-->
ನಾನು ಒಬ್ಬ ಸೈನಿಕ ಸಂಚಿಕೆ - 2

ನಾನು ಒಬ್ಬ ಸೈನಿಕ ಸಂಚಿಕೆ - 2

ಜಗಲಿಯ ಮಕ್ಕಳ 
ಮನದ ಮಾತು
ನಾನು ಒಬ್ಬ ಸೈನಿಕ 
ಸಂಚಿಕೆ - 2


   ನಾನೂ ಒಬ್ಬ ಸೈನಿಕ : ತನ್ಮಯ್ ಕೃಷ್ಣ ನೇರಳಕಟ್ಟೆ
---------------------------------------------------
           ಅವರವರ ಕೆಲಸ ಅವರವರು ಪ್ರಾಮಾಣಿಕವಾಗಿ ಮಾಡುವುದೇ ದೇಶಭಕ್ತಿ ಅಂತಾ ನನ್ನ ತಂದೆ ಆಗಾಗ ಹೇಳುತ್ತಾರೆ. ಅದೇ ರೀತಿ ನಾನೂ ದೇಶಭಕ್ತನಾಗಿ ನನ್ನ ದೇಶದ ಸೇವೆ ಮಾಡಬೇಕು ಎಂದು ನಿರ್ಧರಿಸಿದ್ದೇನೆ. ಮಕ್ಕಳ ಜಗಲಿಯಲ್ಲಿ ಸರ್ ಹೇಳಿದಂತೆ ಸ್ವಚ್ಚತೆಯ ಸೈನಿಕನಾಗಲು ನಿರ್ಧರಿಸಿದ್ದೇನೆ. ಮೊದಲು ನನ್ನ ವೈಯಕ್ತಿಕ ಸ್ವಚ್ಚತೆಗೆ ಗಮನ ನೀಡುತ್ತೇನೆ. ಮನೆಯನ್ನು ಗುಡಿಸಿ, ಒರಸಿ ಸ್ವಚ್ಛವಾಗಿಡುವೆ. ಕಸಗಳನ್ನು ಹಸಿಕಸ ಮತ್ತು ಒಣಕಸವಾಗಿ ವಿಂಗಡಿಸಿ ವಿಲೇವಾರಿ ಮಾಡುವೆ. ಮನೆಯ ಪರಿಸರದಲ್ಲಿ ಕಸಕಡ್ಡಿಗಳನ್ನು ಹೆಕ್ಕಿ ಸ್ವಚ್ಛ ಮಾಡುವೆ. ಗುಜರಿ ಸಾಮಾಗ್ರಿಗಳನ್ನು ಬಿಸಾಡದೆ ಗುಜರಿ ಅಂಗಡಿಗೆ ಕೊಡುತ್ತೇನೆ. ನಮ್ಮೂರಿನ 2 ಸಂಘ ಸಂಸ್ಥೆಗಳು ಆಗಾಗ ನಡೆಸುವ ಸ್ವಚ್ಚತಾ ಕೆಲಸದಲ್ಲಿದಲ್ಲಿ ಭಾಗವಹಿಸಿ ನನ್ನ ಕೈಲಾದ ಕೆಲಸ ಮಾಡುವೆ. ನನ್ನ ತಮ್ಮಮತ್ತು ಗೆಳೆಯರಿಗೂ ಸ್ವಚ್ಛತೆಯ ಸೈನಿಕನಾಗಲು ಹೇಳುತ್ತೇನೆ. ಹಸಿರು ಯೋಧನಾಗಿ ಪರಿಸರದ ಮೇಲೆ ಪ್ರೀತಿ ಮಾಡಿದೆ. ಅದೇ ರೀತಿ ಸ್ವಚ್ಛತೆಯ ಮೇಲೂ ಪ್ರೀತಿ ಬರಲಿ... ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು
.............................ತನ್ಮಯ್ ಕೃಷ್ಣ ನೇರಳಕಟ್ಟೆ
9 ನೇ ತರಗತಿ
ವಿ.ಕ. ಮಾ. ಶಾಲೆ ಪುತ್ತೂರು
ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************



