-->
ಜಗಲಿಯ ಮಕ್ಕಳ ಮನದಾಳದ ಮಾತು ಸಂಚಿಕೆ - 9

ಜಗಲಿಯ ಮಕ್ಕಳ ಮನದಾಳದ ಮಾತು ಸಂಚಿಕೆ - 9

ಜಗಲಿಯ ಮಕ್ಕಳ 
ಮನದಾಳದ ಮಾತು 
ಸಂಚಿಕೆ - 8


ಎಲ್ಲರಿಗೂ ನನ್ನ ನಮನಗಳು. ನಾನು ಪ್ರಿಯಾ
ನನ್ನ ಎಲ್ಲಾ ಗುರುವರ್ಯರಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು......
ಎಲ್ಲರ ಜೀವನದಲ್ಲೂ ಅನೇಕ ಪ್ರಭಾವ ಬೀರಿರುವ ವ್ಯಕ್ತಿಗಳಿರುತ್ತಾರೆ, ಹಾಗೆಯೇ ನನ್ನ ಜೀವನದಲ್ಲಿ ಅತ್ಯಂತ ಪ್ರಭಾವ ಬೀರಿರುವ ವ್ಯಕ್ತಿಯೆಂದರೆ ಅದು ನನ್ನ ಮುದ್ದಿನ ಅಮ್ಮ ಎಂದರೆ ತಪ್ಪಾಗಲಾರದು. 
ಮನೆಯೇ ಮೊದಲ ಪಾಠ ಶಾಲೆ, ತಾಯಿಯೇ ಮೊದಲ ಗುರು ಎಂಬ ಮಾತಿದೆ. ಇದರಂತೆ ನನಗೆ ತಿಳಿದಿರುವ ಪ್ರಕಾರ ಚಿಕ್ಕಂದಿನಿಂದಲೂ ಅಮ್ಮ ತಾನು ಹಸಿವಲ್ಲಿದ್ದರೂ ಪರವಾಗಿಲ್ಲ, ತನ್ನ ಮಕ್ಕಳು ಹಸಿವು ಎಂದು ಹೇಳುವ ಮುನ್ನವೇ ಉಣ ಬಡಿಸುತ್ತಾರೆ. ನಾನು ಚಿಕ್ಕಂದಿನಿಂದಲೂ ಯಾವುದಾದರೂ ಸ್ಪರ್ಧೆಗೆ ಭಾಗಹಿಸಬೇಕೆ..? ಎಂದು ಅಮ್ಮನ ಬಳಿ ಕೇಳಿದಾಗ ಅವರು ಹೇಳುವ ಮಾತು ಏನೆಂದರೆ ನೀನು ಯಾವುದೇ ಸ್ಪರ್ದೆಗೂ ಧೈರ್ಯದಿಂದ ಭಾಗವಹಿಸುವುದು ಮುಖ್ಯ. ನಮಗೆ ಬಹುಮಾನ ಬರುತ್ತದೋ, ಬಿಡುತ್ತದೋ ಅದು ಏರಡನೇ ಪ್ರಶ್ನೆ ಎಂದು. ಹಾಗೆಯೇ ಅಮ್ಮ ನೀನು ಯಾವುದೇ ಕಷ್ಟದ ಸಂದರ್ಭಗಳಲ್ಲೂ ಹಿಂಜರಿಯದೆ ಮುಂದೆ ಸಾಗು ಎಂದು ಪ್ರತಿದಿನ ಹೇಳುತ್ತಿರುತ್ತಾರೆ. ನನ್ನ ಜೀವನದಲ್ಲಿ ನಮ್ಮ ಶಾಲಾ ಶಿಕ್ಷಕರು ಸಹ ಒಳ್ಳೆಯ, ಪ್ರೋತ್ಸಾಹಕರ ಮಾತುಗಳನ್ನಾಡಿ ನನ್ನನ್ನು ಹುರಿದುಂಬಿಸುತ್ತಾರೆ. ನನ್ನ ಜೀವನದಲ್ಲಿ ಪ್ರಭಾವ ಬೀರಿರುವ ಮತ್ತಿಬ್ಬರು ವ್ಯಕ್ತಿಗಳೆಂದರೆ ಶಾರದ ಟೀಚರ್, ಇವರು ನನಗೆ ಭೋದಿಸಿದ ಗುರುಗಳು ಅಲ್ಲದಿದ್ದರೂ ನನಗೆ ಮತ್ತು ನನ್ನ ತಂಗಿಗೆ ಯಾವ ಸ್ಪರ್ಧೆಗಳು ಇದ್ದರೂ ಭಾಗವಹಿಸಬೇಕೆಂದು ಮತ್ತು ಯಾವುದೇ ಕಾರ್ಯಕ್ರಮಗಳಿಗೆ ಭಾಗವಹಿಸುವ ಸಲುವಾಗಿ ನಮಗೆ ಅವಕಾಶಗಳನ್ನು ನೀಡುತ್ತಾರೆ. ಶಿಲ್ಪಾ ಟೀಚರ್ ಇವರು ಕೂಡಾ ಪಾಠಗಳ ಬಗ್ಗೆ ಮಾತ್ರವಲ್ಲದೆ ಸಾಂಸ್ಕೃತಿಕ ಕಾರ್ಯಕ್ರಮ ಗಳಲ್ಲಿ ತೊಡಗಿಸಿ ಕೊಳ್ಳಬೇಕು ಎಂದು ಮತ್ತು ವಿದ್ಯಾರ್ಥಿಗಳಿಗಾಗಿ ಪಾಠದ ವಿಷಯಕ್ಕೆ ಸಂಬಂಧಿಸಿದ ಕ್ವಿಜ್ ಹೀಗೆ ಹಲವು ಕಾರ್ಯಕ್ರಮಗಳನ್ನು ಅವರೇ ಸ್ವತಃ ಇಟ್ಟು ವಿಜೇತರಿಗೆ ಬಹುಮಾನಗಳನ್ನು ಪೆನ್, ಪೆನ್ಸಿಲ್, ಹಾಗೂ ಸ್ಟಾರ್ಸ್ ಗಳನ್ನು ನೀಡುತ್ತಾರೆ. ಇದರಿಂದ ನಮಗೆ ಮತ್ತಷ್ಟು ಮುನ್ನಡೆಯುವ ಛಲ ಹುಟ್ಟುತ್ತದೆ. ಹೀಗೆಯೇ ನಮಗೆ ಮುನ್ನಡೆಯುವ ದಾರಿಯ ಬಗ್ಗೆ ತಿಳಿಸುತ್ತಾರೆ. ನಮ್ಮ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾದಂತಹ ಸುಶೀಲಾ ಟೀಚರ್ , ಹಾಗೂ ಆಶಲತಾ ಟೀಚರ್, ಶಾಂಭವಿ ಟೀಚರ್ ಹಾಗೂ ಎಲ್ಲಾ ಶಿಕ್ಷಕರು ಸಹ ಹೇಳುವ ಮಾತು ನಿಜಕ್ಕೂ ನಮ್ಮನ್ನು ಹುರಿದುಂಬಿಸಿ ಬಿಡುತ್ತದೆ. ನಮ್ಮ ಚಿತ್ರಗಳಿಗೆ ಸರಿಯಾದ ವೇದಿಕೆ ಸಿಗದಿದ್ದಾಗ ಶಾರದಾ ಟೀಚರ್ ನಮಗೊಂದು ಹೊಸ ವೇದಿಕೆಯ ಪರಿಚಯ ಮಾಡಿಸಿದರು ಅದುವೇ ಮಕ್ಕಳ ಜಗಲಿ. ಇದರಿಂದ ನಮ್ಮ ಚಿತ್ರಗಳನ್ನು ಮಕ್ಕಳ ಜಗಲಿಯ ತಾರಾನಾಥ್ ಕೈರಂಗಳ ಸರ್ ಚಿತ್ರಗಳನ್ನು ಮಕ್ಕಳ ಜಗಲಿಯಲ್ಲಿ ಪ್ರಕಟಿಸುವುದರಿಂದ ನಮಗೆ ಇನ್ನೂ ಹೆಚ್ಚು-ಹೆಚ್ಚು ಚಿತ್ರಗಳನ್ನು ಮಾಡಲು ಸ್ಫೂರ್ತಿಯಾಗುತ್ತದೆ. ನನ್ನ ಎಲ್ಲಾ ಶಿಕ್ಷಕರಿಗೆ ಮತ್ತು ನನಗೆ ಒಳ್ಳೆಯ ಸಂಸ್ಕೃತಿಯನ್ನು ಕಲಿಸಿಕೊಟ್ಟ ಅಮ್ಮ ನಿಗೆ ಕೋಟಿ - ಕೋಟಿ ನಮನಗಳನ್ನು ಸಲ್ಲಿಸುತ್ತಿದ್ದೇನೆ.
