-->
ಬದಲಾಗೋಣವೇ ಪ್ಲೀಸ್....! ಸಂಚಿಕೆ - 17

ಬದಲಾಗೋಣವೇ ಪ್ಲೀಸ್....! ಸಂಚಿಕೆ - 17

ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಹಾಗೂ ತರಬೇತುದಾರರು

      ಬದಲಾಗೋಣವೇ ಪ್ಲೀಸ್....! ಸಂಚಿಕೆ - 17
  ------------------------------------------------
    "ಕೆಲವು ಮಂದಿ ಒಟ್ಟುಗೂಡಿ ಒಂದು ಹುಣ್ಣಿಮೆಯ ರಾತ್ರಿ ದೂರದ ದ್ವೀಪಕ್ಕೆ ಪ್ರಯಾಣ ಮಾಡಲು ನಿರ್ಧರಿಸಿದರು. ದೋಣಿ ಹತ್ತಲು ಸ್ಪೂರ್ತಿ ಬರುತ್ತದೆಂದು ಭ್ರಮಿಸಿ ಕಂಠಪೂರ್ತಿ ಕುಡಿದರು. ಅದೇ ಅಮಲಿನಲ್ಲಿ ಅವರು ದೋಣಿ ಏರಿ ಭರದಿಂದ ಹುಟ್ಟು ಹಾಕತೊಡಗಿದರು. ರಾತ್ರಿ ಇಡೀ ಮೈಮರೆತು ಹುಟ್ಟು ಹಾಕಿದ್ದೆ ಹಾಕಿದ್ದು. ರಾತ್ರಿ ಕಳೆದು ಬೆಳಕು ಹರಿಯುವಾಗ ಅವರ ಅಮಲು ಇಳಿದಿತ್ತು. ದೂರದ ದೀಪ ಸಮೀಪಿಸಿರಬೇಕೆಂದು ಕಣ್ಣುಜ್ಜಿಕೊಂಡು ನೋಡುತ್ತಾರೆ. ದೋಣಿ ಇನ್ನೂ ದಡದಲ್ಲೇ ಇದೆ. ಗೂಟಕ್ಕೆ ಕಟ್ಟಿದ್ದ ಅದರ ಹಗ್ಗವನ್ನು ಬಿಡಿಸಿಯೇ ಇರಲಿಲ್ಲ !" 
     ಗುರುದೇವ ಶ್ರೀರಾಮಕೃಷ್ಣ ಪರಮಹಂಸರ 
ಈ ಕತೆ "ಅಯ್ಯೋ! ನಾನು ಎಷ್ಟು ಪ್ರಯತ್ನಿಸಿದರೂ ಪ್ರಯೋಜನವಿಲ್ಲವಲ್ಲ...?" ಎಂದು ಗೋಗರೆಯುವವರಿಗೆ ಅತ್ಯಂತ ಉಪಯುಕ್ತವಾಗಿದೆ.
        ಭಯ, ಆಲಸ್ಯ , ಸಂಶಯ , ದ್ವೇಷ , ಅಸೂಯೆ , ನಿರುತ್ಸಾಹ ಮೊದಲಾದ ಭ್ರಮೆಯ ಗೂಟಗಳಿಗೆ ಬಂಧಿಸಲ್ಪಟ್ಟ ನಾವು ಎಷ್ಟೇ ಪ್ರಯತ್ನ ಪಟ್ಟರೂ ಜೀವನದಲ್ಲಿ ಗೆಲುವು ಸಾಧಿಸಲಾಗುವುದಿಲ್ಲ ಎಂದು ಗೋಗರೆಯುತ್ತೇವೆ. ಅದಕ್ಕಾಗಿ ಮೊದಲು ನಾವು ನಮ್ಮೊಳಗಿನ ಭ್ರಮೆಗಳನ್ನು ಬಿಟ್ಟು , ನಕರಾತ್ಮಕ ಭಾವಗಳನ್ನು ಬಿಟ್ಟು ನಿರಂತರ ಪ್ರಯತ್ನ ಪಡಬೇಕು. ಆಗ ಯಾವುದೇ ಕೆಲಸದಲ್ಲೂ ಗೆಲುವು ಸಾಧಿಸಬಹುದು..
