-->
ಜಗಲಿಯ ಮಕ್ಕಳ ಕವನಗಳು - 1

ಜಗಲಿಯ ಮಕ್ಕಳ ಕವನಗಳು - 1

ಮಕ್ಕಳ ಜಗಲಿಯಲ್ಲಿ 
ಜಗಲಿಯ ಮಕ್ಕಳು ಬರೆದ 
ಕವನಗಳು


   ಮೊಬೈಲ್ (ಕವನ)
-------------------------------
ಮೊಬೈಲ್ ಬಳಕೆಯ ಪರಿಣಾಮ
ಅತಿಯಾಗಿದೆ ಅತಿಯಾಗಿದೆ, 
ತುಂಬಾನೇ ಅತಿಯಾಗಿದೆ
ಜೀವಕ್ಕೆ ಕುತ್ತಾಗಿದೆ, 
ಇದೇ ದೊಡ್ಡ ಆಪತ್ತಾಗಿದೆ........!!
ಫೇಸ್ಬುಕ್, ಇನ್ಸ್ಟ್ರಾಗ್ರಾಮ್ ನಂತಹ 
ಸಾಮಾಜಿಕ ಜಾಲತಾಣಗಳು
ಮಾರಕ ಮಾಯಾ ಜಾಲಗಳು......!!
ಅಜ್ಞಾನಿಗಳಾಗಿ ಬಳಸುತ್ತಿರುವ 
ನಮ್ಮ ಯುವಜನತೆಗಳು ...!!
ಆಗಿ ಹೋಗಿದೆ ಎಷ್ಟೋ ಅವಘಡಗಳು
ಮಕ್ಕಳಿಗಂತೂ ಅಭ್ಯಾಸವಾಗ್ತಿದೆ ಪ್ರತಿದಿನ
ಇದರಿಂದಾಗುವ ಪರಿಣಾಮವು ತಿಳಿದಿರಲೇಬೇಕು
ಅರ್ಥವಾಗದು ಈ ನಮ್ಮ ಜನತೆಗೆ .
ಬಿಟ್ಟಿರಲಾರದಟ್ಟು ಹತ್ತಿರವಾಗಿದೆ ದಿನಚರಿಗೆ
ಇದರ ಬಳಕೆ ವಿಪರೀತವಾದರೆ
ಜೀವಕ್ಕಾದೀತು ತೊಂದರೆ
ಮೊಬೈಲ್ನಾ ಬಳಕೆಯಿಂದಲೂ ಒಳಿತಿದೆ
ಆದರೇನು...? ಇದರ ಬಳಕೆಗೂ ಮಿತಿಯಿದೆ.
ಅದೆಷ್ಟೋ ಹಾನಿ ಇದರಿಂದಲೇ ಸಂಭವಿಸಿದೆ
ಮೊಬೈಲ್ ಬಳಸುವ ನಾವು 
ನಿತ್ಯ ಎಚ್ಚರವಹಿಸಬೇಕಾಗಿದೆ..........!!
 ............................................ಸುನೀತಾ
ಪ್ರಥಮ ಪಿಯುಸಿ
ಎಕ್ಸೆಲ್ ಪಿಯು ಕಾಲೇಜು
ಗುರುವಾಯನಕೆರೆ
ಬೆಳ್ತಂಗಡಿ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
***************************************


              ಚುಟುಕುಗಳು
      *********************

ಸುಂದರ 
-----------------
ಹೂ ಬಲು ಸುಂದರ 
ಅದರ ಬಣ್ಣ ಕೇಸರ 
ಕಾಂಡ ಅದರ ಆಧಾರ 
........................................ ಧೃತಿ 

ಮಲ್ಲಿಗೆ 
-----------------
ಅರಳಿ ನಿಂತ ಮಲ್ಲಿಗೆ 
ಅದರ ಸುವಾಸನೆ ಬಂತು ಇಲ್ಲಿಗೆ 
ಎಸಳು ಮಾತ್ರ ಬೆಳ್ಳಗೆ 
........................................ ಧೃತಿ 

