-->
ಜಗಲಿಯ ಮಕ್ಕಳ ಮನದಾಳದ ಮಾತು (ಸಂಚಿಕೆ -4)

ಜಗಲಿಯ ಮಕ್ಕಳ ಮನದಾಳದ ಮಾತು (ಸಂಚಿಕೆ -4)

ಜಗಲಿಯ ಮಕ್ಕಳ 
ಮನದಾಳದ ಮಾತು 
ಸಂಚಿಕೆ - 4




  ಎಲ್ಲಾ ಶಿಕ್ಷಕರಿಗೂ ಶುಭಾಶಯಗಳು... ತನ್ಮಯಿ ಸುಂಕದಕಟ್ಟೆ.
  ಮನೆಯಲ್ಲಿ ಅಪ್ಪ, ಅಮ್ಮ ಗುರುವಾದರೆ ಶಾಲೆಯಲ್ಲಿ ಶಿಕ್ಷಕರು. 
     ನಾನು ನನ್ನ ಶಿಕ್ಷಕರ ಬಗ್ಗೆ ಹೇಳಬೇಕೆಂದರೆ ನಾನು ಈಗ 8ನೇ ತರಗತಿ. ನಾನು ಪ್ರಾಥಮಿಕ ಶಾಲೆಯಲ್ಲಿ ಇರುವಾಗ ನನಗೆ ನನ್ನ ಶಿಕ್ಷಕರು ತುಂಬಾ ಇಷ್ಟ ಮತ್ತು ಅವರು ನನಗೆ ತುಂಬಾ ಒಳ್ಳೆಯ ಮಾತುಗಳನ್ನು, ಒಳ್ಳೆಯ ವಿಷಯಗಳನ್ನು ಹೇಳಿಕೊಟ್ಟಿದ್ದಾರೆ. ಅದಕ್ಕೆ ನಾನು ಅವರಿಗೆ ಧನ್ಯವಾದವನ್ನು ಹೇಳಬಯಸುತ್ತೇನೆ . ಇನ್ನೊಂದು ವಿಶೇಷವೆಂದರೆ ನನ್ನ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾಧ ಶ್ರೀಮತಿ ಶೋಭಾ ರಾಣಿಯವರಿಗೆ ಈ ವರ್ಷ ಮಂಗಳೂರು ದಕ್ಷಿಣ ವಲಯದ "ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ" ಭಾಜನರಾಗಿದ್ದಾರೆ. ನಾನು ಅವರಿಗೆ ಧನ್ಯವಾದ ಹೇಳುತ್ತಿದ್ದೇನೆ. 
    ನಾನು ಈಗ ಇರುವ ಶಾಲೆಯ ಶಿಕ್ಷಕರು ತುಂಬಾ ಇಷ್ಟ. ಅವರು ಆನ್ಲೈನ್ ಪಾಠವನ್ನು ಮಾಡುವಾಗ ಕೇಳುತ್ತಿರಬೇಕು ಎನಿಸುತ್ತದೆ. ಆದಷ್ಟು ಬೇಗ ಶಾಲೆ ಪ್ರಾರಂಭವಾದರೆ ನನಗೆ ತುಂಬಾ ಖುಷಿಯಾಗುತ್ತದೆ. ಕೇವಲ ಶಾಲೆಯ ಶಿಕ್ಷಕರು ಮಾತ್ರವಲ್ಲ , ಭರತನಾಟ್ಯ, ಯಕ್ಷಗಾನ , ಕರಾಟೆ, ಚಿತ್ರಕಲೆ, ನಾಟಕವನ್ನು ಕಲಿತಿದ್ದೇನೆ ಇದನ್ನೆಲ್ಲವನ್ನು ಕಲಿಸುತ್ತಿರುವವರು ನನ್ನ ಗುರುಗಳೇ. 
           ತಾರಾನಾಥ ಕೈರಂಗಳ ಸರ್ ಅವರಿಂದಲೂ ವರ್ಲಿ ಚಿತ್ರಕಲೆ ಕಲಿತು ನಾನು ಮತ್ತು ತಮ್ಮ ನಮ್ಮ ಮನೆಯ ಗೋಡೆಯ ಸುತ್ತಲೂ ಚಿತ್ರ ಬಿಡಿಸಿದ್ದೇನೆ. ಈ ಮೂಲಕ ಕೈರಂಗಳ ಸರ್ ನನಗೆ ಗುರುಗಳಾಗಿದ್ದಾರೆ. ನಾನು ನನ್ನ ಎಲ್ಲ ಶಿಕ್ಷಕರಿಗೂ "ಶಿಕ್ಷಕರು ದಿನಾಚರಣೆಯ" ಶುಭಾಶಯಗಳನ್ನು ಈ ಜಗಲಿಯ ಮೂಲಕ ಸಲ್ಲಿಸುತ್ತಿದ್ದೇನೆ. ಧನ್ಯವಾದಗಳು. 
.......................................ತನ್ಮಯಿ ಸುಂಕದಕಟ್ಟೆ.
8 ನೇ ತರಗತಿ .
ಸರಕಾರಿ ಪ್ರೌಢಶಾಲೆ ಬಡಗ ಎಕ್ಕಾರು.
ಮಂಗಳೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************



