-->
ಅಕ್ಕನ ಪತ್ರ - 9ಕ್ಕೆ ಮಕ್ಕಳ ಉತ್ತರ ( ಸಂಚಿಕೆ 1)

ಅಕ್ಕನ ಪತ್ರ - 9ಕ್ಕೆ ಮಕ್ಕಳ ಉತ್ತರ ( ಸಂಚಿಕೆ 1)

          ಮಕ್ಕಳ ಜಗಲಿಯಲ್ಲಿ........ ಮಕ್ಕಳಿಗಾಗಿ
 ಅಕ್ಕ ( ತೇಜಸ್ವಿ ಅಂಬೆಕಲ್ಲು) ಬರೆದ 9 ನೇ ಪತ್ರಕ್ಕೆ ಜಗಲಿಯ ಮಕ್ಕಳು ತಮ್ಮ ಉತ್ತರವನ್ನು ಬರೆದು ಕಳುಹಿಸಿದ್ದಾರೆ. ಈ ಪತ್ರದ ಮೂಲಕ ಬಹಳಷ್ಟು ಒಳ್ಳೆಯ ವಿಚಾರಗಳನ್ನು ತಿಳಿದುಕೊಳ್ಳುವ ಅವಕಾಶ , ಇನ್ನೊಂದು ಬರೆಯುವ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಲು ಸಹಕಾರಿಯಾದೀತು. ಸ್ವಂತವಾಗಿ ಬರೆಯುವ ಗುಣವನ್ನು ಬೆಳೆಸುವ ಮೂಲಕ ವಿದ್ಯಾರ್ಥಿಗಳಿಗೆ ಸ್ವಂತಿಕೆಯನ್ನು ರೂಪಿಸಿಕೊಳ್ಳಲು ಒಳ್ಳೆಯ ವೇದಿಕೆಯಾಗಿದೆ. ಇಲ್ಲಿ ಮನಸ್ಸಿನ ಭಾವನೆಗಳನ್ನು ವ್ಯಕ್ತಪಡಿಸಿರುವ ಜಗಲಿಯ ಎಲ್ಲಾ ಮಕ್ಕಳಿಗೆ ಅಭಿನಂದನೆಗಳು. ಈ ವಿಚಾರದಲ್ಲಿ ಪ್ರೋತ್ಸಾಹ ಕೊಡುತ್ತಿರುವ ಶಿಕ್ಷಕರಿಗೂ ಮತ್ತು ಪೋಷಕರಿಗೂ ಧನ್ಯವಾದಗಳು. 


       ನಮಸ್ತೇ ಅಕ್ಕ ! ನಾನು ನಾಗರಾಜ್ ಬಿ .ಎಸ್ . ನಿಮ್ಮ ಪತ್ರ ಓದಿದೆ. ನಿಮ್ಮ ಮಾತು ನಿಜ ಅಕ್ಕ , ನಮ್ಮ ಮನೆಗೆ ಅತಿಥಿಗಳು ಬಂದರೆ ಮನೆಯಲ್ಲಿ ಯಾರು ಇದ್ದರೂ ಇಲ್ಲದಿದ್ದರೂ "ಬಂದೊಡನೆ ಅವರಿಗೆ ಕೈ ಕಾಲು ತೊಳೆಯಲು ನೀರು ಕೊಟ್ಟು , ಒಳಗೆ ಬನ್ನಿ.... ಒಳಗೆ ಬನ್ನಿ.... ಎಂದು ನಾನು ಹೇಳುತ್ತೇನೆ. ಕುಡಿಯಲು ಪಾನೀಯವನ್ನು ಕೊಟ್ಟು ಸತ್ಕರಿಸುತ್ತೇನೆ. ಅವರ ಮತ್ತು ಅವರ ಮನೆಯವರ ಆರೋಗ್ಯ ವಿಚಾರಿಸುತ್ತೇನೆ.  