ಅಮ್ಮ 
-----------------
ಅಮ್ಮ ನೀನು ನಕ್ಕರೆ
ನಮ್ಮ ಬಾಳು ಸಕ್ಕರೆ
ನದಿಯಲುಂಟು ಕೊಕ್ಕರೆ
........................................ ಧೃತಿ 

ಅಣ್ಣ 
-----------------
ನನ್ನ ಪ್ರೀತಿಯ ಅಣ್ಣ
ನನಗೆ ತಂದ ಚಿನ್ನ 
ಗೋಡೆಗೆ ಬಳಿದ ಬಣ್ಣ 
........................................ ಧೃತಿ 

ತಂಗಿ 
-----------------
ನನ್ನ ಪುಟ್ಟ ತಂಗಿ
ಅವಳ ಹೆಸರು ನಿಂಗಿ 
ಅವಳಿಗೆ ತುಂಬಾ ಅಂಗಿ 
 .............................................................. ಧೃತಿ 
9 ನೇ ತರಗತಿ 
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*********************************************


                         ಮಳೆ...
               ----------------
ಭುವಿಗೆ ಬೆಳೆಸಿತು ಮಳೆರಾಯನ ಪಯಣ
ಶುರುವಾಯಿತೀಗ ಮಳೆ ಹನಿಯ ಕಂಪನ
ಮುಸ್ಸಂಜೆಯ ಈ ಹಸಿರಿನ ಸೊಬಗಲಿ 
ಮನಕೀಗ ಕುಣಿವ ಆಸೆ ಸುರಿವ ಮಳೆಯಲಿ 
ಸುತ್ತಲು ಆವರಿಸಿತು ಮಳೆಹನಿಯ ತಂಪು
ಕಿವಿಗೆ ಕಿವಿಗೆ ಹಕ್ಕಿಗಳ ಇಂಪು
ಚಟಪಟ ಸುರಿವ ಈ ಮಳೆಯಲಿ 
ಎಲ್ಲರ ಮುಖದಲು ನಗು ಅರಳಲಿ....!!
.......................................................ಸುಹಾನಿ 
9ನೇ ತರಗತಿ 
ಸ. ಪ. ಪೂ. ಕಾ. (ಪ್ರೌಢ ಶಾಲೆ) ಸವಣೂರು
ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
****************************************



                 ಅಮ್ಮ- ಕವನ
        --------------------------------
ಅವಳು ಜಗತ್ತಿನ ಅತ್ಯಂತ ಸುಂದರಿ
ಅವಳಿಗೆ ನಾವೆಂದ್ರೆ ತುಂಬಾ ಇಷ್ಟ
ನಮಗೆ ನೋವಾದ್ರೆ ಅವಳು ಅಳ್ತಾಳೆ
ನಮ್ಮ ನಗುವಿನಲ್ಲಿ ಅವಳು ಸ್ವರ್ಗ ಕಾಣ್ತಾಳೆ
ನಮ್ಮ ಇಷ್ಟನೇ ಅವಳ ಇಷ್ಟ
ಅವಳಿಗಿಂತ ಹೆಚ್ಚು ನಮ್ಮನ್ನು ಯಾರು ಪ್ರೀತ್ಸಲ್ಲ
ದೇವರು ಅವಳನ್ನು ಎರಡು ಅಕ್ಷರದಿಂದ ಹಿಡಿದೆತ್ತಿದ್ದಾರೆ , ಅವಳೇ ಅಮ್ಮ....!!
................................................. ದಿವ್ಯಶ್ರೀ


ಜಾರಿ ಬೀಳುವ ಕಲ್ಲಿನ ಮೇಲೆ ನಿಲ್ಲಬೇಡ
ನಿಂತರು ಜಾರಬೇಡ
ಜಾರಿದರು ಬೀಳಬೇಡ 
ಬಿದ್ದರು ಅಮ್ಮ ಎನ್ನುವ ಪದ ಮರೆಯಬೇಡ
 ............................................... ದಿವ್ಯಶ್ರೀ

