-->
ಅಕ್ಕನ ಪತ್ರ -4ಕ್ಕೆ ಜಗಲಿಯ ಮಕ್ಕಳ ಉತ್ತರ. ಸಂಚಿಕೆ - 3

ಅಕ್ಕನ ಪತ್ರ -4ಕ್ಕೆ ಜಗಲಿಯ ಮಕ್ಕಳ ಉತ್ತರ. ಸಂಚಿಕೆ - 3

ಅಕ್ಕನ ಪತ್ರ - 4ಕ್ಕೆ
ಜಗಲಿಯ ಮಕ್ಕಳ ಉತ್ತರ
ಸಂಚಿಕೆ - 3.


ಅಕ್ಕನ ಪತ್ರ : 4
ಪ್ರೀತಿಯ ಅಕ್ಕನಿಗೆ ನನ್ನ ನಮನಗಳು.
ನನ್ನ ಹೆಸರು ಪೂರ್ತಿ. ನಾನು 8ನೇ ತರಗತಿಯಲ್ಲಿ ಓದುತ್ತಿದ್ದೇನೆ. ಅಕ್ಕ...... ನಿಮ್ಮ ಪತ್ರವನ್ನು ಮನೆಯಲ್ಲಿ ನಾನು, ಅಕ್ಕ ಇಬ್ಬರು ಓದಿದೆವು. ನನಗೆ ನಿಮ್ಮ ಪ್ರತಿಯೊಂದು ಪತ್ರಗಳು ಇಷ್ಟ. ನೀವು ಒಳ್ಳೆ - ಒಳ್ಳೆ ಸಂದೇಶಗಳ ಪತ್ರಗಳನ್ನು ಹಾಕುತ್ತಿರುವುದು  ನಮಗೆ ತುಂಬಾ ಸಂತೋಷ ವಾಗುತ್ತದೆ. ನೀವು ಪತ್ರದಲ್ಲಿ ನಾವು ಎಲ್ಲರಿಗೂ ಗೌರವ ಕೊಡಬೇಕು. ನಾವು ಪ್ರತಿಯೊಬ್ಬರನ್ನೂ ಒಂದೇ ಸಮಾನ ನೋಡಬೇಕು. ನಾವು ಯಾರೊಂದಿಗೂ ಜಗಳವಾಡಬಾರದು, ಮಾತು ಬಿಡಬಾರದು, ತಪ್ಪು ಮಾಡಿದಾಗ  ಕ್ಷಮಿಸುವ ಗುಣ ನಮ್ಮಲ್ಲಿರಬೇಕು,  ನಾವು ಪ್ರತಿದಿನ ವಿವಿಧ ಪುಸ್ತಕಗಳು, ನೀತಿ ಕಥೆಗಳನ್ನು ಓದಬೇಕು ಹಾಗೂ ದಿನನಿತ್ಯ  ಪತ್ರಿಕೆ ಗಳನ್ನೂ ಓದಿ ಅದರಲ್ಲಿನ ವಿಷಯಗಳನ್ನು ತಿಳಿದುಕೊಳ್ಳಬೇಕೆಂದು  ಹೇಳಿದ್ದೀರಿ. ಇಂತಹ ಒಳ್ಳೆಯ ಪತ್ರ  ನನಗಂತೂ  ತುಂಬಾ ಇಷ್ಟ ಆಯಿತು ಎಂದು ಹೇಳುತ್ತ ಅಕ್ಕನ ಪತ್ರಕ್ಕೆ ನನ್ನ ಉತ್ತವನ್ನು ಮುಗಿಸುತ್ತಿದ್ದೇನೆ. 
ಧನ್ಯವಾದಗಳು ಅಕ್ಕ......
.....................................................ಪೂರ್ತಿ
 8 ನೇ ತರಗತಿ 
ಸರಕಾರಿ ಪ್ರೌಢ ಶಾಲೆ ನಾರಾವಿ  
ಬೆಳ್ತಂಗಡಿ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
****************************************


