-->
ಜಗಲಿಯ ಮಕ್ಕಳ ಮನದಾಳದ ಮಾತು (ಸಂಚಿಕೆ - 5)

ಜಗಲಿಯ ಮಕ್ಕಳ ಮನದಾಳದ ಮಾತು (ಸಂಚಿಕೆ - 5)

ಜಗಲಿಯ ಮಕ್ಕಳ 
ಮನದಾಳದ ಮಾತು 
ಸಂಚಿಕೆ - 5

ನಮಸ್ತೆ, ನಾನು ಧೀರಜ್.ಕೆ.ಆರ್.
           ನನ್ನ ಜೀವನದಲ್ಲಿ ತಂದೆ ತಾಯಿಯೇ ಮೊದಲ ಗುರು ಹಾಗೂ ದೇವರು. ನನ್ನೆಲ್ಲಾ ಬೇಕು, ಬೇಡಗಳನ್ನು ಈಡೇರಿಸಿ ನನ್ನ ಶಿಕ್ಷಣದ ಕಡೆಗೆ ಅತೀ ಹೆಚ್ಚು ಪ್ರೋತ್ಸಾಹ ಕೊಡುತ್ತಿದ್ದಾರೆ.   ನನ್ನ ಪ್ರಾಥಮಿಕ ಶಿಕ್ಷಣ ಸ.ಹಿ.ಪ್ರಾ. ಶಾಲೆ ಅಯೋಧ್ಯಾನಗರದಿಂದ ಪ್ರಾರಂಭವಾಯಿತು. ಅಲ್ಲಿ ನನ್ನ ಶಿಕ್ಷಣಕ್ಕೆ ಅತೀ ಹೆಚ್ಚು ಪ್ರೋತ್ಸಾಹ ಕೊಟ್ಟವರು ಶಿಕ್ಷಕಿ ಗೀತಾ ಟೀಚರ್ 
       ಮುಖ್ಯೋಪಾಧ್ಯಾಯಿನಿಯಾದ ಗೀತಾ ಟೀಚರ್ ಇವರು ನನ್ನಲ್ಲಿರುವ ಪ್ರತಿಭೆ ಹಾಗೂ ಎಲ್ಲಾ ಶೈಕ್ಷಣಿಕ ಚಟುವಟಿಕೆಯನ್ನು ತಾಲೂಕು, ಜಿಲ್ಲಾ ಮಟ್ಟ ಹಾಗೂ ರಾಜ್ಯ ಮಟ್ಟಕ್ಕೂ ಪಸರಿಸಲು ಮುಖ್ಯ ಕಾರಣಕರ್ತರು ಅಂದರೆ ತಪ್ಪಾಗಲಾರದು. ಪ್ರಾಥಮಿಕ ಹಂತ ಮುಗಿದು ಪ್ರೌಢಶಾಲೆಗೂ ಸರಕಾರಿ ಶಾಲೆಗೆ ದಾಖಲು ಮಾಡುವಂತೆ ಪೋಷಕರ ಮನವೊಲಿಸದಿದ್ದರೆ ಇಂದು ನಾನು ವಸತಿ ಶಾಲೆಗೆ ಸೇರುವ ಆಲೋಚನೆಯಲ್ಲಿದ್ದೆ. ಕೋವಿಡ್-19 ನಿಂದ ಶಾಲೆಗಳು ಆರಂಭವಾಗದಿದ್ದರೂ ಪ್ರಸ್ತುತ ನಾನು ಓದುತ್ತಿರುವ ಶಾಲೆ ಶ್ರೀರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆ ರಾಮಕುಂಜ ಈ ವಿದ್ಯಾಸಂಸ್ಥೆಗೆ ನಾನು ಸೇರಲು ಕಾರಣಕರ್ತರಾದ ಗೀತಾ ಟೀಚರ್ ರವರಿಗೆ ನನ್ನ ಮನದಾಳದ ವಂದನೆಗಳು. ಇಂದು ನಾನು ಯಾವುದಾದರೂ ಸ್ಪರ್ಧೆಯಲ್ಲಿ ಸಣ್ಣಪುಟ್ಟ ಸಾಧನೆ ಮಾಡಿದರು ನನ್ನನ್ನು ಅಭಿನಂದಿಸುವ ಮೊದಲ ಶಿಕ್ಷಕಿ ಗೀತಾ ಟೀಚರ್. ಮುಂದೆಯೂ ನನಗೆ ನಿಮ್ಮ ಸಹಕಾರ ಪ್ರೋತ್ಸಾಹ ಇರಲಿ. ಆ ದೇವರು ನಿಮಗೆ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಲು ಶಕ್ತಿ ತುಂಬಲಿ ಹಾಗೂ ಆಯುರಾರೋಗ್ಯ, ಭಾಗ್ಯ ಕರುಣಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಹಾಗೆ ಈವಾಗ ನಾನು ಪ್ರಸ್ತುತ ಶ್ರೀರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢ ಶಾಲೆಯಲ್ಲಿ 9ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದೇನೆ. 
     ಇಲ್ಲಿಯೂ ನನಗೆ ಮುಖ್ಯೋಪಾಧ್ಯಾಯರಾದ ಸತೀಶ್ ಭಟ್ ಸರ್ ನನ್ನೆಲ್ಲ ಪ್ರತಿಭೆಗಳಿಗೆ ಪ್ರೋತ್ಸಾಹ ಕೊಡುತ್ತಿದ್ದಾರೆ. ಹಾಗೆ ಎಲ್ಲಾ ಶಿಕ್ಷಕ ವೃಂದದವರು ಪ್ರೋತ್ಸಾಹ ಕೊಡುತ್ತಾರೆ. 
          ಎದೆಯ ಹಣತೆಯಲ್ಲಿ ಅಕ್ಷರದ ದೀಪ ಹೊತ್ತಿಸಿ ಅಗಣಿತ ಮಂದಿಯ ಬಾಳಿಗೆ ಭವ್ಯ ಬೆಳಕು ನೀಡಿದ ಪರಮ ಗುರುಗಳಿಗೆ ಗುರು ಸಮಾನರಿಗೆ ಶಿಕ್ಷಕರ ದಿನದ ಶುಭಾಶಯಗಳು
.........................................ಧೀರಜ್.ಕೆ.ಆರ್.
ತರಗತಿ : 9ನೇ
ಶಾಲೆ : ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢ ಶಾಲೆ, ರಾಮಕುಂಜ.
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.
********************************************



