
ಮೂರು ಕೋತಿಗಳು ಮತ್ತು ತೋಟಗಾರ - ಕಥೆ
Sunday, October 17, 2021
Edit
ಕಥೆ ಮತ್ತು ಚಿತ್ರ ರಚನೆ :
ತರುಣ್ ಕೃಷ್ಣ ನೇರಳಕಟ್ಟೆ
4ನೇ ತರಗತಿ
ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಪುತ್ತೂರು
ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಒಂದು ತೋಟದಲ್ಲಿ 3 ಕೋತಿಗಳಿದ್ದವು. ಅವುಗಳು ದಿನಾಲೂ ತೋಟಗಾರನಿಗೆ ಸಹಾಯ ಮಾಡುತ್ತಿದ್ದವು. ಒಂದು ದಿನ ತೋಟಗಾರ ಕೋತಿಗಳನ್ನು ಕರೆದು "ನಾನು ಜಾತ್ರೆಗೆ ಹೋಗುತ್ತಿದ್ದೇನೆ. ನೀವು ಈ ತೋಟಕ್ಕೆ ನೀರು ಹಾಕಬೇಕು" ಎಂದು ಹೇಳಿದನು. ಅವನು ಜಾತ್ರೆಗೆ ಹೋದನು. ಆಗ ಮೂರು ಕೋತಿಗಳು ಕಾಡಿನಲ್ಲಿದ್ದ ಏಳು ಕೋತಿಗಳನ್ನು ಕರೆಸಿ "ನೀವು ತೋಟವನ್ನು ಸ್ವಚ್ಚ ಮಾಡಿ ನೀರು ಹಾಕಬೇಕು" ಎಂದು ಹೇಳಿತು. ಆ ಏಳು ಕೋತಿಗಳು ಮೊದಲು ನೆಟ್ಟಿದ್ದ ಪುಟ್ಟ ಪುಟ್ಟ ಗಿಡಗಳನ್ನು ಗುಂಡಿಯಿಂದ ತೆಗೆದು ಸ್ವಚ್ಚ ಮಾಡಿ ನಂತರ ಗಿಡವನ್ನು ನೆಟ್ಟು ನೀರು ಹಾಕಿದವು. ಸಂಜೆ ಆಗುವಾಗ ಏಳು ಕೋತಿಗಳು ಅಲ್ಲಿಂದ ಕಾಡಿಗೆ ಹೋದವು. ಸಂಜೆ ಜಾತ್ರೆಯಿಂದ ತೋಟಗಾರ ಬಂದಾಗ ಮೂರು ಕೋತಿಗಳು " ನಾವು ಮೂವರು ಸೇರಿ ಇಡೀ ತೋಟ ಸ್ವಚ್ಚ ಮಾಡಿ ನೀರು ಹಾಕಿದೆವು. ನಮಗೆ ಬಾಳೆಹಣ್ಣು ಕೊಡು" ಎಂದಿತು. ತೋಟಗಾರ ಖುಷಿಯಿಂದ ಬಾಳೆಹಣ್ಣು ಕೊಟ್ಟನು. ತೋಟವನ್ನು ನೋಡಲು ತೋಟಗಾರ ಹೋದಾಗ ಬದುಕಿದ್ದ ಗಿಡಗಳು ಬಾಡಿ ಸತ್ತಿತ್ತು. ಇದರಿಂದ ಕೋಪಗೊಂಡು ಮೂರು ಕೋತಿಗಳನ್ನು ಅಲ್ಲಿಂದ ಓಡಿಸಿದನು. ಮತ್ತೆಂದೂ ಕೋತಿಗಳು ಅಲ್ಲಿಗೆ ಬರುತ್ತಿರಲಿಲ್ಲ. ಈ ಕಥೆಯಿಂದ ನಮ್ಮ ಕೆಲಸವನ್ನು ನಾವೇ ಮಾಡಬೇಕು ಎಂದು ತಿಳಿಯುತ್ತದೆ.
..................ಕಥೆ ಮತ್ತು ಚಿತ್ರ ರಚನೆ :..............
ತರುಣ್ ಕೃಷ್ಣ ನೇರಳಕಟ್ಟೆ
4ನೇ ತರಗತಿ
ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಪುತ್ತೂರು
ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************