ಪ್ರೀತಿಯ ಅಕ್ಕನಿಗೆ ......
ಅಕ್ಷರ ಮಾಡುವ  ಮನದಾಳದ ಪ್ರಣಾಮಗಳು.  ಅಕ್ಕ ತಮ್ಮ ನಾಲ್ಕನೇ ಓಲೆ ಓದಿ ತುಂಬಾ ಸಂತೋಷಗೊಂಡೆನು. ಪ್ರಾಪಂಚಿಕ ಜ್ಞಾನವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಲು ತಮ್ಮ ಪತ್ರ ನನಗೆ ಪ್ರೇರಣೆ ನೀಡಿದೆ. ಪತ್ರ ಬರೆಯುವ ಕೌಶಲ್ಯವನ್ನು ಬೆಳೆಸಲು ಪ್ರೇರಣೆ ನೀಡಿದ ನನ್ನ ಗುರು ಸಮಾನರಾದ ತಮಗೆ ನಾನು ಅಭಾರಿ. ನನ್ನ ಜ್ಞಾನ ತೃಷೆ ನೀಗಿಸಲು ಇನ್ನಷ್ಟು ತಮ್ಮ ಜ್ಞಾನಧಾರೆ ಹರಿದುಬರಲಿ ಅಕ್ಕ......
ಇತಿ ನಿಮ್ಮ ಪ್ರೀತಿಯ ತಂಗಿ........
.......................................ಅಕ್ಷರ ಎ. ಎನ್. 
9ನೇ ತರಗತಿ 
ಸೈಂಟ್ ಪೀಟರ್ ಕ್ಲೇವರ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಅಳದಂಗಡಿ ಬಡಗ ಕಾರಂದೂರು ಬೆಳ್ತಂಗಡಿ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
***************************************



ಪ್ರೀತಿಯ ಅಕ್ಕನಿಗೆ........... ಸೃಷ್ಟಿಯ ವಂದನೆಗಳು. 
ನಿಮ್ಮ ಪತ್ರ ಓದಿ ತುಂಬಾ ಸಂತೋಷವಾಯಿತು.  ಬಾರ್ಶಿಮ್ ನ  ಒಳ್ಳೆಯ ಗುಣ ನನಗೆ ತುಂಬಾ ಖುಷಿ ಕೊಟ್ಟಿತು.  ಅಂತಹ ಸಂದರ್ಭದಲ್ಲಿ ಅವನು ತೆಗೆದುಕೊಂಡ ನಿರ್ಧಾರದಿಂದ ಇಡೀ ಜಗತ್ತೇ ಅವನನ್ನು ಮೆಚ್ಚುವಂತಾಯಿತು . ನಾವು ಕೂಡ ಇಂತಹ ಒಳ್ಳೆಯ ಗುಣಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಇತರರಿಗೆ ಮಾದರಿಯಾಗೋಣ.  ಇಂತಹ ಅದ್ಭುತ ಕ್ರೀಡಾಪಟುವನ್ನು ಮಕ್ಕಳ ಜಗಲಿಯಲ್ಲಿ ಪರಿಚಯಿಸಿದ್ದಕ್ಕಾಗಿ ಅಕ್ಕನಿಗೆ ತುಂಬು ಹೃದಯದ ಧನ್ಯವಾದಗಳು.
  .................................................... ಸೃಷ್ಟಿ   
4ನೇ ತರಗತಿ
ಹೋಲಿ ರೆಡಿಮರ್ ಇಂಗ್ಲೀಷ್ ಮೀಡಿಯಂ ಶಾಲೆ
ಬೆಳ್ತಂಗಡಿ ತಾಲೂಕು ,  ದಕ್ಷಿಣ ಕನ್ನಡ ಜಿಲ್ಲೆ
***************************************