       ಅಕ್ಕ ನೀವು ಹೇಳಿದಂತೆಯೇ ಉಪಕಾರ ಮಾಡಿದ ವ್ಯಕ್ತಿಗೆ ನಾನು ಧನ್ಯತೆಯನ್ನು ಎಂದೆಂದೂ ತಿಳಿಸಲು ಮರೆಯುವುದಿಲ್ಲ , ಏಕೆಂದರೆ ಅಕ್ಕ ನಮಗೆ ಕಷ್ಟಕಾಲದಲ್ಲಿ ಉಪಕಾರ ಮಾಡಿದ ವ್ಯಕ್ತಿಯು ದೇವರಿಗೆ ಸಮಾನ. ಉಪಕಾರ ಎಷ್ಟೇ ಸಣ್ಣದಾದರೂ ದೊಡ್ಡದಾದರು ಉಪಕಾರ ಉಪಕಾರವೇ ತಾನೇ....! ಕಷ್ಟಕಾಲದಲ್ಲಿ ಯಾರಿಗಾದರೂ ಸಹಾಯ ಮಾಡುವ ಮಾನವೀಯತೆ ನಮ್ಮಲ್ಲಿರಬೇಕು. ಅದನ್ನು ನಾವು ಹೇಗಾದರೂ ಸಲ್ಲಿಸಬಹುದು . ನಿಮ್ಮ ಪತ್ರ ನನಗೆ ತುಂಬಾ ಸ್ಪೂರ್ತಿದಾಯಕ ವಾಗಿತ್ತು. ಮುಂದಿನ ಪತ್ರಕ್ಕಾಗಿ ಕಾಯುತ್ತಿರುವೆ. 
.....................ಧನ್ಯವಾದಗಳು ....................
ನಾಗರಾಜ್ ಬಿ ಎಸ್ 
9ನೇ ತರಗತಿ 
ಸರಕಾರಿ ಪ್ರೌಢಶಾಲೆ ನಾರ್ಶ ಮೈದಾನ . 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
********************************************************************************************ಪ್ರೀತಿಯ ಅಕ್ಕ... ನಿಮ್ಮ ಪತ್ರ ಓದಿದೆ. ನಾನು ನಂದನ್ ಕೆ ಎಚ್. ನಾವು ಕಲಿಯುವುದು ಬಹಳಷ್ಟಿದೆ ಎಂಬುದು ತಿಳಿಯಿತು. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ ಅನ್ನುವಂತೆ ಒಬ್ಬ ಸಂಸ್ಕಾರಯುಕ್ತ ಮನುಷ್ಯ ನಾವಾಗಬೇಕಾದರೆ.. ಅಪ್ಪ ಅಮ್ಮನಿಂದ ಹಿರಿಯರಿಂದ ಕಲಿಯ ಬೇಕಾದ ಗುಣಗಳು ಬಹಳಷ್ಟಿವೆ.. ಪುಟ್ಟ ಧನ್ಯವಾದದಿಂದ ಹಿಡಿದು.. ಉತ್ತಮ ಸಂಸ್ಕಾರಗಳನ್ನು ನಮ್ಮದಾಗಿಸಿಕೊಳ್ಳೋಣ.. ಈ ರೀತಿ ಮಾಡುವುದರಿಂದ ನಾವು ಒಬ್ಬ ಶಿಸ್ತಿನ ಮನುಷ್ಯನಾಗುವುದಕ್ಕಿಂತ ಅತ್ಯಂತ ವಿಧೇಯ ವಿನಯವಂತ ಮನುಷ್ಯನಾಗುವುದು ಒಳ್ಳೆಯದು ಎಂದು ಅನಿಸುತ್ತಿದೆ. ಧನ್ಯವಾದಗಳು ಅಕ್ಕ........
 ...................................... ನಂದನ್ ಕೆ.ಎಚ್
ಏಳನೇ ತರಗತಿ
ದ.ಕ.ಜಿ.ಪಂ.ಉ.ಹಿ. ಪ್ರಾ ಶಾಲೆ ಕುದ್ಮಾರು ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
********************************************************************************************


ನನ್ನ ಪ್ರೀತಿಯ ಅಕ್ಕನಿಗೆ ವಂದನೆಗಳು..... ನಾನು ರಕ್ಷಾ..... ಮನೆಗೆ ಬಂದ ಅತಿಥಿಗಳನ್ನು ಪ್ರೀತಿ ಯಿಂದ ನೋಡಬೇಕು , ಸಂತೋಷದಿಂದ ಮಾತನಾಡಿಸಬೇಕು ಎಂದು ನನ್ನ ಅಮ್ಮ ನನಗೆ ಹೇಳುತಿದ್ದರು. ಹಿರಿಯರಿಗೆ ಗೌರವ ಕೊಡುವುದು, ಹಿರಿಯರಿಗೆ ಸಹಾಯ ಮಾಡುವುದು ಇದು ನನ್ನಲ್ಲಿರುವ ಗುಣಗಳು. ನನಗೆ ಅಪ್ಪ- ಅಮ್ಮ ಯಾವಾಗಲೂ ಈ ಬಗ್ಗೆ ಹೇಳುವರು. ಅಕ್ಕನ ಪತ್ರದಿಂದ ನಾನು ತುಂಬಾ ತಿಳ್ಕೊಂಡೆ. ಧನ್ಯವಾದಗಳು ಅಕ್ಕ........
...................................................... ರಕ್ಷಾ 
9 ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
********************************************************************************************ಅಕ್ಕನ ಪತ್ರ-9
   ನಮಸ್ತೆ ಅಕ್ಕ. ನಾನು ಅನುಲಕ್ಷ್ಮಿ ... ನಿಮ್ಮ ಪತ್ರವನ್ನು ಓದಿದೆ. ಹಿರಿಯರಿಗೆ ಹಾಗೂ ನಮ್ಮ ಮನೆಗೆ ಬಂದ ಅತಿಥಿಗಳಿಗೆ ಯಾವ ರೀತಿ ಗೌರವ ನೀಡಬೇಕು ಎಂಬುದನ್ನು ನೆನಪಿಸಿದ್ದೀರಿ ಅಕ್ಕ. 
   ಹೌದು ಅಕ್ಕ. ನೀವು ಹೇಳಿದ ಹಾಗೆ ನಾನೂ ಕೂಡ ನಮ್ಮ ಮನೆಗೆ ಅತಿಥಿಗಳು ಬಂದಾಗ ನೀರು ಕೊಟ್ಟು, ಕ್ಷೇಮ ಸಮಾಚಾರವನ್ನು ವಿಚಾರಿಸುತ್ತೇನೆ. ಹಾಗೆಯೇ ಹಿರಿಯರಿಗೆ ಕೂಡ. ನಮ್ಮ ಜೀವನದಲ್ಲಿ ಕೂಡ ಹಲವರು ಬಂದು ಹೋಗುತ್ತಾರೆ ಅವರು ಹಿರಿಯರೇ ಆಗಲಿ ಅಥವಾ ಕಿರಿಯರೇ ಆಗಲಿ ಅವರೆಲ್ಲರಿಗೂ ಗೌರವ ನೀಡುವುದು ನಮ್ಮ ಕರ್ತವ್ಯ. 
................................................ಅನುಲಕ್ಷ್ಮಿ 
10 ನೇ ತರಗತಿ 
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
********************************************************************************************ಅಕ್ಕನ ಪತ್ರ 9
ಪ್ರೀತಿಯ ತೇಜಸ್ವಿ ಅಕ್ಕನಿಗೆ ನನ್ನ ಪ್ರೀತಿಯ ನಮನಗಳು........ ನನ್ನ ಹೆಸರು ಪೂರ್ತಿ. ನಾನು ಎಂದಿನಂತೆಯೇ ನಿಮ್ಮ ಇಂದಿನ ಪತ್ರ ಕೂಡ ಓದಿದೆ...... ನಾನು ಕೂಡ ಶುಭಾಶಯ ಪತ್ರ ಬರೆದು ಕಳಿಸಿದ್ದೆ...
ನಮ್ಮ ಮನೆಯಲ್ಲಿ ಅತಿಥಿಗಳು ಬಂದ ಸಂದರ್ಭದಲ್ಲಿ ನಾನು , ಮೊದಲು ನೀರು ಕೊಟ್ಟು ಅತಿಥಿ ಸತ್ಕಾರ ಮಾಡುತ್ತೇನೆ... ಹೌದು , ಯಾರಾದರೇನು ಅವರಿಗೆ ಒಂದು "ನಮಸ್ತೆ " ಎಂದು ಹೇಳಿದರೆ ಏನಾಗುತ್ತದೆ.....? 
