-->
ಅಕ್ಕನ ಪತ್ರ - 5 ಕ್ಕೆ ಮಕ್ಕಳ ಉತ್ತರ (ಸಂಚಿಕೆ -1 )

ಅಕ್ಕನ ಪತ್ರ - 5 ಕ್ಕೆ ಮಕ್ಕಳ ಉತ್ತರ (ಸಂಚಿಕೆ -1 )

ಅಕ್ಕನ ಪತ್ರ - 5ಕ್ಕೆ
ಮಕ್ಕಳ ಉತ್ತರ (ಸಂಚಿಕೆ -1 )


ಪ್ರೀತಿಯ ಅಕ್ಕನಿಗೆ ಸುನೀತಾ ಮಾಡುವ ಪ್ರೀತಿಪೂರ್ವಕ ನಮಸ್ಕಾರಗಳು..
         ಅಕ್ಕ ನೀವು ಬರೆಯುವ ಪ್ರತಿಯೊಂದು ಪತ್ರದಲ್ಲೂ ಅರ್ಥಪೂರ್ಣವಾಗಿರುವ ಸಂದೇಶ ನನಗೆ ತುಂಬಾನೇ ಇಷ್ಟವಾಗುತ್ತದೆ. ಈ ಪತ್ರವು ಮನಸ್ಸಿಗೆ ಸಂತೋಷ  ನೀಡಿತು. ನಿಮ್ಮ ಪತ್ರದಲ್ಲಿರುವ  ವಿಚಾರಗಳನ್ನು ಮನೆಯವರಿಗೂ ಹೇಳುತ್ತೇನೆ, ಎಲ್ಲರಿಗೂ ಖುಷಿಯಾಗುತ್ತದೆ. ಹಲವಾರು ನೂನ್ಯತೆಗಳಿದ್ದರೂ  , ಪ್ರತಿಯೊಂದು ಹೆಜ್ಜೆಯಲ್ಲೂ ನೋವು ಪಟ್ಟರೂ ರೋವನ್ ಅವರು ಜೀವನದಲ್ಲಿ ಸಾಧಿಸಿ ಸಾಧಕರಾದರು. ಎಲ್ಲಾ  ಅಂಗಾಂಗಳು ಸರಿಯಾಗಿರುವ ನಾವು ಏನೂ ಸಾಧಿಸದಿದ್ದರೆ ನಿಜವಾಗಿಯೂ ಜೀವನ ಸಾರ್ಥಕವಲ್ಲ ಎಂದು ನಿಮ್ಮ ಪತ್ರ ಓದಿ ನನಗನಿಸಿತು.  ಹಾಸ್ಯ ಮಾಡುವವರೆಲ್ಲರೂ ತಮ್ಮ ಜೀವನದಲ್ಲಿ ನಗುವನ್ನು ಕಾಣುತ್ತ ಬಂದವರಲ್ಲ ಅವರೂ ಹಲವಾರು ಕಷ್ಟ ಕಾರ್ಪಣ್ಯಗಳನ್ನು ಎದುರಿಸಿ ಬಂದಿರುತ್ತಾರೆ. ನಾವು ಏನನ್ನಾದರೂ ಸಾಧಿಸಿದರೆ ನಮಗೂ ಹೆಮ್ಮೆ, ಮನೆಯವರಿಗೂ ಹೆಮ್ಮೆ ಎಂದು ಈ ಪತ್ರದ ಮೂಲಕ ತಿಳಿಸಿದ ನಿಮಗೆ ಧನ್ಯವಾದಗಳು..
ಅಕ್ಕ ನಿಮ್ಮ ಮುಂದಿನ ಪತ್ರಕ್ಕಾಗಿ ಕಾಯುತ್ತಿರುವ ನಿಮ್ಮ ಪತ್ರದ ಅಭಿಮಾನಿಯಾಗಿರುವ
        ಇಂತಿ ನಿಮ್ಮ ತಂಗಿ
 ......................................................ಸುನೀತಾ
ಪ್ರಥಮ ಪಿಯುಸಿ
ಎಕ್ಸೆಲ್  ಪದವಿಪೂರ್ವ ಕಾಲೇಜು
ಗುರುವಾಯನಕೆರೆ 
ಬೆಳ್ತಂಗಡಿ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*********************************************ಅಕ್ಕನ ಪತ್ರ - 5.