....ಧನ್ಯವಾದಗಳು....
......................................................... ಪ್ರಿಯ. 
ತರಗತಿ : 10 ನೇ.
ಸರಕಾರಿ ಪ್ರೌಢ ಶಾಲೆ ನಾರಾವಿ. 
ಬೆಳ್ತಂಗಡಿ (ತಾಲೂಕು). 
ದಕ್ಷಿಣ ಕನ್ನಡ (ಜಿಲ್ಲೆ).
****************************************



ಎಲ್ಲರಿಗೂ ನಮಸ್ಕಾರ ನಾನು....... 
ಆದ್ಯಂತ್ ಅಡೂರು 
ಕಾಸರಗೋಡು ಜಿಲ್ಲೆಯ ಅಡೂರಿನ ವಿದ್ಯಾಭಾರತಿ ವಿದ್ಯಾಲಯದಲ್ಲಿ ಎಲ್ ಕೆ ಜಿ ತರಗತಿಗೆ ಸೇರಿದ ನನಗೆ ಅತ್ಯಂತ ಹೆಚ್ಚಿನ ಬೆಂಬಲ ನೀಡಿದವರು ಶಾಲೆಯ ಶಿಕ್ಷಕಿ ಶಾರದಾದೇವಿ ಬೈತನಡ್ಕ. ಪಠ್ಯ ಶಿಕ್ಷಣ ಮತ್ತು ಸಂಗೀತ ಶಿಕ್ಷಕಿಯಾಗಿ ನನ್ನ ಎಲ್ಲಾ ಸಂದೇಹಗಳನ್ನು ಪರಿಹರಿಸುತ್ತಿದ್ದರು. ಒಮ್ಮೆ ನಾನು ಶಾಲೆಯಲ್ಲಿ ಎಡವಿ ಬಿದ್ದು ಗಾಯಗೊಂಡಾಗ ಅವರೇ ಬ್ಯಾಂಡೇಜ್ ಸುತ್ತಿ ಆರೈಕೆ ಮಾಡಿದ್ದರು. ಇವರು ನನ್ನ ಸಂಗೀತ ಕ್ಷೇತ್ರದ ಸಾಧನೆಗೆ ಪ್ರೇರಣೆಯಾಗಿದ್ದರು. ನಾನು ಕಾಸರಗೋಡಿನಲ್ಲಿ ನಡೆದ ಜಿಲ್ಲಾ ಮಟ್ಟದ ವಿದ್ಯಾನಿಕೇತನ ಕಲೋತ್ಸವದ ಕಂಠಪಾಠ ಸ್ಪರ್ಧೆಯಲ್ಲಿ ಸತತವಾಗಿ ಎರಡು ಬಾರಿ ಪ್ರಥಮ ಬಹುಮಾನ ಪಡೆಯಲು ಶಾರದಾ ಟೀಚರ್ ತರಬೇತಿ ನೀಡಿದ್ದರು. ಅವರು ನಿವೃತ್ತ ಪ್ರಾಧ್ಯಾಪಕರಾದ ವಿ.ಬಿ.ಅರ್ತಿಕಜೆಯವರು ಬರೆದ ರಾಮಕೀರ್ತಿ ಹಾಡಿಗೆ ರಾಗ ಹಾಕಿ ಕೊಟ್ಟಿದ್ದರು. ಶಾರದಾ ಟೀಚರ್ ಅವರು ನನ್ನನ್ನು ಅವರ ಶಿಷ್ಯನಿಗಿಂತ ಹೆಚ್ಚಾಗಿ ಅವರ ಮನೆಯ ಮಗುವಿನಂತೆ ಪ್ರೀತಿಯಿಂದ ಪ್ರೋತ್ಸಾಹಿಸುತ್ತಿದ್ದರು. ಯಾವುದಾದರೂ ಸ್ಪರ್ಧೆಯಲ್ಲಿ ಭಾಗವಹಿಸಲು ನನಗೆ ಹಾಡಿನ ಅಗತ್ಯವಿದ್ದಾಗ ಅವರೇ ಹಾಡನ್ನು ಸಂಗ್ರಹಿಸಿ ತರಬೇತಿ ನೀಡಿ ಹಾಡಿಸುತ್ತಿದ್ದರು. ಶಾಲಾ ವಾರ್ಷಿಕೋತ್ಸವ, ಗಣೇಶೋತ್ಸವಗಳಲ್ಲಿ ಅವರು ಹೇಳಿಕೊಟ್ಟ ಹಾಡನ್ನು ಹಾಡಿ ನಾನು ಬಹುಮಾನಗಳನ್ನು ಪಡೆದಿದ್ದೇನೆ. 