ನನ್ನ ಅಜ್ಜ ನನಗೆ ದಿನಾಲೂ ಕರೆ ಮಾಡುತ್ತಾರೆ. ನಾನು ಅವರ ಕರೆಯನ್ನು ಸ್ವೀಕರಿಸುವಾಗ, ಮೊದಲು ಅವರು "ನಮಸ್ತೆ" ಹೇಳಿ ಮತ್ತೆ ಮಾತು ಶುರು ಮಾಡುತಿದ್ದರು. ಅದು ನನಗೂ ಈಗ ಅಭ್ಯಾಸವಾಗಿ ಹೋಗಿದೆ.... ನೀವು ಎಂದಿನಂತೆ ಎಲ್ಲಾ ಪತ್ರದಲ್ಲು ಹೊಸ ಹೊಸ ವಿಚಾರಗಳನ್ನು ಬರೆದು ಕಳಿಸುತ್ತೀರಿ. ನಾನು ನಿಮ್ಮ ಪತ್ರದ ಅಭಿಮಾನಿಯಾಗಿದ್ದೇನೆ... ನಾನು ನಿಮ್ಮ ಮುಂದಿನ ಪತ್ರಕ್ಕಾಗಿ ಕಾಯುತ್ತಿರುತ್ತೇನೆ.
...................ಧನ್ಯವಾದಗಳು....................................................................... ಪೂರ್ತಿ 
8 ನೇ ತರಗತಿ 
ಸರಕಾರಿ ಪ್ರೌಢ ಶಾಲೆ ನಾರಾವಿ ಬೆಳ್ತಂಗಡಿ 
ಬೆಳ್ತಂಗಡಿ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
********************************************************************************************ನಮಸ್ಕಾರಗಳು ಅಕ್ಕ ...... 
ನನ್ನ ಹೆಸರು ಫಾತಿಮತ್ ಶಿಫಾನ , ಅಕ್ಕ ನಿಮ್ಮಪತ್ರವನ್ನು ನಾನು ಓದಿದ್ದೇನೆ. ನಾನು ಹೇಳುದೇನೆಂದರೆ, ಮನೆಗೆ ಬಂದ ಅತಿಥಿಗಳನ್ನು ಪ್ರೀತಿಯಿಂದ ಆಹ್ವಾನಿಸಬೇಕು. ಮೊದಲನೆಯದಾಗಿ ಅವರವ ಧರ್ಮದ ನೀತಿ ಪ್ರಕಾರ ನಮಸ್ಕರಿಸಬೇಕು. ನಮ್ಮ ಮನೆಗೆ ಅತಿಥಿಗಳು ಬರುವುದೆಂದರೆ ನನಗೆ ತುಂಬಾ ಖುಷಿ . ಅವರ ಜೊತೆ ಕುಳಿತು , ತಂದೆ ತಾಯಿಯವರ ಮಾತುಕಥೆ ಇದೆಲ್ಲಾ ತುಂಬಾನೆ ನೆಮ್ಮದಿ ಸಂತೋಷ ಕೊಡುತ್ತದೆ. ನೆಂಟರು ಬಂದೊಡನೆ ನಾನು ಅವರಿಗೆ ಕುಡಿಯಲು ಪಾನೀಯ ಕೊಟ್ಟು ಊಟ ಉಪಾಚಾರಗಳ ಜೊತೆ ಕೈ ಜೋಡಿಸುವೆನು. ನಾನು ಹಿರಿಯರನ್ನು ಗೌರವಿಸುವೆನು. ಆಟ ಪಾಠದ ಜೊತೆ ಮರೆತು ಹೋದ ನೆನಪುಗಳನ್ನು ಮರುಕಳಿಸಿದ ಅಕ್ಕಾ ನಿಮಗೆ ಧನ್ಯವಾದಗಳು........