ಪ್ರೀತಿಯ ಅಕ್ಕನಿಗೆ ನಿಮ್ಮ ತಂಗಿ ಮಾಡುವ ನಮಸ್ಕಾರಗಳು.
   ನನ್ನ ಹೆಸರು ಪ್ರಿಯ, ನಾನು10 ನೇ ತರಗತಿಯಲ್ಲಿ ಓದುತ್ತಿದ್ದೇನೆ. ಅಕ್ಕ ನಿಮ್ಮ ಪತ್ರವನ್ನು ಓದಿದೆ. ನೀವು ಪತ್ರದಲ್ಲಿ ಮೊದಲನೆಯದಾಗಿ ಹಾಸ್ಯ ನಟರಾದದಂತಹ, ಹಾಗೂ ತನ್ನ ಅಭಿನಯದ ಮೂಲಕ ಜಗತ್ತಿನ ಹೃದಯ ಗೆದ್ದ ದೈತ್ಯ ಪ್ರತಿಭೆ ಇಂಗ್ಲೆಂಡ್ ನ "ರೋವನ್" ರವರ ಬಗ್ಗೆ ಬರೆದಿದ್ದೀರಿ. ಇವರಿಗೆ ಮಾತಿನ ನ್ಯೂನ್ಯತೆ ಇತ್ತು ಆದ್ದರಿಂದ ಇವರು ಮಾತನಾಡಲು ತೊದಲುತ್ತಿದ್ದರು. ಇವರನ್ನು ಕಂಡು ಹಲವು ಮಂದಿ ನಗುತ್ತಿದ್ದರು. ಆದರೂ ಕೂಡಾ ರೋವನ್ ರವರು ಅದನ್ನು ತೀಕ್ಷ್ಣವಾಗಿ ತೆಗೆದುಕೊಂಡು, ಅವರ ಪ್ರತಿಭೆಯನ್ನು ಕಂಡು ಆನಂದಿಸುವವರ ನಗುವನ್ನು ಮಾತ್ರ ಆರಿಸಿಕೊಂಡರು. ಎಲ್ಲರ ನಗು ಇವರಿಗೆ ಸ್ಫೂರ್ತಿಯಾಯಿತು. ಇವರ ಕಥೆ ಯನ್ನು ಓದಿ ನನಗೂ ತುಂಬಾ ಸಂತೋಷವಾಯಿತು. ಇವರ ಸಾಧನೆ ಇಂದಿಗೂ ಅಮರವಾಗಿದೆ. ನಾವು ಈ ಪತ್ರದಲ್ಲಿ ಕಲಿಯುವ ಅಂಶವೇನೆಂದರೆ : ನಮ್ಮನ್ನು ನೋಡಿ ಗೇಲಿ ಮಾಡಿ ನಗುವ ಜನರ ಮುಂದೆ ನಾವು ಹೆಮ್ಮರವಾಗಿ ಬೆಳೆದು ನಿಲ್ಲಬೇಕು ಎಂಬುದು. ನನಗಂತೂ ಈ ಪತ್ರ ತುಂಬಾ ಇಷ್ಟ ವಾಯಿತು. ಯಾವಾಗಲೂ ಒಳ್ಳೆ- ಒಳ್ಳೆಯ ಪತ್ರಗಳನ್ನು ಮಕ್ಕಳ ಜಗಲಿಯ ಮಕ್ಕಳಿಗಾಗಿ ಕಳಿಸುತ್ತಿರುವ ನಿಮಗೆ ತುಂಬಾ - ತುಂಬಾ ಧನ್ಯವಾದಗಳು... ನಿಮ್ಮ ಇಂದಿನ ಪತ್ರ ನನಗಂತೂ ತುಂಬಾ ಇಷ್ಟ ವಾಯಿತು... ನಿಮ್ಮ ಮುಂದಿನ ಪತ್ರಕ್ಕಾಗಿ ಕಾಯುತ್ತಿರುತ್ತೇನೆ..
