
ಕೆಂಪು ಇರುವೆ ಮತ್ತು ಕಪ್ಪು ಇರುವೆ ( ಚಿತ್ರಕಥೆ - 8 )
Wednesday, October 6, 2021
Edit
ನಿನಾದ್ ಕೈರಂಗಳ್
4 ನೇ ತರಗತಿ
ಶ್ರೀರಾಮ ವಿದ್ಯಾ ಕೇಂದ್ರ ಕಲ್ಲಡ್ಕ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಒಂದು ಊರಿನಲ್ಲಿ ಒಂದು ಕಪ್ಪು ಇರುವೆ ಇತ್ತು.
ಕಪ್ಪು ಇರುವೆ ತುಂಬಾ ದುಡಿಯುತ್ತಾ ಇತ್ತು. ಊಟ ಮತ್ತು ತಿಂಡಿಗಳನ್ನು ತನ್ನ ಮನೆಯಲ್ಲಿ ಸಂಗ್ರಹಿಸುತ್ತಿತ್ತು. ಇದನ್ನು ನೋಡಿದ ಕೆಂಪು ಇರುವೆ ಮರುದಿವಸ ಕಪ್ಪು ಇರುವೆಯ ಮನೆಗೆ ಹೋಗಿ ಊಟ ತಿಂಡಿಗಳನ್ನು ತನ್ನ ಮನೆಗೆ ತಂದಿತು. ಕಪ್ಪು ಇರುವೆಗೆ ತುಂಬಾ ಬೇಸರವಾಯಿತು. ಮರುದಿನ ಕಪ್ಪು ಇರುವೆಗೆ ಒಂದು ಉಪಾಯ ಹೊಳೆಯಿತು. ಕಪ್ಪು ಇರುವೆ ಮೆಣಸಿನ ಹುಡಿಯನ್ನು ತನ್ನ ಮನೆಗೆ ತಂದಿತು. ಎಲೆಯ ಒಳಗೆ ಊಟದಲ್ಲಿ ಮಿಶ್ರ ಮಾಡಿ ಬಚ್ಚಿಟ್ಟಿತು. ಮರುದಿವಸ ಕೆಂಪು ಇರುವೆ ಊಟವನ್ನು ಕದಿಯಲು ಬಂದಿತು. ಆಗ ಊಟ ತಿಂದು ನೋಡುವಾಗ ತುಂಬಾ ಖಾರ ಆಯಿತು. ಕೆಂಪು ಇರುವೆಗೆ ತುಂಬಾ ಹೆದರಿಕೆ ಆಯಿತು. ಮತ್ತೆ ಎಂದೂ ಕೆಂಪು ಇರುವೆ ಕಪ್ಪು ಇರುವೆಯ ಮನೆಗೆ ಹೋಗಲೇ ಇಲ್ಲ.
...................................... ನಿನಾದ್ ಕೈರಂಗಳ್
4 ನೇ ತರಗತಿ
ಶ್ರೀರಾಮ ವಿದ್ಯಾ ಕೇಂದ್ರ ಕಲ್ಲಡ್ಕ ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
*********************************************