   
        ಪ್ರೀತಿ ಇರಲಿ ಸ್ನೇಹ ಇರಲಿ
        ಮುದ್ದಾದ ನಗುವಿರಲಿ
        ಆ ನಗುವಿನಲ್ಲಿ ತಾಯಿಯ ನೆನಪಿರಲಿ
.................................................... ದಿವ್ಯಶ್ರೀ             
ಮೌನದಲ್ಲಿ ಪ್ರೀತಿ ಇದೆ
ಮಾತಿನಲ್ಲಿ ಜಗಳವಿದೆ
ನಗೆಯ ಹಿಂದೆ ನೋವಿದೆ
ನೋವಿನಲ್ಲಿ ಬದುಕಿದೆ
ಈ ನೋವು ನಲಿವಿನ ಮದ್ಯೆ 
ನನಗೆ ಸದಾ ತಾಯಿಯ ನೆನಪಿದೆ
............................................. ದಿವ್ಯಶ್ರೀ
                   
            ಹಕ್ಕಿಗಳು ( ಕವನ )
    ----------------------------------
    ಮುಂಜಾನೆಯ ಮಬ್ಬಿನಲ್ಲಿ
    ಇಬ್ಬನಿಯ ನಸುಕಿನಲ್ಲಿ
    ಕೇಳುತಲಿದೆ ಹಾಡೊಂದು
    ಕಲರವ ಮಾಡುತಲಿ ಸಾಗುತಿದೆ
    ಹಕ್ಕಿಗಳ ಗುಂಪೊಂದು
     ಕಲರವ ಮಾಡುತಲಿ ಹೇಳುತ್ತಿವೆ
     ಶುಭೋದಯ ನಿಮಗೆ ಎನ್ನುತ್ತಲಿವೆ
     ಬೆಳಗಾಯಿತು ಏಳಿ ಅನ್ನುತ್ತಿವೆ
     ದಿನ ನಿತ್ಯದ ಕೆಲಸಕ್ಕೆ 
     ಹಾಜರಾಗಿರೆಂದು ಎಚ್ಚರಿಸುತ್ತಿವೆ....!!
.............................................. ದಿವ್ಯಶ್ರೀ
                          
        ಶರಣಾರ್ಥಿಗಳು 
      ------------------------
ಬದುಕಿನುದ್ದಕ್ಕೂ ಜೊತೆಯಾಗಿ 
ಬರುವುದು ಬರವಣಿಗೆ
ಪುಸ್ತಕವನ್ನು ಎಷ್ಟೆ ಓದಿದರೂ ಅದೊಂದು ಮರಣವಿಲ್ಲದ ಮೆರವಣಿಗೆ
ಪುಸ್ತಕದ ಪುಟದೊಳಗೆ 
ಸ್ಫುಟವಾಗಿ ಬರೆಸಿ
ಮನಸೊಳಗೆ ಜ್ಞಾನದೀವಿಗೆಯ ಬೆಳಗಿಸಿ
ಬದುಕಿನಲ್ಲಿ ದಿಟ್ಟತನದಿಂದ 
ನಡೆಯುವಂತೆ ಹರಸಿ
ಬದುಕಿನ ನಿಜವಾದ ನುಡಿಯನ್ನು ಕಲಿಸಿ
ನುಡಿಯೊಂದಿಗೆ ಉತ್ತಮ ನಡೆಯನ್ನು ಕಲಿಸಿ
ಭೋಧನೆಯ ಮೂಲಕ 
ಸಾಧನೆಯ ಹಾದಿಗೆ ನಡೆಸಿದ
ಗುರುವರ್ಯರೆಲ್ಲರಿಗೂ ಸಾವಿರದ 
ಶರಣು ಶರಣಾರ್ಥಿಗಳು 
............................................... ದಿವ್ಯಶ್ರೀ
                 
