-->
ಅಕ್ಕನ ಪತ್ರ - 6 ಕ್ಕೆ ಮಕ್ಕಳ ಉತ್ತರ (ಸಂಚಿಕೆ -2)

ಅಕ್ಕನ ಪತ್ರ - 6 ಕ್ಕೆ ಮಕ್ಕಳ ಉತ್ತರ (ಸಂಚಿಕೆ -2)

          ಜಗಲಿಯ ಮಕ್ಕಳಿಗೆ ಅಕ್ಕನ ಪತ್ರ - ಮಕ್ಕಳ ಜಗಲಿಯಲ್ಲೊಂದು ವಿಭಿನ್ನ ಪ್ರಯೋಗ. ಮಕ್ಕಳ ಮಾನಸಿಕ , ಶೈಕ್ಷಣಿಕ , ಬೌದ್ಧಿಕ , ಮೌಲಿಕ ವಿಚಾರಗಳಿಗೆ ಒತ್ತು ಕೊಟ್ಟು ಸೃಜನಶೀಲ ಶಿಕ್ಷಕಿ ತೇಜಸ್ವಿ ಅಂಬೆಕಲ್ಲು ಇವರು ಬರೆಯುತ್ತಿರುವ ಪತ್ರ ಮಕ್ಕಳಲ್ಲಿ ಹೊಸತನವನ್ನು ಮೂಡಿಸುತ್ತಿದೆ. ಜಗಲಿಯ ಮಕ್ಕಳು  ಪತ್ರವನ್ನು ಓದಿ ಪ್ರೀತಿಯಿಂದ ಮುಗ್ಧವಾಗಿ ಉತ್ತರ ಬರೆಯುತ್ತಿದ್ದಾರೆ. ಅಕ್ಕನ ಪತ್ರ - 6 ಕ್ಕೆ ಬಹಳಷ್ಟು ವಿದ್ಯಾರ್ಥಿಗಳು ಬರೆದಿರುವ ಉತ್ತರ ಇಲ್ಲಿದೆ ........

----------------------------------------------------------------------

ಅಕ್ಕನ ಪತ್ರ - 6 ಕ್ಕೆ ನನ್ನ ಉತ್ತರ 
     ನಮಸ್ತೇ ಅಕ್ಕ. ಅಬ್ಬಾ! ನನಗೆ ಜಾನ್ ಗೊಡಾರ್ಡ್ ನ ಕಥೆ ಕೇಳಿ ಅದ್ಭುತವೆನಿಸಿತು. ಅವನ ಛಲವನ್ನು ನೋಡಿ ಆಶ್ಚರ್ಯವೆನಿಸಿತು. ಅವನು ಬರೆದ ಕನಸುಗಳನ್ನು ನನಸಾಗಿಸಲು ಹೋಗಿದ್ದಾನೆ. ಇದು ಒಳ್ಳೆಯ ಹಾಗೂ ಅದ್ಭುತವಾದ ಕಥೆ. ಕನಸು ಕನಸಾಗಿಯೇ ಉಳಿಯಬಾರದು. ಅದನ್ನು ನಮ್ಮ ಛಲ ಧೈರ್ಯದಿಂದ ನನಸು ಮಾಡಬೇಕು. ಹೌದು ಅಕ್ಕ ನನಗೂ ಕಾಣುವ ಕನಸುಗಳನ್ನು ಬರೆದಿಡಬೇಕು ಅನಿಸುತ್ತಿದೆ. ನೀವು ಹೇಳಿದ ಹಾಗೆ ಒಳ್ಳೆಯ ಪುಸ್ತಕಗಳ್ಳನ್ನು ಓದಿದರೆ ನಮ್ಮ ಜ್ಞಾನ ವಿಸ್ತಾರವಾಗುತ್ತದೆ.
.............................................. ಕೆ ಬಿಂದು ಶ್ರೀ
10 ನೇ ತರಗತಿ 
ಶ್ರೀ ರಾಮ ಪ್ರೌಢಶಾಲೆ, ಕಲ್ಲಡ್ಕ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
********************************************



