-->
ಅಕ್ಕನ ಪತ್ರ - 9 ಕ್ಕೆ ಮಕ್ಕಳ ಉತ್ತರ (ಸಂಚಿಕೆ 2)

ಅಕ್ಕನ ಪತ್ರ - 9 ಕ್ಕೆ ಮಕ್ಕಳ ಉತ್ತರ (ಸಂಚಿಕೆ 2)

             ಮಕ್ಕಳ ಜಗಲಿಯಲ್ಲಿ........ ಮಕ್ಕಳಿಗಾಗಿ 
ಅಕ್ಕ ( ತೇಜಸ್ವಿ ಅಂಬೆಕಲ್ಲು) ಬರೆದ 9 ನೇ ಪತ್ರಕ್ಕೆ ಜಗಲಿಯ ಮಕ್ಕಳು ತಮ್ಮ ಉತ್ತರವನ್ನು ಬರೆದು ಕಳುಹಿಸಿದ್ದಾರೆ. ಈ ಪತ್ರದ ಮೂಲಕ ಬಹಳಷ್ಟು ಒಳ್ಳೆಯ ವಿಚಾರಗಳನ್ನು ತಿಳಿದುಕೊಳ್ಳುವ ಅವಕಾಶ , ಇನ್ನೊಂದು ಬರೆಯುವ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಲು ಸಹಕಾರಿಯಾದೀತು. ಸ್ವಂತವಾಗಿ ಬರೆಯುವ ಗುಣವನ್ನು ಬೆಳೆಸುವ ಮೂಲಕ ವಿದ್ಯಾರ್ಥಿಗಳಿಗೆ ಸ್ವಂತಿಕೆಯನ್ನು ರೂಪಿಸಿಕೊಳ್ಳಲು ಒಳ್ಳೆಯ ವೇದಿಕೆಯಾಗಿದೆ. ಇಲ್ಲಿ ಮನಸ್ಸಿನ ಭಾವನೆಗಳನ್ನು ವ್ಯಕ್ತಪಡಿಸಿರುವ ಜಗಲಿಯ ಎಲ್ಲಾ ಮಕ್ಕಳಿಗೆ ಅಭಿನಂದನೆಗಳು. ಈ ವಿಚಾರದಲ್ಲಿ ಪ್ರೋತ್ಸಾಹ ಕೊಡುತ್ತಿರುವ ಶಿಕ್ಷಕರಿಗೂ ಮತ್ತು ಪೋಷಕರಿಗೂ ಧನ್ಯವಾದಗಳು. 


       ಪ್ರೀತಿಯ ಅಕ್ಕನಿಗೆ...... ನಿಮ್ಮ ತಮ್ಮನಾದ ತನ್ಮಯ್ ಕೃಷ್ಣನು ಮಾಡುವ ನಮಸ್ಕಾರಗಳು ....
ನಾನು ಕ್ಷೇಮ ನೀವು ಕೂಡಾ ಕ್ಷೇಮವೆಂದು ಭಾವಿಸಿದ್ದೇನೆ.  ಅಂದ ಹಾಗೆ ನಿಮ್ಮ ಪತ್ರ ಓದಿದೆ. ಬಹಳ ಸೊಗಸಾಗಿ ಶುಭಾಶಯ ಪತ್ರದ ಬಗ್ಗೆ ಹೇಳಿದ್ದೀರಿ. ಅತಿಥಿ ದೇವೋಭವ ಎಂಬುದು ನಮ್ಮ ಭಾರತದ ಸಂಸ್ಕೃತಿಯಾಗಿದೆ. ಆ ಸಂಸ್ಕೃತಿಯ ಪ್ರಕಾರ ನಮ್ಮೆದುರು ಯಾರಾದರೂ ಬಂದಾಗ ನಮಸ್ಕಾರ ಮಾಡಿ ಮಾತಾನಾಡಿಸುತ್ತೇನೆ. ಅವರಿಗೆ ಬೇಕಾದ ಮಾಹಿತಿ ನೀಡುತ್ತೇನೆ. ಮನೆಯ ಹಿರಿಯರಿಗೆ ಸಂಬಂಧಿಸಿದ ಯಾರಾದರೂ ಬಂದಾಗ ಅವರಿಗೆ ನಮಸ್ಕಾರ ಮಾಡಿ ಅವರನ್ನು ಕುಳಿತುಕೊಳ್ಳಲು ಹೇಳುತ್ತೇನೆ. ನಂತರ ಬಾಯಾರಿಕೆ ಬಗ್ಗೆ ವಿಚಾರಿಸಿ ಅವರ ಯೋಗ ಕ್ಷೇಮ ಕೇಳುತ್ತೇನೆ. ಅವರ ಜತೆ ಮಾತಾಡುತ್ತೇನೆ. ನನ್ನ ಅಪ್ಪ- ಅಮ್ಮ - ಅಜ್ಜ - ಅಜ್ಜಿಯರನ್ನು ಕರೆದು ಮಾಹಿತಿ ನೀಡುತ್ತೇನೆ. ಹೀಗೆ ಮನೆಯಲ್ಲಿ ಹಿರಿಯರು ನನಗೆ ಕಲಿಸಿದಂತೆ ನಡೆದುಕೊಳ್ಳುತ್ತಿದ್ದೇನೆ. ನಿಮ್ಮ ಪತ್ರ ಓದಿದಾಗ ಎಲ್ಲವೂ ನೆನಪಾಯಿತು. ನಿಮ್ಮ ಪತ್ರ ಬೇರೆ ಬೇರೆ ವಿಷಯಗಳ ಬಗ್ಗೆ ಮಾಹಿತಿ ನೀಡುತ್ತಿದೆ. ನಿಮಗೆ ಥ್ಯಾಂಕ್ಸ್ ಅಕ್ಕಾ....