....ಧನ್ಯವಾದಗಳು ಅಕ್ಕ....
.........................................................ಪ್ರಿಯ 
10 ನೇ ತರಗತಿ .
ಸರಕಾರಿ ಪ್ರೌಢ ಶಾಲೆ ನಾರಾವಿ.
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*******************************************ಅಕ್ಕನ ಪತ್ರ---5
ಪ್ರೀತಿಯ ಅಕ್ಕ.... ನಾನು ಲಹರಿ.... ಅಬ್ಬಾ... ಎಷ್ಟೊಂದು ವಿಷಯಗಳು ಈ ನಿಮ್ಮ ಪತ್ರದಲ್ಲಿ. ಮಿಸ್ಟರ್ ಬೀನ್ ಅವರನ್ನು ಮರೆಯಲುಂಟೇ.... ಅವರ ಹಾಸ್ಯಾಭಿನಯ ಮಕ್ಕಳಾದ ನಮಗೆ ಎಷ್ಟು ಇಷ್ಟವೋ ಅಷ್ಟೇ ಹಿರಿಯರಿಗೂ ಇಷ್ಟ.... ಅವರ ಅಭಿನಯ ನೋಡುತ್ತಿದ್ದರೆ ಕಣ್ಣು ಆಚೀಚೆ ನೋಡದು. ನಕ್ಕು ನಕ್ಕು ಸುಸ್ತಾಗುತ್ತೇವೆ. ಅವರ ಕಥೆಯೊಂದಿಗೆ ಜೀವನ ಪಾಠವನ್ನು ಬಹಳ ಚೆನ್ನಾಗಿ ತಿಳಿಸಿದ್ದೀರಿ ಅಕ್ಕ....ಧನ್ಯವಾದಗಳು ನಿಮಗೆ.
.................................................... ಲಹರಿ ಜಿ.ಕೆ.
7 ನೇ ತರಗತಿ
ತುಂಬೆ ಸೆಂಟ್ರಲ್ ಸ್ಕೂಲ್ , ತುಂಬೆ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
**********************************************
ಪ್ರೀತಿಯ ಅಕ್ಕನಿಗೆ.................
            ನಿಯತ್ . ಪಿ. ಶೆಟ್ಟಿ ಮಾಡುವ ವಂದನೆಗಳು. ಅಕ್ಕ ನಿಮ್ಮ ಪತ್ರವನ್ನು ನಾನು ಓದಿದೆ. ಮಿಸ್ಟರ್ ಬೀನ್ ಹೆಸರು rovan Ayticnsan ಎಂದು ನನಗೆ ಗೊತ್ತಿರಲಿಲ್ಲ. ಮಿಸ್ಟರ್ ಬೀನ್ ಎನ್ನುವ ಅಧ್ಭುತ ಪ್ರತಿಭೆಯ ಹಿಂದೆ ಇಂಥಹ ಒಂದು ನೋವಿನ ಕಥೆ ಇದೆ ಎಂದು ನಿಮ್ಮ ಪತ್ರ ಓದಿದ ಮೇಲೆ ತಿಳಿಯಿತು. ಹಾಗೆಯೇ ಒಂದು ಮಾತು ಅರ್ಥ ಆಯಿತು ಅಕ್ಕ. ತಿರಸ್ಕಾರವೇ ಪುರಸ್ಕಾರ ಎನ್ನುವುದು. ಅಕ್ಕ ನಮಗೆ ಹೀಗೆಯೇ ಒಳ್ಳೆ ಒಳ್ಳೆಯ ವಿಷಯಗಳನ್ನು ನಿರಂತರವಾಗಿ ತಿಳಿಸುತ್ತಿರಿ ಅಕ್ಕ. 