ಚಿತ್ರದ ಬಗೆಗಿನ ಆಸಕ್ತಿಯನ್ನು ಗಮನಿಸಿ ಅನೇಕ ಚಿತ್ರಗಳನ್ನು ತೋರಿಸಿ ಅವುಗಳನ್ನು ಬಿಡಿಸುವ ಶೈಲಿಯನ್ನು ಹೇಳಿಕೊಡುತ್ತಿದ್ದರು. ನನ್ನ ಬಹುಮುಖ ಕ್ಷೇತ್ರದ ಅಳಿಲ ಸೇವೆಯಲ್ಲಿ ಶಾರದಾದೇವಿ ಟೀಚರ್ ಅವರ ಸಹಾಯ, ಪ್ರೋತ್ಸಾಹ ಸದಾ ಇತ್ತು. ಅಂತಹಾ ಶಿಕ್ಷಕಿ ದೊರೆತಿರುವುದಕ್ಕೆ ನಾನು ಯಾವತ್ತೂ ಹೆಮ್ಮೆ ಪಡುತ್ತೇನೆ. 
....................................ಆದ್ಯಂತ್ ಅಡೂರು 
ಎಂಟನೇ ತರಗತಿ 
ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ, ಅಡೂರು, ಕಾಸರಗೋಡು, ಕೇರಳ
*******************************************



ಎಲ್ಲರಿಗೂ ನಮಸ್ಕಾರ ನಾನು ಸಪ್ತಮಿ.......
ಹೌದು ನನಗೆ ತುಂಬಾನೇ ಪ್ರಭಾವ ಬೀರಿರುವ ನನ್ನ ಕಲಿಕೆ ದೃಷ್ಟಿಕೋನವನ್ನು ಬದಲಾಯಿಸಿ ನನ್ನಲ್ಲಿ ಒಂದು ಶಕ್ತಿಯನ್ನು ತುಂಬಿದ ಗುರುಗಳನ್ನು ನಾನು ಯಾವಾಗಲೂ ನೆನಪು ಮಾಡಿಕೊಳ್ಳುತ್ತೇನೆ. ನಮ್ಮದು ಇಂಗ್ಲೀಷ್ ಮೀಡಿಯಂ ಆದ್ದರಿಂದ ಒಂದನೇ ತರಗತಿಯಲ್ಲಿ ಇರುವ ಗುರುಗಳು ಮುಂದಿನ ತರಗತಿಯಲ್ಲಿ ಇರುವುದಿಲ್ಲ. ಯುಕೆಜಿ ಶೇಕಡ 90% ತೆಗೆಯುತ್ತಿದ್ದೆ.1, 2 ಸಾಮಾನ್ಯವಾಗಿ 70% ತೆಗೆಯುತ್ತಿದ್ದೆ ಆದರೆ ಮೂರನೇ ತರಗತಿಗೆ ಬಂದ ನಂತರ ನನ್ನ ಭಾವನೆಗಳನ್ನು ಅರ್ಥಮಾಡಿಕೊಳ್ಳುವಂತಹ ಅವರ ಹೆಸರು ಕೂಡ ಭಾವನ ಅಂತ ಆಗಿತ್ತು . 