.........................................ಫಾತಿಮತ್ ಶಿಫಾನ 
9 ನೇ ತರಗತಿ
ಸರ್ಕಾರಿ ಪ್ರೌಢಶಾಲೆ ನಾರ್ಶ ಮೈದಾನ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
********************************************************************************************     ಧನ್ಯವಾದ , ಥ್ಯಾಂಕ್ಸ್ , ಸೊಲ್ಮೆಲು,........ ಇವೆಲ್ಲಾ ಪದಗಳು ಸಜ್ಜನಿಕೆ, ಆತ್ಮೀಯತೆಯ ಸಂಬಂಧವನ್ನು ಇನ್ನಷ್ಟು ಗಟ್ಟಿಮಾಡುತ್ತದೆ. ನಾವು ಬಸ್ಸಿನಲ್ಲಿ ಅಥವಾ ಮನೆಗೆ ಬಂದಂತಹ ಅತಿಥಿಗಳನ್ನು ಬೀಳ್ಕೊಡುಗೆ ಮಾಡುವಾಗ ಥ್ಯಾಂಕ್ಸ್ ಹೇಳುತ್ತೇವೆ. ವ್ಯಾಪಾರದಲ್ಲಿಯೂ ಈ ಪದಗಳನ್ನು ಬಳಸುತ್ತೇವೆ. ಇದರಿಂದ ನಮ್ಮ ಒಡನಾಟ ಇನ್ನಷ್ಟು ಗಟ್ಟಿಯಾಗಿರುತ್ತದೆ.  ವಿಶ್ವದಾದ್ಯಂತ ವರ್ಷದ ಬೇರೆ ಬೇರೆ ದಿನಗಳಲ್ಲಿ ಉದಾಹರಣೆಗೆ ಡಾಕ್ಟರ್ಸ್ ಡೇ, ಇಂಜಿನಿಯರ್ಸ್ ಡೇ, ಟೀಚರ್ಸ್ ಡೇ, ನರ್ಸಸ್ ಡೇ, ಆರ್ಮಿ ಡೇ ಇಂತಹ ದಿನಗಳಲ್ಲಿ ಇವರ ಸೇವೆಯನ್ನು ಗುರುತಿಸಿ, ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ. ಇದರಿಂದಾಗಿ ಅವರಿಗೆ ಇನ್ನಷ್ಟು ಪ್ರೇರಣೆ ದೊರಕಿ, ಅವರ ಸೇವೆಯಲ್ಲಿ ಮತ್ತಷ್ಟು ಉತ್ಕೃಷ್ಟತೆ ಸಾಧ್ಯವಾಗುತ್ತದೆ. ಇತ್ತೀಚಿನ ಕ್ಯಾಡ್ಬರಿ ಡೈರಿ ಮಿಲ್ಕ್ ಜಾಹೀರಾತಿನಲ್ಲಿ ಥ್ಯಾಂಕ್ಸ್ ಹೇಳುವ ಪದವನ್ನು ವಿಶೇಷವಾಗಿ ಪೋಣಿಸಲಾಗಿದೆ. ಸೆಕ್ಯೂರಿಟಿ ಗಾರ್ಡ್ ಹೋಮ್ ಕೀಪರ್ ಹೀಗೆ ವಿವಿಧ ಮಂದಿ ನಮ್ಮ ಒಳಿತಿಗಾಗಿ ದುಡಿಯುತ್ತಾರೆ. ಇವರಿಗೆ ಚಾಕಲೇಟ್ ಇಟ್ಟು ಧನ್ಯವಾದ ಹೇಳುತ್ತಾರೆ. ಈ ಒಂದು ಸನ್ನಿವೇಶ ಜನರಲ್ಲಿ ಧನ್ಯವಾದ ಹೇಳುವ ಪರಂಪರೆಯನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ. ನಾನು ನನ್ನ ಕುಟುಂಬದವರಿಗೆ ಹಿರಿಯರಿಗೆ ಗೆಳೆಯ ಗೆಳತಿಯರಿಗೆ ಶಿಕ್ಷಕರಿಗೆ ಬಂಧು ಮಿತ್ರರಿಗೆ ನನ್ನ ಸಹಾಯಕರಿಗೆ ಪ್ರೀತಿಯಿಂದ ಧನ್ಯವಾದಗಳನ್ನು ಸಲ್ಲಿಸುತ್ತೇನೆ. THANKS TO ALL.......
