ಅಕ್ಕನ ಪತ್ರ - 5 ಕ್ಕೆ ಮಕ್ಕಳ ಉತ್ತರ (ಸಂಚಿಕೆ - 2)
Sunday, September 5, 2021
Edit
ಅಕ್ಕನ ಪತ್ರ - 5 ಕ್ಕೆ
ಮಕ್ಕಳ ಉತ್ತರ
ಸಂಚಿಕೆ - 2
ಅಕ್ಕನ ಪತ್ರ ಕ್ಕೆ ಮಕ್ಕಳ ಉತ್ತರ
ನಮಸ್ತೆ ಅಕ್ಕ.... ನಾನು ಬಿಂದುಶ್ರೀ...... Mr ಬೀನ್ ಅಂದರೆ ಇಂಗ್ಲೆಂಡಿನ ರೋವನ್ ಆಟಕಿನ್ಸನ್... ನ ಹಾಸ್ಯಗಳನ್ನು ನೋಡಿದ್ದೇನೆ. ತುಂಬಾ ಚೆನ್ನಾಗಿದೆ. ಆದರೆ ನನಗೆ ಅವರ ನಿಜವಾದ ಹೆಸರು ಗೊತ್ತಿರಲಿಲ್ಲ ನಾನು ಆ ಪತ್ರ ವನ್ನು ಓದಿದ ನಂತರ ಗೊತಾಯ್ತು ಅಕ್ಕ. ಯಾರಾದರೂ ಬೇಸರದಲ್ಲಿ ಹಾಗೂ ಮನಸ್ಸು ಸರಿ ಇಲ್ಲದಾಗ ಅವರ ಹಾಸ್ಯವನ್ನು ನೋಡಿದರೆ ತುಂಬಾ ಖುಷಿ ಆಗುತ್ತದೆ. ನೋವೆಲ್ಲಾ ಮರೆತು ಬಿಡುತ್ತದೆ. ಆದರೆ ಅವರಿಗೆ ಮಾತಿನ ನೂನ್ಯತೆ ಇತ್ತು ಅಂದರೆ ನನಗೂ ಆಶ್ಚರ್ಯವಾಯಿತು. ಅವರು ಮೂಕಾಭಿನಯದ ಮೂಲಕ ಹಾಸ್ಯಗಳನ್ನು ಮಾಡುತ್ತಾರೆ. ಹೌದು ಅಕ್ಕ.... ನೀವು ಹೇಳಿದ ತರ ಜೀವನ ಹಾಗೂ ಪ್ರೀತಿಯೊಂದಿದ್ದರೆ ಯಾವುದು ಸಮಸ್ಯೆಯಾಗುವುದಿಲ್ಲ. ನೀವು Mr ಬೀನ್ ನ ಬಗ್ಗೆ ಬರೆದಿದ್ದರಿಂದ ನನಗೆ ಕೆಲವು ವಿಷಯಗಳು ಅರ್ಥವಾಯಿತು ಅಕ್ಕ. ನೀವು ಬರೆದ ಪತ್ರ ತುಂಬಾ ಚೆನ್ನಾಗಿದೆ.
................................................ ಕೆ. ಬಿಂದುಶ್ರೀ
10 ನೇ ತರಗತಿ
ಶ್ರೀ ರಾಮ ಪ್ರೌಡ ಶಾಲೆ, ಕಲ್ಲಡ್ಕ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
********************************************
ಪ್ರೀತಿಯ ಅಕ್ಕನಿಗೆ ನಮಸ್ಕಾರಗಳು ನಾನು ಜಯಲಕ್ಷ್ಮಿ...........