ನಮಸ್ಕಾರ ನಾನು : ತೀರ್ಥಾಕ್ಷಿ
        ನನ್ನ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಜ್ಯೋತಿ ಮೇಡಂ. ಇವರು ೩ನೇ ತರಗತಿಯಿಂದ ೬ ನೇ ತರಗತಿವರೆಗೆ ನನಗೆ ಇಂಗ್ಲೀಷ್ ವಿಷಯಕ್ಕೆ ಶಿಕ್ಷಕರಾಗಿದ್ದರು. ಇವರು ತುಂಬಾ ಚೆನ್ನಾಗಿ ಇಂಗ್ಲೀಷ್ ಪಾಠ ಮಾಡುತ್ತಿದ್ದರು. ಪ್ರತಿಯೊಂದು ಪದದ ಅರ್ಥ ಹೇಳುತ್ತಿದ್ದರು. ಹಾಗಾಗಿ ತುಂಬಾ ಚೆನ್ನಾಗಿ ಅರ್ಥ ಆಗ್ತಿತ್ತು. ಇಂಗ್ಲೀಷಲ್ಲಿ ತುಂಬಾ ಆಸಕ್ತಿಯು 
ಇರುತ್ತಿರಲಿಲ್ಲ , ಅವರು ನನಗೆ, ಉಳಿದ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ವಿಷಯದ ಬಗ್ಗೆ ಆಸಕ್ತಿ ತುಂಬಿಸಿದ್ರು, ಇದರಿಂದ ಈಗ ಸ್ವಲ್ಪವಾದರೂ ಇಂಗ್ಲೀಷ್ ಮಾತನಾಡಲೂ, ಬರೆಯಲು, ಓದಲು ಆಗ್ತದೆ. ಅವರಿಂದ ಇನ್ನೂ ತುಂಬಾ ವಿಷಯಗಳನ್ನು ಕಲಿತಿದ್ದೀವಿ. ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ಭಾಗವಹಿಸಲು ಹೇಳುತ್ತಿದ್ದರು. ಅದರಿಂದ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟದಲ್ಲಿಯೂ ಬಹುಮಾನ ಪಡೆಯುವ ಶ್ರಮ ಪಟ್ಟಿದ್ದಾರೆ. ಉಳಿದ ಶಿಕ್ಷಕರು ಇಷ್ಟೇ ಶ್ರಮ ಪಟ್ಟಿದ್ದಾರೆ. ಅವರು ೬ನೇ ತರಗತಿಯಲ್ಲಿಯೇ ಬೇರೆ ಶಾಲೆಗೆ ಹೋದರು. ತುಂಬಾ ಬೇಸರ ಆಗಿತ್ತು. ಅವರನ್ನು ಯಾವಾಗಲೂ ನೆನಪಿಸಿ ಕೊಂಡಿರುತ್ತೇನೆ. ಅವರಿಗೆ ತುಂಬಾ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ.. 
.......................................................ತೀರ್ಥಾಕ್ಷಿ
ತರಗತಿ: ೧೦
ಶಾಲೆಯ ಹೆಸರು: ಶ್ರೀ ರಾಮಕುಂಜೇಶ್ವರ ಪ್ರೌಢಶಾಲೆ ರಾಮಕುಂಜ
ತಾಲೂಕು: ಕಡಬ
ಜಿಲ್ಲೆ: ದಕ್ಷಿಣ ಕನ್ನಡ
*********************************************



ಎಲ್ಲರಿಗೂ ಶಿಕ್ಷಕರ ದಿನಾಚರಣೆಯ 
ಶುಭಾಶಯಗಳು.... ಶ್ರವಣ್ ಕಡಬ 
       ನನ್ನ ಹೆಸರು ಶ್ರವಣ್ ಕಡಬ... ನನ್ನ ಮೊದಲ ಪಾಠಶಾಲೆ ಮನೆ. ನನ್ನ ಮೊದಲ ಗುರು ಅಮ್ಮ.. ಇವರು ನನ್ನ ಎಲ್ಲ ಏಳಿಗೆಯ ಪ್ರತಿ ಹಂತದಲ್ಲಿ ಪ್ರೋತ್ಸಾಹ ನೀಡುತ್ತಾ ಜೊತೆಗಿರುತ್ತಾರೆ... ಮತ್ತು ನನ್ನ ಬಾಳಿನಲ್ಲಿ ಹಲವಾರು ಶಿಕ್ಷಕರು ಬಂದಿದ್ದಾರೆ. ಆದರೆ ನನಗೆ ತುಂಬಾ ಪ್ರಿಯವಾದ ಶಿಕ್ಷಕರೆಂದರೆ ನನ್ನ 5ನೇ ತರಗತಿಯ ಅಧ್ಯಾಪಕರಾದ ನಾಗೇಶ್ ಸರ್.. 
            ಇವರೆಂದರೆ ನನಗೆ ತುಂಬಾ ಇಷ್ಟ.. ನನ್ನ ಹತ್ತಿರ ಹೆಚ್ಚು ಮಾತನಾಡುತ್ತಿರುತ್ತಾರೆ.... ತರಗತಿಯಲ್ಲಿ ಸ್ವಲ್ಪ ಸಮಯ ಸಿಕ್ಕಿದರೆ ಸಾಕು... ಹಾಡು ಹೇಳಿಸ್ತಾರೆ... ಮತ್ತೆ ನನ್ನ ಎಲ್ಲ ಯಕ್ಷಗಾನ.., ಕೀಬೋರ್ಡ್, ಸಂಗೀತ, ಡ್ರಾಯಿಂಗ್ ಈ ಎಲ್ಲ ಕಲೆಗಳಿಗೆ ತುಂಬಾ ಪ್ರೋತ್ಸಾಹ ನೀಡುತ್ತಾರೆ... ಅದೇ ರೀತಿ ನನಗೆ ನನ್ನ ಕೀಬೋರ್ಡ್ ಸರ್ ಕೂಡ ನನಗೆ ತುಂಬಾ ಇಷ್ಟ... ಇವರು ಮಕ್ಕಳ ಜೊತೆ ಮಕ್ಕಳಾಗಿ ಕೀಬೋರ್ಡ್ ಹೇಳಿಕೊಡುತ್ತಾರೆ... ಹಾಗೇನೇ ನನ್ನ ಯಕ್ಷಗಾನ ಗುರುಗಳೆಂದರೆ ತುಂಬಾ ಪ್ರೀತಿ.... ಅವರು ಕೂಡ ನನಗೆ ಯಕ್ಷಗಾನದಲ್ಲಿ ತುಂಬಾನೇ ಪ್ರೋತ್ಸಾಹ ನೀಡುತ್ತಾರೆ. ಪ್ರೌಢಶಾಲೆಯ H.M ಆದ ಸತೀಶ್ ಸರ್ ಕೂಡ ನನಗೆ ತುಂಬಾ ಇಷ್ಟ. ಇವರು ಎಲ್ಲ ಮಕ್ಕಳಿಗೂ ತುಂಬಾ ಪ್ರೋತ್ಸಾಹ ನೀಡುತ್ತಾರೆ. ನನ್ನ ಜೀವನದಲ್ಲಿ ಪ್ರಭಾವ ಬೀರಿದ ಎಲ್ಲ ಶಿಕ್ಷಕರಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು... 
................................................ಶ್ರವಣ್ ಕಡಬ 
8ನೇ ತರಗತಿ 
ಶ್ರೀ ರಾಮಕುಂಜೇಶ್ವರ ಪ್ರೌಢಶಾಲೆ ರಾಮಕುಂಜ 
ಕಡಬ ತಾಲೂಕು..  
ದಕ್ಷಿಣ ಕನ್ನಡ ಜಿಲ್ಲೆ
**********************************************