     ಅಕ್ಕನ ಆರನೇ ಪತ್ರಕ್ಕೆ ನನ್ನ ನಮನಗಳು..... ನೀವು ಆರನೇ ಪತ್ರದಲ್ಲಿ ಹಲವಾರು ವಿಷಯಗಳನ್ನು ತಿಳಿಸಿದ್ದೀರಿ....15 ವರ್ಷದ ಒಬ್ಬ ಹುಡುಗ ಕನಸುಗಳನ್ನು ಪಟ್ಟಿ ಮಾಡಿದ ವಿಷಯವನ್ನು ನೀವು ತಿಳಿಸಿದ್ದೀರಿ.... ಆ ಹುಡುಗನ ಕನಸನ್ನು ಓದಿದ ಮೇಲೆ ನನಗೂ ಅನ್ನಿಸುತ್ತಿತ್ತು , ನಾನು ಎನಾದರೂ ಸಾಧಿಸಬೇಕು.. ನನಗೂ ಕೂಡ ಹಲವಾರು ಕನಸುಗಳು ಇವೆ.. ಶಿಕ್ಷಕಿ, ಡಾಕ್ಟರ್ ಆಗಬೇಕೆಂದು ಹೀಗೆ ಏನೇನೋ ಕನಸುಗಳು ಇವೆ... ಈ ಹುಡುಗನ ಕನಸನ್ನು ಓದಿದ ಮೇಲೆ ಇನ್ನಷ್ಟು ಛಲ ಬಂತು.. ನಾನು ಒಂದಲ್ಲ ಒಂದು ದಿನ ಸಾಧಿಸಿಯೇ ಸಾಧಿಸುತ್ತೇನೆ... ಎನ್ನುವ ನಂಬಿಕೆ ಉಂಟಾಯಿತು... ನಾನು ಅಕ್ಕನ ಏಳನೇ ಪತ್ರಕ್ಕೆ ಕುತೂಹಲದಿಂದ ಕಾಯುತ್ತಿದ್ದೇನೆ... ನಮಸ್ಕಾರಗಳು ಅಕ್ಕ.... ನಿಮ್ಮ ಪ್ರೀತಿಯ 
........................................... ಆಯಿಷತ್ ಹರ್ಝ 
8 ನೇ ತರಗತಿ. 
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಗೋಳಿತ್ತಟ್ಟು. 
ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
**********************************************



ಪ್ರೀತಿಯ ಅಕ್ಕನಿಗೆ ಧೃತಿ ಮಾಡುವ ನಮಸ್ಕಾರಗಳು ,
     ನೀವು ಬರೆದ ಪತ್ರ ಓದಿದೆ. ಆ ಬಾಲಕನ ಹಾಗೆ ನನಗೂ ಕೆಲವು ಕನಸುಗಳಿವೆ. ಉತ್ತಮ ಲೇಖಕಿಯಾಗಬೇಕು , ನೃತ್ಯಪಟು ಆಗಬೇಕು, ಒಳ್ಳೆಯ ಸಮಾಜ ಸೇವಕಿಯಾಗಬೇಕು , ನನ್ನಿಂದ ಯಾರಿಗೂ ನೋವಾಗಬಾರದು , ಚೆನ್ನಾಗಿ ಕಲಿತು ಒಳ್ಳೆಯ ಅಂಕಗಳನ್ನು ಗಳಿಸಬೇಕು.... ಹೀಗೆ ಇನ್ನೂ ತುಂಬಾ ಕನಸುಗಳಿವೆ. ನನ್ನ ಕನಸುಗಳನ್ನು ನನಸು ಮಾಡಿಕೊಳ್ಳಲು ಸದಾ ಪ್ರಯತ್ನ ಪಡುತ್ತೇನೆ. ಹೀಗೆ ಒಳ್ಳೆಯ ಸಾಧಕರ ಕಥೆ ಹೇಳಿ ಅಂತ ಅಕ್ಕನಲ್ಲಿ ಈ ಮೂಲಕ ಕೇಳಿಕೊಳ್ಳುತ್ತೇನೆ.
ಇಂತಿ ನಿಮ್ಮ ಪ್ರೀತಿಯ ತಂಗಿ ಧೃತಿ.
.............................................................ಧೃತಿ 
9 ನೇ ತರಗತಿ 
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
********************************************