ಮಿಸ್ಟರ್ ಬೀನ್ ಒಬ್ಬ ಅದ್ಭುತ ಹಾಸ್ಯ ಕಲಾವಿದ ಇವರನ್ನು ನೋಡಿದ ಕೂಡಲೇ ನಮ್ಮ ಮುಖದ ಮೇಲೆ ನಗು ಮೂಡಿಸುತ್ತದೆ. ಇವರ ಅದ್ಭುತ ನಟನೆಯಿಂದ ನಮ್ಮೆಲ್ಲರನ್ನೂ ನಗೆ ಕಡಲಿನಲ್ಲಿ ತೇಲಿಸುತ್ತಾರೆ. ಆದರೆ ಇವರ ಹಿಂದಿನ ಜೀವನದ ಬಗ್ಗೆ ತಿಳಿದು ಆಶ್ಚರ್ಯದ ಜೊತೆಗೆ ದುಃಖವು ಆಯಿತು. ಆದರೆ ಅವರು ತನಗೆ ಇದ್ದ ಸಮಸ್ಯೆಯ ಬಗ್ಗೆ ಕೊರಗದೆ ಸಮಸ್ಯೆಯನ್ನೇ ಸಾಧನೆಯ ಮೆಟ್ಟಿಲಾಗಿ ಬದಲಾಯಿಸಿಕೊಂಡು ಅವರಿಗೆ ಮಾತು ಸ್ಪಷ್ಟವಾಗಿ ಬಾರದೇ ಇದ್ದಾಗ ಅವರನ್ನು ನೋಡಿ ನಗುತ್ತಿದ್ದರನ್ನು ಅವರು ಈಗ ತನ್ನ ಅಭಿನಯದ ಮೂಲಕ ತನ್ನ ಹಾಸ್ಯದ ಮೂಲಕ ನಕ್ಕು ನಗಿಸುತ್ತಿದ್ದಾರೆ. ಹೀಗೆ ಎಲ್ಲರ ಜೀವನದಲ್ಲೂ ಒಂದಲ್ಲಾ ಒಂದು ಕಷ್ಟಗಳು ಇರುತ್ತದೆ. ಆದರೆ ಕಷ್ಟಗಳು ಬಂದ ಕೂಡಲೇ ನಮ್ಮ ಜೀವನವೇ ಮುಗಿಯಿತು ಎಂದು ಭಾವಿಸಿ ಕೊರಗುವವರೇ ಹೆಚ್ಚು. ಆದರೆ ಒಮ್ಮೆ ಯೋಚಿಸಿ. ಕತ್ತಲು ಕಳೆದು ಬೆಳಕು ಬಂದೇ ಬರುತ್ತದೆ. ಹಾಗೆ ಕಷ್ಟಗಳು ಕಳೆದು ಸುಖದ ದಿನಗಳು ಬಂದೇ ಬರುತ್ತದೆ. ಇದಕ್ಕೆ ಉದಾಹರಣೆಯಾಗಿ ರೋವನ್ ನಂತಹ ಅನೇಕ ಸಾಧಕರು ನಮಗೆ ಸ್ಪೂರ್ತಿಯಾಗುತ್ತಾರೆ.
................................................ಜಯಲಕ್ಷ್ಮೀ
9ನೇ ತರಗತಿ
ಕೆ.ಪಿ.ಎಸ್ ಪುಂಜಾಲಕಟ್ಟೆ
ಬೆಳ್ತಂಗಡಿ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************
ನನ್ನ ಪ್ರೀತಿಯ ಅಕ್ಕನಿಗೆ.......
ಬಜಿರೆ ಶಾಲೆಯ 7ನೇ ತರಗತಿಯ ಸಾತ್ವಿಕ್ ಗಣೇಶ್ ಮಾಡುವ ನಮಸ್ಕಾರಗಳು,
ನಿಮ್ಮ ಪತ್ರವನ್ನು ಓದಿದ ನಾನು ರೋವನ್ರವರ ಬಗ್ಗೆ ತಿಳಿದೆನು. ಪದಗಳನ್ನು ಉಚ್ಚರಿಸಲು ತೊದಲುತ್ತಿದ್ದರೂ ಜೊತೆಯಲ್ಲಿದ್ದವರು ನಗುತ್ತಿದ್ದರೂ ಕೂಡ ಅವರು ತಮ್ಮ ಮುಖಭಿನಯದ ಮೂಲಕ ತಮ್ಮ ಮಾತುಗಳನ್ನು ಹಾಸ್ಯವಾಗಿಯೇ ಉಳಿದವರಿಗೆ ತಲುಪಿಸುತ್ತಿದ್ದರು. ಎಲ್ಲರ ನಗುವೇ ಅವರಿಗೆ ಸ್ಫೂರ್ತಿಯಾಯಿತು
ಹಾಗೆ ನಮ್ಮ ಕೆಲಸಕ್ಕೆ ಗಮನ ಕೊಟ್ಟು ನಾವು ಅದನ್ನು ಛಲದಿಂದ ಮಾಡಬೇಕು. ಜೀವನದಲ್ಲಿ ಒಳ್ಳೆಯ ವಿಷಯವನ್ನು ನಾವು ಆರಿಸಿಕೊಳ್ಳಬೇಕು. ನಿಮ್ಮ ಪತ್ರದಿಂದ ನಮಗೆ ಒಳ್ಳೆಯ ವಿಷಯ ತಿಳಿಯಲು ತುಂಬಾ ಸಹಾಯವಾಯ್ತು.