...........................................................ಹಂಸಿ 
10ನೇ ತರಗತಿ 
ವಿಠಲ ಪ್ರೌಢ ಶಾಲೆ ವಿಟ್ಲ
ಚೆಕ್ಕಿದಕಾಡು ಮನೆ, 
ಬಂಟ್ವಾಳ ತಾಲೂಕು, ದಕ್ಷಿಣಕನ್ನಡ ಜಿಲ್ಲೆ
********************************************************************************************


ನಮಸ್ತೆ ಅಕ್ಕ,... ಜೈ ಶ್ರೀ ರಾಮ್..... ನನ್ನ ಹೆಸರು ತೃಪ್ತಿ. ನಾನು ಕೂಡ ಗ್ರೀಟಿಂಗ್ ಕಾರ್ಡ್, thanks card, ಶುಭಾಶಯ ಪತ್ರ ಇವನ್ನೆಲ್ಲ ನಾನೇ ಡಿಸೈನ್ ಮಾಡಿ ನನಗೆ ಇಷ್ಟ ಆದವರಿಗೆ ಕಳಿಸುತ್ತೇನೆ. ಅಥವಾ ಕೊಡುತ್ತೇನೆ. ನನ್ನ ಗೆಳತಿಯರು ಮಾಡಿದ್ದನ್ನು ನೋಡಿ ಕಲಿತೆ. ಫೋನ್ ನಲ್ಲಿ ಮಾತಾಡುವಾಗ ಜೈ ಶ್ರೀ ರಾಮ್ ಅಥವಾ ಹರಿ ಓಂ ಅನ್ನುತ್ತೇವೆ. ಇನ್ನು ನಮ್ಮ ಮನೆಗೆ ಅತಿಥಿಗಳು ಯಾರಾದರೂ ಬಂದ್ರೆ ನಾನು, ತಮ್ಮ ಸೇರಿ ಕಾಲು ತೊಳೆಯಲು ನೀರು ಕೊಟ್ಟು ಆತ್ಮೀಯತೆಯಿಂದ ಮಾತಾಡಿಸುತ್ತೇವೆ. ಅಮ್ಮ ಮಾಡಿಕೊಟ್ಟ ಪಾನೀಯ ಕೊಡುತ್ತೇವೆ. ನಮ್ಮ ಉಪಚಾರ ನೋಡಿ ಅವರು ಆಶ್ಚರ್ಯ ಪಡುತ್ತಾರೆ. ನೀವು ಇದನ್ನೆಲ್ಲಾ ಎಲ್ಲಿ ಕಲಿತಿರಿ......? ಎಂದು ಕೇಳುತ್ತಾರೆ. ನಾವು ಕಲ್ಲಡ್ಕ ಶ್ರೀರಾಮ ಶಿಶುಮಂದಿರ ದಲ್ಲಿ ಕಲಿತೆವು. ನಿಜ! ಅಲ್ಲೇ ಇವನ್ನೆಲ್ಲ ಕಲಿಸಿರುವುದು. ಮತ್ತು ನಮ್ಮ ಅಮ್ಮ ಕೂಡ, ನಾನು ಇವರೆಲ್ಲರಿಗೂ ಮತ್ತೊಮ್ಮೆ thanks ಹೇಳುತ್ತಾ... ಇಲ್ಲಿಗೆ ಮುಗಿಸುತ್ತೇನೆ. ಇಂತಿ ನಿಮ್ಮ ತೃಪ್ತಿ....... ರಾಮ್..... ರಾಮ್ 
................................................... ತೃಪ್ತಿ ವಗ್ಗ
5 ನೇ ಭರತ ತರಗತಿ
ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ, ಹನುಮಾನ್ ನಗರ ಕಲ್ಲಡ್ಕ.
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ 
********************************************************************************************ಪ್ರೀತಿಯ ಅಕ್ಕನಿಗೆ....... ಸ್ರಾನ್ವಿ ಶೆಟ್ಟಿಯ ವಂದನೆಗಳು. ಅಕ್ಕ ನಿಮ್ಮ ಪತ್ರ ಓದಿದೆ , ನೀವು ಪತ್ರದಲ್ಲಿ ಬರೆದಿರುವ ಮಾತುಗಳು ನಿಜ. ನಾನು ನಾಲ್ಕೈದು ವರ್ಷದವಳಾಗಿದ್ದಾಗ ಯಾರಾದರೂ ನೆಂಟರು ನಮ್ಮ ಮನೆಗೆ ಬಂದರೆ ಮಾತಾಡಿಸದೆ ಒಳಗೆ ಓಡುತ್ತಿದ್ದೆ ಎಂದು ಅಮ್ಮ ಹೇಳುತ್ತಿದ್ದರು. 