        ನಾನೂ ಒಬ್ಬ ಸೈನಿಕ : ಧೃತಿ ಚೆಂಬಾರ್ಪು 
--------------------------------------------------
               ನಮ್ಮ ಸೈನಿಕರು ಹೇಗೆ ಭಾರತದ ಗಡಿಗಳನ್ನು ಕಾಯುತ್ತಾರೋ, ಅದೇ ರೀತಿ ನಾವು ನಮ್ಮ ನೆಲ, ಜಲ ಮತ್ತು ಪರಿಸರವನ್ನು ನೋಡಿಕೊಳ್ಳಬೇಕು. ವಾಹನಗಳ ಹೊಗೆಯಿಂದ ಗಾಳಿಯು ಮಲಿನವಾಗುತ್ತದೆ. ಇದಕ್ಕಾಗಿ ಅನಗತ್ಯವಾಗಿ ವಾಹನ ಹಾಗೂ ಯಂತ್ರಗಳ ಬಳಿಕೆಯನ್ನು ನಿಲ್ಲಿಸಬೇಕು. ಹೀಗೆ ಗಾಳಿಯ ಮಾಲಿನ್ಯವನ್ನು ಕಡಿಮೆ ಮಾಡಬಹುದು. ಆಹಾರವನ್ನು ಬಟ್ಟಲಿನಲ್ಲಿ ಬಿಡುವುದರಿಂದ ಆಹಾರವು ಪೋಲಾಗುತ್ತದೆ. ಈ ಜಗತ್ತಿನಲ್ಲಿ ಬಹಳಷ್ಟು ಬಡವರಿಗೆ ಆಹಾರವೇ ಸಿಗುವುದಿಲ್ಲ. ನಮಗೆ ಆಹಾರ ಸಿಗುತ್ತದೆ ಎಂದು ಖುಷಿ ಪಟ್ಟು ನಮಗೆ ಬೇಕಾದಷ್ಟೇ ಆಹಾರವನ್ನು ತೆಗೆದುಕೊಳ್ಳಬೇಕು. ಪ್ಲಾಸ್ಟಿಕ್ ಚೀಲಗಳನ್ನು ಆಚೆ ಈಚೆ ಎಸೆಯುವುದರಿಂದ ಕಸ ಹೆಚ್ಚಾಗಿ ಗಿಡ-ಮರಗಳ ಬೆಳವಣಿಗೆಗೆ ತೊಂದರೆಯಾಗುತ್ತದೆ. ಇದರಿಂದ ಕೃಷಿ ಮಾಡಲು ಕಷ್ಟವಾಗುತ್ತದೆ. ಪ್ಲಾಸ್ಟಿಕ್ ಚೀಲ ಬಳಸುವುದರನ್ನು ಕಡಿಮೆ ಮಾಡಬೇಕು. ಇದರಿಂದ ಗಿಡ-ಮರಗಳು ಚೆನ್ನಾಗಿ ಬೆಳೆಯಬಹುದು. ನಮಗೆ ಸಾದ್ಯವಾದಷ್ಟು ಗಿಡ-ಮರಗಳನ್ನು ನೆಟ್ಟು ಬೆಳೆಸಬೇಕು. ಇದರಿಂದ ಗಾಳಿಯು ಶುಧ್ಧವಾಗುತ್ತದೆ ಹಾಗೂ ಪ್ರಾಣಿ-ಪಕ್ಷಿಗಳಿಗೆ ಆಸರೆಯಾಗುತ್ತದೆ. ಈ ರೀತಿ ನಾವು ಪರಿಸರದ ಸೈನಿಕರಾಗಬಹುದು.
............................................ಧೃತಿ ಚೆಂಬಾರ್ಪು 
3 ನೇ ತರಗತಿ 
ದೇವ್ - ಇನ್ ನ್ಯಾಷನಲ್ ಸ್ಕೂಲ್ 
ಸಹಕಾರ ನಗರ , ಬೆಂಗಳೂರು
*************************************