.....................................ಸಾತ್ವಿಕ್ ಗಣೇಶ್.
7ನೇ ತರಗತಿ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಜಿರೆ
ಬೆಳ್ತಂಗಡಿ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************
ಪ್ರೀತಿಯ ಅಕ್ಕನಿಗೆ ನನ್ನ ನಮಸ್ಕಾರಗಳು,
ನನ್ನ ಹೆಸರು ಪ್ರಶ್ಮ , ನಾನು 6ನೇ ತರಗತಿಯಲ್ಲಿ ಓದುತ್ತಿದ್ದೇನೆ..
ನೀವು ಬರೆದ ಪತ್ರವನ್ನು ಸಂತೋಷದಿಂದ ಓದಿದೆ, ಅದನ್ನು ಓದಿ ತುಂಬಾ ಖುಷಿಯಾಯಿತು. ಹಾಗೆಯೇ ನೀವು ಬರೆದ ಪತ್ರದಿಂದ ನನಗೆ ತುಂಬಾ ವಿಷಯಗಳು ಗೊತ್ತಾದವು , ಅದೇನಂದರೆ... ಮಿಸ್ಟರ್ ಬೀನ್ ನವರಿಗೆ ಬಾಲ್ಯದಿಂದಲೇ ಮಾತಿನ ತೊಂದರೆಯಿತ್ತು ಆದರೂ ಅವರು ನಮ್ಮನ್ನು ತುಂಬಾ ಖುಷಿಪಡಿಸುತ್ತಿದ್ರು.. ನಾನು ಮಿಸ್ಟರ್ ಬೀನ್ ನ ವಿಡಿಯೋಸ್ ಗಳನ್ನು ನೋಡುತ್ತಿರುತ್ತೇನೆ. ಅದು ನಮಗೆ ತುಂಬಾ ನಗು ತರುತ್ತದೆ.
ಹಾಗೂ ನೀವು ಚಾರ್ಲಿ ಚಾಪ್ಲಿನ್ ಬಗ್ಗೆಯೂ ಕೂಡ ಪತ್ರದಲ್ಲಿ ಬರೆದಿದ್ದೀರಿ.... ಅವರು ಕೂಡ ತನ್ನ ನೋವನ್ನು ಮರೆತು ನಮ್ಮೆಲ್ಲರಿಗೂ ಸಂತೋಷ ತಂದರು...
ಇದೇ ರೀತಿಯಲ್ಲಿ ನಿಮ್ಮ ಪತ್ರಕ್ಕೆ ಸಂತೋಷದಿಂದ ಉತ್ತರಿಸುತ್ತಾ ಇರುತ್ತೇನೆ.
ಧನ್ಯವಾದಗಳು ಅಕ್ಕ
.......................................................ಪ್ರಶ್ಮಾ ಇ.
6ನೇ ತರಗತಿ
ಸೈಂಟ್ ಲಾರೆನ್ಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಬೊಂದೆಲ್ , ಮಂಗಳೂರು , ದಕ್ಷಿಣ ಕನ್ನಡ ಜಿಲ್ಲೆ
*******************************************
ಪ್ರೀತಿಯ ಅಕ್ಕನಿಗೆ ವೈಷ್ಣವಿ ಮಾಡುವ ವಂದನೆಗಳು.........