ಧನ್ಯವಾದಗಳು, 
ನಿಮ್ಮ ತಮ್ಮ, 
........................................ನಿಯತ್ . ಪಿ. ಶೆಟ್ಟಿ 
3 ನೇ ತರಗತಿ 
ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ ಮಾಣಿ , ಬಂಟ್ವಾಳ ತಾಲೂಕು  , ದಕ್ಷಿಣ ಕನ್ನಡ ಜಿಲ್ಲೆ
******************************************ಅಕ್ಕನ ಪತ್ರ --5
ನಮಸ್ತೆ ನಾನು ಪ್ರಣವ್......
ಅರೇ ..... Mr .Bean, ನನಗೆ ತುಂಬಾ ಇಷ್ಟ ..... ಪತ್ರ ಓದಿದ ನಂತರ ತಿಳಿಯಿತು.... " ನಾವು ಸಿಕ್ಕ ಅವಕಾಶಗಳನ್ನು ಉಪಯೋಗಿಸುತ್ತಾ ಮುಂದೆ ಹೋಗಬೇಕು."  
ನನ್ನ ಅಕ್ಕ ಒಂದು ದಿನ ಎಲ್ಲರಂತೆ ನಡೆಯುತ್ತಾಳೆ, ನಾನು ಅವಳನ್ನು ನಡೆಯುವಂತೆ ಮಾಡಬೇಕು, " Mr.Bean ಹಾಗೆ ಪ್ರಯತ್ನ ಮಾಡಿ ಅವಳನ್ನು ರಕ್ಷಿಸಿ, ಗೌರವಿಸಿ ,
ಚೆನ್ನಾಗಿ ನೋಡಿಕೊಳ್ಳುತ್ತೇನೆ, ಅಮ್ಮನ ದುಃಖ ಕಡಿಮೆ ಮಾಡುತ್ತೇನೆ.
ವಂದನೆಗಳು,
...........................................ಪ್ರಣವ್ ದೇವ್
1 ನೇ ತರಗತಿ
ಲೇಡಿ ಹಿಲ್ ಇಂಗ್ಲೀಷ್ ಹೈಯರ್ ಪ್ರೈಮರಿ ಸ್ಕೂಲ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
*******************************************     ಪ್ರೀತಿಯ ಅಕ್ಕನಿಗೆ ನನ್ನ ನಮನಗಳು.
ನನ್ನ ಹೆಸರು ಜೈಬುನೀಸಾ. ನಾನು 8ನೇ ತರಗತಿಯಲ್ಲಿ ಓದುತ್ತಿದ್ದೇನೆ. ಅಕ್ಕ .. ನಿಮ್ಮ ಪತ್ರವನ್ನು ಮನೆಯಲ್ಲಿ ನಾನು ಅಕ್ಕ ಇಬ್ಬರು ಓದಿದೆವು. ನನಗೆ ನಿಮ್ಮ ಪ್ರತಿಯೊಂದು ಪತ್ರಗಳು ಇಷ್ಟ. ನೀವು ಒಳ್ಳೆಯ ಸಂದೇಶಗಳ ಪತ್ರಗಳನ್ನು ಕಳುಹಿಸುತ್ತಿರುವುದು ನಮಗೆ ತುಂಬಾ ಸಂತೋಷವಾಗುತ್ತದೆ. ನನಗೆ ಮಿಸ್ಟರ್ ಬೀನ್ ಅವರು ಯಾರೆಂದು ಗೊತ್ತಿರಲಿಲ್ಲ. ನೀವು ಬರೆದ ಪತ್ರದಿಂದ ಮಿಸ್ಟರ್ ಬೀನ್ ಅವರು ಯಾರೆಂದು ಗೊತ್ತಾಯಿತು. ಪ್ರತಿಯೊಬ್ಬರ ಸಾಧಕರ ಹಿಂದೆ, ಕಷ್ಟದಿಂದ ಕಟ್ಟಿಕೊಂಡ ಬದುಕಿನ ನೆನಪುಗಳ ಸಾಲು ಕೂಡ ಇತ್ತು. ಪ್ರತಿಯೊಬ್ಬರ ಜೀವನದಲ್ಲಿ ಗೆಲ್ಲುವ ಛಲವೊಂದು ಇದ್ದರೆ ಅವರು ಗೆದ್ದೆ ಗೆಲ್ಲುತ್ತಾರೆ ಎನ್ನುವ ಸಂದೇಶ ಸ್ಫೂರ್ತಿ ನೀಡಿತು..