ಅಕ್ಕನ ಪತ್ರ 6
                ನಮ್ಮ ಪ್ರೀತಿಯ ಅಕ್ಕನಿಗೆ ನಿಮ್ಮ ತಂಗಿ ಮಾಡುವ ನಮಸ್ಕಾರಗಳು..
            ನೀವು ಬರೆದ ಪತ್ರ ಓದಿದೆ ನನಗೆ ತುಂಬಾ ಇಷ್ಟವಾಯ್ತು..  ಅಮೆರಿಕಾದ ಸಾಹಸಿಗ ಜಾನ್ ಗೋಡಾರ್ಡ್ ಅವರ ಕನಸುಗಳ ಪಟ್ಟಿ ಮತ್ತು ಅವರ ಆ ಕನಸುಗಳನ್ನು ನನಸು ಆಗಿಸಿದ್ದು ನಿಜಕ್ಕೂ ಅದ್ಭುತ ! 
ನಾನು ಕೂಡ ಅವರ ಹಾಗೆ ತುಂಬಾ ಕನಸುಗಳನ್ನು ಕಟ್ಟಿದ್ದೇನೆ ... ನಾನು ಮೊದಲು ನಾನು ಚಂದ ಮಾಡಿ ಕಲಿತು ಒಳ್ಳೆಯ ಅಂಕಗಳನ್ನು ತೆಗೆದು ಅಮ್ಮನಿಗೆ ನನಗೆ ಕಲಿಸಿದ ಗುರುಗಳಿಗೆ ಖುಷಿ ಆಗುವಂತೆ ಮಾಡಬೇಕು. ಬಡ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ...ನನಗೆ ಸಂಗೀತ , ನೃತ್ಯ , ಚಿತ್ರ ಕಲೆ , ಕೊಳಲು ನುಡಿಸುವುದು ಹೀಗೆ ತುಂಬಾ ಕನಸುಗಳು ಇವೆ. ನನಗೆ ಈ ಪತ್ರ ನನ್ನ ಎಲ್ಲಾ ಕನಸುಗಳನ್ನು ನನಸಾಗಿಸಲು ಸ್ಪೂರ್ತಿ ನೀಡಿದೆ. ಎಂದು ಹೇಳುತ್ತೇನೆ ...
ಅಕ್ಕ ನಾನು ನಿಮ್ಮ ಮುಂದಿನ ಪತ್ರಕ್ಕಾಗಿ ಕಾಯುತ್ತಿರುತ್ತೇನೆ ..
......ಧನ್ಯವಾದಗಳು ಅಕ್ಕ.....
 ................................................... ಪೂರ್ತಿ 
8 ನೇ ತರಗತಿ 
ಸರಕಾರಿ ಪ್ರೌಢ ಶಾಲೆ , ನಾರಾವಿ 
ದಕ್ಷಿಣ ಕನ್ನಡ ಜಿಲ್ಲೆ , ಬೆಳ್ತಂಗಡಿ ತಾಲೂಕು
**********************************************



