
ಸಣ್ಣ ಕವನಗಳು
Saturday, August 7, 2021
Edit
ವಂದನಾ ಕೆ ಹೆಚ್
ಮೂರನೇ ತರಗತಿ
ದ.ಕ.ಜಿ.ಪಂ.ಉ.ಹಿ.ಪ್ರಾ ಶಾಲೆ ಕುದ್ಮಾರು
ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಬಣ್ಣದಹಕ್ಕಿ
----------------------------
ಬಾಬಾ ಹಕ್ಕಿ ಬಣ್ಣದಹಕ್ಕಿ
ಆಕಾಶದಲ್ಲಿ ಹಾರುವೆ
ಸುಂದರತೆಯ ತೋರುವೆ
ಹೂಗಳ ಮೇಲೆ ಕುಳಿತು
ಮಕರಂದವ ಹೀರುವೆ
ಅದನ್ನು ನಿನ್ನ ಮರಿಗಳಿಗೆ ಕೊಡುವೆ
ದಿನವೂ ನಾನು ನಿನ್ನನ್ನು ಹುಡುಕುವೆ
ಇರುವೆ
----------------------------
ಇರುವೆ ಇರುವೆ ಎಲ್ಲಿರುವೆ
ಬೆಲ್ಲವ ಕಂಡರೆ ನೀ ಬರುವೆ
ಸಾಲಲಿ ಎಂದು ನೀ ಹೋಗುವೆ
ಮಣ್ಣಲಿ ಗೂಡನು ನೀ ಕಟ್ಟುವೆ
ಮುಟ್ಟಲು ಬಂದರೆ ಕಚ್ಚಿ ಬಿಡುವೆ
ಬಣ್ಣದ ಮೀನು
------------------------------
ಬಣ್ಣದ ಮೀನೆ ಬಣ್ಣದ ಮೀನೆ
ನೀರಲ್ಲಿ ನೀನು ಓಡುತ್ತಿರುವೆ
ನನ್ನ ಕಂಡರೆ ಅಡಗಿ ಬಿಡುವೆ
ತಿನ್ನಲು ಹಾಕಿದರೆ ನೀನು ಓಡಿ ಬರುವೆ
ನಿನ್ನ ನೋಡಿ ನಾನು ಖುಷಿಪಡುವೆ
................................. ವಂದನಾ ಕೆ ಹೆಚ್
ಮೂರನೇ ತರಗತಿ
ದ.ಕ.ಜಿ.ಪಂ.ಉ.ಹಿ.ಪ್ರಾ ಶಾಲೆ ಕುದ್ಮಾರು
ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************