
ಅಪ್ಪ ಬಿಟ್ಟು ಹೋದ ಆಸ್ತಿ - ಕಥೆ
Wednesday, October 6, 2021
Edit
ವೈಷ್ಣವಿ ವೈ.ಕೆ., ಕಜಿಪಿತ್ತಿಲು
4 ನೇ ತರಗತಿ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಲ್ಕೆಮಾರ್ ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಒಂದು ದಿನ ಚಿಂಟು ಆ ಪುಸ್ತಕ ತೆರೆದು ನೋಡಿದ. ಅದರಲ್ಲಿ ಸಾಬೂನು ಮಾಡುವ ವಿಧಾನ ಇತ್ತು. ಅದಕ್ಕೆ ಬೇಕಾದ ಸಾಮಾಗ್ರಿಗಳನ್ನು ತಂದನು. ಸಾಬೂನು ಮಾಡಲು ಪ್ರಯತ್ನಿಸಿದ. ಒಂದು ಸಾಬೂನು ತಯಾರಿಸಿದನು. ಚಿಂಟು ಮತ್ತೆ ಮತ್ತೆ ತುಂಬಾ ಸಾಬೂನು ಮಾಡಿದನು. ತುಂಬಾ ಸಾಬೂನು ಆದ ಮೇಲೆ ಮಾರುಕಟ್ಟೆಗೆ ಮಾರಾಟ ಮಾಡಲು ಹೋದ. ಎಲ್ಲವೂ ಮಾರುಕಟ್ಟೆಯಲ್ಲಿ ಮಾರಾಟವಾಯಿತು.
ಈ ಎಲ್ಲಾ ವಿಚಾರ ಮಿಂಟುವಿಗೆ ಗೊತ್ತಿರಲಿಲ್ಲ. ಒಂದು ದಿನ ಮಿಂಟು ಆಟವಾಡುತ್ತಾ ಇರುವಾಗ ಮನೆಯ ಮುಂದೆ ತುಂಬ ಜನ ನಿಂತಿದ್ದರು. ಆಗ ಮಿಂಟು ಇದು ಏನು ಜನ ಎಂದು ಕೇಳಿದನು. ಆಗ ಚಿಂಟು ಮಾರಾಟ ಮುಗಿಯಲಿ ಆಮೇಲೆ ಹೇಳುತ್ತೇನೆ ಎಂದ. ಅಮೇಲೆ ಎಲ್ಲಾ ವಿಷಯ ಹೇಳಿದ. ಆಮೇಲೆ ಇಬ್ಬರೂ ಸಾಬೂನು ಮಾಡಿ ಮಾರಾಟ ಮಾಡಲು ಪ್ರಾರಂಬಿಸಿದರು.
__________ ಚಿತ್ರ ಮತ್ತು ಬರಹ ____________
ವೈಷ್ಣವಿ ವೈ.ಕೆ., ಕಜಿಪಿತ್ತಿಲು
4 ನೇ ತರಗತಿ
ಅಪ್ಪ ಬಿಟ್ಟು ಹೋದ ಆಸ್ತಿ - ಕಥೆ
ಒಂದು ಊರಿನಲ್ಲಿ ಒಬ್ಬ ರಮೇಶ ಎಂಬವನು ಇದ್ದ. ಅವನಿಗೆ ಎರಡು ಮಕ್ಕಳು. ಒಬ್ಬನ ಹೆಸರು ಚಿಂಟು, ಇನ್ನೊಬ್ಬನ ಹೆಸರು ಮಿಂಟು . ಅದರಲ್ಲಿ ಚಿಂಟು ಒಳ್ಳೆಯ ಬುದ್ದಿವಂತ ಮತ್ತು ಪರಿಶ್ರಮಜೀವಿ. ಆದರೆ ಮಿಂಟು ತುಂಬಾ ಸೋಮಾರಿ. ಒಂದು ವರ್ಷವಾಯಿತು. ಒಂದು ದಿನ ಅವರ ತಂದೆ ರಮೇಶ ಹಾಸಿಗೆ ಹಿಡಿದನು. ಆಗ ತನ್ನ ಇಬ್ಬರು ಮಕ್ಕಳನ್ನು ಕರೆದನು. ಇಬ್ಬರೂ ಬಂದರು. ಆಗ ಚಿಂಟು ಯಾಕೆ ಕರೆದೆ ಅಪ್ಪ ಎಂದು ಕೇಳಿದನು. ಆಗ ಅಪ್ಪ ಅವನಿಗೆ ನನ್ನದೂಂತ ಯಾವುದೇ ಆಸ್ತಿ ಇಲ್ಲ. ಆದರೆ ಅಲ್ಲಿಯೊಂದು ಪುಸ್ತಕವಿದೆ. ಅದೇ ನನ್ನ ಆಸ್ತಿ ಎಂದು ಹೇಳಿ ಪ್ರಾಣ ಬಿಟ್ಟ.ಒಂದು ದಿನ ಚಿಂಟು ಆ ಪುಸ್ತಕ ತೆರೆದು ನೋಡಿದ. ಅದರಲ್ಲಿ ಸಾಬೂನು ಮಾಡುವ ವಿಧಾನ ಇತ್ತು. ಅದಕ್ಕೆ ಬೇಕಾದ ಸಾಮಾಗ್ರಿಗಳನ್ನು ತಂದನು. ಸಾಬೂನು ಮಾಡಲು ಪ್ರಯತ್ನಿಸಿದ. ಒಂದು ಸಾಬೂನು ತಯಾರಿಸಿದನು. ಚಿಂಟು ಮತ್ತೆ ಮತ್ತೆ ತುಂಬಾ ಸಾಬೂನು ಮಾಡಿದನು. ತುಂಬಾ ಸಾಬೂನು ಆದ ಮೇಲೆ ಮಾರುಕಟ್ಟೆಗೆ ಮಾರಾಟ ಮಾಡಲು ಹೋದ. ಎಲ್ಲವೂ ಮಾರುಕಟ್ಟೆಯಲ್ಲಿ ಮಾರಾಟವಾಯಿತು.
ಈ ಎಲ್ಲಾ ವಿಚಾರ ಮಿಂಟುವಿಗೆ ಗೊತ್ತಿರಲಿಲ್ಲ. ಒಂದು ದಿನ ಮಿಂಟು ಆಟವಾಡುತ್ತಾ ಇರುವಾಗ ಮನೆಯ ಮುಂದೆ ತುಂಬ ಜನ ನಿಂತಿದ್ದರು. ಆಗ ಮಿಂಟು ಇದು ಏನು ಜನ ಎಂದು ಕೇಳಿದನು. ಆಗ ಚಿಂಟು ಮಾರಾಟ ಮುಗಿಯಲಿ ಆಮೇಲೆ ಹೇಳುತ್ತೇನೆ ಎಂದ. ಅಮೇಲೆ ಎಲ್ಲಾ ವಿಷಯ ಹೇಳಿದ. ಆಮೇಲೆ ಇಬ್ಬರೂ ಸಾಬೂನು ಮಾಡಿ ಮಾರಾಟ ಮಾಡಲು ಪ್ರಾರಂಬಿಸಿದರು.
__________ ಚಿತ್ರ ಮತ್ತು ಬರಹ ____________
ವೈಷ್ಣವಿ ವೈ.ಕೆ., ಕಜಿಪಿತ್ತಿಲು
4 ನೇ ತರಗತಿ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಲ್ಕೆಮಾರ್,