-->
ಜಗಲಿಯ ಮಕ್ಕಳ ಮನದಾಳದ ಮಾತು ಸಂಚಿಕೆ - 8

ಜಗಲಿಯ ಮಕ್ಕಳ ಮನದಾಳದ ಮಾತು ಸಂಚಿಕೆ - 8

ಜಗಲಿಯ ಮಕ್ಕಳ 
ಮನದಾಳದ ಮಾತು 
ಸಂಚಿಕೆ - 8



ನನ್ನ ಎಲ್ಲ ಗುರುಗಳಿಗೆ ಶಿಕ್ಷಕ ದಿನಾಚರಣೆಯ ಶುಭಾಶಯಗಳು. ನನ್ನ ಹೆಸರು ಸೃಷ್ಟಿ
        ಈ ಸಂದರ್ಭದಲ್ಲಿ ನನಗೆ ತುಂಬಾ ನೆನಪಾಗುವುದು ನನ್ನ ಪ್ರೀತಿಯ ಅನಿತ ಟೀಚರ್. 
ಅನಿತ ಟೀಚರ್ ನನಗೆ 1ನೇ ತರಗತಿಯಿಂದ ಕನ್ನಡ ಪಾಠ ಮಾಡುತ್ತಿದ್ದಾರೆ. ಅವರು ತುಂಬಾ ಚೆನ್ನಾಗಿ ಪಾಠಮಾಡುತ್ತಾರೆ. ಅವರ ಪಾಠಕ್ಕಾಗಿ ನಾನು ಕಾಯುತ್ತಿದ್ದೆ. ಅವರ ಪಾಠ ಕೇಳುವುದೆಂದರೆ ನನಗೆ ತುಂಬಾ ಇಷ್ಟ.. ಅವರು ಪಾಠದ ಜೊತೆಗೆ ನನಗೆ ಹಲವಾರು ಹಾಡುಗಳನ್ನು ಹೇಳಿಕೊಟ್ಟಿದ್ದಾರೆ. ನಾನು 2ನೇ ತರಗತಿಯಲ್ಲಿರುವಾಗ ದೇಶಭಕ್ತಿ ಗೀತೆ ಸ್ಪರ್ದೆಯಲ್ಲಿ ಭಾಗವಹಿಸಿ ಮೊದಲ ಬಹುಮಾನ ಬಂದಾಗ ನನ್ನನ್ನು ಬೆನ್ನು ತಟ್ಟಿ "ಸೃಷ್ಟಿ ನೀನು ತುಂಬಾ ಚೆನ್ನಾಗಿ ಹಾಡು ಹಾಡ್ತೀಯಾ " ಎಂದು ಪ್ರೋತ್ಸಾಹಿಸಿದ್ದರು. ನಾನು ಒಳ್ಳೆಯ ಚಿತ್ರ ಬಿಡಿಸಿದಾಗಲೂ ತುಂಬಾ ಖುಷಿ ಪಡುತ್ತಿದ್ದರು. ಬೇಗ ಶಾಲೆ ಪ್ರಾರಂಭವಾಗಿ ಅನಿತ ಟೀಚರ್ ನಿಮ್ಮ ಪಾಠ ಹಾಡು ಕೇಳಲು ಕಾಯುತ್ತಿದ್ದೇನೆ.
......................................................... ಸೃಷ್ಟಿ 
ತರಗತಿ: 4
ಶಾಲೆ: ಹೋಲಿ ರೆಡಿಮರ್ ಇಂಗ್ಲೀಷ್ ಮೀಡಿಯಂ ಶಾಲೆ ಬೆಳ್ತಂಗಡಿ
ಬೆಳ್ತಂಗಡಿ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
********************************************