ಪ್ರೀತಿಯ ಅಕ್ಕನಿಗೆ.....
ನಾನು ನಿಮ್ಮ ಪತ್ರವನ್ನು ಅಮ್ಮನ ಸಹಾಯದಿಂದ ಓದಿದೆ. ನಿಮ್ಮ ಪತ್ರ ತುಂಬಾ ಚೆನ್ನಾಗಿತ್ತು. ನಾನು ಈ ಬಾರಿ ಸ್ವಾತಂತ್ರ್ಯ ದಿನಾಚರಣೆಗೆ ಬಾವುಟದ ಚಿತ್ರ , ಭಾಷಣ ಮತ್ತು ಚಂದ್ರಶೇಖರ ಆಜಾದ್ ರವರ ಬಗ್ಗೆ ಪ್ರಬಂಧ ಬರೆದಿದ್ದೆ . 75 ನೇ ಈ ಸ್ವಾತಂತ್ರ್ಯ ನನಗೆ ಸಂಭ್ರಮವನ್ನು ನೀಡಿದೆ. ನಿಮ್ಮ ಪತ್ರದಿಂದ 4 ವರ್ಷಕ್ಕೊಮ್ಮೆ ಒಲಿಂಪಿಕ್ಸ್ ಕ್ರೀಡೆ 
ನಡೆಯುತ್ತದೆ ಎಂದು ತಿಳಿಯಿತು. ಮುಂದಿನ 
ಒಲಿಂಪಿಕ್ಸ್ ಕ್ರೀಡೆ ನಡೆಯುವಾಗ ನಾನು 
8 ನೇ ತರಗತಿಲ್ಲಿ ಇರುತ್ತೇನೆ. ನೀವು ಹೇಳಿದ ಹಾಗೆ ಹಿರಿಯರಿಗೆ ಕಿರಿಯರಿಗೆ ಗೌರವ ಕೊಡುತ್ತಿದ್ದೇನೆ . ನನ್ನ ಶಾಲೆಯ ಮಾತಾಜಿಯವರು ಯಾವಾಗಲೂ ಅಪ್ಪ ಅಮ್ಮನ ಮಾತನ್ನು ಕೇಳಬೇಕು, ಎಲ್ಲರನ್ನು ಗೌರವಿಸಬೇಕೆಂದು ಹೇಳುತ್ತಿರುತ್ತಾರೆ. ಧನ್ಯವಾದಗಳು ಅಕ್ಕ......ಮುಂದಿನ ಪತ್ರಕ್ಕಾಗಿ ಕಾಯುತ್ತಿರುತ್ತೇನೆ....    .......................................ನಿನಾದ್ ಕೈರಂಗಳ್
4 ನೇ ತರಗತಿ - ಶಿವಾಜಿ
ಶ್ರೀರಾಮ ವಿದ್ಯಾ ಕೇಂದ್ರ ಕಲ್ಲಡ್ಕ 
ಬಂಟ್ಟಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
****************************************



ಪ್ರೀತಿಯ ಅಕ್ಕನಿಗೆ - 
ಅಕ್ಕ ನಿಮ್ಮ ಪತ್ರ ಓದಿದೆ....  ಅದರಲ್ಲಿರುವ ವಿಷಯಗಳು ತುಂಬಾ  ಇಷ್ಟವಾದವು. ನೀವು ಹೇಳಿದ್ದು ಸರಿ ನನ್ನ ಮನಗೆ ದಿನವೂ ವಾರ್ತಾ ಪತ್ರಿಕೆ ತರುತ್ತಾರೆ. ನನ್ನ ಅಮ್ಮ ಅದನ್ನು ಓದಲು ಹೇಳುತ್ತಾರೆ. ಆದರೆ ನಾನು ಅದಕ್ಕೆ ಗಮನ ಕೊಡಲಿಲ್ಲ , ಈಗ ನಿಮ್ಮ ಪತ್ರ ಓದಿದ ಮೇಲೆ ನನಗೂ ವಾರ್ತಾ ಪತ್ರಿಕೆ ಓದಬೇಕೆನಿಸಿತು. ನನ್ನ ಪ್ರಕಾರ ಬಾರ್ಶಿಮಾ ಅವರು ಮಾಡಿದ್ದು ಸರಿ ಅನಿಸಿತು. ಜಿಯಾನ್ ಮಾರ್ಕೋ ತಂಬರಿಯವರಿಗೆ ಕಾಲು ನೋವು ಆದ ಕಾರಣ ಬಾರ್ಶಿಮಾ ಆಡಿದ್ದರೆ ಅವರಿಗೆ ಒಬ್ಬರಿಗೇ ಬಂಗಾರದ ಪದಕ ಸಿಗುತಿತ್ತು , ಆದರೆ ಅವರು ಮಾರ್ಕೋ ತಂಬರಿಯವರೊಂದಿಗೆ ಪ್ರಶಸ್ತಿ  ಹಂಚಿಕೊಂಡು ಮಾನವೀಯತೆ ಮೆರೆದಿದ್ದಾರೆ, ನಮ್ಮ ಜೀವನದಲ್ಲಿ ನಾವು ಕೂಡಾ ಪ್ರೀತಿ, ತ್ಯಾಗ, ಕರುಣೆ ಮಾನವೀಯತೆಯನ್ನು ಬೆಳೆಸಿಕೊಳ್ಳಬೇಕು, ಒಳ್ಳೆಯ ವಿಷಯಗಳನ್ನು ತಿಳಿಸಿಕೊಟ್ಟದಕ್ಕೆ ಧನ್ಯವಾದಗಳು ಅಕ್ಕ.
...............................................ಶ್ರಾನ್ವಿ ಶೆಟ್ಟಿ 
8 ನೇ ತರಗತಿ 
ಓಂ ಜನಹಿತಾಯ ಇಂಗ್ಲಿಷ್ ಮೀಡಿಯಂ ಸ್ಕೂಲ್ ಗುಡ್ಡೆಯಂಗಡಿ 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
***************************************