ಹೀಗೆ ಪತ್ರ ಬರೆಯುತ್ತಾ ನಮಗೆ ಮಾರ್ಗದರ್ಶನ ಮಾಡುತ್ತಾ ಇರಿ.. ಪ್ರೀತಿಯ ವಂದನೆಗಳೊಂದಿಗೆ..........
..............................ತನ್ಮಯ್ ಕೃಷ್ಣ ನೇರಳಕಟ್ಟೆ
9 ನೇ ತರಗತಿ
ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ , ತೆಂಕಿಲ
ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
********************************************************************************************
     ನಮಸ್ತೇ ಅಕ್ಕ. ನಾನು ಬಿಂದು ಶ್ರೀ. ನಾನು ಚಿಕ್ಕ ಪುಟಾಣಿ ಇರುವಾಗ ಯಾರಾದರೂ ಅತಿಥಿಗಳು ಬಂದರೆ ಅವರನ್ನು ನೋಡಿ ಮನೆಯ ಒಳಗೆ ಓಡುವ ಅಭ್ಯಾಸವಿತ್ತು. ಅವರು ಯಾವಾಗ ಹೋಗುತ್ತಾರೆ ಎಂದು ಕಾಯುತ್ತಾ ಕುಳಿಯುತಿದ್ದೆ. ನಾನು ದೊಡ್ಡವಳಾದ ಮೇಲೆ ಅದು ತಪ್ಪು ಎಂದು ಗೊತಾಯ್ತು. ಈಗ ನಮ್ಮ ಮನೆಗೆ ಬಂದ ಅತಿಥಿಗಳ ಹತ್ತಿರ ನಾನು ಮಾತಾಡುತ್ತೇನೆ. ಪರಿಚಯ ಮಾಡಿಕೊಳ್ಳುತ್ತೇನೆ. ಸಮಯ ಕಳೆಯುತ್ತೇನೆ. ನಮ್ಮ ಮನೆಗೆ ಬಂದ ಅತಿಥಿ ಗಳನ್ನು ನಾವು ಸ್ವಾಗತಿಸಬೇಕು. ವಂದನೆಗಳು ಅಕ್ಕ....................... ನಿಮ್ಮ ಪ್ರೀತಿಯ     
........................................... ಕೆ. ಬಿಂದು ಶ್ರೀ 10 ನೇ ತರಗತಿ
ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕ 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
********************************************************************************************


ಅಕ್ಕನ ಪತ್ರ -- 9
ನಮಸ್ತೆ ಅಕ್ಕ,