        ನಾನೂ ಒಬ್ಬ ಸೈನಿಕ - ಶುಭಿಕ್ಷ
---------------------------------------------------
                 "ಮನೆಗೊಂದು ಮರ ಊರಿಗೊಂದು ವನ" ಇತ್ತೀಚಿನ ದಿನಗಳಲ್ಲಿ ಮಾನವನು ಮತ್ತು ಪ್ರಕೃತಿ ನಡುವೆ ಇರುವ ಗಾಢವಾದ ಸರಪಳಿಗಳು ಕಳಚುತ್ತಿದೆ. ಮನುಷ್ಯ ಹುಟ್ಟಿನಿಂದ ಬದುಕಿ- ಸಾಯುವವರೆಗೂ ಪ್ರಕೃತಿಯ ಮಡಿಲು ಅನಿವಾರ್ಯ. ಇತ್ತೀಚೆಗೆ ಪರಿಸರ ಮಾಲಿನ್ಯವೂ ಹೆಚ್ಚಾಗಿದೆ. ಆದ್ದರಿಂದ ಪರಿಸರವನ್ನು ಮಾಲಿನ್ಯದಿಂದ ಸೈನಿಕರಂತೆ ಕಾಯುವ ಜವಾಬ್ದಾರಿ ನನ್ನದಾಗಿದೆ. ಪರಿಸರ ರಕ್ಷಣೆಗಾಗಿ ನಾನು ಪುನರ್ ಬಳಕೆಯಂತಹ ವಸ್ತುಗಳನ್ನು ಮರುಬಳಕೆ ಮಾಡುತ್ತೇನೆ. ದಿನದ ಜೀವನದಲ್ಲಿ ತುಂಬಾ ಸುಲಭವಾಗಿ ಮಣ್ಣಾಗಿ ಹೋಗುವ ಪರಿಸರ ಸ್ನೇಹಿ ಉತ್ಪನ್ನಗಳನ್ನು ಬಳಸುತ್ತೇನೆ. ಮಾಲಿನ್ಯಕಾರಕಗಳನ್ನು ಹುಟ್ಟು ಹಾಕುವ ಚಟುವಟಿಕೆಗಳನ್ನು ಕಡಿಮೆ ಮಾಡುತ್ತೇನೆ. ಜಲಮೂಲಗಳ ಮಾಲಿನ್ಯ ತಡೆಗಟ್ಟುವಲ್ಲಿ ನಾನು ಪ್ರಯತ್ನಿಸುತ್ತೇನೆ. ನಮ್ಮ ಸ್ಥಳೀಯ ಯೋಜನೆಗಳ ಬಗ್ಗೆ ಜಾಗೃತರಾಗಿ, ಅಗತ್ಯ ಬಿದ್ದರೆ ಕೈ ಜೋಡಿಸಿ ಪರಿಸರ ಸಂರಕ್ಷಣೆಗಾಗಿ ಹೋರಾಡುತ್ತೇನೆ.
 .................................................ಶುಭಿಕ್ಷ 
 9ನೇ ತರಗತಿ 
ಸರಕಾರಿ ಪ್ರೌಢಶಾಲೆ ಕೊಡ್ಮಣ್ಣು 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ. 
****************************************