ಎಲ್ಲಾ ಶಿಕ್ಷಕರಿಗೂ ಶಿಕ್ಷಕ ದಿನಾಚರಣೆಯ ಶುಭಾಶಯಗಳು... ನಾನು ನಂದನ್
    ನನ್ನ ಮೊದಲ ಗುರು ಎಂದರೆ ನನ್ನ ಅಮ್ಮ. ಶಾಲೆಯಲ್ಲಿಯೂ ಶಿಕ್ಷಕರಾಗಿ ಮನೆಯಲ್ಲಿಯೂ ಅಮ್ಮನಾಗಿ ಪಡೆದ ನಾನು ಪುಣ್ಯವಂತ. ನನ್ನ ಶಿಕ್ಷಕಿಯ ಹೆಸರು ವೀಣಾ. ನನ್ನ ಮೇಲೆ ಅತ್ಯಂತ ಪ್ರಭಾವ ಬೀರಿದ ಟೀಚರ್ ಇವರು. ಏಕೆಂದರೆ ಶಾಲೆಯಲ್ಲಿ ಎಲ್ಲರಂತೆ ನನ್ನನ್ನು ಸಹ ಕಾಣುತ್ತಾರೆ. ಯಾವುದೇ ಕೆಲಸವನ್ನು ಅತ್ಯಂತ ಸರಳವಾಗಿ ಹೇಗೆ ಮಾಡಬೇಕು ಎಂಬುದನ್ನು ತಿಳಿಸಿದ್ದಾರೆ. ಹಾಡು , ಕಥೆ , ಚಿತ್ರ ಎಲ್ಲವನ್ನು ನಾನು ಮಾಡಲು ಮೊದಲ ಪ್ರೋತ್ಸಾಹ ಕೊಡುವವರು ಇವರೇ. ಪಾಠವನ್ನು ಸಹ ಅರ್ಥವಾಗುವಂತೆ ನನ್ನ ಜೊತೆ ನನ್ನ ಸ್ನೇಹಿತರಿಗೂ ಒಬ್ಬ ಉತ್ತಮ ಸ್ನೇಹಿತೆಯಂತೆ ಹೇಳಿಕೊಡುತ್ತಾರೆ. ಯಾವುದೇ ಕೆಲಸವನ್ನು ಅವರು ಸ್ವತಃ ಮೊದಲು ಮಾಡಿ ಆಮೇಲೆ ನನಗೆ ಮಾಡಲು ಹೇಳುತ್ತಾರೆ. ಇದರಿಂದ ನನಗೆ ಹೇಗೆ ಮಾಡಬಹುದು ಎನ್ನುವ ಆಲೋಚನೆ ಸುಲಭವಾಗುತ್ತದೆ. ನಾನು ಎಲ್ಲರಂತೆ ಎಲ್ಲದರಲ್ಲಿಯೂ ಭಾಗವಹಿಸಬೇಕು. ಜೊತೆಗೆ ಅತ್ಯಂತ ಗುಣವಂತನಾಗಿ ಇರಬೇಕೆಂಬುದು ನನ್ನ ಅಮ್ಮ ಹಾಗೂ ಶಿಕ್ಷಕಿಯಾಗಿರುವ ಇವರ ಆಸೆ. ಇವರಿಂದ ನಾನು ಕಲಿತ ಪಾಠಗಳು ಹಲವು.. ಎಲ್ಲರೊಂದಿಗೆ ಪ್ರೀತಿಯಿಂದ ಮಾತನಾಡುವುದು. ಇತರರಿಗೆ ನೋವು ಮಾಡದಿರುವುದು. ಹೀಗೆ ಇವರ ಗುಣಗಳು ನನಗೆ ಅತ್ಯಂತ ಇಷ್ಟ. ಮುಂದೆ ಜೀವನದಲ್ಲಿ ಒಳ್ಳೆಯ ಗುಣವಿರುವ ವ್ಯಕ್ತಿಯಾಗಬೇಕು ಇತರರಿಗೆ ಸಹಾಯ ಮಾಡಬೇಕು. ಗುರಿಯನ್ನು ಇಟ್ಟುಕೊಂಡು ಅದಕ್ಕೆ ಈಗಿನಿಂದಲೇ ತಯಾರಿ ಮಾಡಿಕೊಳ್ಳಬೇಕು ಎಂಬುದನ್ನು ಕೂಡ ಹೇಳುತ್ತಾರೆ. ಇದಕ್ಕಾಗಿ ಇವರು ಶಿಕ್ಷಕಿಯಾಗಿ ನನಗೆ ಅತ್ಯಂತ ಇಷ್ಟ. ಅಲ್ಲದೆ ನನ್ನ ಶಾಲೆಯ ಎಲ್ಲಾ ಶಿಕ್ಷಕರಿಂದ ನಾನು ಉತ್ತಮ ಗುಣಗಳನ್ನು ಕಲಿತಿದ್ದೇನೆ. ಅವರೆಲ್ಲರಿಗೂ ಶಿಕ್ಷಕ ದಿನಾಚರಣೆಯ ಶುಭಾಶಯಗಳು
  ............................................ನಂದನ್ ಕೆ ಹೆಚ್
ಏಳನೇ ತರಗತಿ
ದ.ಕ.ಜಿ.ಪಂ.ಉ.ಹಿ.ಪ್ರಾ.ಶಾಲೆ ಕುದ್ಮಾರು 
ಪುತ್ತೂರು ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
*******************************************