         ನನಗೆ  ಅಕ್ಕನ ಪತ್ರ -4 ನೋಡಿ  ತುಂಬ ಖುಷಿಯಾಗಿದೆ. ನಾನು ನನ್ನ ಶಾಲೆಯ ಸ್ನೇಹಿತರ ಜೊತೆಯಲ್ಲಿ ಆಟವಾಡಿದ ದಿನಗಳು ಕಳೆದುಕೊಂಡು ಎರಡು ವರ್ಷವಾಗುತ್ತಾ ಬಂದಿದೆ. ಮನಸ್ಸಿಗೆ ನೋವಾಗಿದೆ. ನನಗೆ ಈ ಒಂದು ಸಂಚಿಕೆ ನೋಡಿದಾಗ ನನ್ನ ಹಿಂದಿನ ನೆನಪುಗಳು ಮನಸ್ಸಿಗೆ ಬರುತ್ತದೆ. ಕೊ-ಕೊ, ಕಣ್ಣಾಮುಚ್ಚಾಲೆ, ಕಬಡ್ಡಿ , ಶಟ್ಲ್ ಕೋಕ್ , ಡಾಜ್ ಬಾಲ್ ಮುಂತಾದ ಹಲವು ಆಟಗಳನ್ನು ನನ್ನ ಶಾಲೆಯಲ್ಲಿ ಆಡುತ್ತಿದ್ದೆ. ಇದರಲ್ಲಿ ಕಬ್ಬಡಿ ಎಂದರೆ ನನಗೆ ತುಂಬಾ ಇಷ್ಟ. ಒಂದು ದಿನ ನಾನು ನನ್ನ ಶಾಲೆಯ ಆವರಣದಲ್ಲಿ ಕಬಡ್ಡಿ ಆಡಿದ ನೆನಪು ನನಗೆ ತುಂಬಾ ಬಂದಿದೆ. ನನಗೆ ನನ್ನ ಕೈ ನೋವು ಇದ್ದರೂ ಒಂದೇ ಸಲ ಇಬ್ಬರನ್ನು ಸತತ ಪ್ರಯತ್ನ ಮಾಡಿ ಮುಟ್ಟಿದೆ. ನನಗೆ ನನ್ನ ಪೀಟಿ ಸರ್ ಶಬಾಷ್ ಅಂದರು. ಇದರಲ್ಲಿ ನನಗೆ ಅರ್ಥವಾಗುವುದೇನೆಂದರೆ ಆಟದಲ್ಲಿ ರೋಷ ಇರಬೇಕು ಹೊರತು ದ್ವೇಷ ಮತ್ತು ಮೋಸವಲ್ಲ ಎಂಬುದನ್ನು ನಾನು ಅರಿತಿದ್ದೇನೆ. ಇನ್ನು ಕಬ್ಬಡಿ ಬಗ್ಗೆ ಹೇಳುವುದಾದರೆ... ಭಾರತದಲ್ಲಿ ಹಾಕಿ ಕ್ರೀಡೆ ಕೆಲವು ವರ್ಷಗಳ ಕಾಲ ತುಂಬಾ ಜನಪ್ರಿಯವಾಗಿತ್ತು. ಆ ಸ್ಥಾನವನ್ನು ಕ್ರಿಕೆಟ್ ಆಕ್ರಮಿಸಿಕೊಂಡಿತು.  ಈಗ ಅಪ್ಪಟ ದೇಶಿ ಕ್ರೀಡೆ ಕಬಡ್ಡಿ ಆಕ್ರಮಿಸಿಕೊಳ್ಳುತ್ತಿದೆ. ಕಾರಣ ಕಬಡ್ಡಿಯಲ್ಲಾದ ಬದಲಾವಣೆ. ಯಾವುದೇ ಉಪಕರಣಗಳಿಲ್ಲದೆ ಆಡುವ ಅತ್ಯಂತ ರೋಚಕ ಕ್ರೀಡೆ ಎಂದರೆ ಕಬಡ್ಡಿ. ಮಹಾನಗರಗಳಿಂದ ಚಿಕ್ಕ ಪುಟ್ಟ ಹಳ್ಳಿಯತನಕ ಎಲ್ಲರ ಬಾಯಲ್ಲೂ ಕಬಡ್ಡಿ, ಕಬಡ್ಡಿ, ಕಬಡ್ಡಿ ...  ಇದು ಗ್ರಾಮೀಣ ಕ್ರೀಡೆಗೆ ಸಿಕ್ಕ ಬಹು ದೊಡ್ಡ ಗೌರವ. ಈ ಎಲ್ಲಾ ನೆನಪುಗಳನ್ನು ನನಗೆ ನೆನಪಿಸಿದ್ದಕ್ಕೆ "ತೇಜಸ್ವಿ ಅಂಬೆಕಲ್ಲು" ಅಕ್ಕನಿಗೆ  ಅಭಿನಂದನೆಗಳನ್ನು ಸಲ್ಲಿಸುತ್ತೇನೆ...
........................ಸಪ್ತಮಿ ಅಶೋಕ್ ದೇವಾಡಿಗ
7  ನೇ ತರಗತಿ
ಶುಭದ ಆಂಗ್ಲ ಮಾಧ್ಯಮ ಶಾಲೆ ಕಿರಿಮಂಜೇಶ್ವರ
ಬೈಂದೂರು ತಾಲೂಕು , ಉಡುಪಿ ಜಿಲ್ಲೆ
****************************************