       ನಾನು ಒಬ್ಬ ಸೈನಿಕ : ವೈಷ್ಣವಿ ಕಾಮತ್
---------------------------------------------
         ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ,
 ಪಂಜಾಬ್ ನಿಂದ ಮಣಿಪುರದ ವರೆಗೆ ಹಬ್ಬಿದ ನಮ್ಮ ರಾಷ್ಟ್ರದಲ್ಲಿ ಹುಟ್ಟಿದ ನಾನು ತುಂಬಾ ಪುಣ್ಯವಂತೆ. ನಮ್ಮ ದೇಶದ ಗಡಿಗಳಲ್ಲಿ ಕಾಯುತ್ತಿರುವ ಸೈನಿಕರಿಂದ ನಾವಿಂದು ಉತ್ತಮ ಜೀವನ ನಡೆಸುತ್ತಿದ್ದೇವೆ. ಸೈನಿಕರು ಹೇಗೆ ದೇಶವನ್ನು ಕಾಯುತ್ತಾರೆ ಹಾಗೆಯೇ ನಾವಿಂದು ನಮ್ಮ ನೆಲ, ಜಲ ಮತ್ತು ಪರಿಸರವನ್ನು ಕಾಪಾಡಬೇಕಾಗಿದೆ. ಇತ್ತೀಚಿನ ದಿನಗಳಲ್ಲಿ ನೆಲ, ಜಲ ಪರಿಸರದ ಸ್ಥಿತಿಯನ್ನು ನೋಡಿದಾಗ 
ಮರುಕ ಉಂಟಾಗುತ್ತದೆ. ಬುದ್ಧಿಶಕ್ತಿ ಇರುವವರು ನಮ್ಮ ಈ ಪರಿಸರಕ್ಕೆ ಕೆಡುಕುಂಟು ಮಾಡುತ್ತಿದ್ದಾರೆ. ಅದಕ್ಕೋಸ್ಕರ ಇರಬಹುದೋ... ಒಮ್ಮೊಮ್ಮೆ ನಮ್ಮ ಪ್ರಕೃತಿ ಮುನಿಸಿಕೊಳ್ಳುತ್ತಾಳೆ. ನಿಜವಾದ ರೂಪವನ್ನು ತೋರಿಸಿಬಿಡುತ್ತಾಳೆ. ನಾನೊಬ್ಬ ಸೈನಿಕಳಾಗಿ ಯೋಚಿಸುತ್ತಿದ್ದೇನೆ. ಈ ನೆಲ, ಜಲ ಮತ್ತು ಪರಿಸರವನ್ನು ನನ್ನಿಂದಾದಷ್ಟು ಮಟ್ಟಿಗೆ ಕಾಪಾಡಿಕೊಳ್ಳಲು ಮನಃಪೂರ್ವಕವಾಗಿ ಪ್ರಯತ್ನಿಸುತ್ತೇನೆ. ಇಂದಿನ ದಿನಗಳಲ್ಲಿ ಮಲಿನಗೊಳ್ಳುತ್ತಿರುವ ನೆಲ, ಜಲ ಮತ್ತು ಪರಿಸರವನ್ನು ಚೆನ್ನಾಗಿಟ್ಟುಕೊಳ್ಳಲು,ಜಾಗೃತಿ ಮೂಡಿಸಲು ಪ್ರಯತ್ನಿಸುತ್ತೇನೆ. ನಾನು ಬದುಕಬೇಕು, ಸಕಲ ಜೀವಿಗಳು ಬದುಕಬೇಕು ಎಂಬ ನಿಟ್ಟಿನಲ್ಲಿ ಕಾರ್ಯಪ್ರವೃತ್ತಳಾಗುತ್ತೇನೆ. ಒಬ್ಬ ಸೈನಿಕಳಾಗಿ ನನ್ನ ಅಳಿಲು ಸೇವೆಯನ್ನು ಮಾಡಲು ಬದ್ಧಳಾಗಿರುತ್ತೇನೆ.          ........................................ವೈಷ್ಣವಿ ಕಾಮತ್
5ನೇ ತರಗತಿ
ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕ. 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ.
**************************************
             

