
ಚುಟುಕುಗಳು
Sunday, August 15, 2021
Edit
ಆದ್ಯಂತ್ ಅಡೂರು
8ನೇ ತರಗತಿ
ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ ಅಡೂರು ಕಾಸರಗೋಡು ಜಿಲ್ಲೆ , ಕೇರಳ ರಾಜ್ಯ
ಚುಟುಕುಗಳು
**********************
ಬಾವುಟ
------------------------------------
ಭವ್ಯ ಭಾರತದ ಸುಂದರ ಬಾವುಟ
ಮೂರು ಬಣ್ಣಗಳು ತುಂಬಿದ ನೋಟ
ಮಧ್ಯದಲ್ಲಿದೆ ಅಶೋಕ ಚಕ್ರವು
ತ್ಯಾಗ,ಶಾಂತಿ,ಸಮೃದ್ಧಿಯ ದ್ಯೋತಕವು
ನೆಹರು
------------------------------------
ಮಕ್ಕಳ ಪ್ರೀತಿಯ ಚಾಚಾ ನೆಹರು
ಸ್ವತಂತ್ರ ಭಾರತಕೆ ಹೋರಾಡಿದರು
ಭಾರತದ ಮೊದಲ ಪ್ರಧಾನಿಯಾದರು
ನಮ್ಮ ದೇಶದ ಸೌಭಾಗ್ಯ ಇವರು
ಕಾರ್ಗಿಲ್
-------------------------------------
ಗೆದ್ದಿತು ಭಾರತ ಕಾರ್ಗಿಲ್ ನಲ್ಲಿ
ನಮ್ಮ ಯೋಧರು ಹೋರಾಡಿದರಲ್ಲಿ
ಸೈನಿಕರೆಲ್ಲರೂ ದೇಶ ಪ್ರೇಮಿಗಳು
ಅವರಿಗೆ ನನ್ನಯ ಪ್ರಣಾಮಗಳು
ಕಲಾಂಗೆ ಸಲಾಂ
----------------------------------------
ವಿಜ್ಞಾನಿ ಎ. ಪಿ. ಜೆ ಅಬ್ದುಲ್ ಕಲಾಂ
ನಿಮಗಿದೋ ಗೌರವದ ಸಲಾಂ
ಭಾರತದ ರಾಷ್ಟ್ರಪತಿ ಆದವರು
ಕ್ಷಿಪಣಿ ತಂತ್ರಜ್ಞಾನದ ಮುಖ್ಯ ಗುರು
ಲಕ್ಷ್ಮೀಬಾಯಿ
--------------------------------------
ಇವಳು ಮಹಿಳಾ ಸೇನಾಧಿಕಾರಿ
ಕುದುರೆಯ ಮೇಲೆ ಮಾಡುವಳು ಸವಾರಿ
ಝಾನ್ಸೀ ರಾಣಿ ಲಕ್ಷ್ಮೀ ಬಾಯಿ
ದೇಶ ಕಂಡ ದಿಟ್ಟ ಸಿಪಾಯಿ
..................................ಆದ್ಯಂತ್ ಅಡೂರು
8ನೇ ತರಗತಿ
ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ ಅಡೂರು ಕಾಸರಗೋಡು ಜಿಲ್ಲೆ ಕೇರಳ ರಾಜ್ಯ
****************************************