      ಎಲ್ಲರಿಗೂ ನಮಸ್ತೆ ........ ನಾನು ಸಾನ್ವಿ ಸಿ ಎಸ್
ಶಿಕ್ಷಕರ ದಿನಾಚರಣೆ ಎನ್ನುವಾಗ ನನಗೆ ಕಲಿಸಿದ ಎಲ್ಲಾ ಶಿಕ್ಷಕರನ್ನೂ ನೆನಪಾಗುತ್ತದೆ. ಸಾಯೀಶ್ವರೀ ಮಾತಾಜಿಯನ್ನು  ನೆನಪಾಗುವುದು ಹೆಚ್ಚು. 
ನಾನು ಗುರುಕುಲ ಶಾಲೆಯಲ್ಲಿರುವಾಗ ನನಗೆ ಸ್ಪೂರ್ತಿ ತುಂಬಿ ನನ್ನನ್ನು ತಾಯಿಯಂತೆ ನೋಡಿಕೊಂಡ ಶಿಕ್ಷಕಿ. ನಾನು ಚಿಕ್ಕವಳಿರುವಾಗ ಶಾಲೆಗೆ ಹೋಗಿ ಅಳುತ್ತಿದ್ದೆ. ಆಗ ನನಗೆ ಬುದ್ಧಿ ಹೇಳಿದ ಮಾತಾಜಿ. ಮನೆಯಲ್ಲಿ ನಾನೊಬ್ಬಳೇ ಇದ್ದ ಕಾರಣ ಮಕ್ಕಳೊಂದಿಗೆ ಬೆರೆತು ಗೊತ್ತಿರಲಿಲ್ಲ. ಅವರು ನನ್ನನ್ನು ತಾಯಿಯಂತೆ ನೋಡಿಕೊಂಡು ಮಕ್ಕಳೊಂದಿಗೆ ಹೇಗಿರಬೇಕು ಎಂದು ತಿಳಿಸಿದ ಗುರು. ಅವರು ನನಗೆ ಪ್ರಾಮಾಣಿಕತೆಯಿಂದ ಹೇಗೆ ನಡೆಯಬೇಕೆಂದು ತಿಳಿಸಿ ಶ್ಲೋಕಗಳನ್ನು ಹೇಗೆ ಸರಿಯಾಗಿ ಉಚ್ಛರಿಸಬೇಕು ಎಂದು ತಿಳಿಸಿದರು. ಅವರು ತುಂಬಾ ನೀತಿ ಕಥೆಗಳನ್ನು ಹೇಳುತ್ತಿದ್ದರು. ಅವು ಈಗಲೂ ನನಗೆ ಚೆನ್ನಾಗಿ ನೆನಪಿವೆ. ನನಗೆ ಸರಿಯಾದ ಕ್ರಮಗಳನ್ನು ಕಲಿಸಿದ ಮಾತೆ. ಅವರು ಎಂದು ಗದರಿ ಹೊಡೆದು ಮಾಡಿದವರಲ್ಲ. ಶಾಂತಿ ಸಮಾಧಾನ ತಾಳ್ಮೆಯಿಂದ ಎಲ್ಲವನ್ನು ತಿಳಿಸಿದರು. ಅವರನ್ನು ಬಿಟ್ಟು ಮೇಲಿನ ಶಾಲೆಗೆ ಬರುವಾಗ ಹೃದಯ ತುಂಬಾ ಭಾರವಾಗಿತ್ತು. ಆದರೆ ಈ ಎರಡು ವರ್ಷದಿಂದ ಅವರನ್ನು ನೋಡಲೇ ಇಲ್ಲ. ಅವರಿಗೆ ನಾನು ಸಾಷ್ಟಾಂಗ ಪ್ರಣಾಮಗಳನ್ನು ಸಲ್ಲಿಸುತ್ತೇನೆ.
 .............................................. ಸಾನ್ವಿ ಸಿ ಎಸ್
 ನಾಲ್ಕನೇ ತರಗತಿ
 ಶ್ರೀ ಗುರುದೇವ ವಿದ್ಯಾಪೀಠ ಒಡಿಯೂರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************