ಶಿಕ್ಷಕರ ದಿನಾಚರಣೆಯ ಶುಭಾಶಯಗಳು - ಹವೀಶ್ ಆರ್ ಪೂಜಾರಿ
            ಎಲ್ಲರ ಜೀವನದಲ್ಲಿಯೂ ಗುರುವಿಗೆ ಮೊದಲ ಪ್ರಾಧಾನ್ಯತೆ  ಅಂತೆಯೇ ನನಗೇ Lkg  ಯಿಂದ 6ನೇ ತರಗತಿಯವರೆಗೆ ಕಲಿಸಿರುವ ಎಲ್ಲಾ ಟೀಚರ್ ಗಳೆಂದರೇ ನನಗೆ ತುಂಬಾ ಅಚ್ಚುಮೆಚ್ಚು.. ಯಾಕೆಂದರೆ  ಪ್ರತಿಯೊಂದು ವಿಷಯದಲ್ಲಿಯೂ ನನಗೆ ಉತ್ತಮ ಶಿಕ್ಷಣ ಗುಣ ನಡತೆಯನ್ನು ಕಲಿಸಿರುತ್ತಾರೆ...ನನ್ನ ಎಲ್ಲಾ ಚಟುವಟಿಕೆಗಳಿಗೆ ಪ್ರೋತ್ಸಾಹವನ್ನು ನೀಡುತ್ತಾ ಬಂದಿರುತ್ತಾರೆ..ಹಾಗಾಗಿ ನನ್ನ ಪ್ರಕಾರ ನನಗೆ ವಿದ್ಯೆ ಕಲಿಸಿರುವಂತಹ ಎಲ್ಲಾ ಟೀಚರ್ ಗಳು ನನಗೆ ಉತ್ತಮ ಮಾರ್ಗದರ್ಶಕರಾಗಿದ್ದಾರೆ.. ನನ್ನ ಜೀವನದಲ್ಲಿ ನನಗೆ ಉತ್ತಮ ಪ್ರಭಾವ ಬೀರಿರುವ ಎಲ್ಲಾ ಟೀಚರ್ ಗಳಿಗೂ...
Teacher's Day ಶುಭಾಶಯಗಳು...
.............................. ಹವೀಶ್ ಆರ್ ಪೂಜಾರಿ 
6 ನೇ ತರಗತಿ
ಸೇಕ್ರೆಡ್ ಹಾರ್ಟ್ ಹೈಯರ್ ಪ್ರೈಮರಿ 
ಇಂಗ್ಲೀಷ್ ಮೀಡಿಯಂ ಸ್ಕೂಲ್ , ಕುಲಶೇಖರ ಮಂಗಳೂರು.. ದಕ್ಷಿಣ ಕನ್ನಡ ಜಿಲ್ಲೆ
*******************************************




