-->
ಕ್ಷಾತ್ರತೇಜರು - ಕವನ

ಕ್ಷಾತ್ರತೇಜರು - ಕವನ

ಸಿಂಚನಾ
8ನೇ ತರಗತಿ
ಶ್ರೀಮದ್ ಭುವನೇಂದ್ರ ಪ್ರೌಢಶಾಲೆ 
ಕಾರ್ಕಳ ತಾಲೂಕು , ಉಡುಪಿ ಜಿಲ್ಲೆ

           ಕ್ಷಾತ್ರತೇಜರು - ಕವನ
-----------------------------------------------
ಧೀರ ವೀರ ಶೂರರು 
ನಮ್ಮ ನಾಡ ಯೋಧರು
ದೇಶವನ್ನು ಪೊರೆವರು 
ಸ್ವಹಿತವನ್ನು ನೋಡರು
ಗಡಿಯ ಕಾಯುತ್ತಲಿರುವರು 
ಮಂಜಿನಲ್ಲೇ ಬದುಕುವರು
ಅಕ್ಕ ತಂಗಿ ಅಪ್ಪ ಅಮ್ಮ 
ಬಂಧು ಬಳಗ ಕಾಣರು
          ಬೆಟ್ಟ ಗುಡ್ಡ ಕಲ್ಲು ಮುಳ್ಳು 
          ಎಂದೆನ್ನದೇ ಮುನ್ನುಗ್ಗುವರು
          ಚಳಿ ಮಳೆ ಬಿಸಿಲು ಧಗೆಯು 
          ಎನ್ನದೇ ದಿನವಿಡೀ ದುಡಿವರು
          ಪ್ರಾಣವನ್ನೆ ಒತ್ತೆಯಿಟ್ಟ ಕ್ಷಾತ್ರತೇಜರು
          ವೈರಿಪಡೆಯ ಸದೆಬಡಿಯುತ್ತ 
          ನಾಡಿಗಾಗಿ ತಮ್ಮ ಪ್ರಾಣ 
          ಲೆಕ್ಕಿಸದೇ ಮಡಿಯುವರು
ಊಟ ನಿದ್ರೆ ಸ್ನಾನ ಧ್ಯಾನ
ಕಾಣದೇ ಸುಖವ ಮರೆಯುವರು
ನನ್ನ ದೇಶ ನನ್ನ ಜನ ಪ್ರೀತಿ ಕಂಡವರು
ಜನತೆಯೆಲ್ಲ ನೆಮ್ಮದಿಯಿಂದ ಬದುಕಲು 
ಇವರೇ ಕಾರಣಕರ್ತರು
ಅಖಂಡ ದೇಶ ಪ್ರೇಮವನು
ದೇಶಕ್ಕೆಲ್ಲ ಇವರೇ ಸಾರುವರು
          ಅಕಾಲ ಮೃತ್ಯು ಬಂದರೂ
          ಶತ-ಶತಾದಿ ಅಮರ ಹುತಾತ್ಮರು
           ದೇಶ ಸೇವೆ ಈಶ ಸೇವೆ ಎಂದರಿತು
          ತಾಯಿ ರಕ್ಷಣೆಗೆ ಪ್ರಾಣವನ್ನೇ ತೆತ್ತರು 
          ವೈರಿ ಪಡೆಯ ಸೋಲಿಸಿ
          ಸುರಿಸಿ ತಮ್ಮ ನೆತ್ತರು
          ಮತ್ತೆ ಮರಳಿ ಬಾರರಿವರು 
          ನಾವು ಎಷ್ಟೆ ಅತ್ತರು.... 
..................................................ಸಿಂಚನಾ
8ನೇ ತರಗತಿ
ಶ್ರೀಮದ್ ಭುವನೇಂದ್ರ ಪ್ರೌಢಶಾಲೆ 
ಕಾರ್ಕಳ ತಾಲೂಕು ಉಡುಪಿ ಜಿಲ್ಲೆ
****************************************

Ads on article

Advertise in articles 1

advertising articles 2

Advertise under the article