ಎಲ್ಲರಿಗೂ ನನ್ನ ನಮಸ್ಕಾರಗಳು ಹಾಗೂ ಎಲ್ಲಾ ನನ್ನ ಗುರು ವೃಂದದವರಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು... ನಾನು ಪೂರ್ತಿ.........
     ನನ್ನ ಮೊದಲ ಗುರು ತಾಯಿ. 
           ನನ್ನ ಅಮ್ಮ     "ನೀನು ಸ್ವಲ್ಪ ಪ್ರಯತ್ನ ಪಟ್ಟರೆ ಫಲ ಸಿಕ್ಕೆ ಸಿಗುತ್ತದೆ" ಎಂದು ಯಾವಾಗಲೂ ಹೇಳುವರು. ಅಮ್ಮನ ಈ ಮಾತು ನನಗೆ ತುಂಬಾ ಸ್ಪೂರ್ತಿಯಾಯಿತು.... ನನ್ನ ಕಲಿಕೆಗೆ ಪ್ರಭಾವ ಬೀರಿರುವ ನನ್ನ ಎಲ್ಲಾ ಗುರುಗಳಿಗೆ ನನ್ನ ಹೃದಯ ಪೂರ್ವಕ ನಮಸ್ಕಾರಗಳು ...ನಾನು ಚಿಕ್ಕಂದಿನಿಂದಲೂ ನನಗೆ ಯಾವ ಚಟುವಟಿಕೆಯ ಮೇಲೆ ಹೆಚ್ಚು ಆಸಕ್ತಿ ಇರಲಿಲ್ಲ ... ನನಗೆ ನಮ್ಮ ಶಾಲೆಯಲ್ಲಿ (ಕನ್ನಡ ಮತ್ತು ಗಣಿತ) ಶಿಕ್ಷಕಿಯಾದ ಶಾರದ ಟೀಚರ್ ಮತ್ತು (ಇಂಗ್ಲಿಷ್ ಮತ್ತು ವಿಜ್ಞಾನ ) ಶಿಕ್ಷಕಿಯಾದ ಶಿಲ್ಪಾ ಟೀಚರ್ ಹಾಗೂ ನನ್ನ ಬಾಲ್ಯದಲ್ಲಿ ವಿಧ್ಯಾಭ್ಯಾಸ ಮಾಡುವಾಗ ಪಾಠ ಬೋಧಿಸುತ್ತಿದ್ದ ಶಿಕ್ಷಕಿಯರಾದ ಪ್ರೇಮ ಭಟ್ ಟೀಚರ್ ಮತ್ತು ಪ್ರೇಮ ಜೈನ್ ಟೀಚರ್ ಮತ್ತು ಮಮತಾ ಟೀಚರ್ , ಜ್ಞಾನೇಶ್ವರಿ ಟೀಚರ್ , ಅಮಿತ ಟೀಚರ್ ಹೀಗೆ ಸ್ಪೂರ್ತಿ ತುಂಬಿದ ನನ್ನ ಎಲ್ಲಾ ಶಿಕ್ಷಕರಿಗೆ ನನ್ನ ನಮನಗಳು . ನನಗೆ ಈ ಮಕ್ಕಳ ಜಗಲಿಯಲ್ಲಿ ನನ್ನ ಚಿತ್ರಕಲೆಯನ್ನೂ ಮಕ್ಕಳ ಜಗಲಿಯಲ್ಲಿ ಪ್ರಕಟಿಸಿ ನನಗೆ ಹೆಚ್ಚು ಚಿತ್ರಗಳನ್ನು ಮಾಡಲು ಅನುಕೂಲ ಮಾಡಿ ಕೊಟ್ಟ ತಾರಾನಾಥ್ ಕೈರಂಗಳ ಇವರಿಗೂ ನನ್ನ ಧನ್ಯ ವಾದಗಳು....
........................................................ ಪೂರ್ತಿ 
ತರಗತಿ: 8 ನೇ
ಸರಕಾರಿ ಪ್ರೌಢ ಶಾಲೆ ನಾರಾವಿ
ಬೆಳ್ತಂಗಡಿ( ತಾ ) ದ .ಕ ( ಜಿಲ್ಲೆ)
*******************************************