.................................................ಜೈಬುನೀಸಾ
8 ನೆಯ ತರಗತಿ
ದ.ಕ.ಜಿ.ಪಂ.ಉ.ಹಿ .ಪ್ರಾ ಶಾಲೆ, ಗೋಳಿತ್ತಟ್ಟು 
ಪುತ್ತೂರು ತಾಲ್ಲೂಕು , ದಕ್ಷಿಣ ಕನ್ನಡ ಜಿಲ್ಲೆ
****************************************


       ಜಗಲಿಯ ಎಲ್ಲ ಗೆಳೆಯರಿಗೂ ಹರ್ಷಿತ್ ಕೆ. ಮಾಡುವ ಪ್ರೀತಿಯ ವಂದನೆಗಳು..                            
ಜಗಲಿಯ ಅಕ್ಕನ ಪತ್ರ - 5 ಓದಿ ನನಗೆ ತುಂಬ ಖುಷಿಯಾಯಿತು. ಈ ಪತ್ರದಿಂದ ನನಗೆ ಬದುಕಿನಲ್ಲಿ ಬರುವ ಕಷ್ಟ ಸುಖದ ಬಗ್ಗೆ ಅರಿವಾಯಿತು. ನಾವು ಏನಾದರೂ ಸಾಧಿಸಬೇಕಾದರೆ ನಮಗೆ ಒಬ್ಬರ ಸಹಾಯ ಬೇಕಾಗುತ್ತದೆ. ಅಲ್ಲದೆ ಪ್ರೋತ್ಸಾಹ ಕೂಡ ಇರಬೇಕು ಎಂದು ತಿಳಿದೆ. ನಾವು ಬದುಕಿನಲ್ಲಿ ಏನಾದರೂ ಸಾಧಿಸಬೇಕಾದರೆ ಯಾವತ್ತೂ ಹಿಂದೆ ಸರಿಯಬಾರದು. ಅಲ್ಲದೆ ಇನ್ನೊಬ್ಬರ ಸಾಧನೆಗೆ ನಾವು ಅಡ್ಡಿಯಾಗಬಾರದು ಎಂದು ಕಲಿತೆ. ನಮ್ಮಿಂದ ಆದಷ್ಟು ಸಹಾಯ ಮಾಡಬೇಕು ಮತ್ತು ಪ್ರೋತ್ಸಾಹ ನೀಡಬೇಕು. ಅಕ್ಕ ನ‌ ಪತ್ರದ ಹೊಸ ವಿಷಯಗಳಿಂದ ಕಲಿಯಲು ತುಂಬಾ ಇದೆ...ಧನ್ಯವಾದಗಳು.
...................................................ಹರ್ಷಿತ್ ಕೆ.
10 ನೇ ತರಗತಿ
ಸೈಂಟ್ ಅಂತೋನಿಸ್ ಪ್ರೌಢ ಶಾಲೆ ಉದನೆ 
ಪುತ್ತೂರು , ದ.ಕ.ಜಿಲ್ಲೆ.
********************************************


     ಎಲ್ಲರಿಗೂ ನಿರೀಕ್ಷ ಮಾಡುವ ವಂದನೆಗಳು
ನನಗೆ ಈ ವಾರದ ಅಕ್ಕನ ಪತ್ರ ತುಂಬಾ ಇಷ್ಟವಾಯಿತು....