ಅವರು ನನ್ನ ಮೂರನೇ ಬೆಂಚಿನಿಂದ ಒಂದನೇ ಬೆಂಚಿಗೆ ಕೂರಿಸಿದರು. ಅಂದಿನಿಂದ ಹಂತ ಹಂತವಾಗಿ ಬದಲಾಗುತ್ತಾ ಹೋದೆ. ಪ್ರತಿ ಎರಡು ತಿಂಗಳ ಪರೀಕ್ಷೆಯಲ್ಲಿ ನಾನು 75% ಇರುವವಳು 85% ರಿಂದ 95% ಮತ್ತು 98%ಕ್ಕೆ ಬರುವುದಕ್ಕೆ ಅವಕಾಶವಾಯಿತು. ಇದರ ಜೊತೆಯಲ್ಲಿ ಹಲವಾರು ವೇದಿಕೆಯಲ್ಲಿ ಭಾಗವಹಿಸಿದ್ದಕ್ಕೆ ಪ್ರತಿಫಲವು ಸಿಕ್ಕಿದೆ. ಅವರನ್ನು ನಾನು ಗೌರವಿಸುತ್ತಾ ಸ್ಮರಿಸಿ ಕೊಳ್ಳುತ್ತೇನೆ. ಹಾಗೆಯೇ ಈ ವರುಷ 7 ನೇ ತರಗತಿಗೆ ನನಗೆ ಹಿಂದಿ ಟೀಚರ್ ಆಗಿದ್ದಾರೆ. ನನ್ನ 5 ನೇ ತರಗತಿಯಲ್ಲಿ ಇರುವಾಗ ಅಶ್ವಿನಿ ಟೀಚರ್ ಅವರು ನನಗೆ ಸ್ಪೂರ್ತಿ ತುಂಬಿದ್ದಾರೆ ಏಕೆಂದರೆ.. ಶಿಕ್ಷಕರು ಕೇಳುವ ಪ್ರಶ್ನೆಗೆ ಉತ್ತರ ಗೊತ್ತಿದ್ದರೂ ಉತ್ತರ ಕೊಡುವುದಕ್ಕೆ ನನಗೆ ಧೈರ್ಯವಿಲ್ಲವಾಗಿತ್ತು. ಆಗ ನನಗೆ ಎದ್ದು ನಿಲ್ಲುವ ಶಕ್ತಿ ಅವರಾಗಿದ್ದರು ಮತ್ತು ಎಲ್ಲಾ ಸ್ಪರ್ಧೆಗಳಿಗೆ ಕರೆದೊಯ್ಯುತ್ತಿದ್ದರು. ನಾನು ಇವತ್ತು ಸಾವಿರ ಜನರ ಮಧ್ಯೆ ನಿಂತು ಮಾತನಾಡಬಲ್ಲೆ ಎಂಬ ಹೊಸ ಬೆಳಕನ್ನು ಮೂಡಿಸಿದ್ದಕ್ಕೆ ಈಗಲೂ ಅವರನ್ನು ನೆನಪಿಸಿಕೊಳ್ಳುತ್ತಾ ಇರುತ್ತೇನೆ. 5ನೇ ತರಗತಿಯಿಂದ ಏಳನೇ ತರಗತಿಯವರೆಗೆ ಸಮಾಜ ಶಿಕ್ಷಣದಲ್ಲಿ ಟೀಚರ್ ಆಗಿದ್ದ ರಾಘವೇಂದ್ರ ಸರ್. ಸಮಾಜದ ಪಾಠವನ್ನು ಬಿಡಿಸಿ ಬಿಡಿಸಿ ಹೇಳುವರು. "ಅರ್ಥವಾಗುವುದಿಲ್ಲ ಸರ್" ಎಂದು ಹೇಳುವ ವಿದ್ಯಾರ್ಥಿ - ವಿದ್ಯಾರ್ಥಿನಿ ನಮ್ಮ ಕ್ಲಾಸಿನಲ್ಲಿ ಇರುವುದೇ ಇಲ್ಲ ಇವರು ನನಗೆ ಜ್ಞಾನ ಮತ್ತು ಸ್ಪೂರ್ತಿಯನ್ನು ತುಂಬುತ್ತಿದ್ದರು. ಪಿಟಿ ಟೀಚರ್ ಆಗಿದ್ದ ರತ್ನಕುಮಾರ್ ಸರ್. ಇವರು ಮಕ್ಕಳನ್ನು ಸ್ನೇಹಿತರಂತೆ ನೋಡುತ್ತಿದ್ದರು. ಇವರೂ ಸಹ ನನ್ನ ನೆಚ್ಚನ ಟೀಚರ್. ನನ್ನ ಕನ್ನಡ ಟೀಚರ್ ರಾಜಾರಾಮ್ ಸರ್ ಇವರೂ ಕನ್ನಡ ಪಾಠವನ್ನು ತುಂಬಾ ಅರ್ಥಮಾಡಿ ಹೇಳುತ್ತಿದ್ದರು. ಹಾಗೂ ಗಣಿತ ಚೆನ್ನಾಗಿ ಕಲಿಸುವ ಪ್ರೇಮ ಟೀಚರ್ ಇವರು 6 ಮತ್ತು 7ನೇ ತರಗತಿಯಲ್ಲಿ ನನಗೆ ಗಣಿತ ಶಿಕ್ಷಣವನ್ನು ಹೇಳಿಕೊಡುತ್ತಿದ್ದರು. ತುಂಬಾ ಎಳೆಎಳೆಯಾಗಿ ಬಿಡಿಸಿ ಹೇಳುತ್ತಿದ್ದರು. ಸುಪ್ರಿಯಾ ಟೀಚರ್, ಶರಣ್ಯ ಟೀಚರ್ ಇವರಿಬ್ಬರೂ ವಿಜ್ಞಾನ ಮತ್ತು ಇಂಗ್ಲಿಷ ಟೀಚರ್ ಆಗಿದ್ದರು. ತುಂಬಾ ಚೆನ್ನಾಗಿ ಹೇಳಿ ಕೊಡುತ್ತಿದ್ದರು. ತಾಯಿಯ ಹೊರತಾಗಿ ಎಲ್ಲಾ ಸಮಸ್ಯೆಗಳಿಗೂ ದಾರಿದೀಪವಾಗಿ ನಿಲ್ಲಬಲ್ಲವರು ಗುರುಗಳು ಮಾತ್ರ.. ಸಮಸ್ತ ಎಲ್ಲ ಗುರುಗಳಿಗೆ - ಗುರುಮಾತೆಯವರಿಗೆ ಶಿಕ್ಷಕರ ದಿನಾಚರಣೆಯ ನನ್ನ ಶುಭಾಶಯಗಳು..... ಇಂತಿ ನಿಮ್ಮ ನೆಚ್ಚಿನ ವಿಧ್ಯಾರ್ಥಿನಿ 
..........................ಸಪ್ತಮಿ ಅಶೋಕ್ ದೇವಾಡಿಗ
7ನೇ ತರಗತಿ 
ಶುಭದ ಆಂಗ್ಲ ಮಾಧ್ಯಮ ಶಾಲೆ ಕಿರಿಮಂಜೇಶ್ವರ
ಬೈಂದೂರ್ ತಾಲೂಕು , ಉಡುಪಿ ಜಿಲ್ಲೆ 
*******************************************



ಎಲ್ಲರಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು... ನಾನು ಲಹರಿ ಜಿ.ಕೆ.
