
ಅಮ್ಮ - ಕವನ
Sunday, August 22, 2021
Edit
ರಕ್ಷಿತ 9 ನೇ ತರಗತಿ
ಸರಕಾರಿ ಫ್ರೌಢಶಾಲೆ ಮಾಣಿಲ ಮುರುವ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಅಮ್ಮ - ಕವನ
------------------------------
ಅಮ್ಮ ಎಂದರೆ ನನಗಿಷ್ಟ
ನಾನೆಂದರೆ ಅಮ್ಮನಿಗಿಷ್ಟ
ಅಮ್ಮನ ಮೆಚ್ಚುಗೆ ಪಡೆದರೆ
ದೇವರ ಮೆಚ್ಚುಗೆ ಪಡೆದ ಹಾಗೆ
ಅಮ್ಮ ತನ್ನ ಮಕ್ಕಳನ್ನು
ಪ್ರೀತಿಯಿಂದ ಸಲಹುವಳು
ಮಕ್ಕಳು ದೊಡ್ಡವರಾದ ಮೇಲೆ
ಅಮ್ಮನನ್ನೇ ದ್ವೇಷಿಸುವರು
ಅಮ್ಮನನ್ನೇ ಪ್ರೀತಿಸದಿದ್ದರೆ
ನಾವು ಬದುಕಿ ಏನು ಫಲ
ನಾವು ಈ ಭೂಮಿಗೆ ಬರಲು
ಅವಳೇ ತಾನೇ ಮುಖ್ಯಳು
ನಮ್ಮ ಇಷ್ಟ ಪೂರೈಸಲು
ಅವಳ ಇಷ್ಟ ಕಡೆಗಣಿಸುವಳು
ನಾವು ವಿದ್ಯವಂತರಾಗಲು
ಅವಳು ಬಹಳ ಕಷ್ಟ ಪಡುವಳು
ಅಮ್ಮನ ಪ್ರೀತಿಯನ್ನು
ಯಾರೋ ಕೊಡಲು ಸಾಧ್ಯವಿಲ್ಲ
ಅಮ್ಮನ ಆಸೆ ಪೂರೈಸೋಣ
ದೇವರ ಮೆಚ್ಚುಗೆ ಪಡೆಯೋಣ
ಅಮ್ಮನ ಆಶೀರ್ವಾದ ಇಲ್ಲದಿದ್ದರೆ
ಯಾವ ಕೆಲಸವೂ ಸಾಧ್ಯವಿಲ್ಲ
ಅಮ್ಮನ ಆಶೀರ್ವಾದ ಇದ್ದರೆ
ಯಾವ ಕೆಲಸವೂ ಅಸಾಧ್ಯವಲ್ಲ ..!
................................ರಕ್ಷಿತ 9 ನೇ ತರಗತಿ
ಸರಕಾರಿ ಫ್ರೌಢಶಾಲೆ ಮಾಣಿಲ ಮುರುವ ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************