ನನ್ನ ಹೆಸರು ಜಿತೇಶ್..... 
 ನಾನು ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿರುವಾಗ 
ನನ್ನ ವಿದ್ಯಾರ್ಥಿ ಜೀವನದಲ್ಲಿ ಪ್ರಭಾವ ಬೀರಿದ ಮತ್ತು ಸ್ಫೂರ್ತಿ ತುಂಬಿದ ಶಿಕ್ಷಕಿ ಮಲ್ಲಿಕಾ ಮಾತಾಜಿ.. ನನ್ನಿಂದ ತಪ್ಪಾದಾಗ ತಿದ್ದಿ ಸರಿ ದಾರಿಯಲ್ಲಿ ನಡೆಯಲು ಹೇಳಿಕೊಟ್ಟಿದ್ದಾರೆ. ನನ್ನ ಮೇಲೆ ಇವರಿಗೆ ವಿಶ್ವಾಸವಿದೆ. ನಾನು ಇವರಿಗೆ ಸದಾ ಚಿರಋಣಿ. ನನಗೆ ವಿದ್ಯೆ ಕಲಿಸಿದ ಎಲ್ಲಾ ಗುರುಗಳಿಗೂ ಗೌರವ ಕೊಡುತ್ತೇನೆ. ಎಲ್ಲರಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.
...................................................ಜಿತೇಶ್
8ನೇ ತರಗತಿ
ಶ್ರೀದೇವಿ ವಿದ್ಯಾಕೇಂದ್ರ ದೇವಿನಗರ
ಪುಣಚ , ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
*******************************************


ನೆಚ್ಚಿನ ಶಿಕ್ಷಕರ ಬಗ್ಗೆ ನನ್ನ ಮನದಾಳದ ಮಾತು :                ಅನ್ವಿತ್ ಎಸ್ ಕೋಟ್ಯಾನ್ 8 ನೇ ತರಗತಿ
    ........ನನ್ನ ಎಲ್ಲಾ ಪ್ರೀತಿಯ ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು. ನನ್ನ ನೆಚ್ಚಿನ ಶಿಕ್ಷಕಿ ಹರ್ಷಲ ಟೀಚರ್. 
             ಇವರು ನಮಗೆ ವಿಜ್ಞಾನ ಮತ್ತು ಗಣಿತ ವಿಷಯದ ಬಗ್ಗೆ ಪಾಠ ಮಾಡುತ್ತಾರೆ. ಇವರು ನಮಗೆ ಒಂದನೇ ತರಗತಿಯಿಂದ ಏಳನೇ ತರಗತಿಯವರೆಗೆ ಪಾಠ ಬೋಧಿಸಿದರು. ಇವರು ನನಗೆ ತುಂಬಾ ಇಷ್ಟ ಇವರು ವಿಜ್ಞಾನ ಮತ್ತು ಗಣಿತ ಪಾಠ ಅರ್ಥವಾಗುವಂತೆ ಮಾಡುತ್ತಾರೆ. ಪಾಠದ ನಡುವಿನಲ್ಲಿ ಬರುವ ಪ್ರಶ್ನೆಗಳನ್ನು ಹೇಳಿಕೊಡುತ್ತಾರೆ. ವಿಜ್ಞಾನಕ್ಕೆ ಸಂಬಂಧಿಸಿದ ಪ್ರಯೋಗಗಳನ್ನು ಮಾಡುತ್ತಾರೆ. ಇವರು ಮಕ್ಕಳೊಂದಿಗೆ ತುಂಬಾ ಪ್ರೀತಿಯಿಂದ ಮಾತಾಡುತ್ತಾರೆ. ಮಕ್ಕಳೊಂದಿಗೆ ಕೂಡಿ ಆಟವಾಡುತ್ತಾರೆ. ಮಕ್ಕಳಿಗೆ ಅವರೆಂದರೆ ತುಂಬಾ ಇಷ್ಟ. ಇವರು ಸಮಯ ಇರುವ ಸಂದರ್ಭವನ್ನು ಉಪಯೋಗಿಸಿಕೊಂಡು ನಮಗೆಲ್ಲಾ ಡ್ರಾಯಿಂಗ್ ಕ್ರಾಫ್ಟ್ ಮುಂತಾದ ಚಟುವಟಿಕೆಗಳನ್ನು ಮಾಡಿಸುತ್ತಾರೆ‌. ಇವರಿಗೆ ಪ್ರೀತಿಪೂರ್ವಕ ಅಭಿನಂದನೆಗಳು. ನನ್ನ ಎಲ್ಲಾ ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆಯ ಪ್ರೀತಿ ಪೂರ್ವಕ ಅಭಿನಂದನೆಗಳು.
.................................ಅನ್ವಿತ್ ಎಸ್ ಕೋಟ್ಯಾನ್ 
8 ನೇ ತರಗತಿ 
ಸರಕಾರಿ ಪ್ರೌಢಶಾಲೆ ಕೊಕ್ರಾಡಿ  
ಬೆಳ್ತಂಗಡಿ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************