ನನ್ನ ಶಾಲೆ ಶುರುವಾಯಿತು, ನನಗೆ ಬಹಳ ಸಂತೋಷ. ನೀವು ಹೇಳಿದ ಹಾಗೆ ನಾನು Thank you card ತಯಾರಿಸಿ ಅಜ್ಜನ ಮನೆಯ ಅಕ್ಕನವರಿಗೆ ಕೊಟ್ಟಿದ್ದೇನೆ. ದಸರಾ ರಜೆಯಲ್ಲಿ ನಾನು ಹೋದಾಗ ತುಂಬಾ ಮಜವಾಯಿತು. ಪ್ರೀತಿಯಿಂದ ಎಲ್ಲರೂ ನೋಡಿಕೊಂಡರು. ನೀವು ತಿಳಿಸಿದ ಕಾರಣ card ಮಾಡಿದೆನು ಅವರಿಗೆ ತುಂಬಾ ಸಂತೋಷ.......... ವಂದನೆಗಳು
.............................................. ಪ್ರಣವ್ ದೇವ್
ತರಗತಿ -೧
ಲೇಡಿ ಹಿಲ್ ಇಂಗ್ಲೀಷ್ ಹೈಯರ್ ಪ್ರೈಮರಿ ಸ್ಕೂಲ್ - ಮಂಗಳೂರು - ದಕ್ಷಿಣ ಕನ್ನಡ ಜಿಲ್ಲೆ 
********************************************************************************************       ನಮಸ್ತೆ ಅಕ್ಕಾ..... ನಾನು ನಿಮ್ಮ ತಂಗಿ ನಿಭಾ....
ಹೌದು ನೀವು ಹೇಳಿದ್ದು ನೂರಕ್ಕೆ ನೂರು ಸತ್ಯ.
ನಾನು ಕೂಡ ಕೆಲವೊಂದು ಸಂದರ್ಭದಲ್ಲಿ ಹೀಗೆ T. V , mobile ನೋಡುತ್ತಿದ್ದೆ ... ಆದರೆ ಈಗ ಹಿರಿಯರು ಹೇಳಿದಂತೆ ನಡೆದುಕೊಳ್ಳುತ್ತಿದ್ದೇನೆ...
ನಾನು ಕೆಲವೊಂದು ಮನೆಗಳಿಗೆ ಹೋದಾಗ ಅಲ್ಲಿಯೂ ಕೂಡ ಕೆಲವು ಮಕ್ಕಳು ಹೀಗೆ phone, T. V ಯಲ್ಲಿ ಮುಳುಗಿರುತ್ತಾರೆ... ಆದರೆ ಇನ್ನು ಮುಂದೆ ಈ ತರ ಯಾರಾದರು ಮಾಡುವುದನ್ನು ಕಂಡರೆ ಅವರಿಗೆ ತಿಳಿಸುತ್ತೇನೆ. ಅಕ್ಕಾ ನೀವು ಬರೆದ ಈ ಪತ್ರ ನನಗೆ ತುಂಬಾ ಇಷ್ಟವಾಯಿತು...
ಧನ್ಯವಾದಗಳು ಅಕ್ಕಾ.......
..................................................... ನಿಭಾ
8 ನೇ ತರಗತಿ
ಸ. ಹಿ. ಪ್ರಾ. ಶಾಲೆ. ನೇರಳಕಟ್ಟೆ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
********************************************************************************************


  ನಮಸ್ತೆ , ನನ್ನ ಪ್ರೀತಿಯ ಅಕ್ಕನಿಗೆ ಸಾತ್ವಿಕ್ ಗಣೇಶ್ ಮಾಡುವ ನಮಸ್ಕಾರಗಳು.