                ಜೀವನ
          ------------------------
ಬದುಕಿದ್ದಾಗ ನಮಸ್ಕಾರ ಮಾಡದ ಜನ
ಸತ್ತಾಗ ಪಾದ ಮುಟ್ಟಿ ಕೈ ಮುಗಿಯುವರು.
ಉಸಿರಿರುವಾಗ ನೀ ಸತ್ತರೆ 
ಚೆನ್ನಾಗಿರುತಿತ್ತು , ಎನ್ನುತ್ತಿದ್ದವರು
ಸತ್ತಾಗ ಬದುಕಿರಬೇಕಿತ್ತೆನ್ನುವರು.
ಅಂಗಳದ ತುಂಬೆಲ್ಲ ಅರಳಿದ ಅನಾಮಧೇಯ ಹೂಗಳ ಮುಟ್ಟಲು ಬಿಡದಿದ್ದವರು.
ಸತ್ತಾಗ ಸುವಾಸನೆ ಬೀರುವ 
ಹೂಗಳನ್ನು ತಂದು ಅಲಂಕರಿಸುವರು...!!
ಬದುಕಿದ್ದಾಗ ಪಾಪಿಯೆಂದವರು
ಸತ್ತಾಗ ಪಾಪ ಎನ್ನುವರು.
ಹೊಟ್ಟೆಗಾಗಿ ಬೇಡುವಾಗ ಕುತ್ತಿಗೆ  
ಹಿಡಿದು ತಳ್ಳಿದವರು
ಸತ್ತಾಗ ಅತ್ತಹಾಗೆ ನಟಿಸುವರು...!!!
............................................... ದಿವ್ಯಶ್ರೀ

                     ಸಂಬಂಧ
               ------------------------
ಬಾಲ್ಯದಲ್ಲೇ ಅಣ್ಣ-ತಮ್ಮಂದಿರ 
ಜೊತೆ ಉಂಡು ಬಿಡಿ.
ಮುಂದೆ ಆ ಅವಕಾಶ ಸಿಗಲಿಕ್ಕಿಲ್ಲ...!!
ಹೆಂಡತಿ ಬರುವುದಕ್ಕಿಂತ ಮುಂಚೆಯೇ 
ತಾಯಿಯ ಪ್ರೀತಿಯನ್ನು ಅನುಭವಿಸಿ ಬಿಡಿ.
ಏಕೆಂದರೆ ಮುಂದೆ ಅದು ದೊರೆಯಲಿಕ್ಕಿಲ್ಲ...!!
ಚಿಕ್ಕವರಿದ್ದಾಗಲೇ ಮಕ್ಕಳ ಜೊತೆ 
ಮಾತಾಡಿ ಬಿಡಿ.
ಮುಂದೆ ಮಾತಾಡಲು 
ಅವರಿಗೆ ಸಮಯವಿರಲಿಕ್ಕಿಲ್ಲ...!!
ಕಾರಣ
ಹೆಜ್ಜೆ ಹೆಜ್ಜೆಗೂ ಕಾಲಚಕ್ರ ಬದಲಾಗುತ್ತಿರುತ್ತದೆ.
ಒಂದನ್ನು ಪಡೆಯ ಬೇಕಾದರೆ 
ಇನ್ನೊಂದನ್ನು ಕಳೆದುಕೊಳ್ಳಲೇಬೇಕು....!!!
....................................................... ದಿವ್ಯಶ್ರೀ
ಪ್ರಥಮ ಪಿಯುಸಿ  
ಮುಂಡಾಜೆ ಪದವಿಪೂರ್ವ ಕಾಲೇಜು 
ಮುಂಡಾಜೆ ಬೆಳ್ತಂಗಡಿ ತಾಲೂಕು 
ದಕ್ಷಿಣ ಕನ್ನಡ ಜಿಲ್ಲೆ
*********************************************                
                   