ನಾನು ಪ್ರಣವ್ ದೇವ್ .......
Teacher .....ಎಂದರೇನು ?
ಪ್ರೀತಿಯ ಅಮ್ಮ , " ಮಮತಾ " ನನಗೆ ನೆನಪಿದೆ , ನನ್ನ ಕೈಗೆ ಬ್ಯಾಂಡೇಜ್ ಹಾಕಿತ್ತು. ಅಮ್ಮ ವಿದ್ಯಾ ಶಾಲೆಗೆ ಬಿಟ್ಟದ್ದು , ಜ್ವರ ಬಂದಾಗ ಪಟ್ಟಿ ಇಟ್ಟದ್ದು , ತುತ್ತು ಕೊಟ್ಟದ್ದು , ಆಡಲು ಕಲಿಸಿದ್ದು , ಸ್ಟೇಜ್ ಮೇಲೆ ನಿಲ್ಲಿಸಿದ್ದು . Teacher ಯಾರು ? ಗೊತ್ತಾಗುವ 
ಮೊದಲೇ " ವೈರಸ್ " ಬಂದೇ ಬಿಟ್ಟಿತು. 
                    ನಂತರ ದೀಪಕ್ ಸರ್ 
ನನ್ನ ಟೀಚರ್ ಆದರು. ಗೆರೆಗಳು ಬಣ್ಣಗಳ ಜೊತೆ ಆಲೋಚನೆಗಳು ಮುಂದೆ ಸಾಗಿದೆ. 
Happy Teachers Day
ವಂದನೆಗಳು 
 ........................................ಪ್ರಣವ್ ದೇವ್
ತರಗತಿ -೧
ಲೇಡಿ ಹಿಲ್ ಇಂಗ್ಲೀಷ್ ಹೈಯರ್ ಪ್ರೈಮರಿ ಶಾಲೆ ಮಂಗಳೂರು , ಮಂಗಳೂರು ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
********************************************



