ಕನ್ನಡದ ಒಲವು - ಕವನ
Monday, November 1, 2021
Edit
ಋತ್ವಿಕ್ ಮೊಳೆಯಾರ್
ನಾಲ್ಕನೆಯ ತರಗತಿ
ಸಾಂದೀಪನಿ ಗ್ರಾಮೀಣ ಆಂಗ್ಲ
ಮಾಧ್ಯಮ ಶಾಲೆ, ನರಿಮೊಗರು, ಪುತ್ತೂರು.
ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಕನ್ನಡದ ಒಲವು - ಕವನ
-----------------------------------
ಕಟ್ಟುವೆವು ನಾಡೊಂದ ನಾವೀಗ
ಕನ್ನಡದ ಕಂಪನ್ನು ಹೀರಿದಾಗ!
ತಟ್ಟುವೆವು ಜ್ಞಾನದ ಬಾಗಿಲನ್ನು
ಮುಟ್ಟುವುದು ಜ್ಞಾನದ ಪರಿಧಿಯನ್ನು!!
ಕನ್ನಡವೇ ನಮ್ಮ ಹಸಿವು, ಉಸಿರು
ಕನ್ನಡವೇ ನಮ್ಮ ಜ್ಞಾನ ಬಸಿರು!
ಕನ್ನಡದ ನುಡಿ ಚಂದ, ಕನ್ನಡಕೆ ನಡೆ ಚಂದ
ಕನ್ನಡದ ಒಲುಮೆ ಮಹದಾನಂದ!!
ಕನ್ನಡದ ಸಾಹಿತ್ಯ ಬತ್ತಳಿಕೆಯು
ಕನ್ನಡದ ರಾಜರ ಧೈರ್ಯ ನಿಷ್ಠೆಯು!
ಕನ್ನಡದ ಕೋಟೆ ದೇಗುಲಗಳ ಬೆಳಕು
ಸಾರ್ವಕಾಲಿಕ ಸಾಧನೆಗಳು ಹೊಳಪು!!
ಕನ್ನಡವ ರಕ್ಷಿಸಿ ಬೆಳೆಸುವ ನಾವು
ಭಾಷೆಯ ಗರಿಮೆ ಏರಿಸುವ ನಾವು!
ಕನ್ನಡದ ಕೀರ್ತಿಯ ಹೊಗಳಿ ಹಾಡಿ
ಕನ್ನಡಕೆ ಮುಡಿಪಾಗಿ ಹೋರಾಟ ಮಾಡಿ!!
............................... ಋತ್ವಿಕ್ ಮೊಳೆಯಾರ್
ನಾಲ್ಕನೆಯ ತರಗತಿ
ಸಾಂದೀಪನಿ ಗ್ರಾಮೀಣ ಆಂಗ್ಲ
ಮಾಧ್ಯಮ ಶಾಲೆ, ನರಿಮೊಗರು, ಪುತ್ತೂರು.
ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*********************************************