-->
ಹಕ್ಕಿ ಕಥೆ - 13

ಹಕ್ಕಿ ಕಥೆ - 13

ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ

                         ಹಕ್ಕಿ ಕಥೆ - 13

ಮಕ್ಕಳೇ,
     ನಮ್ಮ ಮನೆಯ ಹಿಂದೆ ಒಂದು ಪುಟ್ಟ ಕಾಡು ಇದೆ. ನಮ್ಮಲ್ಲಿ ಅಂತಹ ಕಾಡುಗಳಿಗೆ ಬನಗಳು ಅಂತ ಕರೀತಾರೆ. ಅಲ್ಲಿ ಹಲವಾರು ಬಗೆಯ ಮರಗಳು ಇವೆ. ಪುಟ್ಟದಾದರೂ ದಟ್ಟವಾಗಿದೆ ಈ ಬನ. ಬೆಳಗ್ಗೆ ಎದ್ದು ಹಲ್ಲುಜ್ಜಿ ಹೊರಗಡೆ ಬಂದು, ಹಾಲು ತರಲೆಂದು ಡೈರಿ ಕಡೆಗೆ ಹೋಗಿ ಬರುವಾಗೆಲ್ಲಾ ಬಹಳ ಚುರುಕಾಗಿ ಹಾರುತ್ತಾ ಇರುವುದ ಗಮನಿಸಿದೆ. ಹಣ್ಣುಗಳು ಇರುವ ಮರಗಳಲ್ಲಿ ಈ ಹಕ್ಕಿಗಳು ಪ್ರತಿದಿನ ಕಾಣಲು ಸಿಗುತ್ತಿತ್ತು. ನಗರಗಳಲ್ಲೂ ಸಣ್ಣಪುಟ್ಟ ಗಾರ್ಡನ್ ಗಳಲ್ಲಿ ಖಂಡಿತಾ ನೋಡ್ಲಿಕ್ಕೆ ಸಿಗುವ ಹಕ್ಕಿ ಇದು.
         ಇದರ ಗಾಢ ಹಳದಿ ಬಣ್ಣ, ಅದಕ್ಕೆ ಸುಂದರವಾಗಿ ಒಪ್ಪುವಂತಹ ಕಪ್ಪು ಪಟ್ಟಿಗಳು, ಗಾಢ ಕಪ್ಪು ಬಣ್ಣದ ತಲೆ, ಕೆಂಪು ಕಣ್ಣು, ತಿಳಿಗೆಂಪು ಬಣ್ಣದ ಕೊಕ್ಕು ಈ ಹಕ್ಕಿಯ ಗುರುತು.  ಬೇಸಗೆಯ ದಿನಗಳಲ್ಲಂತೂ ಕಾಡುಹಣ್ಣಿನ ಮರಗಳಲ್ಲಿ ಹಣ್ಣು ತಿನ್ನುತ್ತಾ ಹಿಡಿಯುವ ಆಟ ಆಡುತ್ತಾ ಈ ಕಡೆಯಿಂದ ಆಕಡೆಗೆ , ಆಕಡೆಯಿಂದ ಈಕಡೆಗೆ ಹಾರುತ್ತಾ ಹಾಡುತ್ತಾ ಇರುವ ಈ ಹಕ್ಕಿಗಳ ಆಟ ನೋಡುವುದೇ ಕಣ್ಣಿಗೆ ಒಂದು ಹಬ್ಬ.                                         ದಕ್ಷಿಣ ಭಾರತ , ಶ್ರೀಲಂಕಾ ದಿಂದ ಇಂಡೋನೇಶಿಯಾ ದವರೆಗೂ ಈ ಹಕ್ಕಿ ನೋಡ್ಲಿಕ್ಕೆ ಸಿಗ್ತದೆ ಅಂತ ಹೇಳ್ತಾರೆ. ಹೆಚ್ಚಾಗಿ ಮರದ ಮೇಲೆ ವಾಸ ಮಾಡುವ ಈ ಹಕ್ಕಿ ನೆಲಕ್ಕೆ ಬರುವುದು ತೀರಾ ಅಪರೂಪ. ಮರದ ಮೇಲೆ ಗೂಡು ಕಟ್ಟಿ ಮೊಟ್ಟೆ ಇಟ್ಟು ಮರಿ ಮಡುವ ಈ ಹಕ್ಕಿಯ ಮುಖ್ಯ ಆಹಾರ ಹಣ್ಣುಗಳು ಮತ್ತು ಕೀಟಗಳು..  ನನಗಂತೂ ಈ ಹಕ್ಕಿಯ ಬಣ್ಣ ಬಹಳ ಇಷ್ಟ..                                                               ಈ ಹಕ್ಕಿಯ ಕನ್ನಡ ಹೆಸರು : ಕರಿ ತಲೆಯ ಹೊನ್ನಕ್ಕಿ,  ಸ್ವರ್ಣೆ,  ಅರಶಿನ ಹಕ್ಕಿ                                      English Name of This Bird : Black-hooded OrioleScientific Name : Oriolus xanthornus    ಹಾಗಾದ್ರೆ ಮತ್ತೆ ಸಿಗೋಣ.. bye.......  ............................................ಅರವಿಂದ ಕುಡ್ಲ   ಅಧ್ಯಾಪಕ ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ

********************************************







Ads on article

Advertise in articles 1

advertising articles 2

Advertise under the article