           ನಾನು ಒಬ್ಬ ಸೈನಿಕ : ನಂದನ್ 
-------------------------------------------------
              ಮಗುಬಿದ್ದಾಗ ಅಮ್ಮ ಓಡೋಡಿ ಬರುವಂತೆ ನಮ್ಮ ದೇಶದ ಸೈನಿಕರು ಭಾರತಾಂಬೆಯ ರಕ್ಷಣೆಗೆ ಸದಾ ಸಿದ್ಧ. ಗಾಳಿ, ಮಳೆ, ಬಿಸಿಲಿನಲ್ಲಿ ತಮ್ಮ ಪ್ರಾಣವೆಂಬ ಜ್ಯೋತಿಯನ್ನು ಪಣಕಿಟ್ಟು ಭಾರತಮಾತೆಯ ಸೇವೆಗೆ ಸದಾ ಸಿದ್ದರಿದ್ದಾರೆ ನಮ್ಮ ಯೋಧರು. ಭಾರತಾಂಬೆಗೆ ಮೊದಲ ಆದ್ಯತೆ ನೀಡಿ ತನ್ನ ಕುಟುಂಬಕ್ಕೆ ನಂತರದ ಸ್ಥಾನ ಕೊಡುವವರಿದ್ದರೆ ಅದು ಸೈನಿಕರು ಮಾತ್ರ. ಎಲ್ಲರೂ ಸ್ವಾರ್ಥಕ್ಕಾಗಿ ಬದುಕಿದ್ದರೆ ಸೈನಿಕರು ನಿಸ್ವಾರ್ಥ ಸೇವೆ ಗೈಯುತ್ತಿದ್ದಾರೆ. ಇಂತಹ ಸೈನಿಕ ನಾನಾಗಬೇಕು. ದೇಶದ ಅಭಿವೃದ್ಧಿ ಮತ್ತು ರಕ್ಷಣೆಗೆ ನಾನು ಸಿಧ್ಧನಾಗಿರುತ್ತೇನೆ. ದೇಶದಲ್ಲಿ ಎದುರಾಗಿರುವ ಅಭದ್ರತೆಯನ್ನು ತೊಲಗಿಸುತ್ತೇನೆ. ದೇಶದ ಎಲ್ಲೇ ಅಪಾಯ ಎದುರಾದರೂ ಎದೆಗುಂದದೇ ಭಾರತಮಾತೆಯ ಸೇವೆ ಮಾಡುತ್ತೇನೆ. ಭಯೋತ್ಪಾದನೆ ನಿರ್ಮೂಲನ ಮಾಡಲು ಪಣತೊಡುತ್ತೇನೆ. ಭಾರತೀಯರೆಲ್ಲರನ್ನು ನನ್ನ ರಕ್ತಸಂಬಂಧದಂತೆ ಪ್ರೀತಿಸುತ್ತೇನೆ. ಮಾತೆಗೆ ನನ್ನ ಎದೆಯಲ್ಲಿ ಮೊದಲ ಸ್ಥಾನ ನೀಡಿ ನಂತರ ನನ್ನ ಮನೆಯವರಿಗೆ ನೀಡುತ್ತೇನೆ. ಭಾರತ ಮಾತೆಗೆ ಜಯವಾಗಲಿ.
 ...................................................ನಂದನ್ 
7ನೇ ತರಗತಿ 
ಶ್ರೀದೇವಿ ಹಿರಿಯ ಪ್ರಾಥಮಿಕ ಶಾಲೆ 
ದೇವಿನಗರ ಪುಣಚ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
****************************************