ಜೀವನವೆಂಬ ಈ ಪಯಣದಲ್ಲಿ ಎಷ್ಟೋ ಜನರು ನಗುತ್ತಾ , ನಗಿಸುತ್ತಾ ಜೀವನವನ್ನು ಸಾಗಿಸುತ್ತಾರೆ. ಕೆಲವರು ಎಷ್ಟೇ ನೋವುಗಳಿದ್ದರು ಕೂಡ ಅದನ್ನೆಲ್ಲಾ ಮರೆತು ಬೇರೆಯವರಿಗೆ ಖುಷಿಯನ್ನು ನೀಡುತ್ತಿರುತ್ತಾರೆ. ಅಂಥವರಲ್ಲಿ ಅಕ್ಕನ ಪತ್ರದಲ್ಲಿ ಓದಿದ Mr ಬೀನ್ ಅಥವಾ ಚಾರ್ಲಿ ಚಾಪ್ಲಿನ್ ನೆನಪಿನಲ್ಲಿ ಉಳಿಯುವ ಪಾತ್ರಗಳು. ಇವರೆಲ್ಲಾ ನಮಗೆ ಆದರ್ಶಪ್ರಾಯರು. ಇವರಂತಹ ವ್ಯಕ್ತಿಗಳಿಂದ ಕಲಿಯುವುದು ಬಹಳಷ್ಟಿದೆ. ಇಂತಹ ವ್ಯಕ್ತಿಗಳ ನೋವು - ನಲಿವಿನಲ್ಲಿ ನಾವು ಭಾಗಿಯಾಗೋಣ.
.......................................ವೈಷ್ಣವಿ ಕಾಮತ್
5ನೇ ತರಗತಿ
ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
********************************************
ನನ್ನ ಪ್ರೀತಿಯ ಅಕ್ಕನಿಗೆ, ಸಾನ್ವಿ ಮಾಡುವ ನಮಸ್ಕಾರಗಳು...........
ಅಕ್ಕ ನಿಮ್ಮ ಪತ್ರ ಓದಿದೆ, ಹೌದು ನಿಜವಾಗಲೂ ರೋವನ್ ರವರು ಒಬ್ಬ ಶ್ರೇಷ್ಠ ಹಾಸ್ಯಕಲಾವಿದರು. ನಾನೂ ಕೂಡಾ ಇವರ ( ರೋವನ್ ) Mr. Bean ಹಾಸ್ಯ ಪಾತ್ರವನ್ನು ನೋಡುತ್ತಿದ್ದೆ, ಚೆನ್ನಾಗಿತ್ತು ಇವರ ನಿಜ ಜೀವನವು ಎಷ್ಟು ವಿಭಿನ್ನವಾಗಿತ್ತು ಎಂಬುದನ್ನು ನಿಮ್ಮ ಪತ್ರದ ಮೂಲಕ ಅರಿತೆ. ನಿಜ ಅಕ್ಕಾ, ನಮ್ಮ ಸಮಸ್ಯೆಯನ್ನು ಚಿಂತಿಸುತ್ತಿದ್ದರೆ ಯಾವುದೂ ಅಸಾಧ್ಯವೆನಿಸುತ್ತದೆ. ಯಾವುದೇ ಸಮಸ್ಯೆಯಿದ್ದರೂ ಪ್ರೀತಿಯಿಂದ ಸಾಧಿಸಬೇಕು. ಗೆಲ್ಲುವೆನೆಂಬ ಛಲ ನಮ್ಮಲ್ಲಿ ಇರಬೇಕು. ಆಸಕ್ತಿಯನ್ನು ಹೆಚ್ಚಿಸಲು "ಮಕ್ಕಳ ಜಗಲಿ " ಯಂತಹ ಪತ್ರಿಕೆ, ನಿಮ್ಮಂತಹ ಅಕ್ಕನೂ ಇರಬೇಕು
..............................................ಸಾನ್ವಿ ಎಸ್ ಆಳ್ವ
4 ನೇ ತರಗತಿ
ಶಾರದ ಗಣಪತಿ ವಿದ್ಯಾ ಕೇಂದ್ರ
ಕೈರಂಗಳ ,ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
********************************************