ಪ್ರೀತಿಯ ಅಕ್ಕನಿಗೆ ವೈಷ್ಣವಿ ಮಾಡುವ ನಮಸ್ಕಾರಗಳು,
       ಎಲ್ಲರಿಗೂ ಕನಸೆಂಬುದು ಇದ್ದೇ ಇರುತ್ತದೆ. ಅದನ್ನು ನನಸು ಮಾಡಲು ಅಷ್ಟೇ ಶ್ರಮ ಪಡಬೇಕಾಗುತ್ತದೆ. ಎಲ್ಲರಂತೆ ನನಗೂ ತುಂಬಾ ಕನಸುಗಳಿವೆ. ನನಗೆ ಗಗನಯಾತ್ರೆ ಮಾಡಲು ತುಂಬಾ ಆಸೆ ಇದೆ. ನನಗೆ ಜೀವನದಲ್ಲಿ ಒಂದು ಸಲ ವಿದೇಶ ಯಾತ್ರೆ ಕೈಗೊಳ್ಳುವ ಕನಸಿದೆ. ನನಗೆ ಹಕ್ಕಿಯಂತೆ ಹಾರಾಡಬೇಕೆಂದು ಎನಿಸುತ್ತದೆ. ಇನ್ನೊಂದು ಸಲ ಪರ್ವತದ ತುದಿಗೆ ಹೋಗಿ ನಿಲ್ಲುವ ಆಸೆಯಾಗುತ್ತಿದೆ. ಮತ್ತೊಂದು ಸಲ ದೊಡ್ಡ ದೊಡ್ಡ ಜಲಪಾತಗಳನ್ನು ವೀಕ್ಷಿಸುವ ಆಸೆಯಾಗುತ್ತದೆ. ನನಗೆ ವಿಜ್ಞಾನಕ್ಕೆ ಸಂಬಂಧಪಟ್ಟ ಬೇರೆಬೇರೆ ಪ್ರಯೋಗಗಳನ್ನು ಮಾಡುವ ಕನಸು ಕೂಡ ಇದೆ. ನನಗೆ ದೋಣಿ, ಹಡಗು ಮತ್ತು ವಿಮಾನದಲ್ಲಿ ಸಂಚರಿಸುವ ಆಸೆ ಇದೆ. ನನಗೆ ಹೊಸ ಹೊಸ, ವಿವಿಧ ರೀತಿಯ, ಖಾದ್ಯಗಳನ್ನು ತಯಾರಿಸುವ ಮತ್ತು ರುಚಿ ನೋಡುವ ಆಸೆಯೂ ಇದೆ. ಈ ಕನಸುಗಳೆಲ್ಲ ಕೈಗೂಡಲಿ ಎಂದು ಭಗವಂತನಲ್ಲಿ ಸದಾ ಪ್ರಾರ್ಥಿಸುತ್ತೇನೆ.
                      ಧನ್ಯವಾದಗಳು
 ......................................... ವೈಷ್ಣವಿ ಕಾಮತ್
 5 ನೇ ತರಗತಿ
 ಶ್ರೀರಾಮ ವಿದ್ಯಾ ಕೇಂದ್ರ ಕಲ್ಲಡ್ಕ , 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ      
****************************************             
                                                    
                              
           ಅಕ್ಕ ಬರೆದ ಪತ್ರ ನನಗೆ ಬಹಳ ಇಷ್ಟವಾಯಿತು. ಅಕ್ಕ ಹೇಳಿದ ಕಥೆ ನನಗೂ ಕೂಡ ಗೊತ್ತಿರಲಿಲ್ಲ. ಆದರೆ ಈಗ ನನಗೆ ತಿಳಿಯಿತು.  ಹೌದು, ನನಗೂ ತುಂಬಾ ಆಸೆ ಕನಸುಗಳಿವೆ. T. V ಮುಂದೆ ಕೂರುವುದನ್ನು ಬಿಟ್ಟು ಪುಸ್ತಕ ಓದಿದರೆ ಬಹಳ ಒಳ್ಳೆಯದು. ಹೌದು ನಮ್ಮ ಕನಸುಗಳು ಎಂದಿಗೂ ಮೂಲೆ ಸೇರಬಾರದು. ಇನ್ನು ಮುಂದೆ ನಾನು ಕೂಡ ನನ್ನ ಕನಸುಗಳನ್ನು ಪುಸ್ತಕದಲ್ಲಿ ಬರೆದಿಡುತ್ತೇನೆ. ಪುಸ್ತಕಗಳನ್ನು ಸಂಗ್ರಹಿಸುತ್ತೇನೆ.
ಈಗಂತೂ ಪುಸ್ತಕಗಳು ಯಾರಿಗೂ ಬೇಡವಾಗಿದೆ. ಅಕ್ಕ ಹೇಳಿದ ಈ ಮಾತಿನಿಂದಾದರೂ ಎಲ್ಲರಲ್ಲೂ ಪುಸ್ತಕ ಓದುವ , ಬರೆಯುವ ಅಭ್ಯಾಸ ಬೆಳೆಯಲಿ.
...........................................................ನಿಭಾ
8 ನೇ ತರಗತಿ
ಸ. ಹಿ. ಪ್ರಾ. ಶಾಲೆ. ನೇರಳಕಟ್ಟೆ , 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*********************************************