    ಆದರೆ ಈಗ ಹಾಗೆ ಮಾಡುವುದಿಲ್ಲ ಅಮ್ಮನ ಜೊತೆ ನಾನು ಬಂದವರನ್ನು ಮಾತನಾಡಿಸುತ್ತೇನೆ, ಅಮ್ಮನ ಜೊತೆ ನಾನು ಬಂದವರಿಗೆ ಪಾನೀಯ ಕೊಡುತ್ತೇನೆ. ಅಮ್ಮ ಇಲ್ಲದಿದ್ದಾಗ ನೆಂಟರಿಗೆ ಟೀ ಜ್ಯೂಸ್ ಮಾಡಿಕೊಡುತ್ತೇನೆ. ನಿಮ್ಮ ಪತ್ರ ಓದಿದಾಗ ಇದೆಲ್ಲ ನೆನಪಿಗೆ ಬಂತು ಧನ್ಯವಾದಗಳು ಅಕ್ಕ...
...............................................ಸ್ರಾನ್ವಿ ಶೆಟ್ಟಿ 
8 ನೇ ತರಗತಿ 
ಓಂ ಜನಹಿತಾಯ ಇಂಗ್ಲಿಷ್ ಮೀಡಿಯಂ 
ಸ್ಕೂಲ್ , ಗುಡ್ಡೆಯಂಗಡಿ 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
********************************************************************************************


ನಮಸ್ತೆ ಅಕ್ಕ. ನಾನು ನಿಮ್ಮ ಪ್ರೀತಿಯ ಧೃತಿ . ನೀವು ಬರೆದ ಪತ್ರವನ್ನು ಓದಿದೆ. ತುಂಬಾ ಖುಷಿಯಾಯಿತು. ನಮ್ಮ ಮನೆಗೆ ಅತಿಥಿಗಳು ಬರುವುದೆಂದರೆ ನನಗೆ ತುಂಬಾ ಖುಷಿ. ಮನೆಗೆ ಬಂದ ಅತಿಥಿಗಳನ್ನು ಪ್ರೀತಿಯಿಂದ ಬರ ಮಾಡಿ, ಕೈ ಕಾಲು ತೊಳೆಯಲು ನೀರು ಕೊಟ್ಟು , ಬಾಯಾರಿಕೆ ನೀಡುವ ನಮ್ಮ ಸಂಸ್ಕೃತಿ ಕೂಡ ಹೌದು. ಈ ಎಲ್ಲಾ ವಿಷಯಗಳನ್ನು ನಾನು ನನ್ನ ಅಪ್ಪ- ಅಮ್ಮನನ್ನು  ನೋಡಿ ಕಲಿತೆ. ಹಾಗೆಯೇ  ಹಿರಿಯರೇ ಆಗಲಿ ಕಿರಿಯರೆ ಆಗಲಿ ಅವರಿಗೆ ಗೌರವ ನೀಡುವುದು ಮುಖ್ಯ. ಎಲ್ಲಾ ವಿಷಯಗಳನ್ನು ಮತ್ತೆ ನೆನಪಿಸಿದ್ದಕ್ಕೆ ಧನ್ಯವಾದಗಳು ಅಕ್ಕ. 
ಇಂತಿ ನಿಮ್ಮ ಪ್ರೀತಿಯ ತಂಗಿ ದೃತಿ. .............................................................. ಧೃತಿ 
9 ನೇ ತರಗತಿ 
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು.
ಬಂಟ್ವಾಳ ತಾಲೂಕು ,  ದಕ್ಷಿಣ ಕನ್ನಡ ಜಿಲ್ಲೆ
********************************************************************************************
Ads on article

Advertise in articles 1

advertising articles 2

Advertise under the article