    ಶಿಕ್ಷಕರೆಂದರೆ ...... ತಾಳ್ಮೆ.... ಸಹನೆ.... ಪ್ರೀತಿ.... ಕರುಣೆ.... ಅಷ್ಟೇ ಏಕೆ.... ಭೂಮಿ ಮೇಲಿರುವ ಎಲ್ಲಾ ಒಳ್ಳೆಯತನಗಳ ಪ್ರತೀಕ... ಅಂತ ಅಮ್ಮ ಯಾವಾಗಲೂ ಹೇಳುತ್ತಿರುತ್ತಾರೆ. ನಿಜ... ನನ್ನ ಈ ವರೆಗಿನ ಶಾಲಾಜೀವನದಲ್ಲಿ ನನಗೆ ಸಿಕ್ಕಂತಹ ಎಲ್ಲಾ ಗುರುಗಳು ದೇವರ ಪ್ರತಿರೂಪ.... ಅವರ ಪ್ರೀತಿಗೆ ನಾನು ಚಿರಋಣಿ.... ನನ್ನ ಎಲ್ಲಾ ಗುರುಗಳನ್ನೂ ನೆನೆಯುತ್ತಾ ನಾನು ನನ್ನ ಅಂಗನವಾಡಿ ಶಿಕ್ಷಕರ ಬಗ್ಗೆ ಹೇಳಬಯಸುತ್ತೇನೆ. ಅವರ ಶ್ರಮಕ್ಕೆ ಸರಿಸಾಟಿ ಯಾರು..... ನನ್ನಮ್ಮ ಅವರ ಬಳಿ ನನ್ನನ್ನು ಬಿಟ್ಟು ಹೋದಾಗ ನನ್ನ ಕೂಗು ಮುಗಿಲು ಮುಟ್ಟಿತ್ತಲ್ಲವೇ.... ನನ್ನನ್ನೆತ್ತಿ ಆಡಿಸಿ... ಮುದ್ದಿಸಿ.... ಅಳು ನಿಲ್ಲುವಂತೆ ಮಾಡಿದರಲ್ಲ... ಆಟ ಆಡಲು ಕಲಿಸಿದರು.... ಕುಣಿಯಲು ಕಲಿಸಿದರು.... ಕೈ ಹಿಡಿದು ಬರೆಯಲು ಕಲಿಸಿದರು.... ತಿಂಡಿ ತಿನ್ನಲು ಕಲಿಸಿದರು.... ಒಂದೇ ಎರಡೇ.... ಅವರೇ ನನ್ನ ಪ್ರೀತಿಯ ಟೀಚರ್ 
"ಪ್ರಭಾವತಿ ಟೀಚರ್".... ಈಗಲೂ ಅವರ ಬಳಿಗೆ ಹೋಗುತ್ತೇನೆ... ಏಕೆ ಗೊತ್ತೆ.... ಯೋಗ ಕಲಿಯಲು ಮತ್ತು ಕಿಶೋರಿಯರ ಸಂಘದಲ್ಲಿ ಸದಸ್ಯಳಾಗಿ..... ನಮ್ಮ ಒಡನಾಟ ಈಗಲೂ ಮುಂದುವರಿದಿದೆ. ಇಂತಹ ಗುರುಗಳನ್ನು ನಾವು ಮರೆಯಲು ಸಾಧ್ಯವೇ.... ನನ್ನ ಎಲ್ಲಾ ಶಿಕ್ಷಕರಿಗೂ ಈ ನನ್ನ ಬರಹ ಸಮರ್ಪಿತ.... ಗುರುಗಳೆಲ್ಲರಿಗೂ "ಶಿಕ್ಷಕರ ದಿನಾಚರಣೆ" ಯ ಹಾರ್ದಿಕ ಶುಭಾಶಯಗಳನ್ನು ಕೋರುತ್ತಾ ಆಶೀರ್ವಾದವನ್ನು ಬೇಡುತ್ತೇನೆ.
.................................................ಲಹರಿ ಜಿ.ಕೆ.
7 ನೇ ತರಗತಿ
ತುಂಬೆ ಸೆಂಟ್ರಲ್ ಸ್ಕೂಲ್ ತುಂಬೆ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
****************************************



       ಎಲ್ಲರಿಗೂ ವಂದನೆಗಳು ನಾನು ಅನ್ವಿತಾ.....
