
ಗೆಳೆತನ - ಕಥೆ
Sunday, August 8, 2021
Edit
ನಂದನ್ ಕೆ ಹೆಚ್
7ನೇ ತರಗತಿ
ದ.ಕ.ಜಿ.ಪಂ.ಉ.ಹಿ.ಪ್ರಾ.ಶಾಲೆ ಕುದ್ಮಾರು
ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಒಂದು ಊರಿನಲ್ಲಿ ಒಬ್ಬ ಬಾಲಕನಿದ್ದ. ಅವನು ತುಂಬಾ ಬಡವ. ಅವನಿಗೆ ಒಬ್ಬ ಒಳ್ಳೆಯ ಗೆಳೆಯನಿದ್ದ. ಅವನು ತುಂಬಾ ಶ್ರೀಮಂತ. ಒಂದು ದಿನ ಶಾಲೆಯಲ್ಲಿ ಬಡವನಿಗೆ ತುಂಬಾ ಹಸಿವಾಗಿತ್ತು. ಶ್ರೀಮಂತನ ಹುಡುಗ ತಂದಿದ್ದ ತಿಂಡಿತಿನಿಸುಗಳನ್ನು ಇವನಿಗೂ ಹಂಚಿ ಇಬ್ಬರು ಸೇರಿ ತಿಂದರು... ಅಂದಿನಿಂದ ಅವರ ಸ್ನೇಹ ಇನ್ನೂ ಗಾಢವಾಯಿತು. ಬಡ ಹುಡುಗ ಶ್ರೀಮಂತ ಸ್ನೇಹಿತ ಮಾಡಿದ ಸಹಾಯಕ್ಕೆ ಏನೂ ಮಾಡಲಾಗುತ್ತಿಲ್ಲ ಎಂದು ಮನಸ್ಸಿನಲ್ಲೇ ಬಹಳ ಬೇಸರ ಮಾಡಿದ್ದ. ಹೀಗೆ ದಿನಗಳು ಕಳೆದವು. ಒಂದು ದಿನ ಶ್ರೀಮಂತ ಬಾಲಕನ ಅಪ್ಪ-ಅಮ್ಮ ಕೆಲಸದ ನಿಮಿತ್ತ ಹೊರಗೆ ಹೋಗುತ್ತಾರೆ. ಮನೆಯಲ್ಲಿ ಬಾಲಕನೊಬ್ಬನೇ ಇರುತ್ತಾನೆ. ಈ ಸಮಯಕ್ಕಾಗಿ ಕಾಯುತ್ತಿದ್ದ ಕಳ್ಳರು ಇವನನ್ನು ಅಪಹರಣ ಮಾಡುತ್ತಾರೆ. ಅಲ್ಲದೆ ಮನೆಯಲ್ಲಿದ್ದ ಚಿನ್ನವನ್ನು ಸಹ ತೆಗೆದುಕೊಂಡು ಹೋಗುತ್ತಾರೆ. ಕಳ್ಳರ ವಾಹನವು ಹೋಗುತ್ತಿದ್ದ ದಾರಿಯಲ್ಲಿ ಬಡ ಹುಡುಗನು ಬರುತ್ತಿದ್ದ. ಗೆಳೆಯನ ಕೂಗು ಇವನಿಗೆ ಕೇಳಿಸಿತು. ಬಡ ಬಾಲಕ ಊರಿನ ಜನರನ್ನೆಲ್ಲ ಸೇರಿಸಿ ಆ ವಾಹನವನ್ನು ಹಿಡಿದು ಸ್ನೇಹಿತನನ್ನು ಕಾಪಾಡುತ್ತಾನೆ. ವಿಷಯ ಶ್ರೀಮಂತ ಹುಡುಗನ ಅಪ್ಪ-ಅಮ್ಮನಿಗೂ ತಿಳಿಯಿತು. ಅವರು ಬಹಳ ಖುಷಿ ಪಟ್ಟರು ಮತ್ತು ಬಡ ಹುಡುಗನ ಕಷ್ಟವನ್ನು ತಿಳಿದು ಅವನ ಓದು ಬರಹದ ಜವಾಬ್ದಾರಿಯನ್ನು ಇವರೇ ತೆಗೆದುಕೊಂಡರು. ಅಂದಿನಿಂದ ಅವರಿಬ್ಬರೂ ಇನ್ನೂ ಒಳ್ಳೆಯ ಸ್ನೇಹಿತರಾಗಿ ಚೆನ್ನಾಗಿ ಓದತೊಡಗಿದರು.
ನೀತಿ: ಒಳ್ಳೆಯತನಕ್ಕೆ ಯಾವಾಗಲೂ ಜಯ ಲಭಿಸುತ್ತದೆ.
.................................. ನಂದನ್ ಕೆ.ಹೆಚ್
7ನೇ ತರಗತಿ
ದ.ಕ.ಜಿ.ಪಂ.ಉ.ಹಿ.ಪ್ರಾ.ಶಾಲೆ ಕುದ್ಮಾರು
ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************