
ರಕ್ಷಾಬಂಧನ - ಕವನ
Sunday, August 22, 2021
Edit
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಅಣ್ಣ ತಂಗಿಯರು ಬೆಸೆದ ಬಂಧವಿದು
ನಾಡಿಗೆಲ್ಲ ಸಂಭ್ರಮದ ಹಬ್ಬವಿದು
ರಕ್ಷೆ ಕಟ್ಟಿ ಬಂಧವನ್ನು ಬಿಗಿಗೊಳಿಸುತಾ
ಹೊಸ ಹೊಸ ಉಡುಗೊರೆಯನು ನೀಡುತಾ
ಶುಭ ಹಾರೈಕೆಗಳನ್ನು ಹಾರೈಸುತಾ
ಮನೆಯಲಿ ಸಿಹಿ-ತಿಂಡಿಗಳನು ಮಾಡುತಾ
ಎಲ್ಲರೂ ಖುಷಿಯಿಂದ ನಗು-ನಗುತಾ
ಹಬ್ಬವನ್ನು ಸಂತೋಷದಿಂದ ಆಚರಿಸುತಾ
ಅಣ್ಣ-ತಂಗಿಯ ಬಾಂಧವ್ಯವ ಬೆಸೆಯೋಣ
ನಿತ್ಯ ಸುಖ-ಸಂತೋಷದಿಂದ ಬಾಳೋಣ..
................................................ಅನುಲಕ್ಷ್ಮಿ
10 ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ , ಕೊಳ್ನಾಡು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