     ಅಕ್ಕನು ಪತ್ರದಲ್ಲಿ ತಿಳಿಸಿದಂತೆ ನಾವೆಲ್ಲರೂ ಮನೆಗೆ ಬಂದ ಅತಿಥಿಗಳನ್ನು ಪ್ರೀತಿಯಿಂದ ಸ್ವಾಗತಿಸಿ ಬರಮಾಡಿ ಕೊಳ್ಳಬೇಕು. ನಮ್ಮ ಮನೆಗೆ ಅತಿಥಿಗಳು ಬಂದಾಗ ನಾನು "ಬನ್ನಿ ಬನ್ನಿ , 
ಕುಳಿತುಕೊಳ್ಳಿ" ಎಂದು ಹೇಳುತ್ತೇನೆ. ಬಾಯಾರಿಕೆ ಯನ್ನು ಕೊಡುತ್ತೇನೆ .
        "ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೇ " ಎನ್ನುವ ಮಾತಿನಂತೆ ನಾವೆಲ್ಲರೂ ಚಿಕ್ಕನಿನಿಂದಲೇ ಇದನ್ನು ಅಭ್ಯಾಸ ಮಾಡಿದರೆ ತುಂಬಾ ಒಳ್ಳೆಯದು. ನಾವೆಲ್ಲರೂ ಗುರು ಹಿರಿಯರು ಎಲ್ಲರಲ್ಲಿಯೂ ನಯವಿನಯತೆಯಿಂದ ನಡೆದುಕೊಂಡು ಬಾಳೋಣ. ಹಾಗೆಯೇ ನಾವು ಇನ್ನು ಫೋನ್ ಮಾತನಾಡುವಾಗ ಹಲೋ ಎನ್ನುವ ಬದಲು ನಮಸ್ತೇ ಎನ್ನುವ ಪದವನ್ನು ಬಳಸೋಣ. ಧನ್ಯವಾದಗಳು ಅಕ್ಕಾ...........
........................................ಸಾತ್ವಿಕ್ ಗಣೇಶ್
7 ನೇ ತರಗತಿ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ , ಬಜಿರೆ
ಬೆಳ್ತಂಗಡಿ ತಾಲೂಕು. ದಕ್ಷಿಣ ಕನ್ನಡ ಜಿಲ್ಲೆ
********************************************************************************************


ಪ್ರೀತಿಯ ಅಕ್ಕ...... ನಾನು ನಿನಾದ್ ಕೈರಂಗಳ. ನಾನು ನಿಮ್ಮ ಪತ್ರ ಓದಿದೆ , ತುಂಬಾ ಚೆನ್ನಾಗಿತ್ತು. ಮನೆಗೆ ನೆಂಟರು ಬರುವಾಗ ನಾನು ಅವರಿಗೆ ಕೈ ಕಾಲು ತೊಳೆಯಲಿಕ್ಕೆ ಬಿಂದಿಗೆಯಲ್ಲಿ ನೀರನ್ನು ಕೊಡುತ್ತೇನೆ. ಅವರನ್ನು ಮಾತನಾಡಿಸುತ್ತೇನೆ. ಅಪ್ಪ , ಅಮ್ಮ ಅವರ ಜೊತೆ ಮಾತನಾಡುತ್ತಿರುವಾಗ ನಾನು ಕೂಡ ಅವರ ಜೊತೆ ಮಾತನಾಡುತ್ತೇನೆ. ಅವರು ಹೊರಡುವಾಗ. ನಾನು ಇನ್ನೊಮ್ಮೆ ಬನ್ನಿ ಅಂತ ಹೇಳುತ್ತೇನೆ. ಮನೆಗೆ ನೆಂಟರು ಬಂದರೆ ನನಗೆ ತುಂಬಾ ಖುಷಿ ಆಗುತ್ತದೆ. ನಮ್ಮ ಮನೆಗೆ ಬಂದ ಅತಿಥಿಗಳನ್ನು ಚೆನ್ನಾಗಿ ನೋಡಿಕೊಳ್ಳುವುದು ನಮ್ಮ ಕರ್ತವ್ಯ. ಮುಂದಿನ ಪತ್ರಕ್ಕೆ ಕಾಯುತ್ತಿರುತ್ತೇನೆ...... ಧನ್ಯವಾದಗಳು ಅಕ್ಕಾ.
