
ಭಾರತ - ಲೇಖನ
Sunday, August 15, 2021
Edit
ಶ್ರಾವ್ಯ ಮಂಚಿ
10 ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಭಾರತ - ಲೇಖನ
-----------------------------
ಭಾರತ ಬ್ರಿಟಿಷರ ಕಪಿಮುಷ್ಟಿಯಿಂದ ಹೊರಬಂದು 74 ವರ್ಷಗಳು ಪೂರೈಸುತ್ತಿದೆ. ಭಾರತ ಈಗ ಸ್ವತಂತ್ರ ಭಾರತ ಎಂದು ಹೆಮ್ಮೆಯಿಂದ ಹೇಳುತ್ತಿದೆ. ಭಾರತದ ಸ್ವಾತಂತ್ರ್ಯದ ಸಂಕೇತವಾದ ತ್ರಿವರ್ಣ ಧ್ವಜ ಆಕಾಶದಂಚಿನಲಿ ಹಾರುತಿದೆ. ಧೈರ್ಯ, ಶಾಂತಿ ಸಮೃದ್ಧಿಯ ಸಂದೇಶವನ್ನು ಬಾನಂಗಳದಲ್ಲಿ ರಾರಾಜಿಸುತ್ತಿದೆ. ಇದಕ್ಕೆಲ್ಲ ಕಾರಣ ಯಾರು ......? ಸ್ವಾತಂತ್ರ್ಯದ ಸುಖ ನೆಮ್ಮದಿ ಜೀವನ ಸಾಗಿಸಲು ಕಾರಣಕರ್ತರಾದವರು ನಮ್ಮ ಹೆಮ್ಮೆಯ ಸ್ವತಂತ್ರ ಹೋರಾಟಗಾರರು, ವೀರ ಮಹನೀಯರು. ಹಿಂದಿನ ಅವರ ಹೋರಾಟದ ಶ್ರಮ ಪರಿಶ್ರಮ ಸ್ಮರಣೀಯ ಮತ್ತು ಪ್ರತಿ ಹೆಜ್ಜೆಯೂ ಕಠಿಣ. ಅನಕ್ಷರಸ್ಥರನ್ನೇ ಹೊಂದಿದ್ದ ಭಾರತ ಒಗ್ಗಟ್ಟನ್ನೇ ಬಲ ಎಂದು ಕಂಡುಕೊಂಡು ನಡೆಸಿದ ಸತ್ಯಾಗ್ರಹ ಹೋರಾಟದ ಫಲ ಇಂದು ಅನುಭವಿಸುತ್ತಿರುವ ಸ್ಸ್ವಾತಂತ್ರ್ಯ. ಮನೆಯಿಂದ ಹೊರಗೆ ಕಾಲಿಡಲು ಭಯಪಡುತ್ತಿದ್ದ ಕಾಲ ದೂರವಾಗಿ ಸ್ವಾತಂತ್ರ್ಯವಾಗಿ ಓಡಾಡುವ ಸ್ಥಿತಿಗತಿ ಈಗ ನಿರ್ಮಾಣವಾಗಿದೆ ಎಂದರೆ ಇದಕ್ಕೆ ಮೂಲಕಾರಣ ಹಿಂದೆ ಇದ್ದ ಪ್ರಬಲ ಯುವಶಕ್ತಿ ಕ್ರಾಂತಿಕಾರಿ ಮನೋಭಾವವುಳ್ಳ ಮನಸ್ಥಿತಿಗಳು ದೇಶಾಭಿಮಾನವಿದ್ದ ವ್ಯಕ್ತಿತ್ವಗಳು.