ನನ್ನ ಎಲ್ಲಾ ಗುರುಗಳಿಗೆ ಶಿಕ್ಷಕರ ದಿನದ ಶುಭಾಶಯಗಳು.....ವಿಖ್ಯಾತಿ ಬೆಜ್ಜಂಗಳ
     ನಾವು ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನವನ್ನು ಆಚರಿಸು ಅದು ಡಾ ಸರ್ವಪಳ್ಳಿ ರಾಧಾಕೃಷ್ಣನ್ ಅವರ ಜನ್ಮದಿನ. ಅವರ ಜನ್ಮ ದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸುತ್ತೇವೆ. ಶಿಕ್ಷಕರು ನಮ್ಮ ಜೀವನದ ಬೆಳಕು, ಅವರು ಧನಾತ್ಮಕ ಶಕ್ತಿ ಮತ್ತು ಆಲೋಚನೆಗಳಿಂದ ವ್ಯಕ್ತಿಯ ಜೀವನವನ್ನು ಬದಲಾಯಿಸುತ್ತಾರೆ. ಈ ಕೊರೋನಾ ಕಾಲದಲ್ಲಿ ಶಾಲೆ ಇಲ್ಲದೆ ನನ್ನ ಪ್ರೀತಿಯ ಶಿಕ್ಷಕರ ಸಾಮಿಪ್ಯವನ್ನು ನಾನು ನಿಜವಾಗಿಯೂ ಕಳೆದುಕೊಂಡಿದ್ದೇನೆ. ಎಷ್ಟೇ ಸಮಸ್ಯೆಗಳಿದ್ದರೂ , ನಾವೆಷ್ಟೂ ಕಿರಿಕಿರಿ ಮಾಡಿದರೂ ಅವರು ನಮ್ಮನ್ನು ಸಹಿಸಿಕೊಳ್ಳುತ್ತಾರೆ; ಮಾಡುತ್ತಾರೆ; ಜೀವನ ಮಾರ್ಗವನ್ನು ಸುಗಮಗೊಳಿಸುತ್ತಾರೆ. ಶಾಲಾ ದಿನಗಳಲ್ಲಿ ನಾವು ಹೆಚ್ಚಿನ ರಜಾದಿನಗಳು ಇರಬೇಕೆಂದು ಬಯಸುತ್ತಿದ್ದೆವು, ಆದರೆ ಈಗ ನಾವು ಶಾಲೆಗೆ ಹೋಗುವ ದಿನಕ್ಕಾಗಿ ಕಾಯುತ್ತಿದ್ದೇವೆ. ನಾವು ಅದೇ ಸಂತೋಷದ ವಾತಾವರಣ ಮತ್ತು ಶಿಕ್ಷಣದ ಸಮಯವನ್ನು ಬಯಸುತ್ತೇವೆ, ಈ ದಿನ ಮಾತ್ರವಲ್ಲದೆ ಪ್ರತಿ ದಿನವೂ ಶಿಕ್ಷಕರ ದಿನವಾಗಿರಬೇಕು. ಶಿಕ್ಷಕರಿಲ್ಲದೆ ಯಾರೂ ಸಮಾಜ ಮತ್ತು ರಾಷ್ಟ್ರಕ್ಕೆ ನಿಜವಾದ ಸಂಪನ್ಮೂಲವಾಗುವುದಿಲ್ಲ. ಇಂದಿನ ದಿನದಲ್ಲಿ ರಾಷ್ಟ್ರ ಕಟ್ಟುವ ಮಹಾ ಕೆಲಸದಲ್ಲಿ ಪಾಲುದಾರರಾಗಿರುವ ನನ್ನ ಶಿಕ್ಷಕರನ್ನು ಅಭಿನಂದಿಸುತ್ತಾ ಈ‌ ಮಾತನ್ನೆ ಅವರಿಗೆ ಅರ್ಪಿಸುತ್ತಿದ್ದೇನೆ.
........................................... ವಿಖ್ಯಾತಿ ಬೆಜ್ಜಂಗಳ
9 ನೇ ತರಗತಿ 
ಸುದಾನ ವಸತಿಯುತ ಶಾಲೆ , ಪುತ್ತೂರು
ಪುತ್ತೂರು ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ .
**********************************************



