
ಕನ್ನಡ - ಕವನ
Monday, November 1, 2021
Edit
8 ನೇ ತರಗತಿ ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಕನ್ನಡ - ಕವನ
------------------------
ಕನ್ನಡಾಂಬೆಯ ಮಕ್ಕಳು ನಾವು
ಕನ್ನಡಕ್ಕಾಗಿ ಹೋರಾಡುವೆವು
ಕನ್ನಡವನ್ನು ನುಡಿಯುವೆವು
ಕನ್ನಡವನ್ನು ಬೆಳೆಸುವೆವು
ಕನ್ನಡದ ಅಭಿಮಾನ ಎಂದೆಂದೂ
ಕನ್ನಡದ ಕವಿಗಳು ನೂರೊಂದು
ಕನ್ನಡ ನಾಡು ನುಡಿಯ ಸಾಹಿತಿಗಳು
ನಮಗೆ ನೀಡಿರುವರು ಅಸಂಖ್ಯ ಕೃತಿಗಳು
ಕನ್ನಡವೆಂಬ ಮೂರು ಅಕ್ಷರ
ನಮಗೆ ಅದು ಬಹಳ ಹತ್ತಿರ
ಕನ್ನಡವೆಂಬುದು ನಮ್ಮ ಗೌರವ
ಎಂದೆಂದೂ ಕನ್ನಡ ಅಜರಾಮರ
ಕನ್ನಡದೆಡೆ ಎಲ್ಲರ ಗಮನ
ಕನ್ನಡಾಂಬೆಗೆ ಸಲ್ಲಿಸುವೆ ನಮನ
ಕನ್ನಡವನ್ನು ಉಳಿಸೋಣ
ಕನ್ನಡವನ್ನು ಬೆಳೆಸೋಣ
...............................................ಗ್ರೀಷ್ಮಾ
8 ನೇ ತರಗತಿ
ಸ.ಪ್ರೌ. ಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*********************************************