ಇಂದು ಹಾಗಲ್ಲ ಸ್ವಾತಂತ್ರ್ಯದ ದಿನಾಚರಣೆ ಅಗಸ್ಟ್ 15ರಂದು ಮಾತ್ರ ಸೀಮಿತ ಎಂಬಂತೆ ಭಾಸವಾಗುತ್ತಿದೆ. ಸ್ವಾತಂತ್ರ್ಯ ಇಂದು ಸ್ವೇಚ್ಛಾಚಾರಕ್ಕೆ ತಿರುಗಿದೆ. ಹಿಂದೆ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆದರೆ ಈಗ ಸ್ವಾತಂತ್ರ್ಯದ ಹೆಸರಿನಲ್ಲಿ ನಡೆಯುತ್ತಿರುವ ಸ್ವೇಚ್ಛಾಚಾರದ ವಿರುದ್ಧ ಹೋರಾಟ ನಡೆಸಬೇಕಾದ ಪರಿಸ್ಥಿತಿ ಎದುರಾಗಿದೆ. ಕೆಂಪುಕೋಟೆಯ ಮೇಲೆ ಆಗಸ್ಟ್ 15 ರಂದು ಹಾರಾಡುವ ತ್ರಿವರ್ಣ ಧ್ವಜದ ಬಣ್ಣದ ಅರ್ಥವನ್ನು ಸರಿಯಾಗಿ ಅರ್ಥೈಸುವಲ್ಲಿ ಜನರು ಎಡವುತ್ತಿದ್ದಾರೆ ಎಂದೆನಿಸುತ್ತಿದೆ. ಭಾರತೀಯರು ಭಾರತ ದೇಶದ ಮೇಲೆ ತೋರುವ ಅಭಿಮಾನ ಕೇವಲ ಸಾಂಕೇತಿಕ, ಯಾಂತ್ರಿಕತೆಯಂತೆ ತೋರುತ್ತಿದೆ. ದಿನ - ದಿನ ಉರುಳಿದಂತೆ ಪ್ರಜೆಗಳು ದೇಶದ ಬಗೆಗೆ ತೋರುವ ಅಭಿಮಾನ ಕಡಿಮೆಯಾದಂತೆ ಹಾಗೂ ತಮ್ಮ ಮೂಲಭೂತ ಕರ್ತವ್ಯ ಜವಾಬ್ದಾರಿಗಳನ್ನು ಪಾಲಿಸುವಲ್ಲಿ ಎಡವುತ್ತಿದ್ದಾರೆ ಎಂದೆನಿಸುತ್ತಿದೆ. ಸ್ವತಂತ್ರ ಪೂರ್ವ ಭಾರತದ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ಹಿಂಸೆ ಶೋಷಣೆ ಯಾವುದೂ ಈಗಿನ ಪ್ರಜೆಗಳಿಗೆ ತಿಳಿದಿಲ್ಲ. ಭಾರತ ಹೆಸರಿಗೆ ಮಾತ್ರ ಸ್ವಾತಂತ್ರ ಹೊಂದಿದೆ. ಭಾರತದಲ್ಲಿ ಇನ್ನೂ ಉಳ್ಳವರು ಮತ್ತು ಇಲ್ಲದವರ ನಡುವಿನ ಸಂಘರ್ಷ ನಡೆಯುತ್ತಲೇ ಇದೆ. ಭಾರತ ಬ್ರಿಟಿಷರ ಆಳ್ವಿಕೆಯಿಂದ ಹೊರ ಬಂದಿದೆ ಎನ್ನುವುದು ಹೊರತುಪಡಿಸಿ ಬೇರೇನೂ ಇಲ್ಲ. ಇಂದು ಸ್ವಾತಂತ್ರ್ಯ..... ಉಳ್ಳವರ ಸ್ವತ್ತಾಗಿದೆ. ಈಗಿನ ಜನತೆ ಅಲ್ಪ-ಸ್ವಲ್ಪ ಹಿಂದಿನ ಹೋರಾಟಗಾರರ ಬಗ್ಗೆ ತಿಳಿದುಕೊಂಡಿದೆ ಮತ್ತು ಸ್ಮರಿಸುತ್ತಿದೆ. ಇನ್ನು ಮುಂದೆ ಏನೂ ತಿಳಿಯದು. ಈಗಿನ ಸ್ವತಂತ್ರ ಭಾರತದಲ್ಲಿ ನಡೆಯುತ್ತಿರುವ ರಾಜಕೀಯ ನಾಟಕ ನಮ್ಮ ಸ್ವಾತಂತ್ರ್ಯದ ತತ್ವಗಳನ್ನು ನಾಶಮಾಡುತ್ತಿದೆ. ಅಂದಿನ ಮೌಲ್ಯಗಳನ್ನು ನಾವು ಇಂದು ಉಳಿಸಿ ಬೆಳೆಸಿದರೆ ನಾಳಿನ ದಿನದಲ್ಲಿ ಭಾರತ ಉತ್ತಮ ಭವಿಷ್ಯ ಕಾಣಬಹುದು.
........................................ಶ್ರಾವ್ಯ ಮಂಚಿ
10 ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
***************************************