ಅಕ್ಕನ ಪತ್ರ - 6,
ನಮಸ್ತೆ,
ಈ ಪತ್ರದಿಂದ ಕನಸು ಕಾಣುವುದು ಒಳ್ಳೆಯದು, ಅಮ್ಮ ಇನ್ನುಳಿದ ವಿಷಯ ತಿಳಿಸಿದರು, ಕಲಾಂ ರವರು ಕನಸು ಕಾಣುವುದು ವಿದ್ಯಾರ್ಥಿಗಳ ಒಳ್ಳೆಯ ಗುಣ, ಅಂಬೇಡ್ಕರ್ ಕನಸನ್ನು ನನಸಾಗಲು ಪ್ರಯತ್ನ ಪಡಬೇಕು ಎಂದು ಹೇಳಿದ್ದಾರೆ. ಆದುದರಿಂದ ನಾನು ನನ್ನ ಕನಸಿನ ಜೊತೆಗೆ ಅಮ್ಮನ ಕನಸನ್ನು ನನಸಾಗಲು ಪ್ರಯತ್ನ ಪಡುತ್ತೇನೆ.
                             ವಂದನೆಗಳು ಅಕ್ಕ,
...........................................ಪ್ರಣವ್ ದೇವ್
1 ನೇ ತರಗತಿ 
ಲೇಡಿ ಹಿಲ್ ಇಂಗ್ಲೀಷ್ ಹೈಯರ್ ಪ್ರೈಮರಿ ಸ್ಕೂಲ್ - ಮಂಗಳೂರು,
ದಕ್ಷಿಣ ಕನ್ನಡ ಜಿಲ್ಲೆ
*********************************************

 


       ನಮಸ್ತೆ ತೇಜಸ್ವಿ ಅಕ್ಕಾ.....ನಾನು ಭುವನ್ ರಾಜ್. ನಿಮ್ಮ ಪತ್ರ ಓದಿ ತುಂಬಾ ಖುಷಿಯಾಯಿತು. ನನಗೂ ಒಂದು ಕನಸಿದೆ. ನಮ್ಮ ಪರಿಸರ ಸಂರಕ್ಷಣೆ ಮಾಡಬೇಕು, ಅಪ್ಪ ಅಮ್ಮನಿಗೆ ಖುಷಿಯಾಗೋ ರೀತಿ ಓದಿ, ಒಳ್ಳೆಯ ನಿಷ್ಠಾವಂತ ಪೊಲೀಸ್ ಅಧಿಕಾರಿಯಾಗಬೇಕೆಂದು ನನ್ನ ಕನಸು. ಕೊಳಲು, ಸಂಗೀತ, ಡ್ರಾಯಿಂಗ್ ಮಾಡಲು ತುಂಬಾ ಇಷ್ಟ ನನಗೆ. ನಿಮ್ಮ ಪತ್ರದಿಂದ ನನಗೆ , ನಾನೂ ಏನಾದ್ರು ಸಾಧಿಸಬೇಕೆಂದು ಅನಿಸಿತು. ನಿಮ್ಮ ಪತ್ರಗಳನ್ನು ಅಮ್ಮ ಯಾವಾಗಲು ಓದಿ ಹೇಳುತ್ತಾರೆ. 
ಧನ್ಯವಾದಗಳು ಅಕ್ಕಾ.....
.......................................... ಭುವನ್ ರಾಜ್
5 ನೇ ತರಗತಿ
ಇಂದ್ರಪ್ರಸ್ಥ ಶಾಲೆ
ಉಪ್ಪಿನಂಗಡಿ , ಪುತ್ತೂರು ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
********************************************






Ads on article

Advertise in articles 1

advertising articles 2

Advertise under the article