                ಎಲ್ಲಾ ಶಿಕ್ಷಕರಿಗೆ ಶಿಕ್ಷಕರ ದಿನದ 
          ಶುಭಾಶಯಗಳು......ಸಾತ್ವಿಕ್ ಗಣೇಶ್
          ನನಗೆ ನಮ್ಮ ಶಾಲೆಯ ಎಲ್ಲಾ ಶಿಕ್ಷಕರು ಎಂದರೆ ತುಂಬಾ ಇಷ್ಟ. ಅವರು ನಮಗೆ ಚೆನ್ನಾಗಿ ಅರ್ಥವಾಗುವ ರೀತಿಯಲ್ಲಿ ಪಾಠ ಮಾಡುತ್ತಾರೆ. ನಮಗೇ ಗೊತ್ತಿಲ್ಲದ್ದನ್ನು ಪ್ರೀತಿಯಿಂದ ಹೇಳಿ ಕೊಡುತ್ತಾರೆ. ಪಾಠದ ಜೊತೆಗೆ ಆಟವನ್ನು ಹೇಳಿ ಕೊಡುತ್ತಾರೆ. ನಮ್ಮಲ್ಲಿರುವ ಕಲೆಯನ್ನು ಪ್ರೋಹಿಸುತ್ತಾರೆ. ಎಲ್ಲರನ್ನು ಪ್ರೀತಿಯಿಂದ ಕಾಣುವಂತೆ ಹೇಳಿಕೊಡುತ್ತಾರೆ. ಶಿಸ್ತು, ಗುರುಹಿರಿಯರಿಗೆ ಗೌರವ ಕೊಡುವುದನ್ನು ಹೇಳಿಕೊಡುತ್ತಾರೆ. ನನ್ನ ಚಿತ್ರಕಲೆಗೆ ಪ್ರೋತ್ಸಾಹವನ್ನು ನೀಡುತ್ತಾರೆ. ನನಗೆ ನಮ್ಮ ಶಾಲಾ ಶಿಕ್ಷಕರೆಂದರೆ ಬಲು ಪ್ರೀತಿ.
.............................................. ಸಾತ್ವಿಕಗಣೇಶ್
7 ನೇ ತರಗತಿ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಜಿರೆ 
ಬೆಳ್ತಂಗಡಿ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
*******************************************