           ನಾವೆಲ್ಲರು "ಅದನ್ನು ಮಾಡಬೇಕು ,ಇದನ್ನು ಮಾಡಬೇಕು.. ಬೇಕು.. ಬೇಕು.... ಎಲ್ಲವನ್ನು ಮಾಡಲೇ ಬೇಕು" ಎಂದುಕೊಂಡು ಪ್ರತಿಕ್ಷಣವೂ ಆಲೋಚಿಸುತ್ತೇವೆ. ಆದರೆ ನೆನೆಸಿದ್ದನ್ನೆಲ್ಲ ಮಾಡಲು ಸಮಯ ಸಿಕ್ಕಿತೇ..? ಕೇವಲ ಆಲೋಚನೆಯಲ್ಲಿಯೇ ನಮ್ಮ ಅಮೂಲ್ಯ ಜೀವನ ಸಾಗುತ್ತಿದೆ ಹೊರತು ಯಾವುದೂ ಕೂಡಾ ಕಾರ್ಯರೂಪಕ್ಕೆ ಬರುತ್ತಿಲ್ಲ. ನಮ್ಮ ಆಯುಷ್ಯ ಮುಗಿಯುತಿದೆ. ಸ್ಪರ್ಧೆಯ ಮೊದಲ ಸುತ್ತಿನಲ್ಲಿಯೇ ಗೆಲ್ಲದ ನಾವು ಫೈನಲ್ ನಲ್ಲಿ ಭಾಗವಹಿಸುವ ಕನಸು ಕಾಣುವುದಾದರೂ ಹೇಗೆ.....? ಹಾಗಾಗಿ ಆಲೋಚನೆ ಮಾಡುವುದನ್ನೆಲ್ಲ ಇಂದೇ.. ಈ ಕ್ಷಣದಲ್ಲಿಯೇ ಸಾಧಿಸಲು ಮುನ್ನುಗ್ಗಿರಿ. ಅದಕ್ಕೆ ಬೇಕಾದ ಇಚ್ಚಾಶಕ್ತಿಯನ್ನು ಪಡೆಯಿರಿ. ಕ್ರಿಯಾಶಕ್ತಿ ಮತ್ತು ಇಚ್ಚಾಶಕ್ತಿ ಕೂಡಿದರೆ ಅಸಾಧ್ಯವಾದುದ್ದೆಲ್ಲ ಸಾಧ್ಯ. ಕನಸು ನನಸಾಗಿಸುವ ಪಥ ಸಮರ್ಪಕವಾಗಿದ್ದು ಗುರಿಯು ಸ್ಪಷ್ಟವಾಗಿದ್ದು ದಾರಿಗರಾದ ನಾವು ಸಮರ್ಥವಾಗಿದ್ದರೆ ಎಂತಹ ಕಠಿಣ ಗುರಿಯನ್ನು ಕೂಡಾ ಮುಟ್ಟಿ ಗೆಲುವಿನ ಸಂತೃಪ್ತ ನಗುವನ್ನು ಬೀರಬಹುದು. ಆ ಧನಾತ್ಮಕ ನಗು ಚೆಲ್ಲಲು ನಾವೆಲ್ಲರೂ ಬದಲಾಗೋಣವೇ. ಈ ಬದಲಾವಣೆಗೆ ಯಾರನ್ನೂ ಕಾಯದೇ ನಾವೇ ಬದಲಾಗೋಣ. ನೆಮ್ಮದಿಯ ಬದುಕಿಗಾಗಿ ಬದಲಾಗೋಣವೇ ಪ್ಲೀಸ್..! ಏನಂತೀರಿ...?
.............................. ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಮತ್ತು ತರಬೇತುದಾರರು 
Mob: +91 99802 23736
*******************************************
Ads on article

Advertise in articles 1

advertising articles 2

Advertise under the article