..................................... ನಿನಾದ್ ಕೈರಂಗಳ
4ನೇ ತರಗತಿ
ಶ್ರೀರಾಮ ವಿದ್ಯಾ ಕೇಂದ್ರ ಕಲ್ಲಡ್ಕ 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
********************************************************************************************       ಪ್ರೀತಿಯ ಅಕ್ಕನಿಗೆ ವಂದನೆಗಳು. ನನ್ನ ಹೆಸರು ಕಾರುಣ್ಯ. ನಿಮ್ಮ ಪತ್ರ - 9 ನಮ್ಮ ಭಾರತೀಯ ಸಂಸ್ಕೃತಿಯ ಬಗ್ಗೆ ಮನೆಗೆ ಬಂದ ಅತಿಥಿಗಳನ್ನು ಹೇಗೆ ನಮಸ್ಕರಿಸಿ ಪರಿಚಯ ಮಾಡಿಕೊಂಡು ಅತಿಥಿ ದೇವೋಭವ ಎಂಬಂತೆ ಒಳ್ಳೆಯ ಅಭ್ಯಾಸದೊಂದಿಗೆ ಹಾಗೂ ಹಿರಿಯರೊಂದಿಗೆ ಹೇಗೆ ವರ್ತಿಸಬೇಕೆಂಬ ಸಂಸ್ಕಾರವನ್ನು ನಮಗೆಲ್ಲ ಮಕ್ಕಳ ಜಗಲಿಯ ಮೂಲಕ ತಿಳಿಸಿದ ಅಕ್ಕನಿಗೆ ವಂದನೆಗಳು. ಇಂತಿ ಪ್ರೀತಿಯ.............
...........................................ಕಾರುಣ್ಯ ಎನ್ 
3 ನೇ ತರಗತಿ
ದ.ಕ.ಜಿ.ಪ. ಹಿರಿಯ ಪ್ರಾಥಮಿಕ ಶಾಲೆ ನೆಟ್ಲ ಬಂಟ್ವಾಳ ತಾಲೂಕು , ದ.ಕ. ಜಿಲ್ಲೆ
******************************************************************************************** ಪ್ರೀತಿಯ ಅಕ್ಕನಿಗೆ ವಂದನೆಗಳು...... ನನ್ನ ಹೆಸರು ಶೌರ್ಯ......   ನಮ್ಮ ಮನೆಗೆ ಯಾರಾದರೂ ಅತಿಥಿಗಳು ಬಂದರೆ, ನಾನು ಮೊದಲು ನೀರು ಕೊಟ್ಟು ಸ್ವಾಗಸ್ತೀನಿ. ಆಮೇಲೆ ಹಾಯ್ ಎಲ್ರೂ ಹೇಗಿದ್ದೀರಾ ಅಂತ ಕೇಳ್ತೀನಿ. ಸ್ವಲ್ಪ ಹೊತ್ತಾದ ನಂತರ ಕಾಫೀ ಮಾಡಿ ಕೊಡ್ತೀನಿ
      ಯಾರಾದ್ರೂ ಫೋನ್ ಮಾಡಿದಾಗ ಹಲೋ ಹಾಯ್ ಹೇಗಿದ್ದೀರಾ ಮನೆಯಲ್ಲಿ ಎಲ್ಲ ಚೆನ್ನಾಗಿದ್ದೀರ, ಊಟಾ ಆಯ್ತಾ, ಅಂತ ಕೇಳ್ತೀನಿ. ಮತ್ತೆ ಮನೆಗೆ ಹಿರಿಯರು ಯಾರಾದ್ರೂ ಬಂದಾಗ ನಮಸ್ತೆ ಅಂತ ಎರಡು ಕೈ ಮುಗಿದು ನಮಸ್ತೆ ಮಾಡ್ತೀನಿ. ಪಾನೀಯ ಕೊಟ್ಟು... ಪರಿಚಯ ಮಾಡಿ ಕೊಳ್ತೀನಿ.. ಅವ್ರು ಹೊರಡುವಾಗ ಅವರ ಕಾಲಿಗೆ ಬಿದ್ದು ನಮಸ್ಕಾರ ಮಾಡಿ, ಆಶೀರ್ವಾದ ಪಡೆದು ಕೊಳ್ತೀನಿ. ಬಾಯ್ ಅಂತ ಹೇಳ್ತೀನಿ. ಮತ್ತೆ ಮನೆಯಲ್ಲಿ ಇರುವ ಹಿರಿಯರಿಗೂ ನಾನು ಶಾಲೆಗೆ ಹೋಗುವಾಗ, ಕಾಲಿಗೆ ಬಿದ್ದು ನಮಸ್ಕಾರ ಮಾಡಿ ಆಶೀರ್ವಾದ ಪಡೆದು ಕೊಳ್ತೀನಿ. ಎಲ್ಲರಿಗೂ ಬಾಯಿ ಹೇಳಿ.. ದೇವರಿಗೆ ಕೈ ಮುಗಿದು ಹೊರಡುತ್ತೇನೆ.