        ಎಲ್ಲಾ ಶಿಕ್ಷಕರಿಗೂ ಶಿಕ್ಷಕ ದಿನಾಚರಣೆಯ                                    ಶುಭಾಶಯಗಳು....ನಿರೀಕ್ಷ
      ನಾನು ಪ್ರೀತಿಯ ಶಿಕ್ಷಕಿ ಪ್ರೇಮ ಭಟ್ ಇವರ ಬಗ್ಗೆ        ನಾನು ಒಂದೆರಡು ಮಾತನ್ನು ಹೇಳಲಿಚ್ಛಿಸುತ್ತೇನೆ. ಒಂದನೇ , ಎರಡನೇ ತರಗತಿಯಲ್ಲಿ ಅವರು ನಮ್ಮೊಂದಿಗೆ ಮಕ್ಕಳಂತೆಯೇ ಹಾಡುತ್ತ ಕುಣಿಯುತ್ತ ನೆಲದಲ್ಲಿ ಕೂತು ಪಾಠ ಹೇಳಿಕೊಡುತ್ತಿದ್ದರು. ಒಂದನೇ ತರಗತಿಗೆ ಹೋಗುವಾಗ ಯಾರ ಪರಿಚಯವೂ ಇರಲಿಲ್ಲ ಆಗ ಅಮ್ಮನ ಸ್ಥಾನದಲ್ಲಿ ನಿಂತು ಧೈರ್ಯ ತುಂಬುತ್ತಿದ್ದರು. ಮಧ್ಯಾಹ್ನ ಊಟ ಮಾಡದಿದ್ದಾಗ ಅವರೇ ಊಟ ಮಾಡಿಸುತ್ತಿದ್ದರು. ನನ್ನ ಎಲ್ಲಾ ಚಟುವಟಿಕೆಗಳಿಗೆ ಪ್ರೋತ್ಸಾಹಿಸುತ್ತಿದ್ದರು. ಆದರೆ ಪಾಠಮಾಡುವಾಗ ಸಂಜೆ ಆದದ್ದೇ ಗೊತ್ತಾಗುತ್ತಿರಲಿಲ್ಲ. ನಾನು ಆರನೇ ತರಗತಿಯಲ್ಲಿದ್ದಾಗ ಅವರು ಶಿಕ್ಷಕ ಜೀವನದಿಂದ ನಿವೃತ್ತಿಹೊಂದಿದರು. ಅವರು ನಿವೃತ್ತಿ ಹೊಂದಿದಾಗ ನಮಗೆ ಆದ ದುಃಖವನ್ನು ಹೇಳಿಕೊಳ್ಳಲಾಗುವುದಿಲ್ಲ. ಈಗ ಅವರನ್ನು ನೋಡಿದಾಗ ಅವರಿಗೂ ಹಾಗೂ ನಮಗೂ ತುಂಬಾ ಖುಷಿಯಾಗುತ್ತದೆ. ಅವರು ನನ್ನ ಜೀವನದ 
ಎರಡನೇ ಅಮ್ಮ.. 
  ಮತ್ತೊಮ್ಮೆ ಎಲ್ಲರಿಗೂ ಶಿಕ್ಷಕ ದಿನಾಚರಣೆಯ ಶುಭಾಶಯಗಳು
..................................................ನಿರೀಕ್ಷ
8 ನೇ ತರಗತಿ
ನಾರಾವಿ ಪ್ರೌಢಶಾಲೆ
ಬೆಳ್ತಂಗಡಿ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
**********************************************







Ads on article

Advertise in articles 1

advertising articles 2

Advertise under the article