         ಪ್ರೀತಿಯ ಅಕ್ಕನಿಗೆ ನಮಸ್ಕಾರಗಳು.
ನಿಮ್ಮ 4ನೇ ಪತ್ರವನ್ನು ನಾನು ಓದಿದೆ. ತುಂಬಾ ಚೆನ್ನಾಗಿತ್ತು. ನಮ್ಮ ದೇಶದ ಹೆಮ್ಮೆಯ ಕ್ರೀಡಾಳುಗಳ ಸಾಧನೆಯನ್ನು ಚೆನ್ನಾಗಿ ವಿವರಿಸಿದ್ದೀರಿ. ಉತ್ತಮ ಮಾಹಿತಿ ಸಿಕ್ಕಿತು. ಜೀವನದಲ್ಲಿ ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳಲು ಇಂತಹ ವಿಚಾರಗಳು ತುಂಬಾ ಸಹಾಯಕ. ಯಾವುದೇ ಕೆಲಸವನ್ನು ಮಾಡಬೇಕಾದರೂ ಒಳಿತು-ಕೆಡುಕುಗಳ ಬಗ್ಗೆ ಆಲೋಚಿಸಿ ಉತ್ತಮವಾದುದನ್ನು ಆಯ್ಕೆ ಮಾಡಿಕೊಳ್ಳಬೇಕೆಂದು ತಾವು ತಿಳಿಸಿದ್ದೀರಿ. ನಮ್ಮ ಕೆಲಸದಿಂದ ಇನ್ನೊಬ್ಬರಿಗೆ ತೊಂದರೆಯಾಗಬಾರದು ಎನ್ನುವ ಕಿವಿಮಾತು ಹೇಳಿದ್ದೀರಿ. ಈ ಪತ್ರದಲ್ಲಿ ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಉತ್ತಮ ವಿಚಾರಗಳಿದ್ದವು. ತಮಗೆ ಹೃದಯಪೂರ್ವಕ ಧನ್ಯವಾದಗಳು ಅಕ್ಕ. ಇಂತೀ ತೃಪ್ತಿ ವಗ್ಗ.
...................................................ತೃಪ್ತಿ ವಗ್ಗ
5 ನೇ ಭರತ ತರಗತಿ
ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ, ಹನುಮಾನ್ ನಗರ ಕಲ್ಲಡ್ಕ. ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
********************************************