      ನಾನೂ ಒಬ್ಬ ಸೈನಿಕ : ಎ. ಸ್ವಸ್ತಿಕ್ ಪ್ರಭು 
------------------------------------------------
         "ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರಿಯಸಿ " ಅರ್ಥಾತ್ ತಾಯಿ ಮತ್ತು ತಾಯಿ ನಾಡು ಸ್ವರ್ಗಕಿಂತಲೂ ಮಿಗಿಲಾದದ್ದು ಎಂದರ್ಥ. ಆದರೆ ಇತ್ತೀಚೆಗೆ ಕೆಲವು ದೇಶದ್ರೋಹಿ ಚಟುವಟಿಕೆಯಲ್ಲಿ ತೊಡಗಿರುವ ವ್ಯಕ್ತಿಗಳಿಗೆ ದೇಶ ಪ್ರೇಮ ದೇಶ ಭಕ್ತಿ ಎನ್ನುವುದೇ ಮರೆಮಾಚಿದೆ. ಆದರೆ ನಾನು ಸೈನಿಕನಾಗಿ ದೇಶದ ಗಡಿ ಕಾಯುವ ಕೆಲಸವನ್ನು ಶ್ರದ್ಧೆಯಿಂದ ಮಾಡುವೆ. ನಾನು ತನ್ನ ಊರು, ಕುಟುಂಬ ನಾಡನ್ನು ಬಿಟ್ಟು ತನಗೆ ಅರಿವಿಲ್ಲದ ಪ್ರದೇಶದಲ್ಲಿ, ಗಡಿಯಲ್ಲಿ ದೇಶದ ರಕ್ಷಣೆಯ ಹೊಣೆಯನ್ನು ಹೊತ್ತುಕೊಳ್ಳುತ್ತೇನೆ. ನಿಜವಾಗಲೂ ಒಬ್ಬ ಸೈನಿಕನ ಕಾಯಕ ಶ್ರೇಷ್ಠ ಅದಕ್ಕೆ ಯಾರಿಂದಲೂ ಬೆಲೆ ಕಟ್ಟಲಾಗದು. ದೇಶದ ಪ್ರಜೆಗಳು ನೆಮ್ಮದಿಯಿಂದ ಬದುಕುತ್ತಿರುವ ಹಿಂದೆ ಸೈನಿಕರ ಶ್ರಮವಿದೆ. ನಾನು ಗಡಿಯಲ್ಲಿ ಚಳಿ ಮಳೆ ಗಾಳಿ ಬಿಸಿಲು ಲೆಕ್ಕಿಸದೆ ದೇಶ ಕಾಯುತ್ತಾ ಜನರಿಗೆ ರಕ್ಷಣೆ ನೀಡುವೆ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡುವೆ. ನಮ್ಮ ದೇಶದಲ್ಲಿ ಶಾಂತಿ ಸೌಹಾರ್ದತೆಯಿಂದ ಇರುವಂತೆ ನೋಡಿಕೊಳ್ಳುತ್ತೇನೆ. ಹೊಸ ಹೊಸ ತಂತ್ರಜ್ಞಾನದಿಂದ ಶತ್ರುಗಳನ್ನು ಸುಲಭ ರೀತಿಯಲ್ಲಿ ಸೋಲಿಸುವಂತೆ ಯುದ್ಧ ನೀತಿಯನ್ನು ಸಿದ್ಧ ಪಡಿಸುವಲ್ಲಿ ಶತ ಶತ ಪ್ರಯತ್ನ ಮಾಡುತ್ತೇನೆ. ಜೊತೆಗೆ ನಮ್ಮ ಪ್ರಾಣ ರಕ್ಷಣೆ ಮಾಡುವುದರೊಂದಿಗೆ ಜಗತ್ತಿನ ಎಲ್ಲಾ ದೇಶಗಳಿಂದ ಮಿಗಿಲಾದ ರಕ್ಷಣಾವ್ಯವಸ್ಥೆ ನಮ್ಮಲ್ಲಿರುವಂತೆ ಮಾಡಿ, ಆಶ್ಚರ್ಯ ಪಡುವ ರೀತಿಯಲ್ಲಿ ನಮ್ಮ ದೇಶದ ರಕ್ಷಣಾವ್ಯೂಹ ರಚನೆಯಲ್ಲಿ ನಾನು ಪ್ರಮುಖ ಪಾತ್ರ ವಹಿಸುತ್ತೇನೆ. ಶತ್ರುಗಳ ವಿರುದ್ಧ ಹೋರಾಟ ಮಾಡಿ ವೀರ ಮರಣ ಅಪ್ಪಿದ ನಮ್ಮ ಸೈನಿಕರ ಸ್ವಾತಂತ್ರ್ಯ ಹೋರಾಟಗಾರರ ಬಲಿದಾನ ವ್ಯರ್ಥವಾಗದಂತೆ ಮಾಡುತ್ತೇನೆ. 
 ............................................ಎ. ಸ್ವಸ್ತಿಕ್ ಪ್ರಭು 
7 ನೇ ತರಗತಿ 
ಶ್ರೀದೇವಿ ಹಿರಿಯ ಪ್ರಾಥಮಿಕ ಶಾಲೆ 
ದೇವಿನಗರ ಪುಣಚ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
****************************************


