೇಖನ ಬರೆದಿದ್ರೆ..
ಕ್ರೀಡೆಯಲ್ಲಿದ್ದಿದ್ರೆ... ಇತರ ವಿಷಯಗಳಿಗೆ ದಿನಕ್ಕೆ
6-8 ಅಥವಾ 10 ಗಂಟೆ ಸಾಧನೆ ಮಾಡ್ತಿದ್ರೆ..?.
ಸರ್ಟಿಫಿಕೇಟ್ ಗಾಗಿ ಕಳೆದ ಲೆಕ್ಕ ಬಿಡಿ..
ದುಃಖವಾದೀತು......!!!
ನಮಗೆ ನಮ್ಮ ಸಮಯ ಪೂರ್ಣ ಸದುಪಯೋಗ ಆಗಲು ಯಾರೂ ಕಾರಣರಾಗಿಲ್ಲ. ಪರಿಸರ ಕಾರಣವಾಗಿಲ್ಲ....!!!
ಅಪ್ಪಾ ತಂದೆಯೇ..
ಅಮ್ಮಾ ತಾಯೇ..
ನಾನು ಯಾರ ಜೊತೆ ಇರಬೇಕಾಗಿತ್ತು. ಕಲಿವ -
ಸಾಧಕ ರ ಜೊತೆಗೆ ನಾನು ಇದ್ದಿದ್ದರೆ ನಾನೂ
ಶ್ರೇಷ್ಠ ಸಾಧಕ ವ್ಯಕ್ತಿ ಆಗಬಹುದಾಗಿತ್ತು ಅಂತ
ನೀವು ಈಗ ಅಳುತ್ತೀರಾ..?.
ಪರವಾಗಿಲ್ಲ... ಬಿಡಿ..... ಕಳೆದು ಹೋದದ್ದರ ಬಗ್ಗೆ ಚಿಂತೆ ಬೇಡ. ನಾನು ಒಟ್ಟು ಬದುಕುವ 100 ವರ್ಷದಲ್ಲಿ 63 ಕಳೆದರೆ.. ವಾಹ್ ಇನ್ನೂ 27 ವರ್ಷ ಇದೆ. ಅಯ್ಯಯ್ಯಪ್ಪ ನಿಮಗೆ ಇನ್ನೆಷ್ಟು ಸಾಧನೆ ವರ್ಷ ದಿನದ ಲಕ್ಷ ಗಂಟೆ ನಿಮ್ಮ ಕೈಯಲ್ಲಿದೆ.. ಹೊಟ್ಟೆ ಕಿಚ್ಚಾಗ್ತಿದೇರಿ.
ನಿಮ್ಮ ದಿನ ನನಗೆ ಕೊಡ್ತೀರಾ..?
ಕಿಡ್ನಿ ಆದ್ರೂ ಸಿಗಬಹುದು. ಕಳೆದ ಸಮಯ ಸಿಗಲ್ವೇ......!!! ನನ್ನಲ್ಲಿ ಇನ್ನೂ 19 ಸಾವಿರ ಗಂಟೆ ಇದೆ. ಏನಕ್ಕೂ.. ಎಷ್ಟಕ್ಕೂ ಸಾಕು.... ಓಡ್ತೇನೆ.
ಓಡಿದ ದಾರಿ ಹೆಜ್ಜೆ ಗುರುತು ಜಗತ್ತಿಗೇ ಕಾಣಲು ಶಕ್ತಿ ಹಾಕಿ ಬೇಲಿ ಗೋಡೆ ಮುರಿದು ಹಾರಿ ಕುಣಿದು ಗುರಿ ಮುಟ್ಟಲು..
ಯಾಕಾಗಲ್ಲ..........??
ಯಾರನ್ನೂ ಕಾಯಲ್ಲ.
ಜಗತ್ತನ್ನೇ ಗೆಲ್ಲುವ ಶಕ್ತಿ ನನ್ನ ಸ್ವ- ರೂಪಕ್ಕಿದೆ.
--------------------------------------ನಿನ್ನೆಗೆ ನನಗೆ ನನ್ನ ವರ್ಷದ ದಿನ ಗಂಟೆ ಲೆಕ್ಕ ಸುಲಭ ಇತ್ತು. ಇಂದಿಗೆ ಅಥವಾ ನಾಳೆಗಾದರೆ ಒಂದು ದಿನ ಸೇರಿಸಿಕೊಳ್ಳಿ. ದಿನ ತಿಂಗಳು ಕಡಿಮೆ ಸಂಖ್ಯೆ ಇದ್ದಾಗ ಕಳೆಯುವುದರಲ್ಲಿ ತಪ್ಪು ಮಾಡುತ್ತಾರೆ.
----------------------------------------
ನಾಳೇಗಾದರೆ ನನ್ನ ಮಗಳು ಆದಿಯ ದಿನ ಲೆಕ್ಕ ಹೀಗಾಗಲಿದೆ.
2022. 01. 02--
2005. 08. 15
-------------------------------
16 04 17.
-------------------------------
ಒಂದು ದಿನದಿಂದ 15 ದಿನ ಕಳೆಯಲಾಗುತ್ತಿಲ್ಲ. ತಿಂಗಳ ಜಾಗದಿಂದ ಒಂದು ತಿಂಗಳು ( 30 ದಿನ ). ಉಳಿದ 0 ತಿಂಗಳಿಂದ 8 ತಿಂಗಳು ಕಳೆಯಲಾಗುತ್ತಿಲ್ಲ. ವರ್ಷದಿಂದ ಒಂದು ವರ್ಷ (12 ತಿಂಗಳು) ತೆಗೆದುಕೊಳ್ಳೋಣ.
ಸುಂದರ ಬದುಕಿನ ಲೆಕ್ಕ.
ಕಳೆದು ಕಳೆದು ಉಳಿದದ್ದು ಜಾಗೃತರಾಗಲು ಸಾಲದೇ..?.
ನಾನು ಯಾರು..?
ನಾನು ಎಲ್ಲಿದ್ದೇನೆ..?
ನಾನು ಏನು ಮಾಡುತ್ತಿದ್ದೇನೆ..?
ನಾನು ಎಲ್ಲಿಗೆ ಹೋಗುತ್ತಿದ್ದೇನೆ..?
ನಾನು ಏನನ್ನು ಕೊಂಡು ಹೋಗುತ್ತಿದ್ದೇನೆ..,?
ನನ್ನ ಒಪ್ಪಿಕೊಳ್ಳ ಲಿರುವ
ಸ್ಪಷ್ಟ ನಿರ್ಧಾರಕ್ಕೆ...
ಒಂದು ದೀರ್ಘ ಉಸಿರು ಸಾಕು.
ಶಿಕ್ಷಣ ಚಿಂತಕರು
ಸ್ವರೂಪ ಅಧ್ಯಯನ ಸಂಸ್ಥೆ
ಮಂಗಳೂರು , ದಕ್ಷಿಣ - ಕನ್ನಡ ಜಿಲ್ಲೆ
ಮೊಬೈಲ್ : +91 98452 03472
**********************************************