
ಪ್ರಕೃತಿ - ಕವನ
Saturday, August 7, 2021
Edit
ಕಾವ್ಯ ರೈ 10ನೇ ತರಗತಿ
ಷಣ್ಮುಖ ದೇವ ಪ್ರೌಢಶಾಲೆ ಪೆರ್ಲಂಪಾಡಿ
ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಪ್ರಕೃತಿ - ಕವನ
-------------------------------------------------
ದಿಗಂತದಿ ಕಾರ್ಮೋಡದ ಚಿತ್ತಾರ
ಮಿಂಚು ಗುಡುಗುಗಳು ಆರ್ಭಟಿಸುವ ಅಬ್ಬರ
ರೈತರ ಮನದಲ್ಲಿ ವರುಣನಿಗಾಗಿ ಕಾತರ
ಮಳೆ ಹನಿಯು ಸ್ಪರ್ಶಿಸಿತು ಇಳೆಯ ಸರಸರ
ಜುಳು ಜುಳು ಹರಿಯುವ ನದಿಯ ಸಡಗರ
ಹಚ್ಚ ಹಸುರಿನ ವನಸಿರಿಯೆ ಸುಂದರ
ರೈತನಿಗೆ ಬೆಳೆ ಬೆಳೆಯುವ ಆತುರ
ಜಗಕ್ಕೆಲ್ಲಾ ಬೆಳಕ ನೀಡಿದ ನೇಸರ
ಎಲೆಗಳ ಮೇಲೆ ಇಬ್ಬನಿಯ ವೈಯಾರ
ಖಗ ಮೃಗಗಳ ಕಲರವದ ಇಂಚರ
ಚಿಗುರೊಡೆಯಿತು ನಮ್ಮ ಗಿಡಮರ
ತಂಪು ತಂಪಾಯಿತು ನಮ್ಮ ಪರಿಸರ
.................. ಕಾವ್ಯ ರೈ 10ನೇ ತರಗತಿ
ಷಣ್ಮುಖ ದೇವ ಪ್ರೌಢಶಾಲೆ ಪೆರ್ಲಂಪಾಡಿ
ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
**************************************