         ನಾನೂ ಒಬ್ಬಳು ಸೈನಿಕ : ಪೃಥ್ವಿ
----------------------------------------------------
          ಪರಿಸರವನ್ನು ಕಾಪಾಡುವುದು ನಮೆಲ್ಲರ ಹೊಣೆ. ಪ್ರಮುಖವಾಗಿ ನಾವು ಪ್ಲಾಸ್ಟಿಕ್ ಬಳಕೆಯನ್ನು ನಿಯಂತ್ರಿಸಬೇಕು. ಕೆಲವು ಅನಿವಾರ್ಯ ಸಂದರ್ಭಗಳಲ್ಲಿ ಪ್ಲಾಸಿಕ್ ಬಳಕೆ ಮಾಡಿದರೂ, ಬಳಸಿದ ನಂತರ ಅದನ್ನು ನೀರಿನಲ್ಲಿ ಎಸೆಯುದು - ಸುಡುವುದು ಮಾಡದೆ ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡಬೇಕು. ಸಾಲುಮರದ ತಿಮ್ಮಕ್ಕನವರನ್ನು ಮಾದರಿಯಾಗಿ ತೆಗೆದುಕೊಂಡು ಗಿಡಗಳನ್ನು ನೆಡಬೇಕು. ಅವರಷ್ಟು ಗಿಡಗಳನ್ನು ನೆಡಲು ಸಾಧ್ಯವಿಲ್ಲದಿದ್ದರೂ ನನ್ನಿಂದ ಆದಷ್ಟು ಗಿಡಗಳನ್ನು ನೆಡಬೇಕೆಂದು ಆಸೆಯಿದೆ. ನಾವು ಎಲ್ಲರೂ ನಮ್ಮ ನಮ್ಮ ಮನೆಯ ಸುತ್ತ ಮುತ್ತ ಸ್ವಚ್ಛಗೊಳಿಸಿದ್ದಲ್ಲಿ ಇಡೀ ಗ್ರಾಮ, ತಾಲ್ಲೂಕು, ಜೆಲ್ಲೆ, ರಾಜ್ಯ, ದೇಶವೇ ಸ್ವಚ್ಛವಾಗುತ್ತದೆ. ಸ್ವಚ್ಛ ಪರಿಸರವು ನಮಗೆ ಅನಿವಾರ್ಯ ಅದನ್ನು ನಾವು ಮುಂದಿನ ಜನಾಂಗಕ್ಕಾಗಿ ಸಂರಕ್ಷಣೆ ಮಾಡಬೇಕು. ಪ್ಲಾಸಿಕ್ ಚೀಲದ ಬದಲು ಬಟ್ಟೆ ಚೀಲವನ್ನು ಬಳಸುತ್ತೇನೆ. ಈ ಮೂಲಕ ನಾನು ಸೈನಿಕನಾಗಿ ಪರಿಸರವನ್ನು ಸಂರಕ್ಷಣೆ ಮಾಡಲು ಸಂಕಲ್ಪ ಮಾಡುತ್ತೇನೆ.
..................................................ಪೃಥ್ವಿ
9 ನೇ ತರಗತಿ
ಸರಕಾರಿ ಪ್ರೌಢ ಶಾಲೆ ಕೊಡ್ಮಾಣ್
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ 
*******************************************



     ಸೈನಿಕರೇ ನಮ್ಮ ಹೆಮ್ಮೆ...ಸ್ಫೂರ್ತಿ.ಯಂ
---------------------------------------------
      ನಾವೆಲ್ಲಾ ದೇಶದ ಒಳಿತಿಗಾಗಿ ನಿಸ್ವಾರ್ಥವಾಗಿ ಕೆಲಸಮಾಡಬೇಕು. ರಾಷ್ಟ್ರದಾದ್ಯಂತ ಶಾಂತಿ ಮತ್ತು ಸಾಮರಸ್ಯವನ್ನು ಕಾಪಾಡಿಕೊಳ್ಳಬೇಕು.  ಇದಲ್ಲದೆ, ಯಾವಾಗಲೂ ತುರ್ತು ಸಂದರ್ಭಗಳಲ್ಲಿ ಎಲ್ಲರಿಗೂ ಸಹಾಯ ಮಾಡಬೇಕು. ಗಡಿಯಲ್ಲಿ ಕಾಯುವ ಒಬ್ಬ ಸೈನಿಕ ತನ್ನ ಜೀವನದಲ್ಲಿ ಸಾಕಷ್ಟುಸವಾಲುಗಳನ್ನು ಎದುರಿಸಬೇಕಾಗುತ್ತದೆ.  ತಮ್ಮ ಕುಟುಂಬದಿಂದ ಹೆಚ್ಚಿನ ಸಮಯವನ್ನು ಅವರಿಂದ ದೂರ ಕಳೆಯುತ್ತಾರೆ. ಅವರೇ ನನಗೆ ಸ್ಫೂರ್ತಿ. ನಾನೂ ಸೈನಿಕನಾಗುತ್ತೇನೆ. ಗಡಿ ಕಾಯುವವಳಾಗಿ ಅಲ್ಲ ದೇಶ ಕಾಯುವವಳಾಗಿ.  ನಮ್ಮ ದೇಶದ ಸೈನಿಕರೇ ನಮ್ಮ ಹೆಮ್ಮೆ...
........................................... ಸ್ಫೂರ್ತಿ.ಯಂ
9ನೇ ತರಗತಿ
ಶಾರದಾ ಗಣಪತಿ ವಿದ್ಯಾಕೇಂದ್ರ 
ಪುಣ್ಯಕೋಟಿ ನಗರ ಕೈರಂಗಳ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.
****************************************** 



Ads on article

Advertise in articles 1

advertising articles 2

Advertise under the article