        ಅಕ್ಕ.. ನಾನು ನಿಮ್ಮ ಮಾತಿನ ಹಾಗೆ ಇನ್ನೂ ಹೆಚ್ಚಾಗಿ ಸಂಸ್ಕಾರವನ್ನು ಬೆಳೆಸಿ ಕೊಳ್ತೀನಿ.
ನೀವು ಜಗಲಿಯ ಮಕ್ಕಳಿಗೆ ಉತ್ತಮ ಸಲಹೆ ನೀಡಿದ್ದಕ್ಕೆ ನನ್ನ ಕೆಡೆಯಿಂದ ಧನ್ಯವಾದಗಳು...
ಇನ್ನಷ್ಟು ಸಲಹೆ ನೀಡಿ ಅಕ್ಕ.. ಎನ್ನುತ್ತಾ ನನ್ನ ಪುಟ್ಟ ಅನಿಸಿಕೆಗೆ ಪೂರ್ಣ ವಿರಾಮ ಇಡ್ತಿದ್ದೇನೆ..
.........................................ಶೌರ್ಯ ಎಸ್.ವಿ.  
7 ನೇ ತರಗತಿ 
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ 
ಕನ್ಯಾಡಿ - 2 , ಧರ್ಮಸ್ಥಳ 
ಬೆಳ್ತಂಗಡಿ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
********************************************************************************************      ಪ್ರೀತಿಯ ಅಕ್ಕನಿಗೆ ...... ಅದಿತಿ ಕೆ . ಮಾಡುವ ನಮಸ್ಕಾರಗಳು. ನಿಮ್ಮ ಪತ್ರವನ್ನು ಓದಿ ಬಹಳ ಸಂತಸವಾಯಿತು."ಅತಿಥಿ ದೇವೋಭವ" ಎಂಬ ಮುತ್ತಿನಂಥ ಮಾತಿಗೆ ಸಾರ್ಥಕವಾದ ಹಿತನುಡಿಗಳನ್ನು ಹೇಳಿ ನಮಗೆ ಅರಿವನ್ನುಂಟು ಮಾಡಿದ್ದೀರಿ. ನಿಮಗೂ ಹಾಗೆಯೇ ಮಕ್ಕಳ ಜಗಲಿ ವೇದಿಕೆಯ ತಾರಾನಾಥ ಕೈರಂಗಳ್ ಸರ್ ಹಾಗೂ ಭಾರತಿ.ಸಿ,ಕೈರಂಗಳ್ ಮೇಡಂ ರವರಿಗೂ
Thank you card ಮೂಲಕ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಮಕ್ಕಳ ಜಗಲಿ ವೇದಿಕೆಯು ಇನ್ನಷ್ಟು ಬೆಳೆಯಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಇತೀ ನಿಮ್ಮ ಪ್ರೀತಿಯ
................................................. ಅದಿತಿ. ಕೆ
5 ನೇ ತರಗತಿ
ಸೈಂಟ್ ಫ್ರಾನ್ಸಿಸ್ ಆಂಗ್ಲ ಮಾಧ್ಯಮ ಶಾಲೆ ಕೊಕ್ಕಡ. ಬೆಳ್ತಂಗಡಿ ತಾಲೂಕು , ದ.ಕ ಜಿಲ್ಲೆ
********************************************************************************************


Ads on article

Advertise in articles 1

advertising articles 2

Advertise under the article