    ಏಕೆಂದರೆ Rowan atkinshon ಜೀವನದ ಬಗ್ಗೆ ತಿಳಿಯಲು ತುಂಬಾ ಕುತೂಹಲವಿತ್ತು. ಆದರೆ ಅಕ್ಕನ ಪತ್ರದಿಂದ ಅವರ ಜೀವನದ ಬಗ್ಗೆ ತಿಳಿಯಲು ಅವಕಾಶ ಸಿಕ್ಕಿತು. ಇವರ ಜೀವನವು ನಮಗೆಲ್ಲರಿಗೆ ಸ್ಪೂರ್ತಿ. ಬೇರೆಯವರ ಮಾತಿಗೆ ಕಿವಿಕೊಡದೆ ನಮ್ಮಲ್ಲಿ ಛಲವಿದ್ದರೆ ಎಲ್ಲವನ್ನೂ ಸಾಧಿಸಬಹುದು ಎಂದು ಇವರ ಈ ಜೀವನ ಚರಿತ್ರೆಯಿಂದ ತಿಳಿಯಿತು. ಅಕ್ಕ.... ಮುಂದೆ ಮುಂದಿನ ವಾರದಲ್ಲಿ ಇಂತಹ ಒಳ್ಳೆಯ ಕಥೆಗಳನ್ನು ಹಂಚಿಕೊಳ್ಳಿ.
.......ಧನ್ಯವಾದಗಳು......
........................................................ ನಿರೀಕ್ಷ
8ನೇ ತರಗತಿ
ಸರಕಾರಿ ಪ್ರೌಢಶಾಲೆ ನಾರಾವಿ 
ಬೆಳ್ತಂಗಡಿ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************


 ಅಕ್ಕನಪತ್ರದಿಂದ ನನಗೆ ತಿಳಿದ ಅನಿಸಿಕೆ ......ಆಶಯ ಬಿ.ಆರ್
       ಪಯಣವೊಂದು ಬದುಕಿಗೆ ಪಾಠವಾಗುವ ಇತಿಹಾಸ ಮಿ.ಬೀನ್ ಮತ್ತು Rowan Alhkinson ಅವರಿಂದ ತಿಳಿದು ಬಂತು. ಬದುಕಿನಲ್ಲಿ ಹಿಂದೆ
 ಸರಿಯದೆ ಬದುಕನ್ನು ಪ್ರೀತಿಸಬೇಕು ಎಂದು ಉದಾಹರಣೆಗೆಯೊಂದಿಗೆ ತಿಳಿಸಿದಿರಿ ಅಕ್ಕ , ತುಂಬಾ ಖುಷಿ ಆತ್ಮವಿಶ್ವಾಸ ಹೆಚ್ಚಾಯಿತು. ಜೀವನವನ್ನು ಪ್ರೀತಿಯಿಂದ ಕಳೆಯಬೇಕು .ಗುರಿ ಸಾಧಿಸುವಾಗ ಇತರರನ್ನು ಹೋಲಿಸಿಕೊಳ್ಳದೆ ಮುಂದೆ ಬರಬೇಕು ಎಂಬ ಛಲದ ಪಾಠ ಕಲಿಸಿದಿರಿ.
           ಪ್ರೀತಿ ವಂದನೆಗಳು
          ಇಂತಿ ನಿಮ್ಮ ಪ್ರೀತಿಯ
 .............................................ಆಶಯ ಬಿ.ಆರ್     ತರಗತಿ‌:9ನೇ ತರಗತಿ‌
ವಿಳಾಸ : ಲಕ್ಷ್ಮಿ ರಾಮ ನಿಲಯ ದೋಳ ನೆಕ್ಕರೆ ಆಲಂಕಾರು 
ತಾಲ್ಲೂಕು:ಕಡಬ
ಜಿಲ್ಲೆ :ದಕ್ಷಿಣ ಕನ್ನಡ
********************************************


Ads on article

Advertise in articles 1

advertising articles 2

Advertise under the article