
ಕನ್ನಡ ಭಾಷೆ - ಕವನ
Monday, November 1, 2021
Edit
ಲಾವಣ್ಯ
10ನೇ ತರಗತಿ
ಸರಕಾರಿ ಪ್ರೌಢಶಾಲೆ ಕೊಳ್ನಾಡು
ಕಾಡುಮಠ , ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಕನ್ನಡ ಭಾಷೆ - ಕವನ
----------------------------
ಕನ್ನಡವೆಂದರೆ ಬರಿ ನುಡಿಯಲ್ಲ
ಅದೊಂದು ಹೊನ್ನಿನ ಗಣಿ
ಕನ್ನಡ ಭಾಷೆಯು ಬರಿ ಭಾಷೆಯಲ್ಲ
ಅದ ಕೇಳಲು ಜೇನಿಗಿಂತಲೂ ಸಿಹಿ.
ಕಲೆ, ಸಾಹಿತ್ಯ , ಸಾಂಸ್ಕೃತಿಕವಾಗಿ ಮೆರೆದು..
ಇತಿಹಾಸದ ಪುಟದಲ್ಲಿ ಬೆರೆತು..
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ..
ಎಂದು ಪೇಳುವ ಕನ್ನಡಿಗರ ,
ಉಸಿರು-ಉಸಿರಿನಲ್ಲಿ ರಾರಾಜಿಸುತ್ತಿದೆ ಕನ್ನಡ
ನಗುಮೊಗದಿ ನಿಂತಿರುವ
ಕನ್ನಡಾಂಬೆಯ ಮಡಿಲಿನಲ್ಲಿ
ಸಹ್ಯಾದ್ರಿಯ ಶಿಖರದಲ್ಲಿ....
ಹಚ್ಚಹಸಿರ ಭೂರಮೆಯಲಿ..
ಬೇಲೂರು ಹಳೇಬೀಡಿನ ವೈಭವದಲ್ಲಿ
ರಾರಾಜಾಜಿಸುತ್ತಿದೆ ಕನ್ನಡ..
ಸಾಹಿತ್ಯದ ರಸದೌತಣವ ನೀಡಿ
ಗಾನಸುಧೆಯ ಹರಿಸಿ..
ಎಲ್ಲೆಡೆ ಕನ್ನಡ ಡಿಂಡಿಮವ ಬಾರಿಸಿ
ಅದೆಷ್ಟೋ ಸಾಮ್ರಾಟರು ಆಳ್ವಿಕೆ ನಡೆಸಿ
ಮೆರೆದ ನಾಡು ನಮ್ಮದು
ನುಡಿ ನಮ್ಮದು.
ಕನ್ನಡವೇ ಹೊನ್ನುಡಿ ಕನ್ನಡವೇ ಸತ್ಯ
ಕನ್ನಡವೇ ಚೆನ್ನುಡಿ ಕನ್ನಡಾಮೃತವು .....!!
...............................................ಲಾವಣ್ಯ
10ನೇ ತರಗತಿ
ಸರಕಾರಿ ಪ್ರೌಢ ಶಾಲೆ ಕೊಳ್ನಾಡು
ಕಾಡುಮಠ , ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
**********************************************