      ಎಲ್ಲರಿಗೂ ನಮಸ್ಕಾರ...ಎಂ. ರಾಮಕೃಷ್ಣ ಭಟ್
ನಮ್ಮ ಶಾಲಾ ಮುಖ್ಯ ಶಿಕ್ಷಕರ ಹೆಸರು ಸತೀಶ್ ಭಟ್.
ಇವರು ನಮಗೆ ಚೆನ್ನಾಗಿ ಅರ್ಥವಾಗುವಂತೆ ಪಾಠವನ್ನು ಮಾಡುತ್ತಾರೆ. ಆನ್ಲೈನ್ ಪರೀಕ್ಷೆಗಳ ಬಗ್ಗೆ ಮಾಹಿತಿ ನೀಡಿ ಅದರಲ್ಲಿ ಆಸಕ್ತಿ ಬರುವಂತೆ ನಮಗೆ ಅರಿವು ಮೂಡಿಸುತ್ತಾರೆ. ನಮ್ಮ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುತ್ತಾರೆ. ಜೊತೆಗೆ ಬೇರೆ ಬೇರೆ ಕಲೆಗಳನ್ನು ಕಲಿಸುತ್ತಾರೆ. ಇಂತಹ ಶಿಕ್ಷಕರು ದೊರೆತರೆ ಎಲ್ಲಾ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸಹಾಯವಾಗುತ್ತದೆ. ಇವರು ನಮಗೆ ಒಳ್ಳೆ ಕೆಲಸ ಮತ್ತು ಕೆಟ್ಟ ಕೆಲಸಗಳ ಬಗ್ಗೆ ಅರಿವು ಮೂಡಿಸಿದ್ದಾರೆ. ನಮ್ಮ ಮುಖ್ಯಗುರುಗಳಿಗೆ ನನ್ನ ಕಡೆಯಿಂದ ಧನ್ಯವಾದಗಳು.
........................................ರಾಮಕೃಷ್ಣ ಭಟ್ 
9 ನೇ ತರಗತಿ  ಶ್ರೀ ರಾಮಕುಂಜೇಶ್ವರ ಹೈಸ್ಕೂಲ್ ರಾಮಕುಂಜ ,  ಕಡಬ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
****************************************



         ನನ್ನ ಮಾತುಃ ಭವಿಕ್ ಎಸ್. ಪಿ 
ನನಗೆ ಸ್ಫೂರ್ತಿ ನೀಡಿದ ಶಿಕ್ಷಕಿ ನನ್ನ ಅಂಗನವಾಡಿ ಟೀಚರ್. ಅವರು ನನ್ನನ್ನು ಜೊತೆಗೆ ಶಾಲೆಗೆ ಕರೆದುಕೊಂಡು ಹೋಗಿ ಒಟ್ಟಿಗೆ ಜೀಪಲ್ಲಿ ಮನೆಗೆ ತಲುಪಿಸುತ್ತಾ, ನನ್ನ ಬ್ಯಾಗ್, ಬುತ್ತಿ ಹಿಡಿದು, ಜೋಪಾನವಾಗಿ ತಲುಪಿಸುತ್ತಿದ್ದರು. ನನಗೆ ಮಲಗಲು
 ಚಾಪೆ ಹಾಕುತ್ತಿದ್ದರು. ನನಗೆ ಓಣಂ ನವತ್ತು ಚಿಟ್ಟೆಯ ಹಾಡು ಕಲಿಸಿ , ಡಾನ್ಸ್ ಮಾಡಲು ಕಲಿಸಿದ್ದರು. ನಾನು ಅಂಗನವಾಡಿ ಬಿಟ್ಟು ಬರುವಾಗ ನಮಗೆ ಪುಸ್ತಕ ಕೊಟ್ಟರು
.............................................ಭವಿಕ್ ಎಸ್. ಪಿ 
3ನೇ ತರಗತಿ. 
ದ. ಕ. ಜಿ. ಪಂ. ಉ. ಹಿ ಪ್ರಾ ಶಾಲೆ. ಕಾವು. ಪುತ್ತೂರು ತಾಲೂಕು, ದ. ಕ . ಜಿಲ್ಲೆ
******************************************






Ads on article

Advertise in articles 1

advertising articles 2

Advertise under the article