       ಜಗತ್ತಿನ ಎಲ್ಲಾ ಗುರುಗಳಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.
 ನಾನು ಆಶ್ಲಿನ್ ಜೋಯ್ಶ ಲೋಬೊ ..........
       ಡಾ. ಸರ್ವಪಳ್ಳಿ ರಾಧಾಕೃಷ್ಣನ್ ರವರ ಜನ್ಮದಿನವಾದ ಸಪ್ಟೆಂಬರ್ ೫ ನೇ ತಾರೀಖನ್ನು ಪ್ರತೀ ವರ್ಷ ಶಿಕ್ಷಕರ ದಿನಾಚರಣೆಯಾಗಿ ಆಚರಿಸಲಾಗುತ್ತದೆ. ಕಲಿಕೆಯಲ್ಲಿ ಆಸಕ್ತಿ ಇರುವ ಎಲ್ಲರಿಗೂ ಗುರುವೊಬ್ಬರು ಬೇಕೇ ಬೇಕು. ನಾನು ಇಂದು ನನ್ನ ಮೆಚ್ಚಿನ ಶಿಕ್ಷಕಿಯ ಬಗ್ಗೆ ಕೆಲವು ವಾಕ್ಯಗಳನ್ನು ಬರೆಯಲು ಇಚ್ಚಿಸುತ್ತೇನೆ. ನನ್ನ ಮೆಚ್ಚಿನ ಶಿಕ್ಷಕಿಯ ಹೆಸರು ಮೋಲಿ (ಸೆಬೇಸ್ಟಿಯನ್ ಶಾಲೆ). ಅವರು ನನ್ನ ಮೊದಲ ಶಿಕ್ಷಕಿ. ಅವರು ನಾನು ತಪ್ಪು ಮಾಡಿದಾಗ ಹೊಡೆಯದೆ ಬೈಗುಳವನ್ನು ಕೊಡದೆ ಪ್ರೀತಿಯಿಂದ ನನ್ನ ತಪ್ಪನ್ನು ತಿದ್ದಿ ಅರಿವು ಮಾಡಿಸಿದವರು. ಅವರು ನಮ್ಮಲ್ಲಿ ದೇಶದ ಉತ್ತಮ ಪ್ರಜೆ ಆಗಲು ಆತ್ಮವಿಶ್ವಾಸ ತುಂಬಿದ ಶಿಕ್ಷಕಿ. ಅವರು ಶಾಲೆಯ ಉತ್ತಮ ಶಿಕ್ಷಕಿ. ಅವರು ಮಕ್ಕಳನ್ನು ತುಂಬಾ ಇಷ್ಟಪಡುತ್ತಾರೆ. ಅವರು ಮಕ್ಕಳೊಂದಿಗೆ ಸೇರಿ ಆಟವಾಡುತ್ತಾರೆ. ಅವರು ಉತ್ತಮ ವ್ಯಕ್ತಿತ್ವ ಇರುವ ವ್ಯಕ್ತಿ. ಅವರು ಹಲವು ರೀತಿಯ ಪ್ರತಿಭೆಗಳನ್ನು ಹೊಂದಿರುವ ವ್ಯಕ್ತಿ. ಅವರು ನಮಗಾಗಿ ಹಾಡುಗಳನ್ನು ಹಾಡುತ್ತಿದ್ದರು. ನನಗೆ ಎಲ್ಲಾ ರೀತಿಯಿಂದಲೂ ಸ್ಫೂರ್ತಿ ನೀಡಿದ ಶಿಕ್ಷಕಿ. ನಾನು ಅವರನ್ನು ತುಂಬಾ ಇಷ್ಟಪಡುತ್ತೇನೆ. ಯಾವಾಗಲೂ ಅವರ ನೆನಪು ಮಾಡಿಕೊಳ್ಳುತ್ತೇನೆ. ದೇವರು ಅವರಿಗೆ ಒಳ್ಳೆಯ ಆರೋಗ್ಯವನ್ನು ದಯಪಾಲಿಸಲಿ ಎಂದು ಕೇಳಿಕೊಳ್ಳುತೇನೆ. 
ಧನ್ಯವಾದಗಳು.
.....................ಆಶ್ಲಿನ್ ಜೋಯ್ಶ ಲೋಬೊ
ತರಗತಿ: 3
ನಿತ್ಯಾಧರ್ ಇಂಗ್ಲಿಷ್   ಮೀಡಿಯಮ್ ಶಾಲೆ      
ಬಬ್ಬುಕಟ್ಟೆ, ತೊಕ್ಕೊಟು, ಮಂಗಳೂರು, 
ದಕ್ಷಿಣ ಕನ್ನಡ ಜಿಲ್ಲೆ
******************************************