       ಅಕ್ಕನಿಗೆ ಸುನಿತಾ ಮಾಡುವ ನಮಸ್ಕಾರಗಳು....
ಅಕ್ಕನ ಪತ್ರವನ್ನು ಓದಿ ಬಹಳ ಸಂತೋಷವಾಯಿತು. ಅವರು ಜೀವನದಲ್ಲಿ ಯಾವ ರೀತಿ  ಬದುಕಬೇಕು  ಹಾಗೂ ಜೀವನದಲ್ಲಿ ಕ್ಷಮಿಸುವ ಗುಣ ಹೊಂದಿರಬೇಕೆಂದು ಹೇಳಿದ್ದು ತುಂಬಾನೇ ಇಷ್ಟವಾಯಿತು. ಅಲ್ಲದೇ ಮಾನವೀಯ ಮೌಲ್ಯವೊಂದಿದ್ದರೆ ಜಗತ್ತೇ ಇಷ್ಟಪಡುತ್ತದೆ. ಯಾರೊಬ್ಬರನ್ನು ಕೇಳರಿಮೆ ದೃಷ್ಟಿಯಿಂದ ನೋಡಬಾರದು, ಪ್ರತಿಯೊಬ್ಬ ವ್ಯಕ್ತಿಯಿಂದ ನಾವು ಏನಾದರೂ ಪಾಠ ಕಲಿಯುತ್ತೇವೆ ಅದು ನಮ್ಮ ಸುತ್ತಮುತ್ತಲಿನ ಯಾರೇ ಆಗಿರಬಹುದು. ಒಮ್ಮೊಮ್ಮೆ ಚಿಕ್ಕವರು ನಮಗೆ ಮಾದರಿಯಾಗಬಹುದು,     ಹಾಗೆ ಜೀವನ ವಿಸ್ತಾರವಾಗಿದ್ದು ಕಲಿಯುತ್ತಲೇ ಇರೋಣ  ಎಂದು   ಅದ್ಭುತ ಸಾರಾಂಶ ತಿಳಿಸಿದ ತೇಜಸ್ವಿ ಅಕ್ಕನಿಗೆ ಧನ್ಯವಾದಗಳು ಹಾಗೂ ನಾನೂ ಇನ್ನು  ಮುಂದೆ  ಅಕ್ಕ.. ನೀವು ತಿಳಿಸಿದಂತೆ ಬದುಕಲು ಪ್ರಯತ್ನಿಸುವೆ......
.................................................ಸುನಿತಾ 
ಸರಕಾರಿ ಪ್ರೌಢಶಾಲೆ ನಾರಾವಿ 
ಬೆಳ್ತಂಗಡಿ ತಾಲೂಕು ,  ದಕ್ಷಿಣ ಕನ್ನಡ ಜಿಲ್ಲೆ
******************************************




ನಮಸ್ತೆ... ಅಕ್ಕಾ...
ನಾನು ದ. ಕ. ಜಿ. ಪಂ.ಉ.ಹಿ.ಪ್ರಾ.ಶಾಲೆ ಗೋಳಿತಟ್ಟಿನ ವಿದ್ಯಾರ್ಥಿನಿ ಶಿಫಾನ ಬರೆಯುವ ಪತ್ರ... 
ನನಗೆ ನಿಮ್ಮ 4 ನೇ ಪತ್ರವನ್ನು ಕೇಳಿ ಖುಷಿಯಾಯಿತು. ನನಗೆ ಒಲಿಂಪಿಕ್ಸ್ ನ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಿತು. ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ನಡೆದಂತಹ ಘಟನೆ ಕೇಳಿ ಖುಷಿಪಟ್ಟೆ. ತುಂಬಾ ಚೆನ್ನಾಗಿ ಓದಲು ಕಲಿಯಲು ನಿಮ್ಮ ಪತ್ರ ಸಹಾಯವಾಗುತ್ತದೆ.. ವಂದನೆಗಳು... ಅಕ್ಕಾ...
 .................................................... ಶಿಫಾನ
6 ನೆಯ ತರಗತಿ
ದ.ಕ.ಜಿ.ಪಂ.ಉ.ಹಿ.ಪ್ರಾ.ಶಾಲೆ,
ಗೋಳಿತ್ತಟ್ಟು, ಪುತ್ತೂರು ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
****************************************




Ads on article

Advertise in articles 1

advertising articles 2

Advertise under the article