-->
ಶಾಲೆ ಆರಂಭ : ತುಂಬಾ ಖುಷಿಯೋ ಖುಷಿ

ಶಾಲೆ ಆರಂಭ : ತುಂಬಾ ಖುಷಿಯೋ ಖುಷಿ

ವೈಷ್ಣವಿ ವೈ. ಕೆ.
4 ನೇ ತರಗತಿ, 
ದ..ಕ. ಜಿ.ಪಂ. ಉನ್ನತೀಕರಿಸಿದ ಹಿರಿಯ 
ಪ್ರಾಥಮಿಕ ಶಾಲೆ, ನಲ್ಕೆಮಾರ್
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ

                           ಶಾಲೆ ಆರಂಭ 
                   ತುಂಬಾ ಖುಷಿಯೋ ಖುಷಿ
               ತುಂಬಾ ತಿಂಗಳುಗಳ ನಂತರ ಶಾಲೆ ಆರಂಭವಾಗಿದೆ. ಈ ಮಧ್ಯದಲ್ಲಿ ನಮ್ಮ ಮನೆಯ ಹತ್ತಿರದ ಸರಕಾರಿ ಶಾಲೆಯಾದ ಬಂಟ್ವಾಳ ತಾಲೂಕಿನ ನಲ್ಕೆಮಾರ್ ಶಾಲೆಗೆ ಹೋಗುವುದೆಂದು ಕಳೆದ ಕೆಲವು ದಿನಗಳ ಹಿಂದಿನಿಂದ ನಿರ್ಧಾರವಾಗಿತ್ತು. ಟೀಚರ್ ಕಳುಹಿಸಿದ ಹೋಮ್ ವರ್ಕ್ಸ್‌ನ್ನು ಶನಿವಾರ ರಾತ್ರಿಯೇ ಮಾಡಿ ಮುಗಿಸಿದ್ದೇನೆ. ಆದಿತ್ಯವಾರವೂ ಸ್ವಲ್ಪ ಆರಾಮವಾಗಿಯೇ ಮನೆಯಲ್ಲೇ ಇದ್ದೆ. ಸೋಮವಾರ ಬೆಳಿಗ್ಗೆ ಬೇಗ ಎದ್ದೆ. ನನ್ನ ದಿನಚರಿ ಮುಗಿಸಿದ ನಂತರ ಶಾಲೆಗೆ ತಯಾರಾಗಿದ್ದೆ. ನನಗೆ ಹಿಂದಿನ ವರ್ಷ ಹೊಸದಾಗಿ ಹೊಲಿಸಿಟ್ಟ ನೀಲಿ ಬಿಳಿ ಬಟ್ಟೆಯನ್ನು ಹಾಕಿದೆ. ತಿಂಡಿ ತಿಂದ ಮೇಲೆ ಶಾಲೆಗೆ ತಂದೆ ಬಿಟ್ಟು ಹೋದರು. 
         ಶಾಲೆಗೆ ಹೋದಾಗ ಶಾಲೆಯ ದ್ವಾರದ ಬಳಿ ಒಂದು ರೌಂಡಾಗಿ ಪೈಪ್ ಹಾಕಿದ್ದರು. ಶಾಲೆಯಲ್ಲಿ ಶಾಲೆ ಟೀಚರ್‌ರವರು ನನ್ನ ಕೈಯ ಟೆಂಪರೇಚರ್ ನೋಡಿದರು. ನಂತರ ಶಾಲೆಯ ಕೋಣೆಗೆ ಹೋದಾಗ ಅಲ್ಲಿ ಮೇಷ್ಟ್ರು ಸಿಕ್ಕಿದ್ರು. ನಮಸ್ತೆ ಸಾರ್ ಎಂದೆ. ನಮಸ್ತೆ ಹೇಳಿದರು. ಅವರು ಶಾಲೆಯ ಅಲಂಕಾರ ಮಾಡಲು ಬಲೂನನ್ನು ಕೊಟ್ಟರು. ಕೆಲವು ಮಕ್ಕಳು ಸೇರಿಕೊಂಡು ಬಲೂನನ್ನು ಊದಿ ದೊಡ್ಡದು ಮಾಡಿದೆವು. ಮತ್ತು ಶಾಲೆಯ ದ್ವಾರದಲ್ಲಿ ಪೈಪ್‌ಗೆ ರೌಂಡಾಗಿ ಕಟ್ಟಿದೆ. ನಂತರ ನನ್ನ ತರಗತಿಯ ದೃಶ್ಯಳ ಪರಿಚಯವಾಯಿತು. ಬೇರೆ ಬೇರೆ ಮಕ್ಕಳು ನನ್ನ ಜೊತೆ ಮಾತಾಡಿದರು. ಆದರೆ ಹೆಸರು ಏನೆಂದು ಕೇಳಲಿಲ್ಲ. ನಂತರ ರೇಖಾ ಟೀಚರ್ ಶಾಲೆಯಲ್ಲಿರುವ ದೊಡ್ಡ ಮಕ್ಕಳಿಗೆ ಬ್ಯಾಂಡ್, ವಾದ್ಯಗಳನ್ನು ಶಾಲೆಯ ದ್ವಾರದ ಬಳಿ ಕೊಂಡು ಹೋಗಲು ಹೇಳಿದರು. ನಂತರ ನಾವೆಲ್ಲಾ ಅವರ ಹಿಂದೆ ಸಾಲಗಿ ಹೋದೆವು.
     ಹೊಸದಾಗಿ ಬಂದ ಮಕ್ಕಳಿಗೆ ಹೂ ಮತ್ತು ಬಲೂನು ಕೊಟ್ಟು ಶಾಲೆಯೊಳಗೆ ಕರೆದುಕೊಂಡು ಬಂದರು. ನಾವೆಲ್ಲಾ ಮಕ್ಕಳು ನೆಲದಲ್ಲಿ ಕುಳಿತೆವು. ಸ್ಟೇಜಲ್ಲಿ ದೊಡ್ಡ ದೊಡ್ಡ ಜನರು ಭಾಷಣ ಮಾಡಿದರು. ನಂತರ ಪಾನೀಯ ಮತ್ತು ಮಾಲ್‌ಪುರಿ ಕೊಟ್ಟರು. ಸಭೆ ಆದ ನಂತರ ಮೈದಾನದಲ್ಲಿ ಜಾರು ಬಂಡಿ ಇತ್ತು. ನಾವೆಲ್ಲಾ ಸೇರಿ ಅಲ್ಲಿ ಆಟ ಆಡಿದೆವು. ಹೀಗೆ ತುಂಬಾ ಖುಷಿ ಖುಷಿಯಾಯಿತು. ತುಂಬಾ ದಿನಗಳ ನಂತರ ಹೋದ ಶಾಲಾ ದಿನ ತುಂಬಾನೆ ಇಷ್ಟವಾಯಿತು.
......................................... ವೈಷ್ಣವಿ ವೈ. ಕೆ.
4 ನೇ ತರಗತಿ, 
ದ..ಕ. ಜಿ.ಪಂ. ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ, ನಲ್ಕೆಮಾರ್
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
*******************************************

Ads on article

Advertise in articles 1

advertising articles 2

Advertise under the article