ನನ್ನ ಶಾಲೆಯಲ್ಲಿ ಅನಿತಾರವರು ನನ್ನ ನೆಚ್ಚಿನ ಟೀಚರ್, ಅವರು ನಮ್ಮ ತರಗತಿಯ ಟೀಚರ್, ಅವರು ನನಗೆ ಉತ್ತಮ ಟೀಚರ್. ಅವರು ಆಟಗಳನ್ನು ಇಷ್ಟ ಪಡುತ್ತಾರೆ, ನಮ್ಮೊಂದಿಗೆ ಮಕ್ಕಳಂತೆ ಇರುತ್ತಾರೆ, ಅವರು ಹಲವು ಪ್ರತಿಭೆಗಳನ್ನು ಹೊಂದಿರುವ ವ್ಯಕ್ತಿ, ಅವರು ನಮ್ಮ ನ್ನು ಉತ್ತಮರಾಗಲು ಸ್ಫೂರ್ತಿ ನೀಡುತ್ತಾರೆ. ನಾವೆಲ್ಲರೂ ಅವರನ್ನು ತುಂಬಾ ಪ್ರೀತಿಸುತ್ತೇವೆ,  
ಧನ್ಯವಾದಗಳು 
................................................... ಅನ್ವಿತ 
5 ನೇ ತರಗತಿ  
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ
ಮೂಡಂಬೈಲು , ಬಂಟ್ವಾಳ ತಾಲೂಕು 
ದಕ್ಷಿಣ ಕನ್ನಡ ಜಿಲ್ಲೆ
****************************************



ಎಲ್ಲರಿಗೂ ವಂದನೆಗಳು ನಾನು ರಾಜಶ್ರೀ .... 
 ಮೊದಲ ಗುರು ನನ್ನ ತಂದೆ ತಾಯಿ. ನನಗೆ ಅಕ್ಷರ ಕಲಿಸಿದ ಎಲ್ಲ ಶಿಕ್ಷಕರಿಗೆ ಸೆಪ್ಟೆಂಬರ್ 5. ರ ಶಿಕ್ಷಕರ ದಿನಾಚರಣೆಯ ಶುಭಾಶಯಗಳು . ನನ್ನ ಜೀವನ ದಲ್ಲಿ ಒಳ್ಳೆಯ ಪ್ರಭಾವ ಬೀರಿರುವ. ನಮಗೆ ವಿದ್ಯಾ ಬುದ್ದಿಯನ್ನು ಕೊಟ್ಟು ಸ್ಫೂರ್ತಿ ನೀಡಿರುವ ಶಿಕ್ಷಕಿಯಾಗಿರುವ.ಶ್ರೀಮತಿ. ಶಾಲೆಟ್. ಟೀಚರ್. ಅವರಿಗೆ ಶಿಕ್ಷಕರ ದಿನಾಚರಣೆಯ ವಿಶೇಷ ಶುಭಾಶಯಗಳು.
       ನಾನು. ಎಲ್. ಕೆ. ಜಿ. , ಯು. ಕೆ. ಜಿ. ಹೋಗುವಾಗ ತುಂಬಾ ಚಿಕ್ಕವಳಿದ್ದೆ. ನನಗೆ ಶಾಲೆಯಲ್ಲಿ. ಮಮತೆ. ಪ್ರೀತಿಯಿಂದ ಧೈರ್ಯ ಸ್ಫೂರ್ತಿ ತುಂಬಿ ವಿದ್ಯೆ ಬುದ್ಧಿ ಯನ್ನ ಕಲಿಸಿದ ಗುರುವಾದ ಶಾಲೆಟ್ ಟೀಚರ್ ರಿಗೆ ಹೃತ್ಪೂರ್ವಕ. ಕೃತಜ್ಞತೆ ಗಳು . ಮಕ್ಕಳ ಜಗಲಿ ಯ ಮೂಲಕ ನಮಗೆ ಸ್ಫೂರ್ತಿ ತುಂಬಿದ ಶಿಕ್ಷಕರಾದ ತಾರನಾಥ. ಕೈರಂಗಳ. ಇವರಿಗೂ ನನ್ನ ವಂದನೆಗಳು.
....................................................... ರಾಜಶ್ರೀ 
4ನೇ ತರಗತಿ
ಸೇಕ್ರೆಟ್ ಹಾರ್ಟ್ ಹೈಯರ್ ಪ್ರೈಮರಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ಕುಲಶೇಖರ ಮಂಗಳೂರು.
ದಕ್ಷಿಣ ಕನ್ನಡ ಜಿಲ್ಲೆ
*******************************************




Ads on article

Advertise in articles 1

advertising articles 2

Advertise under the article