       ಎಲ್ಲರಿಗೂ ವಂದನೆಗಳು ನಾನು ಭೂಮಿಕಾ .... ಮೊದಲು ಗುರು ನನ್ನ ತಂದೆ ತಾಯಿ. ನನಗೆ ಅಕ್ಷರ ಕಲಿಸಿದ ಎಲ್ಲ ಶಿಕ್ಷಕರಿಗೆ ಸೆಪ್ಟೆಂಬರ್ 5. ರ ಶಿಕ್ಷಕರ ದಿನಾಚರಣೆಯ ಶುಭಾಶಯಗಳು . ನನ್ನ ಜೀವನ ದಲ್ಲಿ ಒಳ್ಳೆಯ ಪ್ರಭಾವ ಬೀರಿರುವ. ನಮಗೆ ವಿದ್ಯಾ ಬುದ್ದಿಯನ್ನು ಕೊಟ್ಟು ಸ್ಫೂರ್ತಿ ನೀಡಿರುವ ಶಿಕ್ಷಕಿಯಾಗಿರುವ. ಶ್ರೀಮತಿ. ಶೈನ ಟೀಚರ್. 
ಅವರಿಗೆ ಶಿಕ್ಷಕರ ದಿನಾಚರಣೆಯ ವಿಶೇಷ ಶುಭಾಶಯಗಳು.  ನಾನು. ಎಲ್. ಕೆ. ಜಿ. , ಯು. ಕೆ. ಜಿ. ಹೋಗಲಿಲ್ಲ ಒಂದನೇ ತರಗತಿಗೆ ಹೋಗುವಾಗ ನನಗೆ ಶಾಲೆಯಲ್ಲಿ. ಮಮತೆ. ಪ್ರೀತಿಯಿಂದ ಧೈರ್ಯ ಸ್ಫೂರ್ತಿ ತುಂಬಿ ವಿದ್ಯೆ ಬುದ್ಧಿ ಯನ್ನ ಕಲಿಸಿದ ಗುರುವಾದ ಶೈನ ಟೀಚರಿಗೆ ಹೃತ್ಪೂರ್ವಕ. ಕೃತಜ್ಞತೆ ಗಳು . ಮಕ್ಕಳ ಜಗಲಿ ಯ ಮೂಲಕ ನಮಗೆ ಸ್ಫೂರ್ತಿ ತುಂಬಿದ ಶಿಕ್ಷಕರಾದ ತಾರನಾಥ. ಕೈರಂಗಳ. ಇವರಿಗೂ ನನ್ನ ವಂದನೆಗಳು.
................................................. ಭೂಮಿಕಾ
6 ನೇ ತರಗತಿ
ಸೇಕ್ರೆಟ್ ಹಾರ್ಟ್ ಹೈಯರ್ ಪ್ರೈಮರಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ಕುಲಶೇಖರ ಮಂಗಳೂರು.
ದಕ್ಷಿಣ ಕನ್ನಡ ಜಿಲ್ಲೆ
*******************************************

Ads on article

Advertise in articles 1

advertising articles 2

Advertise under the article