      
                    ಮರ
         ------------------------
ಮರ ನಿನು ಎಷ್ಟು ಸುಂದರ
ಕೊಡುವೆ ನಮಗೆ ವಿಧ ವಿಧ ಫಲಗಳ
ನೀಡುವೆ ನಮಗೆ ಬಹು ಉಪಯೋಗಗಳ
ಪ್ರಾಣಿ ಪಕ್ಷಿಗಳಿಗೆ ವಾಸಸ್ಥಾನ ನೀನು
ಕ್ರೂರ ಜನರಿಗೆ ಬಲಿಯು ನೀನು
ನೀನು ನಮ್ಮೆಲ್ಲರ ಕಾಮಧೇನು...!!
...........….................................ನಿಶ್ಮಿತಾ
8 ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************



   ಮಳೆ ಬಂತು ಮಳೆ (ಕವನ)
-------------------------------------
ಮಳೆ ಬಂತು ಮಳೆ
ಇಳೆ ತುಂಬ ಬೆಳೆ
              ಹರುಷದಲಿ ರೈತ
              ನಮ್ಮೆಲ್ಲರ ಅನ್ನದಾತ
ಹೊಲ ತುಂಬಿತು ಮಳೆಯ ಭರದಿ
ಹೃದಯ ತುಂಬಿತು ಸಂತಸದ ಫಲದಿ
               ನೆಲ ಹಸಿರಾಯಿತು
               ಮನ ತಂಪಾಯಿತು
ಗದ್ದೆ ಉಳುಮೆಯಾಯಿತು
ನಾಟಿ ಪೈರಾಯಿತು
               ನನಸಾಯಿತು ಕನಸು
               ತುಂಬಿ ಬಂತು ಮನಸು
 ...................................................ಗ್ರೀಷ್ಮಾ 
8ನೇ ತರಗತಿ
ಸ.ಪ್ರೌ.ಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
***************************************


             ಸೈನಿಕ (ಕವನ)
    ------------------------------------
ದೇಶವ ಕಾಯಲು ಹೊರಟನು ವೀರ
ರಾಷ್ಟ್ರವ ಉಳಿಸಲು ಹೋರಾಡುವ ಧೀರ
ರಾಷ್ಟ್ರಕ್ಕಾಗಿ ಪ್ರಾಣವ ಮುಡಿಪಿಟ್ಟಿರುವನು
ದೇಶಕ್ಕಾಗಿ ಕುಟುಂಬ ತ್ಯಾಗ ಮಾಡಿರುವನು
      ಕೊರೆಯುವ ಚಳಿಯನು ಲೆಕ್ಕಿಸದೆ
      ಶತ್ರುಗಳ ಬೆದರಿಕೆಗೆ ಹೆದರದೆ 
      ಯಾವುದಕ್ಕೂ ಧೈರ್ಯಗೆಡದೆ
      ಗಡಿನಾಡಿನಲಿ ರಾಷ್ಟ್ರರಕ್ಷೆ ಮಾಡುತಿರುವನು
ದೇಶಸೇವೆಯೇ ಈಶಸೇವೆಯೆಂದು 
ಧೃತಿಗೆಡದೆ ಕಲ್ಲಾಗಿ ನಿಂತಿಹನು
ದೇಶಭಕ್ತಿಯ ನೆನೆಯುತಲಿರುವನು
ಹಗಲು ರಾತ್ರಿಯನು ಲೆಕ್ಕಿಸದಿರುವನು
      ನಮ್ಮನು ಕಾಪಾಡುತಿರುವನು ಸೈನಿಕನಾಗಿ
      ಮರೆಯುವನು ನೋವನು ದೈಹಿಕವಾಗಿ
      ಛಲಬಿಡದೆ ಮುನ್ನುಗ್ಗುವನು
      ಎದೆಗುಂದದೆ ಹೋರಾಡುವನು
.........................................................ಗ್ರೀಷ್ಮಾ 
8ನೇ ತರಗತಿ
ಸ.ಪ್ರೌ.ಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************






Ads on article

Advertise in articles 1

advertising articles 2

Advertise under the article